Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಂಬಂಧದಲ್ಲಿ ಈ ರೀತಿಯ ನಿರೀಕ್ಷೇಗಳನ್ನು ಖಂಡಿತ ಇಟ್ಟುಕೊಳ್ಳಬೇಡಿ !
ಮನುಷ್ಯನ ಆಸೆ ಮತ್ತು ನಿರೀಕ್ಷೇಗಳಿಗೆ ಕೊನೆ ಅನ್ನೋದೇ ಇರೋದಿಲ್ಲ. ಪ್ರತಿಯೊಂದು ಆಸೆ ಹಾಗೂ ನಿರೀಕ್ಷೇಗಳು ಪೂರ್ತಿಯಾಗುತ್ತಿದ್ದಂತೆ ಮತ್ತೆ ಮತ್ತೆ ಹೊಸ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಅದೇ ರೀತಿ ಸಂಬಂಧದಲ್ಲೂ ಕೂಡ ಖಂಡಿತವಾಗಿಯೂ ನಮಗೆ ನಿರೀಕ್ಷೇಗಳು ಇದ್ದೇ ಇರುತ್ತದೆ. ಹಾಗೇ ಪ್ರತಿ ನಿರೀಕ್ಷೇಗಳನ್ನು ಕೂಡ ನಮ್ಮ ಸಂಗಾತಿ ಪೂರೈಸಬೇಕು ಅಂತ ಅಂದುಕೊಳ್ಳುತ್ತೇವೆ.

ಯಾವಾಗ ಸಂಬಂಧಗಳಲ್ಲಿ ನಿರೀಕ್ಷೇ ಹೆಚ್ಚಾಗುತ್ತೆ. ಸಂಬಂಧ ಕೊಂಚ ಕಿರಿ ಕಿರಿ ಅನ್ನಿಸೋದಕ್ಕೆ ಶುರುವಾಗುತ್ತೆ. ದಂಪತಿಗಳು ಅಥವಾ ಪ್ರೇಮಿಗಳ ಮಧ್ಯೆ ಇದೇ ವಿಚಾರಕ್ಕೆ ಮನಸ್ಥಾಪ ಹೆಚ್ಚಾಗುತ್ತದೆ. ಆಗ ಸಂಬಂಧದ ಒಂದೊಂದೇ ಕೊಂಡಿ ಕಳಚಿ ಬೀಳೋದಕ್ಕೆ ಶುರುವಾಗುತ್ತೆ. ಈ ಸಂಬಂಧವೇ ಬೇಡ ಅನ್ನುವಷ್ಟರ ಮಟ್ಟಿಗೆ ನೊಂದು ಹೋಗುತ್ತೇವೆ. ಅಷ್ಟಕ್ಕು ಯಾವ ರೀತಿಯ ನಿರೀಕ್ಷೇಗಳು ಸಂಬಂಧವನ್ನು ಹಾಳು ಮಾಡುತ್ತೆ ಅನ್ನೋದನ್ನು ತಿಳಿಯೋಣ.
1. ಸಂಗಾತಿ ನಿಮ್ಮನ್ನು ಯಾವಾಗಲೂ ಖುಷಿಯಾಗಿ ಇಟ್ಟುಕೊಳ್ಳಬೇಕು
ಅನೇಕ ಜನರಿಗೆ ತಮ್ಮ ಸಂಗಾತಿಯು ತನ್ನನ್ನು ಯಾವಾಗಲೂ ಖುಷಿಯಾಗಿ ಇಟ್ಟುಕೊಳ್ಳಬೇಕು ಅನ್ನೋ ನಿರೀಕ್ಷೇ ಇರುತ್ತದೆ. ಆದರೆ ಯಾವಾಗಲೂ ಒಬ್ಬರು ನಿಮ್ಮನ್ನು ಖುಷಿಯಾಗಿ ಇಟ್ಟುಕೊಳ್ಳೋದಕ್ಕೆ ಸಾಧ್ಯಾನಾ? ಎಲ್ಲಾ ಪರಿಸ್ಥಿತಿ ಒಂದೇ ರೀತಿ ಇರೋದಿಲ್ಲ ಅಲ್ವಾ? ಯಾವಾಗ ನಿರೀಕ್ಷೇ ಹೆಚ್ಚಾಗಿ ಇರುತ್ತದೆಯೋ ಆಗ ನಮಗೆ ನೋವು. ಹತಾಶೆ ಹೆಚ್ಚಾಗುತ್ತೆ. ಇದು ನಿಮ್ಮ ಸಂಬಂಧ ಹಾಳಾಗೋದಕ್ಕೆ ಮುಖ್ಯ ಕಾರಣ ಆಗಬಹುದು.
2. ಸಂಗಾತಿಯು ನೀವು ಕೋಪಿಸಿಕೊಳ್ಳುವಂತೆ ಮಾಡಬಾರದು
ಯಾವೊಬ್ಬ ವ್ಯಕ್ತಿಯೂ ಕೂಡ ಪರಿಪೂರ್ಣವಾಗಿ ಇರೋದಕ್ಕೆ ಸಾಧ್ಯವೇ ಇಲ್ಲ. ಅದೇ ರೀತಿ ಸಂಗಾತಿಯು ನಿಮ್ಮ ಕೋಪಕ್ಕೆ ಕಾರಣವಾಗಬಾರದು ಅಂತ ಬಯಸೋದು ತಪ್ಪು. ಮನುಷ್ಯನ ಜೀವನದಲ್ಲಿ ಏರಿಳಿತಗಳು ಖಂಡಿತ ಇದ್ದೇ ಇರುತ್ತದೆ. ಕೆಲವೊಂದು ಸಾರಿ ನಿಮ್ಮಿಂದ ತಪ್ಪಾಗಬಹುದು. ಕೆಲವೊಂದು ಸಾರಿ ಅವರಿಂದ ತಪ್ಪಾಗಬಹುದು. ಆಗ ಮನುಷ್ಯನಾದವನಿಗೆ ಕೋಪ ಬರುವುದು ಸಹಜ ಅಲ್ವಾ.
3. ಸಂಗಾತಿ ಯಾವಾಗಲೂ ನಿಮ್ಮ ಮಾತಿಗೆ ಒಪ್ಪಿಗೆ ಸೂಚಿಸಬೇಕು
ಸಂಬಂಧದಲ್ಲಿ ಒಬ್ಬರ ಮಾತೇ ಮೇಲಾಗಬೇಕು, ಅವರ ನಿರ್ಧಾರಗಳನ್ನೇ ಒಪ್ಪಿಕೊಳ್ಳಬೇಕು ಎಂದು ಬಯಸಬಾರದು. ಹೀಗಾದಾಗ ಸಂಗಾತಿಯ ಮಾತಿಗೆ ಅಥವಾ ಅವರ ನಿರ್ಧಾರಗಳಿಗೆ ನೀವು ಬೆಲೆ ಕೊಡುತ್ತಿಲ್ಲ ಎಂದಾಗುತ್ತದೆ. ಅವರಿಗೆ ನಿಮ್ಮ ಈ ರೀತಿಯ ನಡವಳಿಕೆ ಕಿರಿ ಕಿರಿ ಉಂಟು ಮಾಡಬಹುದು. ನಿಮ್ಮ ಜೊತೆ ಬದುಕೋದಕ್ಕೆ ಕಷ್ಟವಾಗಿ ಸಂಬಂಧಕ್ಕೆ ತಿಲಾಂಜಲಿ ಇಡೋದಕ್ಕೆ ನಿರ್ಧರಿಸಬಹುದು.
4. ನೀವು ಬದಲಾಗದೇ ಇದ್ದಾಗ
ನಮ್ಮಲ್ಲಿರುವ ಗುಣಗಳೆಲ್ಲಾ ಒಳ್ಳೆಯದು. ನಾವು ಮಾಡಿದೇ ಸರಿ ಯಾವತ್ತೂ ಅಂದುಕೊಳ್ಳಬಾರದು. ಸಂಬಂಧದಲ್ಲಿ ತ್ಯಾಗ, ಬದಲಾವಣೆಗಳು ತುಂಬಾನೇ ಮುಖ್ಯ. ಆದರೆ ಯಾವಾಗಲೂ ನಿಮ್ಮ ಸಂಗಾತಿಯೇ ನಿಮಗಾಗಿ ಬದಲಾಗಬೇಕು ಅಂದುಕೊಳ್ಳೋದು ಸರಿಯಲ್ಲ. ನೀವು ಅವರಿಗಾಗಿ ಕೆಲವೊಂದು ಗುಣಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
5. ಯಾವ ಸಂಬಂಧಗಳು ಪರಿಪೂರ್ಣವಾಗಿರೋದಿಲ್ಲ
ಯಾವ ಸಂಬಂಧಗಳಲ್ಲೂ ಪ್ರತಿ ಸಾರಿ ಸಂತೋಷವೇ ತುಂಬಿಕೊಂಡು ಇರಬೇಕು ಎಂದೇನಿಲ್ಲ. ಏರಿಳಿತಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹೀಗಾಗಿ ದುಃಖ ಬಂದಾಗ ಕುಗ್ಗಬಾರದು. ಅಯ್ಯೋ ನಮ್ಮ ಸಂಬಂಧದಲ್ಲಿ ಮಾತ್ರ ಹೀಗಾಗುತ್ತಿದೆ ಎಂದು ನೊಂದುಕೊಳ್ಳಬಾರದು. ಒಂದು ವೇಳೆ ನೀವು ನಿಮ್ಮ ಸಂಬಂಧ ಯಾವಾಗಲೂ ಪರಿಪೂರ್ಣವಾಗಿ ಇರಬೇಕು ಅಂದುಕೊಂಡರೆ ಖಂಡಿತ ನೀವು ಸುಖವಾಗಿರೋದಿಲ್ಲ. ಹಾಗೂ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
6. ಯಾವಾಗಲೂ ಸಪ್ರೈಸ್ ನೀಡಬೇಕೆಂಬ ನಿರೀಕ್ಷೇ
ಸಂಗಾತಿಯೂ ಯಾವಾಗಲೂ ನಿಮಗೆ ಸಪ್ರೈಸ್ ನೀಡಬೇಕು ನಿಮ್ಮನ್ನು ಖುಷಿಯಾಗಿ ಇಟ್ಟುಕೊಳ್ಳಬೇಕು ಎಂದು ನಿರೀಕ್ಷೇ ಇಟ್ಟುಕೊಳ್ಳೋದು ತಪ್ಪು. ಪ್ರತಿ ಸಾರಿ ಸಪ್ರೈಸ್ ನೀಡೋದಕ್ಕೆ ಆಗದೇ ಇರಬಹುದು. ಕೆಲವೊಂದು ಸಾರಿ ಅವರು ಮರೆತಿರಬಹುದು. ಅಥವಾ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲದೇ ಇರಬಹುದು. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಆದರೆ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳದೇ ನಿಮ್ಮ ಹಠವನ್ನೇ ನೀವು ಮುಂದುವರಿಸಿದರೆ ನಿಮ್ಮ ಸಂಬಂಧಕ್ಕೆ ಆಪತ್ತು.
ಸಂಬಂಧದಲ್ಲಿ ನಿರೀಕ್ಷೇಗಳು ಇರಬಾರದು ಅಂತ ಹೇಳೋದಲ್ಲ. ಆದರೆ ಆ ನಿರೀಕ್ಷೇ ಯಾವಾಗ ಹೆಚ್ಚಾಗುತ್ತಾ ಹೋಗುತ್ತದೆಯೋ ಆಗ ಸಂಬಂಧಗಳಲ್ಲಿ ಒಂದೊಂದೇ ಕೊಂಡಿಗಳು ಕಳಚಿ ಬೀಳುತ್ತದೆ. ಆದ್ದರಿಂದ ಸಂಬಂಧವನ್ನು ಉಳಿಸಿಕೊಂಡು ಹೋಗುವುದು ದಂಪತಿಗಳಿಬ್ಬರ ಕರ್ತವ್ಯ.



Click it and Unblock the Notifications

