Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಗಳ ಮದುವೆಯಾದರೆ ಬಂಗ್ಲೆ, ₹50 ಲಕ್ಷ ಎಫ್‌ಡಿ: ಹುಡುಗಿ ತಂದೆಯ ಆಫರ್..!
ಮದುವೆ ಅನ್ನೋದು ಒಂದು ದಿನದಲ್ಲಿ ನಿರ್ಧಾರ ಆಗುವ ವಿಷಯ ಅಲ್ಲವೇ ಅಲ್ಲ. ಗುರು ಹಿರಿಯರು ನಿರ್ಧರಿಸಿ ಶಾಸ್ತ್ರ ಸಂಪ್ರದಾಯದಂತೆ ಮದುವೆಗಳು ನಡೆಯುತ್ತವೆ. ಇನ್ನು ಮದುವೆಗೆ ಹುಡುಗಿ ಅಥವಾ ಹುಡುಗನ ಹುಡುಕು ಕಾರ್ಯ ಸಹ ಸುಲಭದ ಮಾತಲ್ಲ. ವರ್ಷಾನುಗಟ್ಟಲೆ ಅಲೆದು ಹುಡುಗನ ಹುಡುಗಿಯ ಗುಣವನ್ನು ಅಳೆದು ತೂಗಿ ಕೊನೆಗೆ ಅಂತಿಮ ನಿರ್ಧಾರ ಮಾಡಲಾಗುತ್ತದೆ.
ಆದರೆ ಮದುವೆ ಕುರಿತಂತೆ ಇಂಟರ್‌ನೆಟ್‌ನಲ್ಲಿ ಒಮ್ಮೊಮ್ಮೆ ಎಂತಹ ವಿಡಿಯೋಗಳು ಹರಿದಾಡುತ್ತವೆ ಅಂದ್ರೆ ನಾವದನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. ಕೆಲವು ಬಾರಿಯಂತು ಇದು ನಿಜವೇ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇದೀಗ ಇಂತಹದ್ದೆ ವಿಡಿಯೋವೊಂದು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಯುವತಿಯ ತಂದೆಯೊಬ್ಬ ಮಗಳ ಮದುವೆಗೆ ಹುಡುಗರಿಗೆ ಆಫರ್ ನೀಡಿದ್ದು, ವಿಡಿಯೋ ನೋಡಿದ ಹುಡುಗರು ತಾಮುಂದು ನಾಮುಂದು ಎಂದು ಮದುವೆಗೆ ಸಿದ್ಧರಾಗಿದ್ದಾರೆ.
ವಿಡಿಯೋದಲ್ಲಿ ಯುವತಿಯ ತಂದೆ ಮಗಳ ಮದುವೆಯಾಗುವಂತೆ ಹುಡುಗರನ್ನು ಕೇಳುತ್ತಿದ್ದಾರೆ. ಮದುವೆಯಾಗುವ ಹುಡುಗನಿಗೆ ಭಾರೀ ಆಫರ್ ಸಹ ನೀಡಿದ್ದಾರೆ. ಡಾಕ್ಟರ್ ವೃತ್ತಿಯಲ್ಲಿರುವ ತಂದೆ ತನ್ನ ಮಗಳನ್ನು ಯಾರು ಮದುವೆಯಾಗುತ್ತಾನೋ ಆತನಿಗೆ 2 ಕೋಟಿ ಬೆಲೆಯ ಬಂಗಲೆ, ಕ್ಲಿನಿಕ್ ಮತ್ತು 50 ಲಕ್ಷ ಎಫ್.ಡಿ ಮಾಡಿಕೊಡುವುದಾಗಿ ಹೇಳುತ್ತಿದ್ದಾನೆ.
ಇದರ ಜೊತೆಗೆ ಆಕೆಯು ಮಾತನಾಡುತ್ತಿದ್ದು ಹುಡುಗ ಹೇಗಿದ್ದರೂ ಸರಿ ಎನ್ನುತ್ತಿದ್ದಾಳೆ. ಹುಡುಗ ಕಪ್ಪಗಿದ್ದರೂ ಸರಿ, ದಪ್ಪ ಇದ್ದರೂ ಸರಿ ಒಟ್ಟಿನಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು. ಯಾರಾದರು ಆಸಕ್ತರು ಕಮೆಂಟ್ ಮಾಡಿ ಎನ್ನುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ಪೋಸ್ಟ್ ಆದ ಬಳಿಕ 2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಜೊತೆಗೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹುಡುಗರು ತಮ್ಮ ಮೊಬೈಲ್ ಸಂಖೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ತಮ್ಮ ವಿಳಾಸ ಸಮೇತವಾಗಿ ಬರೆದಿದ್ದಾರೆ.
ಕೆಲವರು ಇದು ನಕಲಿ ಜಾಲ ಈ ಮೋಸದ ಜಾಲಕ್ಕೆ ಬೀಳಬೇಡಿ ಎಂದು ಎಚ್ಚರಿಸಿದ್ದಾರೆ. ಮತ್ತೆ ಕೆಲವರು ನಾವು ಈ ಆಫರ್ ಒಪ್ಪಿಕೊಳ್ಳುತ್ತೇವೆ ಮದುವೆಯಾಗಲು ನಾವು ರೆಡಿ ಎಂದಿದ್ದಾರೆ. ಇನ್ನು ಕೆಲವರು ಇನ್ಸ್‌ಸ್ಟಾಗ್ರಾಮ್ ಈಗ ವಧು ವರರ ಹುಡುಕುವ ತಾಣವಾಗಿ ಬದಲಾಗಿದೆ ಎಂದು ತಮಾಷೆ ಕಮೆಂಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಸಹ ಇಂತಹದ್ದೆ ವಿಡಿಯೋವೊಂದು ವೈರಲ್ ಆಗಿತ್ತು. ಅಲ್ಲಿಯೂ ಸಹ ತಂದೆಯೊಬ್ಬ ಮಗಳನ್ನು ಒಂದು ತಿಂಗಳ ಒಳಗೆ ಮದುವೆಯಾಗುವವನಿಗೆ ಬ್ಲಾಂಗ್ ಚೆಕ್ ನೀಡುವುದಾಗಿ ಹೇಳಿದ್ದ. ಹುಡುಗಿಯ ತಂದೆ ಸ್ವಂತ ಉದ್ಯಮಿಯಂತೆ, ಗುಜರಿ ವ್ಯಪಾರಿಯಾಗಿರು ಆತನ ಬಳಿ ಕೋಟಿ ಕೋಟಿ ಹಣವಿದೆಯಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ. ಹೀಗಾಗಿ 1 ತಿಂಗಳಲ್ಲಿ ಮದುವೆಯಾಗುವ ಹುಡುಗನಿಗೆ ಬ್ಲಾಂಕ್ ಚೆಕ್ ನೀಡಲಾಗುವುದು ಆತನಿಗೆ ಇಷ್ಟಬಂದಷ್ಟು ಮೊತ್ತ ಬರೆದುಕೊಳ್ಳಬಹುದು ಎಂದು ವಿಡಿಯೋದಲ್ಲಿ ಹೇಳಲಾಗಿತ್ತು. ಈ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈಗ ಈ ವಿಡಿಯೋ ಹರಿದಾಡುತ್ತಿದ್ದು, ಇಲ್ಲಿಯೂ ಸಹ ಮದುವೆಯಾಗುವ ಹುಡುಗನಿಗೆ ಭಾರೀ ವರದಕ್ಷಿಣೆ ನೀಡುವ ಆಸೆ ತೋರಿಸಲಾಗಿದೆ. ಆದರೆ ಇಂತಹ ಪೋಸ್ಟ್‌ಗಳ ಸತ್ಯಾಸತ್ಯತೆ ಏನು ಎಂಬುದು ಪತ್ತೆ ಮಾಡಬೇಕಿದೆ. ಅಷ್ಟೊಂದು ಶ್ರೀಮಂತಿಕೆಯಲ್ಲಿರುವ ಹುಡುಗಿಗೆ ಇನ್ನೂ ಏಖೆ ಮದುವೆಯಾಗಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಜೊತೆಗೆ ಯಾವ ಕಾರಣಕ್ಕಾಗಿ ಇಷ್ಟು ಆಸ್ತಿ ಇದ್ದರೂ ಆಕೆಗೆ ಸೂಕ್ತ ಗಂಡು ಸಿಕ್ಕಿಲ್ಲ ಎಂಬ ಪ್ರಶ್ನೆ ಎಲ್ಲರಿಗೂ ಸಹಜವಾಗಿ ಮೂಡಲಿದೆ.



Click it and Unblock the Notifications
