Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ನಿಮ್ಮ ಮನಸ್ಸಿಗೆ ನೆಮ್ಮದಿ ನೀಡದ ಮದುವೆಯ ಬಂಧನದಿಂದ ಹೊರಬರೋದು ಹೇಗೆ? ಇಲ್ಲಿದೆ ಟಿಪ್ಸ್
ಒಂದು ಸಂಬಂಧದಿಂದ ಹೊರಬರೋದು ನಾವು-ನೀವು ಅಂದುಕೊಂಡಷ್ಟು ಸುಲಭವಲ್ಲ. ಎಷ್ಟೊ ವರ್ಷಗಳಿಂದ ಒಬ್ಬರನ್ನು ಪ್ರೀತಿಸಿ, ಅವರ ಜೊತೆಗೆ ದಾಂಪತ್ಯ ನಡೆಸಿ ಕೊನೆಗೆ ಈ ಸಂಬಂಧವನ್ನು ಮುರಿದುಕೊಳ್ಳೋದು ಅಂದ್ರೆ ಕಷ್ಟಾನೇ. ಈ ವಿಚಾರದ ಬಗ್ಗೆ ನೀವು ಆಳವಾಗಿ ಚಿಂತಿಸಬೇಕಾಗುತ್ತದೆ.
ಸಾಧ್ಯವಾದಷ್ಟು ಸಲ ಒಡೆದು ಹೋದ ಸಂಬಂಧವನ್ನು ಸರಿಪಡಿಸೋದಕ್ಕೆ ನೀವು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಇದ್ಯಾವುದು ಕೆಲಸ ಮಾಡಿಲ್ಲ ಅಂದ್ರೆ ಕೊನೆಗಿರುವ ದಾರಿ ಎಂದರೆ ಸಂಬಂಧದಿಂದ ಹೊರಬರುವುದು. ಅಷ್ಟಕ್ಕು ಮುರಿದು ಹೋದ ಸಂಬಂಧದಿಂದ ಹೊರಬರೋದು ಹೇಗೆ? ಇಲ್ಲಿದೆ ಟಿಪ್ಸ್.

1. ನಿಮ್ಮ ಉದ್ದೇಶ ಸ್ಪಷ್ಟವಾಗಿರಲಿ
ಸಂಬಂಧವನ್ನು ಮುರಿದುಕೊಳ್ಳುವುದು ಖಂಡಿತ ಸುಲಭವಲ್ಲ. ನೀವು ಸಂಬಂಧವನ್ನು ಮುರಿದುಕೊಂಡು ನಿಮ್ಮ ಸಂಗಾತಿಯನ್ನು ಬಿಟ್ಟು ಹೋಗುತ್ತೀರಿ ಅಂದ್ರೆ ನಿಮ್ಮ ಉದ್ದೇಶ ಸ್ಪಷ್ಟವಾಗಿ ಇರಬೇಕು. ಮತ್ತೆ ಯಾವುದೇ ಕಾರಣಕ್ಕೂ ಈ ವ್ಯಕ್ತಿಯ ಜೊತೆಗೆ ಜೀವನ ನಡೆಸೋದಕ್ಕೆ ಸಾಧ್ಯವೇ ಇಲ್ಲ ಅಂದಾಗ ಮಾತ್ರ ಅವರನ್ನು ನೀವು ಬಿಟ್ಟು ಹೊರನಡೆಯಬೇಕು. ನೀವು ಅವರನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಅವರು ನಿಮ್ಮನ್ನು ತಡೆಯೋದಕ್ಕೆ ಪ್ರಯತ್ನಿಸಲೂಬಹುದು ಆದರೆ ಆ ಸಮಯದಲ್ಲಿ ಏನು ಮಾಡಬೇಕು ಅನ್ನೋ ನಿರ್ಧಾರ ನಿಮಗೆ ಬಿಟ್ಟಿದ್ದು.
2. ನಿಮ್ಮ ಭವಿಷ್ಯದ ಸಂವಹನಕ್ಕೆ ಮೀತಿಯನ್ನು ಸೃಷ್ಟಿಸಿಕೊಳ್ಳಿ
ಸಂಬಂಧವನ್ನು ಮುರಿದುಕೊಳ್ಳುವುದು ಎಂದರೆ ಸಂಪೂರ್ಣವಾಗಿ ನಿಮ್ಮ ಸಂಗಾತಿಯೊಂದಿಗಿನ ಎಲ್ಲಾ ರೀತಿಯ ಸಂಬಂಧದಿಂದ ಹೊರಬರೋದು. ಆದರೂ ಕೂಡ ಈ ಸಂಬಂಧದಿಂದ ಇಬ್ಬರೂ ದೂರ ದೂರ ಆದ ಮೇಲೂ ನಿಮ್ಮ ಸಂಗಾತಿ ನಿಮ್ಮ ಜೊತೆಗೆ ಸಂಪರ್ಕ ಇಟ್ಟುಕೊಳ್ಳೋದಕ್ಕೆ ಇಷ್ಟಪಡಬಹುದು. ಆದರೆ ನೀವು ಆ ಸಂವಹನಕ್ಕೆ ಈಗಲೇ ಗಡಿಯನ್ನು ಸೃಷ್ಟಿಸಿಕೊಂಡರೆ ಉತ್ತಮ.
3. ಸಂಗಾತಿಯ ಬಳಿ ಕ್ಷಮೆ ಕೇಳಿ
ದಾಂಪತ್ಯ ಬಂಧನದಿಂದ ನೀವು ಹೊರಬರೋದಕ್ಕೆ ಇಚ್ಛಿಸಿದ್ದೀರಿ ಎಂದ ಮೇಲೆ ಖಂಡಿತವಾಗಿ ಬಲವಾದ ಕಾರಣ ಇರುತ್ತದೆ. ತಪ್ಪು ನಿಮ್ಮದಾಗಲಿ ಅಥವಾ ನಿಮ್ಮ ಸಂಗಾತಿಯದ್ದೇ ಆಗಿರಬಹುದು. ಆದರೆ ಸಂಬಂಧದಿಂದ ಹೊರಬರುವ ಸಮಯದಲ್ಲಿ ನೀವು ಅವರ ಬಳಿ ಕ್ಷಮೆಯಾಚಿಸಿ. ಇದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ಕ್ಷಮೆ ಕೇಳಿದರೆ ಅದು ನಿಮ್ಮ ಒಳ್ಳೆಯ ಗುಣವನ್ನು ತೋರಿಸುತ್ತದೆ.
4. ಸಹಾನುಭೂತಿ ತೋರಿಸಿ
ಮದುವೆಯನ್ನು ಮುರಿದುಕೊಳ್ಳುವುದು ನೀವು ಅಂದುಕೊಂಡಷ್ಟು ಸುಲಭವಲ್ಲ. ಖಂಡಿತ ಇಬ್ಬರಿಗೂ ನೋವಾಗುತ್ತದೆ. ಅದ್ರಲ್ಲೂ ನಿಮಗಿಂತ ಹೆಚ್ಚಾಗಿ ನಿಮ್ಮ ಸಂಗಾತಿಗೆ ನೋವಾಗಬಹುದು. ಈ ಸಂದರ್ಭದಲ್ಲಿ ನೀವು ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಮೇಲೆ ಸಹಾನೂಭೂತಿ ತೋರಿಸಿ. ನಿಮ್ಮಿಂದ ಆದ ತಪ್ಪಿಗೆ ನೀವೇ ಜವಾಬ್ದಾರರೂ ಎಂದು ಹೇಳಿ.
5. ಅವರೊಂದಿಗೆ ಕಳೆದ ಸಮಯಕ್ಕಾಗಿ ಕೃತಜ್ಞತೆ ಸಲ್ಲಿಸಿ
ನೀವೀಗ ಸಂಬಂಧವನ್ನು ಮುರಿದುಕೊಳ್ಳೋದಕ್ಕೆ ನಿರ್ಧಾರ ಮಾಡಿರಬಹುದು. ಆದರೆ ಇಷ್ಟು ವರ್ಷ ನೀವು ನಿಮ್ಮ ಸಂಗಾತಿಯ ಜೊತೆಗೆ ಎಷ್ಟೋ ಸುಂದರ ಕ್ಷಣಗಳನ್ನು ಕಳೆದಿದ್ದೀರಿ. ಅವರಿಂದ ನೀವು ಸಂತೋಷವನ್ನೂ ಕಂಡಿದ್ದೀರಿ. ಆ ನೆನಪುಗಳನ್ನು
ಕೊಟ್ಟಿದ್ದಕ್ಕಾಗಿ ನಿಮ್ಮ ಸಂಗಾತಿಗೆ ನೀವು ಕೃತಜ್ಞತೆ ಸಲ್ಲಿಸಲೇಬೇಕು. ಇದು ಒಂದು ರೀತಿ ಅವರ ಮನಸ್ಸಿಗೆ ನೆಮ್ಮದಿ ನೀಡಬಹುದು.
6. ನಿಮ್ಮ ಆಧ್ಯತೆಗಳನ್ನು ಕಂಡುಕೊಳ್ಳಿ
ಎಷ್ಟೋ ವರ್ಷಗಳ ಕಾಲ ಜೀವನ ಮಾಡಿದ ಸಂಗಾತಿಯ ಜೊತೆಗೆ ಈಗ ನೀವು ವಿಚ್ಛೇದನ ಪಡೆಯೋದಕ್ಕೆ ನಿರ್ಧರಿಸಿದ್ದೀರಿ ಎಂದಾದರೆ ಈ ಮಧ್ಯೆ ನೀವು ಅನೇಕ ಸವಾಲುಗಳನ್ನು ಎದುರಿಸಲಿದ್ದೀರಿ. ಮೊದಲನೇಯದ್ದು ಮಕ್ಕಳ ಜವಾಬ್ದಾರಿ. ಮಕ್ಕಳನ್ನು ಯಾರ ಸುಪರ್ದಿಗೆ ಬಿಡಬೇಕು ಎಂದು. ಇನ್ನೂ ವಿಚ್ಛೇದನದ ಬಳಿಕೆ ನೀವು ಕೆಲವೊಂದು ಆರ್ಥಿಕ ಸಮಸ್ಯೆ ಎದುರಿಸುವ ಸಾಧ್ಯತೆಗಳಿದೆ.
7. ಭವಿಷ್ಯದಲ್ಲಿ ಹೇಗೆ ಬದುಕಬೇಕು ಅನ್ನೋದನ್ನು ನಿರ್ಧರಿಸಿ
ಸಂಬಂಧದಿಂದ ಹೊರ ಬರೋದು ಸುಲಭ. ಆದರೆ ಆ ಸಂಬಂಧವನ್ನು ಮುರಿದುಕೊಂಡು ಬದುಕೋದು ತುಂಬಾನೇ ಕಷ್ಟ. ಮನೆ ಬಿಟ್ಟು ಬಂದ ಮೇಲೆ ನೀವು ಎಲ್ಲಿ ಉಳಿದುಕೊಳ್ಳುತ್ತೀರಿ ಎಂದು ಮೊದಲಿಗೆ ಯೋಚಿಸಿ. ಅಮ್ಮನ ಮನೆಯಲ್ಲಿ ಶಾಶ್ವತವಾಗಿ ಉಳಿದುಕೊಳ್ಳೋದಕ್ಕೆ ಸಾಧ್ಯಾನಾ? ಅಥವಾ ನೀವೊಬ್ಬರೇ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ನೆಲೆಸೋದಕ್ಕೆ ಬಯಸಿದ್ದೀರಾ? ದುಡ್ಡಿಗಾಗಿ ಏನು ಮಾಡುತ್ತೀರಿ. ಯಾರ ಸಹಾಯವಿಲ್ಲದೇ ನೀವು ಒಬ್ಬಂಟಿಯಾಗಿ ಬದುಕಬಹುದಾ? ಅನ್ನೋ ಬಗ್ಗೆ ಯೋಚಿಸಲೇಬೇಕು.
ಒಂದು ಸಂಬಂಧವನ್ನು ಮುರಿದುಕೊಂಡು ಬರೋದಂದ್ರೆ ಸುಲಭದ ಮಾತಲ್ಲ. ಈ ಸಂದರ್ಭದಲ್ಲಿ ನೀವು ಈ ಎಲ್ಲಾ ವಿಚಾರಗಳ ಬಗ್ಗೆ ಚಿಂತಿಸಲೇಬೇಕು.



Click it and Unblock the Notifications
