Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೆಯೇ? ಒಂದು ಕಿತ್ತಳೆ ಹಣ್ಣಿನಿಂದ ಪತ್ತೆ ಮಾಡಬಹುದಂತೆ...!
ಗಂಡ, ಹೆಂಡತಿ ಸಂಬಂಧ ಅನ್ನೋದು ಹಾಗೆ ಅದರಲ್ಲಿ ಪ್ರೀತಿ, ಸಿಟ್ಟು, ಕೋಪ, ಜಗಳ ಹೀಗೆ ಎಲ್ಲವೂ ಬೆರೆತು ಸಾಗುತ್ತದೆ. ಆದರೆ ಒಬ್ಬರನೊಬ್ಬರು ಅರಿತು ಬಾಳುವುದು ಜೀವನದ ಮುಖ್ಯ ಸಾರವಾಗಿರುತ್ತದೆ. ಇಲ್ಲಿ ಪರಸ್ಪರ ಪ್ರೀತಿ ಮತ್ತು ನಂಬಿಕೆಯೇ ಆ ಸಂಬಂಧದ ಬೇರು ಎನ್ನಲಾಗುತ್ತದೆ. ಎಲ್ಲಿ ಪ್ರೀತಿ ಹೆಚ್ಚಾಗಿರುತ್ತದೆ ಆ ಸಂಬಂಧ ಶಾಶ್ವತವಾಗಿರುತ್ತದೆ. ಬೇರೆಯವರಿಗೂ ಇದು ಮಾದರಿಯಾಗುತ್ತದೆ.
ಆದರೆ ನಿಮ್ಮ ಗಂಡ ಅಥವಾ ಹೆಂಡತಿ ನಿಮ್ಮನ್ನು ಪ್ರೀತಿಸುತ್ತಾರಾ? ಎಷ್ಟು ಪ್ರೀತಿಸುತ್ತಾರೆ? ಹೀಗೆ ಯಾರಾದರು ಕೇಳಿದರೆ ಉತ್ತರ ಹೇಳೋದು ತುಂಬ ಕಷ್ಟ. ಆದರೆ ಅದನ್ನು ನೀವೇ ಪರೀಕ್ಷೆ ಮಾಡಬಹುದಂತೆ. ಹೌದು ಈ ರೀತಿಯ ಥಿಯರಿವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಕಿತ್ತಳೆ ಹಣ್ಣಿನ ಥಿಯರಿ.?
ಆರೆಂಜ್ ಪೀಲ್ ಥಿಯರಿ ಎಂದು ವೈರಲ್ ಆಗುತ್ತಿರುವ ವಿಡಿಯೋಗಳು ದಂಪತಿಯ ನಿದ್ದೆಗೆಡಿಸಿವೆ. ಇದರಲ್ಲಿ ನಿಮ್ಮ ಗಂಡ ಅಥವಾ ಹೆಂಡತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾರೆಯೇ? ಅಥವಾ ಅವನು ನಿಮ್ಮ ಭಾವನೆಗಳನ್ನು ಗೌರವಿಸುವುದಿಲ್ಲವೇ? ಇದೆಲ್ಲ ತಿಳಿಯಬೇಕೆ? ಇದಕ್ಕಾಗಿ ಒಂದು ಸರಳ ವಿಧಾನವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆರೆಂಜ್ ಪೀಲ್ ಥಿಯರಿ ಎಂದು ಕರೆಯಲ್ಪಡುವ ಈ ವಿಧಾನವು ಮೊದಲು ಟಿಕ್‌ಟಾಕ್‌ನಲ್ಲಿ ಟ್ರೆಂಡ್ ಆಗಿತ್ತು. ಈಗ ಎಲ್ಲಾ ಮಾಧ್ಯಮಗಳಲ್ಲು ವೈರಲ್ ಆಗುತ್ತಿದೆ.

ಕಿತ್ತಳೆ ಸಿಪ್ಪೆಯ ಸಿದ್ಧಾಂತ ಎಂದರೇನು? ಈ ಹೆಸರಲ್ಲೇ ಅರ್ಥವಿದೆ. ಈ ಹೊಸ ರೀತಿಯ ಸೋಷಿಯಲ್ ಮೀಡಿಯಾ ಟ್ರೆಂಡ್ ಪ್ರಕಾರ, ನಿಮ್ಮ ಸಂಗಾತಿ ನನಗೆ ಈ ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ನೀಡಬಹುದೇ ಎಂದು ನೀವು ಪರೀಕ್ಷಿಸುವುದಾಗಿದೆ. ಅರೆ ಇದು ತುಂಬ ಸರಳವಾಗಿದೆ ಎಂದು ನಿಮಗೆ ಅನಿಸಬಹುದು ಆದರೆ ಅದರ ಮುಂದಿನ ಭಾಗ ನಿಮಗೆ ಶಾಕ್ ನೀಡಬಹುದು.
ಒಂದು ಕಿತ್ತಳೆ ಹಣ್ಣನ್ನು ನಿಮ್ಮ ಪ್ರೀತಿ ಪಾತ್ರರ ಮುಂದಿಟ್ಟು ಅದರ ಸಿಪ್ಪೆ ಸುಲಿದು ಕೊಡಲು ಹೇಳಬೇಕಂತೆ. ಆತ ಅಥವಾ ಆಕೆ ಮುರುಪ್ರಶ್ನೆ ಮಾಡದೆ ಆ ಹಣ್ಣಿನ ಸಿಪ್ಪೆ ಸುಲಿದು ನಿಮಗೆ ನೀಡಿದರೆ ಆತ ಅಥವಾ ಆಕೆ ನಿಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ ಎಂದರ್ಥವಂತೆ. ಜೊತೆಗೆ ನಿಮ್ಮ ಸಲಹೆ, ಮಾತಿಗೆ ಅವರಲ್ಲಿ ಗೌರವವಿದೆ ಎಂದರ್ಥವಂತೆ.
ಆದರೆ ನೀವು ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿಯಲು ಹೇಳಿದಾಗ ಆತ ಅಥವಾ ಆಕೆ ಅದನ್ನು ನಿರಾಕರಿಸಿದರೆ, ಅವನು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದರ್ಥವಂತೆ. ಇದು ನೋಡಲು ಮೋಜಿನ ಆಟದಂತೆ ಕಾಣಿಸಬಹುದು. ಆದರೆ ಇದರ ಹಿಂದಿರುವ ಪ್ರಮುಖ ಅಂಶವೇನೆಂದರೆ, ನಿಮ್ಮ ಸಂಗಾತಿಯು ನಿಮಗಾಗಿ ಸಣ್ಣಪುಟ್ಟ ಉಪಕಾರಗಳನ್ನು ಮಾಡುತ್ತಿದ್ದರೆ, ಅದು ನಿಮ್ಮಿಬ್ಬರ ನಡುವಿನ ಆರೋಗ್ಯಕರ ಸಂಬಂಧವನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಈ ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿಯಬಹುದೇ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ಅದು ದೊಡ್ಡ ವಿಷಯವೇ? ನೀವೇ ಇದನ್ನು ಮಾಡಬಹುದು. ನೀವು ನನ್ನನ್ನು ಏಕೆ ಕರೆಯುತ್ತಿದ್ದೀರಿ ಎಂದು ನೀವು ಆಶ್ಚರ್ಯ ಪಡಬಹುದು. ಆದರೆ ಇದು ಕಿತ್ತಳೆ ಸಿಪ್ಪೆ ಸುಲಿಯುವುದರ ಬಗ್ಗೆ ಅಲ್ಲ ಎಂಬುದನ್ನು ಮೊದಲು ನೀವು ಅರ್ಥಮಾಡಿಕೊಳ್ಳಬೇಕು ಎಂದು ಟಿಕ್ ಟಾಕ್ ಸೆಲೆಬ್ರಿಟಿ @neanotmia ವಿವರಿಸುತ್ತಾರೆ.
ಈ ಕಿತ್ತಳೆ ಸಿಪ್ಪೆಯ ಸಿದ್ಧಾಂತದ ಬಗ್ಗೆ ನೀವು ಅಂತರ್ಜಾಲದಲ್ಲಿ ಅನೇಕ ವೀಡಿಯೊಗಳನ್ನು ನೋಡಬಹುದು. ಅನೇಕ ಜನರು ತಮ್ಮ ಸಂಗಾತಿಯ ಮೇಲಿನ ಪ್ರೀತಿಯನ್ನು ತೋರಿಸುವ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಆರೆಂಜ್ ಪೀಲ್ ಥಿಯರಿಯನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಕಿತ್ತಲೆ ಹಣ್ಣನ್ನು ಆಕೆಯ ಮುಂದಿಟ್ಟು ಸುಲಿಯಲು ಹೇಳಿ ಆ ಸಿಪ್ಪೆಯಿಂದ ಬರುವ ಆಸಿಡ್ ಅನ್ನು ಅವರ ಮುಖಕ್ಕೆ ಸಿಂಪಡಿಸಿ ಅಲ್ಲಿಂದ ಓಡಿ ಹೋಗುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಕಿತ್ತಳೆ ಸಿಪ್ಪೆಯ ಸಿದ್ಧಾಂತವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬಾರದು. ನಿಮ್ಮ ಸಂಗಾತಿಯ ಪ್ರೀತಿಯನ್ನು ತಿಳಿಯಲು ಇದು ಸರಿಯಾದ ಮಾರ್ಗವಲ್ಲ. ಪ್ರತಿಯೊಬ್ಬರೂ ತಮ್ಮ ಪ್ರೀತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ನೀವು ಕೇಳಿದಾಗ ಕಿತ್ತಳೆ ಹಣ್ಣನ್ನು ಸುಲಿಯಲು ಸಾಧ್ಯವಿಲ್ಲ ಎಂದು ನಿಮ್ಮ ಸಂಗಾತಿ ಹೇಳಿದರೆ, ಅದರರ್ಥ ಪ್ರೀತಿ ಇಲ್ಲ ಎಂದಲ್ಲ. ಅವರಿಗೆ ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿಯುವುದಕ್ಕಿಂತ ಮುಖ್ಯವಾದ ಕೆಲಸವಿದೆ ಎಂಬುದನ್ನೂ ಸಹ ಸೂಚಿಸುತ್ತದೆ. ಆದರೆ ಸಮಯ ಕಳೆಯಲು ಇದೊಂದು ಮೋಜಿನ ಆಟವಾಗಿ ಬಳಸಬಹುದಷ್ಟೇ..



Click it and Unblock the Notifications