Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ರಿಲೇಷನ್‌ಶಿಪ್ ಬ್ರೇಕ್ ಸಂಬಂಧ ಉಳಿಸಲು ಸಹಾಯ ಮಾಡುವುದೇ?
ಏಕೋ ಇಬ್ಬರ ನಡುವೆ ಏನೋ ಸರಿಯಿಲ್ಲ ಎನಿಸುತ್ತಿದೆ, ಹೀಗೆ ಮುಂದೆಕ್ಕೆ ಹೋದರೆ ಈ ಸಂಬಂಧ ಖಂಡಿತ ಮುರಿದು ಹೋಗಬಹುದು ಎಂದನಿಸಿದಾಗ ಈ ಸಂಬಂಧ ಮುರಿಯಬಾರದು, ಆದರೆ ನಮ್ಮ ನಡುವಿನ ಸಮಸ್ಯೆ ಬಗೆಹರಿಯಬೇಕೆಂದು ಯೋಚಿಸುವವರಿಗೆ ರಿಲೇಷನ್‌ಶಿಪ್‌ನಲ್ಲಿ ಚಿಕ್ಕದೊಂದು ಬ್ರೇಕ್ ತೆಗೆದುಕೊಳ್ಳಿ ಎಂಬ ಸಲಹೆ ನಮ್ಮದು.
ರಿಲೇಷನ್‌ಶಿಪ್‌ನಲ್ಲಿ ಬ್ರೇಕ್ ತೆಗೆದುಕೊಂಡಾಗ ನಿಮ್ಮ ಸಂಬಂಧ ಎತ್ತ ಸಾಗುತ್ತಿದೆ, ಏಕೆ ಹೀಗಾಗುತ್ತಿದೆ, ಹೇಗೆ ಪರಿಹರಿಸಬಹುದು ಎಂಬ ಸ್ಪಷ್ಟ ಕಲ್ಪನೆ ಸಿಗುತತ್ತದೆ. ಇಲ್ಲದಿದ್ದರೆ ಚಿಕ್ಕ-ಚಿಕ್ಕ ವಿಷಯಗಳು ದೊಡ್ಡದಾಗಿ ದೊಡ್ಡ ಸಮಸ್ಯೆ ಉಂಟಾಗಬಹುದು. ಅಂಥ ಸಂದರ್ಭದಲ್ಲಿ ರಿಲೇಷನ್‌ಶಿಪ್ ಬ್ರೇಕ್ ತೆಗೆದುಕೊಳ್ಳುವುದರಿಂದ ಈ ಪ್ರಯೋಜನಗಳಿವೆ ನೋಡಿ:

ನಿಮ್ಮನ್ನು ನೀವು ಅರಿಕೊಳ್ಳಲು ಸಾಧ್ಯವಾಗುವುದು: ರಿಲೇಷನ್‌ಶಿಪ್‌ನಲ್ಲಿ ಬ್ರೇಕ್ ತೆಗೆದುಕೊಳ್ಳುವುದರಿಂದ ನಿಮ್ಮನ್ನು ನೀವು ಅರಿತುಕೊಳ್ಳಲು ಸಾಧ್ಯವಾಗುವುದು. ಈ ಸಂಬಂಧ ಮುರಿದು ಹೋದರೆ ಭವಿಷ್ಯ ಹೇಗಿರುತ್ತದೆ, ಈ ಸಂಬಂಧದಲ್ಲಿನ ಸಮಸ್ಯೆ ಬಗೆಹರಿಸುವುದು ಹೇಗೆ ಎಂಬ ದಾರಿ ನಿಮಗೆ ತಿಳಿಯುವುದು. ಅದೇ ಜೊತೆಯಲ್ಲೇ ಇದ್ದರೆ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಅಧಿಕವಾಗುವುದರಿಂದ ತುಂಬಾನೇ ಗೊಂದಲಗಳಿರುತ್ತದೆ. ಗೊಂದಲದಿಂದ ತೆಗೆದುಕೊಳ್ಳುವ ನಿರ್ಧಾರ ಸರಿಯಿರಲ್ಲ. ಆದ್ದರಿಂದ ರಿಲೇಷನ್‌ಶಿಪ್ ಬ್ರೇಕ್ ಒಳ್ಳೆಯದೇ.
ಮನಸ್ಸು ತಿಳಿಯಾಗುತ್ತದೆ
ಚಿಕ್ಕದೊಂದು ಬ್ರೇಕ್ ನಿಮ್ಮ ಮನಸ್ಸನ್ನು ತಿಳಿಯಾಗಿಸುತ್ತದೆ. ಎಷ್ಟೋ ಜೋಡಿ ಈ ರೀತಿ ದೂರ-ದೂರ ಇದ್ದು ನಂತರ ಒಂದಾದ ಮೇಲೆ ತಮ್ಮ ಹಳೆಯ ತಪ್ಪುಗಳನ್ನು ಆವರ್ತಿಸದೆ ಸುಂದರ ಬದುಕು ನಡೆಸುತ್ತಿದ್ದಾರೆ. ಆದ್ದರಿಂದ ಈ ಪ್ರಯತ್ನ ನಿಮಗೆ ಗುಣವಾಗಬಹುದು.
ನಿಮ್ಮ ರಿಲೇಷನ್‌ಶಿಪ್ ಸೇವ್ ಮಾಡಬಹುದು
ಈ ರೀತಿ ದೂರ-ದೂರ ಇದ್ದಾಗ ನಿಮ್ಮಿಬ್ಬರ ನಡುವೆ ಪ್ರೀತಿಯ ಸೆಲೆ ಬತ್ತದೇ ಇದ್ದರೆ ನಿಮ್ಮಿಬ್ಬರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ, ನಿಮ್ಮ ತಪ್ಪುಗಳು ಅರ್ಥವಾಗುವುದು, ಇಬ್ಬರು ಮುಕ್ತವಾಗಿ ಮಾತನಾಡುವ ಮೂಲಕ ಎಲ್ಲವೂ ಸರಿಪಡಿಸಬಹುದು.
ಈ ರಿಲೇಷನ್‌ಶಿಪ್ ಬೇಡ್ವೆ ಬೇಡ ಎಂಬ ತೀರ್ಮಾನಕ್ಕೂ ಈ ಬ್ರೇಕ್ ಸಹಾಯ ಮಾಡುತ್ತದೆ
ಸ್ವಲ್ಪ ಸಮಯ ಬೇರೆ-ಬೇರೆ ಇದ್ದಾಗ ಕೆಲವರಿಗೆ ಮತ್ತೆ ಒಂದು ಮಾಡಲು ಸಹಾಯ ಮಾಡುತ್ತದೆ, ಇನ್ನು ಕೆಲವರಿಗೆ ತಮ್ಮ ಸಂಬಂಧದ ಬಗ್ಗೆ ಒಮದು ತೀರ್ಮಾನಕ್ಕೆ ಬರಲು ಸಹಾಯ ಮಾಡುತ್ತದೆ. ಒಂದು ಬ್ರೇಕ್ ತೆಗೆದಾಗ ಸಂಗಾತಿ ತನ್ನ ತಪ್ಪುಗಳನ್ನು ಸರಿಪಡಿಸಲು ಸಿದ್ಧವಿಲ್ಲ, ಈಗಲೂ ನಿಮ್ಮಿಬ್ಬರ ನಡುವೆ ಯಾವಯದೂ ಸರಿಯಾಗಿಲ್ಲ ಎಂದಾದರೆ ಅಂಥ ಸಂಬಂಧದಲ್ಲಿ ಮುಂದುವರೆಯದೇ ಇದ್ದರೆ ಒಳ್ಳೆಯದು. ಯಾವುದೇ ಗೊಂದಲವಿಲ್ಲದೆ ಅಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲು ಈ ಬ್ರೇಕ್ ಸಹಾಯ ಮಾಡುವುದು.
ಆದ್ದರಿಂದ ರಿಲೇಷನ್‌ಶಿಪ್‌ನಲ್ಲಿ ಒಂದು ಬ್ರೇಕ್ ಒಳ್ಳೆಯದೇ... ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ...



Click it and Unblock the Notifications