Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
2023ರಲ್ಲಿ ಅದ್ದೂರಿ ಮದುವೆ, ಇದೀಗ ಇನ್‌ಸ್ಟಾದಲ್ಲಿ ಪತಿಗೆ 3 ಬಾರಿ ವಿಚ್ಛೇದನ ನೀಡಿದ ದುಬೈ ರಾಜಕುಮಾರಿ
ದುಬೈ ರಾಜಕುಮಾರಿ ತನ್ನ ಪತಿಗೆ ಇನ್‌ಸ್ಟಾದಲ್ಲಿ ವಿಚ್ಛೇದನ ನೀಡಿದ್ದಾಳೆ, ತ್ರಿವಳಿ ತಲಾಖ್ ರೀತಿಯಲ್ಲಿ ಪತಿಗೆ ಮೂರು ಬಾರಿ ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾಳೆ.

ದುಬೈ ರಾಜಕುಮಾರಿ ಶೇಖ್ ಮಹ್ರಾ ಬಿಂತ್ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ' ಪ್ರೀತಿಯ ಗಂಡನೇ , ನೀನು ಬೇರೆಯವರ ಜೊತೆ ಇರುವುದರಿಂದ ನಾನು ಈ ಮೂಲಕ ವಿಚ್ಛೇದನ ನೀಡುತ್ತಿದ್ದೇನೆ. ನಿನಗೆ ವಿಚ್ಛೇದನ ನೀಡುತ್ತಿದ್ದೇನೆ, ನಿನಗೆ ವಿಚ್ಛೇದನ ನೀಡುತ್ತಿದ್ದೇನೆ, ನಿನಗೆ ವಿಚ್ಛೇದನ ನೀಡುತ್ತಿದ್ದೇನೆ, ಚೆನ್ನಾಗಿರು, ನಿನ್ನ ಮಾಜಿ ಹೆಂಡತಿ (Dear Husband, As you are occupied with other companions, I hereby declare our divorce. I divorce you, I divorce you, I divorce you. Take Care. Your Ex-Wife.") ಎಂದು ವಿಚ್ಛೇದನ ನೀಡಿದ್ದಾರೆ, ಅದರಲ್ಲಿಯೂ ಇನ್‌ಸ್ಟಾಗ್ರಾಮ್ ಮೂಲಕ ವಿಚ್ಛೇದನ ನೀಡಿ ಅಚ್ಚರಿ ಮೂಡಿಸಿದ್ದಾರೆ. ವಿಚ್ಛೇದನ ಬಳಿಕ ಸೋಷಿಯಲ್ ಮೀಡಿಯಾದ ಮೂಲಕ ತಿಳಿಸುತ್ತಿದ್ದರು, ಅದರೆ ಇ ರಾಜಕುಮಾರಿ ವಿಚ್ಛೇದನವನ್ನೇ ಇನ್‌ಸ್ಟಾ ಮೂಲಕ ನೀಡಿದ್ದಾಳೆ.
ಜುಲೈ 17ಕ್ಕೆ ಶೇಖ್ ಮೆಹ್ರಾ ತನ್ನ ಪತಿಗೆ ಈ ಪೋಸ್ಟ್ ಮಾಡಿದ್ದಾಳೆ. ಶೇಖ್ ಮಹ್ರಾ ಹಾಗೂ ಶೇಖ್ ಮನಾಸ್ ಇಬ್ಬರು 2023ರಲ್ಲಿ ಮದುವೆಯಾಗಿದ್ದರು. ದುಬೈ ರಾಜಕುಮಾರಿ ಮದುವೆ ಎಂದರೆ ಹೇಳಬೇಕೆ? ಐಷಾರಾಮಿ ಮದುವೆಯಾಗಿತ್ತು.
ಮದುವೆಯಾಗಿ ಐದೇ ತಿಂಗಳಿಗೆ ಮಗು ಜನಿಸಿತ್ತು
ಈ ಜೋಡಿ ಮದುವೆ ಎಷ್ಟು ಸದ್ದು ಮಾಡಿತೊ ಇವರಿಬ್ಬರು ಮದುವೆಯಾಗಿ ಐದೇ ತಿಂಗಳಿಗೆ ಪೋಷಕರಾದ ಸುದ್ದಿ ಕುಡ ಸದ್ದು ಮಾಡಿತು, ಈಗ ಇವರ ವಿಚ್ಚೇದನ ಕೂಡ ಗಮನ ಸೆಳೆದಿದೆ. ಈ ವಿಚ್ಛೇದನ ಘೋಷಿಸುವ ಕೆಲವೇ ತಿಂಗಳಗಳ ಹಿಂದೆಯಷ್ಟೇ ಇಬ್ಬರು ಖುಷಿಯಾಗಿರುವ ವೀಡಿಯೋ , ಪೋಟೋ ಹಂಚಿಕೊಂಡಿದ್ದರು.
ಅದ್ಧೂರಿ ಮದುವೆಯಾದ ಎಲ್ಲರೂ ಅದ್ಧೂರಿಯಾಗಿ ಬದುಕುತ್ತಾರೆ ಎಂದಲ್ಲಾ
ಕೆಲವೊಂದು ಶ್ರೀಮಂತ ಕುಟುಂಬದಲ್ಲಿ ಶ್ರೀಮಂತಿಕೆ ಇದ್ದ ಮಾತ್ರಕ್ಕೆ ಅಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲು ಸಾಧ್ಯವಿಲ್ಲ, ಅವರ ಶ್ರೀಮಂತಿಕೆ ಎಂಬುವುದು ಅವರಿಗೆ ನೆಮ್ಮದಿ ತಂದಿರಲ್ಲ, ಇಬ್ಬರ ಬಾಂಧವ್ಯ ಗಟ್ಟಿಯಾಗಿಸಿರಲ್ಲ ಹಾಗಾಗಿ ಎಷ್ಟೋ ಐಷಾರಾಮಿ ಮದುವೆಗಳು ಮುರಿದು ಬೀಳುತ್ತದೆ. ರಾಯಲ್ ಕುಟುಂಬದಲ್ಲಿ ಜನಿಸಿ ಬೆಳದ ವ್ಯಕ್ತಿಗಳ ಮದುವೆ ಮುರಿದು ಹೋಗಿರುವ ಎಷ್ಟೋ ಉದಾಹರಣೆಗಳಿವೆ.
ಗಂಡನಿಗೆ ಅನೈತಿಕ ಸಂಬಂಧವಿದೆ ಎಂಬ ಕಾರಣಕ್ಕೆ ವಿಚ್ಛೇದನ ನೀಡಿದ ರಾಜಕುಮಾರಿ
ಇವರ ಮದುವೆ ಮಾತ್ರ ಫೇರಿ ಟೇಲ್‌ಗಳ ರೀತಿ ಇರುತ್ತದೆ, ಆದರೆ ಜೀವನ ನಾವು ಅಂದುಕೊಂಡಮತೆ ಚೆನ್ನಾಗಿರಲ್ಲ
ಅವರ ಅದ್ಧೂರಿಯ ಮದುವೆ , ಐಷಾರಾಮಿ ಬಂಗಲೆ, ಕಾರು ಇವುಗಳನ್ನು ನೋಡಿದಾಗ ವಾವ್ ಅನಿಸುತ್ತೆ, ಆದರೆ ಅವರ ಸಂಸಾರದ ಗುಟ್ಟು ಬಯಲಾಗುವುದು ಇ ರೀತಿ ವಿಚ್ಚೇದನದಲ್ಲಿ ಅಂತ್ಯವಾದಾಗ.
ಬ್ರಿಟನ್ ರಾಜಕುಮಾರನ ಕೈ ಹಿಡಿದಾ ಡಯನಾ ಬದುಕು ನೋಡಿ
ಡಯಾನಾ ಎಂದೆಂದಿಗೂ ಕಾಡುವ ಪಾತ್ರ, ಆ ಸುಂದರಿ ಬದುಕು ಹೇಗೆಲ್ಲಾ ಬದಲಾಯ್ತು, ಅಂತ್ಯ ಹೇಗಾಯ್ತು ಎಂಬೆಲ್ಲಾ ಕತೆಗಳು ಈಗಲೂ ಹರಿದಾಡುತ್ತಿರುತ್ತದೆ.
ಇನ್ನು ಭಾರತದಲ್ಲಿ ಹಲವು ಪ್ರಸಿದ್ಧ ಸೆಲೆಬ್ರಿಟಿಗಳ ವೈವಾಹಿಕ ಜೀವನ ಕೂಡ ವಿಚ್ಛೇದನದಲ್ಲಿ ಅಂತ್ಯವಾಗಿದೆ, ಹಾಗಾಗಿ ದುಡ್ಡಿದೆ, ಎಲ್ಲಾ ಸೌವಲತ್ತು ಇದೆ ಎಂದ ಮಾತ್ರಕ್ಕೆ ಪ್ರೀತಿ ಇದೆ ಎಂದರ್ಥವಲ್ಲ, ಗುಡಿಸಿಲಿನಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಅವರು ಖುಷಿಯಾಗಿಲ್ಲ ಎಂದು ಅರ್ಥವಲ್ಲ, ಹಾಗಾಗಿ ಬೇರೆ ವ್ಯಕ್ತಿಗಳ ಬದುಕಿನನ ಜೊತೆಗೆ ನಮ್ಮ ಬದುಕಿನ ಹೋಲಿಕೆ ಬೇಡ, ನಮ್ಮ ಬದುಕಿನಲ್ಲಿ ಸಂಬಂಧಗಳನ್ನು ಗಟ್ಟಿಯಾಗಿಸಲು ಪ್ರಯತ್ನಿಸೋಣ...



Click it and Unblock the Notifications