Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ನಾಲ್ಕೇ ನಾಲ್ಕು ವಿಷಯ ತಿಳಿದರೆ ಸಾಕು ಅತ್ತೆ-ಸೊಸೆ ಜಗಳ ಇರಲ್ಲ!
ಈ ಅತ್ತೆ-ಸೊಸೆ ಬಾಂಧವ್ಯ ಏಕೆ ಅಷ್ಟಕಷ್ಟೇ ಇರುತ್ತದೆ, ಎಲ್ಲೋ ಒಂದೋ ಎರಡು ಮನೆಗಳಲ್ಲಿ ಅತ್ತೆ-ಸೊಸೆ ಚೆನ್ನಾಗಿರುತ್ತಾರೆ, ಉಳಿದಂತೆ ಬಹುತೇಕ ಮನೆಗಳಲ್ಲಿ ಅತ್ತೆ ಹೇಳಿದ್ದು ಸೊಸೆಗೆ ಆಗಲ್ಲ, ಸೊಸೆ ಮಾಡುವುದು ಅತ್ತೆಗೆ ಇಷ್ಟವಾಗಲ್ಲ.
ಇವರಿಬ್ಬರ ನಡುವೆ ಸಿಕ್ಕ ಗಂಡಿಗೆ ಇತ್ತ ಅಮ್ಮನ ಪರವಹಿಸಬೇಕಾ? ಇಲ್ಲ ಹೆಂಡತಿ ಪರ ನಿಲ್ಲಬೇಕಾ ಎಂಬ ಗೊಂದಲ. ಹೆಂಡತಿ ಹೇಳುವಾಗ ಅಮ್ಮನದೇ ತಪ್ಪು ಅನಿಸಿದರೆ , ಅಮ್ಮ ಹೇಳುವಾಗ ನನ್ನ ಅಮ್ಮನಿಗೆ ಹೀಗೆಲ್ಲಾ ಮಾಡುತ್ತಾಳಾ? ಎಂದು ಕೋಪ ನೆತ್ತಿಗೇರುವುದು,ಕೊನೆಗೆ ಇಬ್ಬರಲ್ಲಿ ಯಾರು ಸರಿ ಎಂಬುವುದು ಮಾತ್ರ ತಿಳಿಯುವುದೇ ಇಲ್ಲ.

ಅತ್ತೆ ಸೊಸೆಯನ್ನು ಮೊದಲಿಗೆ ಒಪ್ಪಿಕೊಳ್ಳಬೇಕು
ಮಗನಿಗೆ ಹೆಣ್ಣು ಸಿಗುತ್ತಿಲ್ಲ ಎಲ್ಲಾದರು ಒಂದು ಒಳ್ಳೆಯ ಹುಡುಗಿ ಇದ್ದರೆ ಹೇಳಿ ಎಂದು ನೆಂಟರಿಷ್ಟರು, ಪರಿಚಯಸ್ಥರ ಬಳಿಯೆಲ್ಲಾ ಹೇಳಿ, ಕೊನೆಗೆ ಅವನಿಗೆ ಹುಡುಗಿ ಸೆಟ್ ಅದಾಗ ತುಂಬಾ ಸಂಭ್ರಮಿಸುತ್ತಾಳೆ, ಆದರೆ ಅದೇನು ಆಗುತ್ತೋ ಸೊಸೆ ಬಂದ ಕೆಲವೇ ದಿನಗಳಲ್ಲಿ ಅವಳಿಗೆ ಸೊಸೆ ಮೇಲೆ ನಿಧಾನಕ್ಕೆ ಅಸಮಧಾನ ಉಂಟಾಗಲಾರಂಭಿಸುತ್ತದೆ, ಅತ್ತೆ-ಸೊಸೆ ಶೀತಲ ಸಮಯ ಶುರುವಾಗಿಯೇ ಬಿಡುತ್ತದೆ.
ಈ ಅತ್ತೆ ಸೊಸೆ ಜಗಳ ತಪ್ಪಿಸುವಲ್ಲಿ ಸೊಸೆಗಿಂತ ಅತ್ತೆ ಪಾತ್ರ ತುಂಬಾನೇ ಮುಖ್ಯ
ಇಷ್ಟು ದಿನ ಈ ಮನೆಗೆ ತಾನೇ ಯಜಮಾನಿಯಾಗಿದ್ದ ಆಕೆಗೆ ಸೊಸೆ ಬರುತ್ತಿದ್ದಂತೆ ಯಾಕೋ ಇವಳ ರಾಜ್ಯಭಾರ ಹೆಚ್ಚಾಗುತ್ತಿದೆ ಎಂದು ಅನಿಸಿದರೆ ಸೊಸೆಯಲ್ಲಿ ತಪ್ಪುಗಳನ್ನು ಹುಡುಕಲು ಪ್ರಾರಂಭಿಸುತ್ತಾಳೆ. ಸೊಸೆಗೆ ಮದುವೆಯಾಗಿ ಬರುವಾಗ ಹೊಂದಿಕೊಂಡು ಹೋಗಬೇಕೆಂಬ ಮನಸ್ಸಿರುತ್ತದೆ, ಆದರೆ ಅತ್ತೆಯ ವರ್ತನೆ ಬದಲಾದಂತೆ ತನ್ನ ವರ್ತನೆಯನ್ನೂ ಬದಲಾಯಿಸುತ್ತಾಳೆ, ಹೀಗೆ ಅತ್ತೆ-ಸೊಸೆ ಜಗಳ ಶುರುವಾಗಿಯೇ ಬಿಡುತ್ತದೆ.
ಕಡ್ಡಿಯನ್ನು ಗುಡ್ಡ ಮಾಡುವುದು ಬಿಡಬೇಕು
ನಾವು ಹೆತ್ತ ಮಕ್ಕಳೇ ನಮ್ಮ ಮಾತು ಕೇಳಲ್ಲ, ಅವರು ಕೂಡ ಸಾಕಷ್ಟು ತಪ್ಪು ಮಾಡುತ್ತಾರೆ, ನಮ್ಮ ಮನಸ್ಸಿಗೆ ಬೇಸರವಾಗುವಂತೆ ನಡೆದುಕೊಳ್ಳುತ್ತಾರೆ, ಅದು ಮಗನಾಗಿರಲಿ, ಮಗನಾಗಿರಲಿ,ಆದರೆ ಅವರು ಏನೇ ಮಾಡಿದರೂ ಕ್ಷಮಿಸುವ ಅತ್ತೆಯರು ಸೊಸೆಯ ಚಿಕ್ಕ ತಪ್ಪುಗಳನ್ನು ಸಹಿಸಲು ಸಾಧ್ಯವಾಗಲ್ಲ, ರಂಗೋಲಿಯ ಚಿಕ್ಕಿ ಒಂದೆರಡು ಹೆಚ್ಚು ಕಡಿಮೆತಾದರೆ ಅಷ್ಟೇ ಸಾಕು ಅತ್ತೆಯ ಸಿಡಿಮಿಡಿಯ ವರ್ತನೆ ಶುರು, ಈ ಸ್ವಭಾವ ಬದಲಾಯಿಸಿಕೊಳ್ಲಬೇಕು.
ಸೊಸೆಯೂ ಅಷ್ಟೇ ಅತ್ತೆ ಒಂದು ಮಾತು ಕೋಪದಲ್ಲಿ ಹೇಳಿದರೆ ಅದನ್ನು ಅಲ್ಲಿಗೆ ಬಿಟ್ಟು ಬಿಡಬೇಕು
ಮನೆಯಲ್ಲಿ ನಮ್ಮ ಹೆತ್ತವರು ಕುಡ ನಮ್ಮನ್ನು ಬೈಯ್ಯುವಿದಿಲ್ಲವೇ, ಆವಾಗ ಸುಮ್ಮನಾಗುವ ನಾವು ಅತ್ತೆ ಏನೋ ಒಂದು ಮಾತು ಹೇಳಿದರು ಎಂದರೆ ಕೋಪಗೊಂಡು ಸಮಸ್ಯೆಯನ್ನು ದೊಡ್ಡದು ಮಾಡುವುದು ಸರಿಯಲ್ಲ.
ಹುಡುಗಿಯ ತಾಯಿ ಮಗಳ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು
ಎಷ್ಟೋ ಕುಟುಂಬದಲ್ಲಿ ಅತ್ತೆ-ಸೊಸೆ ಕಲಹ ಹೆಚ್ಚಾಗಲು ಸೊಸೆಯ ತಾಯಿ ಕಾರಣವಾಗುತ್ತಾಳೆ, ಈಕೆ ತನ್ನ ಗಂಡನ ಮನೆಯ ವಿಷಯಗಳನ್ನು ತಾಯಿಗೆ ಹೇಳುತ್ತಾಳೆ, ಅವಳಿಗೆ ಅಯ್ಯೋ ನನ್ನ ಮಗಳಿಗೆ ಇಷ್ಟೆಲ್ಲಾ ಕಷ್ಟವಾಗುತ್ತಿದೆಯಲ್ಲಾ ಎಂಬ ಸಂಕಟ, ಹೀಗಾಗಿ ನೀನು ಅತ್ತೆ ಜೊತೆಗೆ ಇರಲು ಸಾಧ್ಯವಾಗದಿದ್ದರೆ ಬೇರೆಯಾಗು ಎಂದೆಲ್ಲಾ ಸಲಹೆ ನೀಡಿ, ಇರುವ ಸಮಸ್ಯೆಯನ್ನು ದೊಡ್ಡದು ಮಾಡುತ್ತಾಳೆ.
ಅತ್ತೆ-ಸೊಸೆ ಜಗಳಕ್ಕೆ ಮಗನೂ ಕಾರಣವಾಗುತ್ತಾನೆ
ಅತ್ತೆ ಸೊಸೆ ಜಗಳ ಹೆಚ್ಚಾಗಲು ಮಗನೂ ಕಾರಣವಾಗುತ್ತಾನೆ, ತಾಯಿ ಬಗ್ಗೆ ಹೇಳಿದರೆ ಗಂಡನಿಗೆ ಇಷ್ಟವಾಗಲ್ಲ, ಸೊಸೆ ಬಗ್ಗೆ ಹೇಳಿದರೆ ಮಗನಿಗೆ ಇಷ್ಟವಾಗಲ್ಲ ಎಂಬಂತೆ ನಡೆದುಕೊಂಡರೆ ಸಾಕು ಚಿಕ್ಕ-ಪುಟ್ಟ ಮನಸ್ತಾಪ ಇದ್ದರೂ ಹೊಂದಿಕೊಂಡು ಹೋಗುತ್ತಾರೆ, ಆದರೆ ಈತ ಯಾರಾದರು ಒಬ್ಬರ ಪರ ವಹಿಸಿದರೆ ಅಲ್ಲಿಗೆ ಆ ಕುಟುಂಬದಲ್ಲಿ ಸಮಸ್ಯೆ ತಪ್ಪಿದ್ದಲ್ಲ...
ಈಗ ಹೇಳಿ ಇಷ್ಟೂ ಮಾತು ನಿಜ ತಾನೆ...



Click it and Unblock the Notifications
