Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಇತಿಹಾಸ ಪುಸ್ತಕ ಸೇರಿದ ಫೇಮಸ್ ಲವ್ ಸ್ಟೋರಿಗಳಿವು..!
ಪ್ರೀತಿ ಯಾರಿಗೆ, ಯಾವಾಗ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಯ ಮಾಯೆಗೆ ಸಿಕ್ಕಿ ಹಾಕಿಕೊಳ್ಳದೆ ವ್ಯಕ್ತಿಗಳು ತುಂಬಾ ಅಪರೂಪ. ಯುವ ಪ್ರೇಮಿಗಳನ್ನು ನೋಡಿದಾಗ ಹಿರಿಯರು "ನಮ್ಮ ಕಾಲ ಎಷ್ಟು ಚೆನ್ನಾಗಿತ್ತು, ಈಗೀನ ಮಕ್ಕಳು ಪ್ರೀತಿ, ಪ್ರೇಮವೆಂದು ಹಾಳಾಗಿ ಹೋಗಿದ್ದಾರೆ" ಎಂದು ಬೈಯ್ಯುತ್ತಾರೆ. ಹಾಗೆ ಯುವ ಪೀಳಿಗೆ ಸಹ ಪ್ರೀತಿಯ ಬಲೆಯಲ್ಲಿ ಬೀಳುವುದನ್ನು ನಾವು ನೋಡಿದ್ದೇವೆ.
ಪ್ರೀತಿ ಅನ್ನುವುದು ಇವತ್ತು ನೆನ್ನೆ ಹುಟ್ಟಿದ್ದಲ್ಲ, ಪ್ರೇಮಿಗಳ ದಿನದಂದು ಮಾತ್ರ ಪ್ರೇಮಿಗಳು ನೋಡಲು ಸಿಗುವುದಿಲ್ಲ. ಅನಾದಿ ಕಾಲದಿಂದಲೂ ಇದೆ. ಪುರಾಣದಲ್ಲಿ ದುಷ್ಯಂತ-ಶಕುಂತಳಾ, ರಾಧೆ- ಕೃಷ್ಣ ಹೀಗೆ ಅನೇಕ ಪುರಾಣ ಪ್ರೇಮ ಕಥೆಗಳನ್ನು ಕೇಳಿರುತ್ತೀರಾ. ಇವರೆಲ್ಲ ಪ್ರೀತಿಸಿ ಇತಿಹಾಸ ಪುಸ್ತಕದಲ್ಲಿ ಸೇರಿದವರು. ಹಾಗೆ ಪ್ರತಿಯೊಬ್ಬ ಪ್ರೇಮಿಗಳು ಸಹ ಇವರಂತಾಗಲು ಇಚ್ಛಿಸುತ್ತಾರೆ. ಆದ್ರೆ ಕೆಲವರು ಪ್ರೀತಿಗೆ ಎದುರಾಗುವ ಅಡೆತಡೆಗಳ ಮೆಟ್ಟಿ ಬದುಕಿನ ಹಾದಿಯಲ್ಲಿ ಯಶಸ್ಸು ಸಾಧಿಸುತ್ತಾರೆ.

ಆದರೆ ಇನ್ನೂ ಕೆಲವರು ಪ್ರೀತಿಯಲ್ಲಿ ಗೆದ್ದರೂ ಅದನ್ನೂ ಉಳಿಸಿಕೊಳ್ಳುವಲ್ಲಿ ಸೋಲುತ್ತಾರೆ. ಮನೆಯವರಿಗೋ ಇನ್ಯಾರಿಗೋ ಹೆದರಿ ಪ್ರೀತಿ ತ್ಯಾಗ ಮಾಡುತ್ತಾರೆ ಇಲ್ಲವೆ ಪ್ರಾಣ ಬಿಡುತ್ತಾರೆ. ಇಂತಹ ಹಲವು ಉದಾಹರಣೆಗಳು ನಿತ್ಯವೂ ನಮ್ಮ ನಡುವೆ ನಡೆಯುತ್ತಲೇ ಇದೆ.
ಇನ್ನು ರಾಜರ ಕಾಲದ ಪ್ರೇಮ ಕಥೆಗಳನ್ನು ಓದಿರುತ್ತೀರಿ. ರಾಜ ಷಹಜಹಾನ್ ರಾಣಿ ಮುಮ್ತಾಜ್ ಳ ಮೇಲಿಟ್ಟ ಪ್ರೇಮದ ದ್ಯೋತಕವಾದ ತಾಜ್ ಮಹಲ್ ಜಗತ್ತ್ ಪ್ರಸಿದ್ಧವಾಗಿದೆ. ಇಲ್ಲಿ ನಾವು ಐತಿಹಾಸಿಕ ಪ್ರೇಮ ಕಥೆಗಳಿಂದ ಆಯ್ದ ಪ್ರಸಿದ್ಧ ಅಮರ ಪ್ರೇಮಿಗಳ ಬಗ್ಗೆ ಚಿತ್ರ ಮಾಹಿತಿ ನೀಡಿದ್ದೇವೆ ನೋಡಿ.
ದುಷ್ಯಂತ ಮತ್ತು ಶಕುಂತಲಾ ಕಥೆ
ದುಷ್ಯಂತ ಮತ್ತು ಶಕುಂತಲಾಳ ನಡುವೆ ಪ್ರಣಯಾಂಕುರವಾಗಿ ಕೊನೆಗೆ ಅವಳನ್ನು ಮರೆತು ಬಿಡುವ ದುಷ್ಯಂತ, ದುಷ್ಯಂತನ ಪ್ರೀತಿಯ ಕುಡಿಯನ್ನು ಹೊತ್ತು ಕಷ್ಟಪಡುವ ಶಕುಂತಾಳ ಈ ಕಥೆ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್
ಬ್ರಿಟನ್ ರಾಣಿ ವಿಕ್ಟೋರಿಯಾ ಮತ್ತು ರಾಜ ಆಲ್ಬರ್ಟ್ ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ನಲ್ಲಿ ಬಾಳಿ ಮೊದಲ ರಾಜ-ರಾಣಿ. ರಾಣಿ ತನ್ನ ಡೈರಿಯಲ್ಲಿ ತಮ್ಮ ಪ್ರೇಮಕಾವ್ಯವನ್ನು ಬರೆದಿದ್ದಾರೆ.
ಷಹಜಹಾನ್ ಮತ್ತು ಮುಮ್ತಾಜ್
ಮುಮ್ತಾಜ್ ಳದು ಒಂದು ದುರಂತ ಕಥೆಯಾಗಿದ್ದರೂ ಷಹಜಹಾನ್ ಅವಳ ಮೇಲಿನ ಪ್ರೇಮಕ್ಕಾಗಿ ಕಟ್ಟಿಸಿದ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿದೆ.
ನೆಪೋಲಿಯನ್ ಮತ್ತು ಜೋಸೆಫೈನೆ
ನೆಪೋಲಿಯನ್ ನ ಕ್ರೂರ ಆಡಳಿತದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ನೆಪೋಲಿಯನ್ ಕ್ರೂರಿಯಾಗಿದ್ದರೂ ತನ್ನ ಹೆಂಡತಿ ಜೋಸೆಫೈನೆಳನ್ನು ತುಂಬಾ ಪ್ರೀತಿಸುತ್ತಿದ್ದನು. ಅವಳಿಗೆ ಮಕ್ಕಳಾಗಾದ ಕಾರಣ ದೂರವಾದರು.
ಕ್ಲಿಯೋಪಾತ್ರಾ ಮತ್ತು ಮಾರ್ಕ್ ಆಂಟೆನಿ
ಷೇಕ್ಸ್ ಪಿಯರ್ ಇವರಿಬ್ಬರ ಪ್ರೇಮವನ್ನು ಬಹಳ ರಸವತ್ತಾಗಿ ವರ್ಣಿಸಿದ್ದಾರೆ. ಇವರಿಬ್ಬರ ಪ್ರೀತಿ ಅಮರವಾಗಿದೆ.
ರೋಮಿಯೋ ಮತ್ತು ಜೂಲಿಯೆಟ್
ರೋಮಿಯೋ, ಜೂಲಿಯೆಟ್ ಪ್ರೇಮ ಕಥೆ ಕೇಳುತ್ತಿದ್ದರೆ ಮೈ ಜುಮ್ಮೆನ್ನುತ್ತದೆ. ಅವರಿಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿ ಅಮರ ಪ್ರೇಮಿಗಳಾದರು.
ಸಲೀಂ ಮತ್ತು ಅನಾರ್ಕಲಿ
ಇದು ಕೂಡ ಒಂದು ಪ್ರಸಿದ್ಧ ಐತಿಹಾಸಿಕ ಪ್ರೇಮ ಕಥೆ. ರಾಜ ಕುಮಾರ ಸಲೀಂ ತನ್ನ ಅರಮನೆಯ ಸೇವಕಿಯಲ್ಲಿ ಪ್ರೇಮದಲ್ಲಿ ಬೀಳುತ್ತಾನೆ. ರಾಜ ಮನೆತನದವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಸಲೀಂ ಅನ್ನು ಅನಾರ್ಕಲಿಯಿಂದ ದೂರ ಮಾಡಲು ರಾಜ ಅನಾರ್ಕಲಿಯನ್ನು ಜೀವಂತವಾಗಿ ಸಮಾಧಿ ಮಾಡಿದನು.



Click it and Unblock the Notifications
