Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಈ 5 ಗುಣಗಳು ಪುರುಷನಲ್ಲಿದ್ದರೆ ಅವನು ರಿಲೇಷನ್‌ಶಿಪ್‌ನಲ್ಲಿ ಸಕ್ಸಸ್ ಆಗುವುದು ಗ್ಯಾರಂಟಿ
ಸೌಂದರ್ಯವಲ್ಲ, ಹಣವಲ್ಲ ಈ ಗುಣಗಳೇ ಅವಳನ್ನು ಇಂಪ್ರೆಸ್ ಮಾಡುವುದು
ಪುರುಷರಲ್ಲಿ ಹಣವಿದ್ದರೆ ಮಹಿಳೆಯರು ಇಂಪ್ರೆಸ್ ಆಗುತ್ತಾರೆ ಎಂಬ ಆಲೋಚನೆ ಪುರುಷರಲ್ಲಿಇದೆ, ಇದು ಒಂದು ಲೆಕ್ಕದಲ್ಲಿ ಸತ್ಯ ಕೂಡ. ಹುಡುಗ ಸೆಟ್ಲ್ ಆಗಿದ್ದೇನೆ , ಆಸ್ತಿವಂತ ಎಂದಾದರೆ ಹುಡುಗಿಯರು ಮದುವೆಗೆ ಒಕೆ ಹೇಳಬಹುದು.
ಆದರೆ ಅವಳು ಅವನನ್ನು ತುಂಬಾನೇ ಇಷ್ಟಪಡಬೇಕೆಂದರೆ ಕೆಲವೊಂದು ಗುಣಗಳು ತುಂಬಾನೇ ಮುಖ್ಯವಾಗಿರುತ್ತದೆ. ಅಂಥ ಗುಣವಿರುವ ಪುರುಷ ಸಿಕ್ಕರೆ ಅವಳು ಅವನನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ, ಅವನ ಮೇಲಿನ ಇಷ್ಟವಾಗಲಿ, ಆಕರ್ಷಣೆಯಾಗಲಿ ಅವಳಿಗೆ ದಿನೇ ದಿನೇ ಹೆಚ್ಚಾಗುವುದೇ ಹೊರತು ಕಡಿಮೆಯಾಗುವುದಿಲ್ಲ:

ಸತ್ಯವಂತ, ನಿಯತ್ತಿನಿಂದ ಇರುವುದು
ಯಾವುದೇ ಕಾರಣಕ್ಕೆ ನನ್ನವನು ನನಗೆ ಸುಳ್ಳು ಹೇಳಲ್ಲ ಎಂಬ ನಂಬಿಕೆ ಅವಳಿಗೆ ನಿಮ್ಮ ಮೇಲೆ ಇದೆ ಎಂದಾದರೆ ಅವಳು ಅವನನ್ನು ತುಂಬಾನೇ ಪ್ರೀತಿಸುತ್ತಾಳೆ. ನನ್ನವನು ಎಂದೆಂದಿಗೂ ನನ್ನವನೇ ಆಗಿರುತ್ತೇನೆ ಎಂಬ ಭಾವನೆ ಅವಳಲ್ಲಿ ಮೂಡಿದರೆ ಸಾಕು ಮತ್ತೆಂದೂ ಅವಳು ನಿಮ್ಮನ್ನು ಸಂಶಯ ಪಡಲ್ಲ, ಈ ನಂಬಿಕೆ ಗಳಿಸಬೇಕೆಂದರೆ ಅವಳ ಜೊತೆ ಪ್ರಾಮಾಣಿಕನಾಗಿರಬೇಕು.
ಅವಳ ಸ್ನೇಹಿತರು, ಕುಟುಂಬದವರ ಜೊತೆಗೆ ಚೆನ್ನಾಗಿ ಇರಬೇಕು
ನನ್ನ ಸ್ನೇಹಿತರು, ಮನೆಯವರ ಜೊತೆ ಅವನು ಬೆರೆಯಬೇಕು, ಅವರ ಜೊತೆ ತುಂಬಾ ಚೆನ್ನಾಗಿರಬೇಕು ಎಂದು ಅವಳು ಬಯಸುತ್ತಾಳೆ, ನನ್ನ ಮನೆಯವರ ಜೊತೆ ಅವನು ಅವನ ಮನೆಯವರ ರೀತಿಯಲ್ಲೇ ನಡೆದುಕೊಳ್ಳುತ್ತಾನೆ ಎಂದಾದರೆ ಅವಳಿಗೆ ತುಂಬಾನೇ ಖುಷಿಯಾಗುವುದು.
ಅವಳನ್ನು ಕೆಟ್ಟದಾಗಿ ಬೈಯ್ಯಬೇಡಿ
ಅವಳನ್ನು ನೀವು ಎಷ್ಟು ಗೌರವದಿಂದ ಕಾಣುತ್ತೀರೋ ಅವಳಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುವುದು. ಅವಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆ ಅವಳಿಗೆ ನಿಮ್ಮ ಮೇಲಿನ ಗೌರವ, ಪ್ರೀತಿ ಕಡಿಮೆಯಾಗುವುದು. ಆದ್ದರಿಂದ ಕೋಪ ಬಂದಾಗ ನಿಮ್ಮ ಕೋಪವನ್ನು ವ್ಯಕ್ತಪಡಿಸಲು ಅವಳ ಬಗ್ಗೆ ಗೊಂದಲ ಹೆಚ್ಚಾಗುವುದು.
ಅವಳಿಗೆ ಸಮಯ ನೀಡಬೇಕು
ಅವಳಿಗೆ ನೀವು ಆಸ್ತಿ, ಅಂತಸ್ತಿನಲ್ಲಿ ಯಾವುದಕ್ಕೂ ಕಡಿಮೆ ಮಾಡಿಲ್ಲ, ಆದರೆ ಅವಳಿಗೆ ನಿಮ್ಮ ಜೊತೆ ಸಮಯ ಕಳೆಯಲು ಸಾಧ್ಯವಿಲ್ಲ ಎಂದಾದರೆ ಅವಳು ಖಂಡಿತ ಖುಷಿಯಾಗಿರಲ್ಲ. ನೀವು ಎಷ್ಟೇ ಬ್ಯುಸಿಯಾಗಿರಲಿ ಅವಳಿಗೆ ಸಮಯ ನೀಡಬೇಕು. ಆವಾಗ ಮಾತ್ರ ಅವಳಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುವುದು. ಯಾವ ಹೆಣ್ಣು ತಾನೆ ತನ್ನ ಪುರುಷನ ಜೊತೆ ಸಮಯ ಕಳೆಯಬೇಕೆಂದು ಬಯಸಲ್ಲ? ಹಾಗಾಗಿ ಅವಳಿಗೆ ಸಮಯ ಕೊಡಲು ಪ್ರಯತ್ನಿಸಿ.
ತನ್ನ ಸೌಂದರ್ಯದ ಕಡೆಗೂ ಗಮನಹರಿಸಬೇಕು
ಇಲ್ಲಿ ಸೌಂದರ್ಯ ಎಂದರೆ ನೋಡೋಕೆ ಹ್ಯಾಂಡ್ಸಮ್ ಆಗಿರಬೇಕೆಂದು ಅಲ್ಲ, ಆದರೆ ಆತನ ಡ್ರೆಸ್ಸಿಂಗ್ ಸೆನ್ಸ್, ಆತನ ವರ್ತನೆ, ಆತನ ಸ್ಟೈಲ್ ಚೆನ್ನಾಗಿರಬೇಕು. ತನ್ನ ದೇಹ ಸೌಂದರ್ಯದ ಕಡೆಗೆ ಗಮನ ಕೊಡದ ಪುರುಷನನ್ನು ಮಹಿಳೆ ಇಷ್ಟಪಡಲ್ಲ.



Click it and Unblock the Notifications