Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮೊದಲ ಪ್ರೀತಿಯನ್ನೇ ಮದುವೆಯಾದ್ರೆ ಇಷ್ಟೆಲ್ಲಾ ಲಾಭಗಳಿದ್ಯಾ?
ಮೊದಲ ಪ್ರೀತಿ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾಗಿರುತ್ತದೆ. ಮೊದಲ ಪ್ರೀತಿಯನ್ನು ಅಷ್ಟು ಸುಲಭವಾಗಿ ಮರೆಯೋದಿಕ್ಕೆ ಆಗೋದಿಲ್ಲ ಅಂತಾರೆ. ಮೊದಲ ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳೋದು ತುಂಬಾನೇ ಕಷ್ಟ. ಕೆಲವೇ ಕೆಲವು ಜನ ಅದೃಷ್ಟವಂತರು ಮಾತ್ರ ಮೊದಲ ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಂಡು ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಅಷ್ಟಕ್ಕು ಮೊದಲನೇ ಪ್ರೀತಿಯನ್ನೇ ಮದುವೆಯಾಗೋದ್ರಿಂದ ಏನು ಲಾಭ ಗೊತ್ತಾ? ಯಾಕೆ ಮೊದಲು ಪ್ರೀತಿಸಿದವರನ್ನು ಮದುವೆಯಾಗಬೇಕು ಅನ್ನೋದನ್ನ ಹೇಳ್ತೀವಿ.

1. ನೀವಿಬ್ಬರು ಒಟ್ಟಿಗೆ ಕಳೆದ ಅನೇಕ ನೆನಪುಗಳಿರುತ್ತದೆ
ಮೊದಲ ಪ್ರೀತಿ ಅಂದ್ರೆ ಅದು ಯಾವಾಗ್ಲೂ ಸ್ಪೆಷಲ್. ಮೊದಲ ಪ್ರೀತಿಯಲ್ಲಿ ಎಲ್ಲವೂ ಮೊದಲ ಅನುಭವಗಳೇ. ಎರಡನೇ, ಮೂರನೇ ಪ್ರೀತಿ ಆ ಅನುಭವಗಳನ್ನು ನಮಗೆ ನೀಡೋದಿಲ್ಲ. ಮೊದಲ ಪ್ರೀತಿಯ ಜೊತೆ ನಾವು ಕಳೆದ ದಿನಗಳು, ನೋವು, ನಲಿವು, ಸುಖ, ದುಃಖ ಎಲ್ಲವೂ ನಮ್ಮಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಒಂದು ವೇಳೆ ನಾವು ನಮ್ಮ ಮೊದಲ ಪ್ರೀತಿಯನ್ನೇ ಮದುವೆಯಾದರೆ ಜೀವನದುದ್ದಕ್ಕೂ ಆ ನೆನಪುಗಳನ್ನು ಮೆಲುಕು ಹಾಕಬಹುದು.
2. ಪ್ರೀತಿಯನ್ನು ಕಳೆದುಕೊಂಡ ನೋವು ಇರೋದಿಲ್ಲ
ಮೊದಲ ಪ್ರೀತಿಯನ್ನು ಮದುವೆಯಾದರೆ ಪ್ರೀತಿಯನ್ನು ಕಳೆದುಕೊಂಡ ನೋವು ಇರೋದಿಲ್ಲ. ಯಾಕಂದ್ರೆ ಅದುವೇ ಮೊದಲ ಹಾಗೂ ಅದುವೇ ಕೊನೆಯ ಪ್ರೀತಿಯಾಗಿರುತ್ತದೆ. ಹಾಗೂ ಅವರನ್ನೇ ಮದುವೆಯೂ ಆಗಿರುತ್ತೇವೆ. ಇನ್ನೂ ಮದುವೆಯಾದ ನಂತರ ಮಾಜಿ ಪ್ರೇಯಸ್ಸಿ/ಪ್ರಿಯಕರನ ಬಗ್ಗೆ ಪದೇ ಪದೇ ಮಾತನಾಡುವ ಪ್ರಸಂಗವೇ ಬರೋದಿಲ್ಲ.
3. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತೀರಿ
ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳುವುದೇ ನಿಜವಾದ ಪ್ರೀತಿ. ಪ್ರೀತಿಸಿ ಮದುವೆಯಾದರೆ ಮದುವೆಗೂ ಮೊದಲೇ ಒಬ್ಬರನ್ನೊಬ್ಬರು ತಿಳಿದುಕೊಂಡಿರುತ್ತೇವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರುತ್ತೇವೆ. ಹೀಗಾಗಿ ಮದುವೆಯಾದ ಮೇಲೆ ಯಾವುದೇ ರೀತಿಯ ಸಮಸ್ಯೆ ಬರೋದಿಲ್ಲ. ಅದ್ರಲ್ಲೂ ಮೊದಲ ಪ್ರೀತಿ ಅಂದ್ರೆ ಸುಮಾರು ವರ್ಷಗಳಿಂದ ಜೊತೆಯಾಗಿದ್ದಿದ್ರಿಂದ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ.
4. ನಂಬಿಕೆ, ಪ್ರಾಮಾಣಿಕತೆ ಹೆಚ್ಚಾಗಿರುತ್ತದೆ
ಮೊದಲ ಪ್ರೀತಿಯನ್ನೇ ಮದುವೆಯಾಗಿದ್ದೀರಿ ಎಂದರೆ ನಿಮ್ಮ ನಡುವಿನ ಭಾಂದವ್ಯ ಎಷ್ಟು ಗಟ್ಟಿ ಇದೆ ಅನ್ನೋದು ಗೊತ್ತಾಗುತ್ತದೆ. ಪ್ರೀತಿಯೊಂದು ಗಟ್ಟಿಯಾಗಿ ನೆಲೆ ನಿಲ್ಲಬೇಕಾದರೆ ಅಲ್ಲಿ ಪ್ರೀತಿಯ ಜೊತೆಗೆ ನಂಬಿಕೆ, ಪ್ರಾಮಾಣಿಕತೆ ಕೂಡ ತುಂಬಾನೇ ಮುಖ್ಯವಾಗುತ್ತದೆ. ನಂಬಿಕೆ, ಪ್ರಾಮಾಣಿಕತೆ ಇಬ್ಬರಲ್ಲೂ ಇದ್ದಾಗ ಮಾತ್ರ ಆ ಪ್ರೀತಿ ಕೊನೆವರೆಗೂ ಉಳಿದು ಮದುವೆಯೆಂಬ ಮೂರು ಗಟ್ಟಿನಲ್ಲಿ ಬಂಧಿಯಾಗಲು ಸಾಧ್ಯ.
5. ಮೊದಲ ಪ್ರೀತಿಯ ಜೊತೆಗೆ ನಿಮ್ಮ ಸಂವಹನ ಚೆನ್ನಾಗಿರುತ್ತದೆ
ತುಂಬಾ ವರ್ಷಗಳಿಂದ ಜೊತೆಯಾಗಿದ್ದಾಗ ನಮ್ಮ ನಡುವಿನ ಸಂವಹನ ಕೂಡ ಅಷ್ಟೇ ಉತ್ತಮವಾಗಿರುತ್ತದೆ. ನಾವು ಪ್ರೀತಿಸಿದವರೊಂದಿಗೆ ಅದೊಂದು ರೀತಿಯ ಬಿಡಸಲಾರದ ಬಂಧವಿರುತ್ತದೆ. ಅವರು ಖುಷಿಯಾಗಿದ್ದಾರಾ? ಅಥವಾ ನೋವಿನಲ್ಲಿದ್ದಾರಾ ಅನ್ನೋದು ಅವರು ಬಾಯಿ ಬಿಟ್ಟು ಹೇಳದಿದ್ದರೂ ನಾವು ತಿಳಿದುಕೊಳ್ಳುತ್ತೇವೆ. ಇದನ್ನೇ ಪ್ರೀತಿಸಿದ ಎರಡು ಜೀವಗಳ ನಡುವಿನ ಅಂತರಿಕ ಸಂವಹನ ಎನ್ನುವುದು.
6. ಇಬ್ಬರೂ ಒಟ್ಟಾಗಿ ಸಾಧಿಸಬಹುದು
ಮೊದಲ ಪ್ರೀತಿಯನ್ನು ಮದುವೆಯಾಗುವುದರಿಂದ ನಮ್ಮ ಎಲ್ಲಾ ಕಷ್ಟಗಳನ್ನು ಅವರು ನೋಡಿರ್ತಾರೆ. ನಮ್ಮ ಪ್ರತಿಯೊಂದು ನೋವಲ್ಲೂ ಅವರು ಜೊತೆಯಾಗಿರ್ತಾರೆ. ಕಷ್ಟ ಬಂದಾಗ ನಮಗೆ ಹೆಗಲಾಗಿ ನಿಂತಿರುತ್ತಾರೆ ಹೀಗಾಗಿ ಮದುವೆಯಾದ ಮೇಲೂ ನಮ್ಮ ಪ್ರತಿಯೊಂದು ಅಭಿವೃದ್ಧಿಯಲ್ಲೂ ಜೊತೆಯಾಗಿರುತ್ತಾರೆ. ಅವರ ಪ್ರೋತ್ಸಾಹದಿಂದ ನಮಗೆ ಏನನ್ನಾದರೂ ಸಾಧಿಸಬೇಕು ಅನ್ನೋ ಛಲ ಹುಟ್ಟುತ್ತದೆ.
7. ಒಬ್ಬರ ಮೇಲೆ ಒಬ್ಬರಿಗೆ ಗೌರವ ಇರುತ್ತದೆ
ಗಂಡ- ಹೆಂಡತಿ ಮಧ್ಯೆ ಯಾರೂ ಮೇಲಲ್ಲ ಹಾಗೂ ಯಾರು ಕೀಳಲ್ಲ. ಇಬ್ಬರೂ ಕೂಡ ಸಮಾನರೇ. ನಾವು ನಮ್ಮ ಸಂಗಾತಿಗೆ ಗೌರವ ನೀಡಿದರೆ ಅವರಿಂದ ನಾವು ಗೌರವವನ್ನು ಪಡೆಯುತ್ತೇವೆ. ಪ್ರೀತಿಸಿ ಮದುವೆಯಾದಾಗ ಅದ್ರಲ್ಲೂ ಮೊದಲ ಪ್ರೀತಿಯನ್ನೇ ಮದುವೆಯಾದಾಗ ಒಬ್ಬರ ಮೇಲೆ ಒಬ್ಬರಿಗೆ ಗೌರವ ಹೆಚ್ಚಿರುತ್ತದೆ. ಅದರಲ್ಲೂ ಪುರುಷರು ತಮ್ಮ ಮೊದಲ ಪ್ರೀತಿಯನ್ನು ತುಂಬಾನೇ ಇಷ್ಟ ಪಡುತ್ತಾರೆ.
ಮೊದಲ ಪ್ರೀತಿಯನ್ನೇ ಮದುವೆಯಾಗೋ ಅದೃಷ್ಟ ಹೆಚ್ಚಿನವರಿಗೆ ಇರೋದಿಲ್ಲ. ಆದ್ರೆ ನಾವು ಮೊದಲ ಪ್ರೀತಿಸಿದವರನ್ನೇ ಮದುಯಾದ್ರೆ ಬಾಳು ಬಂಗಾರವಾಗಿರೋದಂತೂ ಸುಳ್ಳಲ್ಲ.



Click it and Unblock the Notifications


