Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಕ್ಕಳು ಬೇಡ ಎನ್ನುವ ಸಂಗಾತಿಯ ಮನವೊಲಿಸೋದು ಹೇಗೆ?
ಒಂದು ದಾಂಪತ್ಯ ಪೂರ್ಣವಾಗಬೇಕೆಂದರೆ ಮಕ್ಕಳು ಇರಲೇಬೇಕು. ಆಗ ಮಾತ್ರ ದಾಂಪತ್ಯಕ್ಕೆ ಒಂದು ಅರ್ಥ ಸಿಗೋದು. ಹಾಗಂತ ಮಕ್ಕಳು ಮಾಡಿಕೊಳ್ಳುವುದು ಕಡ್ಡಾಯವೇನಲ್ಲ. ಇದು ಸಂಪೂರ್ಣವಾಗಿ ದಂಪತಿಗಳ ಆಯ್ಕೆಗೆ ಬಿಟ್ಟಿದ್ದು. ಆದರೆ ಕೆಲವೊಂದು ಸಂಬಂಧಗಳಲ್ಲಿ ಏನಾಗುತ್ತೆ ಅಂದರೆ ಒಬ್ಬರಿಗೆ ಮಕ್ಕಳು ಬೇಕು ಅನ್ನೋ ಬಯಕೆ ಇರುತ್ತದೆ. ಆದರೆ ಇನ್ನೊಬ್ಬರಿಗೆ ಮಕ್ಕಳ ಮೇಲೆ ಆಸಕ್ತಿ ಇರೋದಿಲ್ಲ. ನಿಮ್ಮ ಸಂಗಾತಿಗೆ ಮಕ್ಕಳ ಮೇಲೆ ಆಸಕ್ತಿ ಇಲ್ಲದಾಗ ಅವರನ್ನು ಯಾವ ರೀತಿ ಒಪ್ಪಿಸಬಹುದು. ನಿಮ್ಮ ಸಂಗಾತಿಯನ್ನು ಯಾವ ರೀತಿ ಮನಒಲಿಸಬಹುದು ಅನ್ನೋದನ್ನು ತಿಳಿದುಕೊಳ್ಳೋಣ.

1. ರಾಜಿ ಮಾಡಿಕೊಳ್ಳುವಂತೆ ಮಾಡಿ
ಕೆಲವೊಬ್ಬರು ತಮ್ಮ ಮಾತಿನ ಮೇಲೆ ನಿಂತುಕೊಂಡರೆ ಅದೇನೇ ಆದ್ರೂ ಅವರ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಹಾಗೆಯೇ ನಿಮ್ಮ ಸಂಗಾತಿ ಮಕ್ಕಳು ಬೇಡ ಅಂತ ನಿರ್ಧರಿಸಿ ಬಿಟ್ಟಿದ್ದರೆ ಅವರನ್ನು ರಾಜಿ ಮಾಡಿಕೊಳ್ಳುವಂತೆ ಮಾಡೋದು ಸಂಪೂರ್ಣವಾಗಿ ನಿಮ್ಮ ಕೈಯಲ್ಲಿದೆ. ಹೇಗಾದರೂ ಮಾಡಿ ಅವರ ಮನವೊಲಿಸೋದಕ್ಕೆ ಪ್ರಯತ್ನಿಸಿ. ಮಕ್ಕಳಿಲ್ಲದೇ ನಿಮಗಾಗುತ್ತಿರೋ ನೋವನ್ನು ಅವರಿಗೆ ಅರ್ಥ ಮಾಡೋದಕ್ಕೆ ಪ್ರಯತ್ನಿಸಿ.
2. ಭವಿಷ್ಯದ ಆಕಾಂಕ್ಷೆಗಳನ್ನು ಅರ್ಥ ಮಾಡಿಸಿ
ಈಗ ನಿಮ್ಮ ಸಂಗಾತಿಗೆ ಮಕ್ಕಳಿಲ್ಲದಿದ್ದರೆ ಆರಾಮಾಗಿ ಜೀವನ ಕಳೆಯಬಹುದು ಅಂತ ಅನ್ನಿಸಬಹುದು. ಆದರೆ ಭವಿಷ್ಯದಲ್ಲಿ ನೀವು ಒಬ್ಬಂಟಿಯಾಗಿತ್ತೀರಿ. ಇಬ್ಬರಲ್ಲಿ ಒಬ್ಬರು ತೀರಿಕೊಂಡರೂ ಕೂಡ ಮತ್ತೊಬ್ಬರು ಒಂಟಿಯಾಗಿ ಬಿಡುತ್ತಾರೆ. ಒಂದು ವೇಳೆ ನೀವಿಬ್ಬರೂ ಬದುಕಿದ್ದರೂ ಕೂಡ ಬೇರೆಯವರ ಮಕ್ಕಳು ಬೆಳೆದು ದೊಡ್ಡವರಾಗಿರೋದನ್ನು ಕಂಡು ಖಂಡಿತ ನಿಮಗೆ ನೋವಾಗುತ್ತದೆ. ನಮಗೂ ಮಕ್ಕಳಿದ್ದರೆ ಹೀಗೆ ಇರುತ್ತಿದ್ದರೂ ಅನ್ನೋ ನೋವು ಕಾಡುತ್ತದೆ.
3. ತಜ್ಞರನ್ನು ಸಂಪರ್ಕಿಸಿ
ಸದ್ಯ ನಿಮ್ಮ ಸಂಗಾತಿಗೆ ಮಕ್ಕಳು ಬೇಡ ಅನ್ನೋ ಭಾವನೆ ಬಂದಿರಬಹುದು. ನೀವು ಏನೇ ಹೇಳಿದ್ರೂ ನಿಮ್ಮ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಅವರು ಇಲ್ಲದೇ ಇರಬಹುದು. ಆಗ ನೀವು ಮಾಡಬೇಕಾಗಿರುವುದು ಇಷ್ಟೇ. ಅವರನ್ನು ತಜ್ಞರ ಬಳಿ ಕೌನ್ಸಿಲಿಂಗ್ ಕರೆದುಕೊಂಡು ಹೋಗಿ ನಿಮ್ಮ ಮನಸ್ಸಿನಲ್ಲಿ ಆಗುತ್ತಿರೋ ನೋವಿನ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿ. ಆಗಲಾದರೂ ಅವರು ಮನಸ್ಸು ಬದಲಾಯಿಸುವ ಸಾಧ್ಯತೆಯಿದೆ.
4. ನಿಮ್ಮ ಸಂಗಾತಿಗೆ ಆರೋಗ್ಯ ಸಮಸ್ಯೆ ಇರಬಹುದು
ಮಕ್ಕಳು ಬೇಡ ಅನ್ನೋದಕ್ಕೆ ಕೆಲವೊಂದು ಕಾರಣಗಳು ಇರುತ್ತೆ. ನಿಮ್ಮ ಸಂಗಾತಿಗೆ ಆರೋಗ್ಯ ಸಮಸ್ಯೆಗಳು ಇರಬಹುದು. ಆದರೆ ಅವರು ನಿಮ್ಮಲ್ಲಿ ಆ ವಿಚಾರವನ್ನು ಹೇಳಿಕೊಳ್ಳದೇ ಇರಬಹುದು. ಹೀಗಾಗಿ ಮಕ್ಕಳ ವಿಚಾರ ಬಂದಾಗ ಅವರು ನಿರ್ಲಕ್ಷ್ಯ ಭಾವ ತೋರಬಹುದು. ಹೀಗಾಗಿ ನೀವು ಅವರ ಜೊತೆಗೆ ಕೂತು ಮಾತನಾಡಿ. ಒಂದು ವೇಳೆ ಆರೋಗ್ಯ ಸಮಸ್ಯೆ ಇರೋದು ಗೊತ್ತಾದರೆ ವೈದ್ಯರನ್ನು ಸಂಪರ್ಕಿಸೋದು ಉತ್ತಮ.
5. ನಿಮ್ಮ ಸಂಗಾತಿಗೆ ನಿಮ್ಮಲ್ಲಿ ಆಸಕ್ತಿ ಇಲ್ಲದಿರಬಹುದು
ನಿಮ್ಮ ಸಂಗಾತಿಯು ಮಕ್ಕಳು ಬೇಡ ಅಂತ ಹೇಳೋದಕ್ಕೆ ಅನೇಕ ಕಾರಣಗಳು ಇರಬಹುದು. ಅದ್ರಲ್ಲಿ ಮುಖ್ಯವಾಗಿ ನಿಮ್ಮ ಆಸಕ್ತಿ ಇಲ್ಲದೇ ಇರಬಹುದು. ಅವರು ಕೊಂಚ ವರ್ಷಗಳ ಕಾಲ ನಿಮ್ಮ ಜೊತೆಗೆ ಇದ್ದು ನಿಮ್ಮ ದುಡ್ಡ, ಹಾಗೂ ಯವ್ವನವನ್ನು ಅನುಭವಿಸಿ ನಿಮ್ಮನ್ನು ಬಿಟ್ಟು ಹೋಗೋ ಪ್ಲಾನ್ ಹಾಕಿರಬಹುದು. ನಿಮ್ಮ ಸಂಗಾತಿಗೂ ಈ ಉದ್ದೇಶವಿದ್ದರೆ ಅಂತವರ ಜೊತೆಗೆ ಸಂಬಂಧ ಮುರಿದುಕೊಳ್ಳುವುದೇ ಉತ್ತಮ.
6. ಸಂಗಾತಿಯು ಗುರಿಯೆಡೆಗೆ ಕೆಲಸ ಮಾಡುತ್ತಿರಬಹುದು
ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಗುರಿ ಇದ್ದೇ ಇರುತ್ತದೆ. ಆ ಗುರಿಯನ್ನು ಮುಟ್ಟೋದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿರುತ್ತಾರೆ. ನಿಮ್ಮ ಸಂಗಾತಿಯು ಕೂಡ ಜೀವನಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಅನ್ನೋ ಅಚಲವಾದ ಗುರಿ ಇರುತ್ತದೆ. ಹೀಗಾಗಿ ಈ ಗುರಿ ಸಾಧನೆಯ ಮಧ್ಯೆ ಮಕ್ಕಳು ಬೇಡ ಅಂತ ನಿರ್ಧರಿಸಿರಬಹುದು. ಇಂತಹ ಸಂದರ್ಭದಲ್ಲಿ ಅವರನ್ನು ಒಪ್ಪಿಸೋದು ನಿಮ್ಮ ಜವಾಬ್ದಾರಿ.
7. ನಿಮ್ಮನ್ನು ಕಂಡರೆ ಆಗದೇ ಇರಬಹುದು
ಕೆಲವೊಂದು ಮದುವೆಗಳು ಒತ್ತಾಯದ ಮದುವೆಯಾಗಿರುತ್ತದೆ. ಮನೆಯರ ಮರ್ಯಾದೆಗಾಗಿ ಅವರು ಮದುವೆಗೆ ಒಪ್ಪಿ ನಿಮ್ಮ ಜೊತೆಗೆ ಇರಬಹುದು. ಹಾಗಂತ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಇಷ್ಟ ಇದೆ ಅಂತ ಹೇಳೋದಿಕ್ಕಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ನಿಮ್ಮಿಂದ ಮಕ್ಕಳ ಬೇಕಾಗಿರೋದಿಲ್ಲ. ಇದೇ ಕಾರಣಕ್ಕೆ ಅವರು ಮಕ್ಕಳು ಮಾಡಿಕೊಳ್ಳೋದಕ್ಕೆ ನಿರಾಸಕ್ತಿ ತೋರುತ್ತಿರಬಹುದು.
ನಿಮಗೆ ಮಕ್ಕಳ ಮೇಲೆ ಅಕ್ಕರೆಯಿದ್ದರೆ ನಿಮ್ಮ ಸಂಗಾತಿಯನ್ನು ಹೇಗಾದರೂ ಮಾಡಿ ನೀವು ಒಪ್ಪಿಸಲೇಬೇಕು. ಒಂದು ವೇಳೆ ಈ ಮಧ್ಯೆ ಅಡೆತಡೆಗಳು ಬಂದರೂ ಕೂಡ ಅದನ್ನು ಪರಿಹರಿಸೋದು ನಿಮ್ಮ ಕೈಯಲ್ಲಿದೆ.



Click it and Unblock the Notifications

