Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವಿಚ್ಛೇದನ ನೀಡಿದ ಪತ್ನಿ ಬಳಿ ತಾನು ಕೊಡಿಸಿದ್ದ ಕಿಡ್ನಿ ವಾಪಾಸ್ ಕೇಳಿದ ಪತಿ, ಅದರಲ್ಲೂ ಆತ ವೈದ್ಯ
ವಿಚ್ಛೇದನ ಸಮಯದಲ್ಲಿ ನಂಗೆ ಇಷ್ಟು ದುಡ್ಡು ಕೊಡಬೇಕು, ನಾನು ಕೊಟ್ಟ ವಸ್ತುಗಳನ್ನು ಕೊಡಬೇಕು ಎಂದೆಲ್ಲಾ ಕೇಳುವುದು ನೋಡುತ್ತೇವೆ, ಆದರೆ ಇಲ್ಲೊಬ್ಬರು ತಮ್ಮ ಪತ್ನಿಗೆ ತಾನು ಕೊಡಿಸಿದ್ದ ಕಿಡ್ನಿ ವಾಪಾಸ್ ಕೇಳುತ್ತಿದ್ದಾರೆ. ಈ ಕೇಸ್ ವಿಚಿತ್ರ ಅನಿಸಿದರೂ ಇದು ಸತ್ಯ. ತನ್ನ ಪತ್ನಿ ಜೀವಂತವಾಗಿ ಉಳಿಯಬೇಕೆಂದು ಕಿಡ್ನಿಯನ್ನೇ ಕೊಡಿಸಿ ಮಾಡಿ ಅವಳ ಜೀವ ಉಳಿಸಿದ್ದ ಪತಿ ಈಗ ನನ್ನ ಕಿಡ್ನಿ ನನಗೆ ವಾಪಾಸ್ ಕೊಡು ಎಂದು ಹೇಳುತ್ತಿದ್ದಾರೆ.

ಇಂಥ ವಿಚಿತ್ರ ವಿಚ್ಛೇದ ನಡೆದಿರುವುದು ಅಮೆರಿಕಾದಲ್ಲಿ. ಆತ ನಾನು ಕೊಟ್ಟ ಕಿಡ್ನಿ ನನಗೆ ವಾಪಾಸ್ ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ, ಒಂದು ವೇಳೆ ಕಿಡ್ನಿ ಕೊಡಲು ಸಾಧ್ಯವಾಗದಿದ್ದರೆ ನನಗೆ ಆಕೆ 1.2 ಮಿಲಿಯನ್ ಡಾಲರ್ ಹಣ ನೀಡಬೇಕು ಎಂದು ಕೇಳಿದ್ದಾನೆ. ಅಂದರೆ ಭಾರತದ ರುಪಾಯಿ 12.56 ಕೋಟಿ ರುಪಾಯಿ ಆತನಿಗೆ ನೀಡಬೇಕಂತೆ, ಪಾಪ ಆಕೆಯ ಪರಿಸ್ಥಿತಿ ಒಂದೋ ಅಷ್ಟು ದುಡ್ಡು ಕೊಡಬೇಕು, ಇನ್ನು ಆತನಿಂದ ಪಡೆದ ಕಿಡ್ನಿ ಕೊಟ್ಟರೆ ಜುಳಿಯಲು ಸಾಧ್ಯವೇ? ಒಟ್ಟಿನಲ್ಲಿ ವಿಚ್ಛೇದನ ಆಕೆಯನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
ಆಕೆಯ ಎರಡು ಕಿಡ್ನಿಗೂ ಹಾನಿಯುಂಟಾಗಿ ಆಕೆಗೆ ಯಾರಾದರೂ ಕಿಡ್ನಿ ದಾನ ಮಾಡಿದರೆ ಮಾತ್ರ ಬದುಕಿಳಿಯುತ್ತಾಳೆ ಎಂದಾದಾಗ 2001ರಲ್ಲಿ ಆತ ತನ್ನವಳಿಗಾಗಿ ಕಿಡ್ನಿ ದಾನ ಮಾಡುತ್ತೇನೆ, ನಂತರ 23 ವರ್ಷ ಜೊತೆಗೆ ಬಾಳುತ್ತಾರೆ,ಆದರೆ ಏನಾಯ್ತೋ ಗೊತ್ತಿಲ್ಲ, ಇಬ್ಬರ ನಡುವೆ ಮನಸ್ತಾಪಗಳು ಶುರುವಾಗುವುದು, ಆಕೆ ಈತನಿಂದ ವಿಚ್ಛೇದನ ಬಯಸುತ್ತಾಳೆ, ಆವಾಗ ಪತಿ ಕಡೆಯಿಂದ ಇಂಥದ್ದೊಂದು ಬೇಡಿಕೆ ಬಂದಿದೆ.
ಅಮೆರಿಕ ಮಾಧ್ಯಮಗಳ ಪ್ರಕಾರ ಈ ಜೋಡಿ 1990ರಲ್ಲಿ ಮದುವೆಯಾಗಿದ್ದರು, ಆತನ ಹೆಸರು ರಿಚರ್ಡ್ ಬಟಿಸಾ, ಆಕೆಯ ಹೆಸರು ಡಾಮಿನಿಕ್ ಬಾರ್ಬರಾ, ಆತ ವೃತ್ತಿಯಲ್ಲಿ ವೈದ್ಯ. ಇದೀಗ ಈ ವೈದ್ಯರು ಕಿಡ್ನಿ ವಾಪಾಸ್ ಕೇಳುತ್ತಿದ್ದಾರೆ, ಇವರ ನಡುವೆ 2005ರಿಂದಲೇ ಸಮಸ್ಯೆ ಶುರುವಾಗಿತ್ತು ಅದೀಗ ವಿಚ್ಛೇದನದಲ್ಲಿ ಬಂದು ನಿಂತಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ, ಮಕ್ಕಳು 14,11, 8ರ ಪ್ರಾಯದವರು, ವೈದ್ಯರಿಗೆ ಬಂದು 44 ವರ್ಷ. ಪ್ರೀತಿಯಲ್ಲಿ ಇದ್ದಾಗ ಒಂದು, ಆ ಪ್ರೀತಿ ಮುಗಿದ ಮೇಲೆ ವರಸೆ ಬೇರೆ, ಅದೇನು ವಸ್ತುವೇ ಕೊಟ್ಟ ಕಿಡ್ನಿ ವಾಪಾಸ್ ಕೇಳಲು, ಇಂಥ ಪ್ರಕರಣ ಕೇಳಿ ಮನುಷ್ಯರು ಹೀಗೂ ಇರ್ತರಾ ಅನ್ನುವಂತಿದೆ. ಅದರಲ್ಲೂ ಆತ ವೈದ್ಯ ಬೇರೆ, ಆದರೂ ಕಿಡ್ನಿ ವಾಪಾಸ್ ಬೇಕಂತೆ ಅವನಿಗೆ.
ಆಕೆಗೆ ಕಿಡ್ನಿ ಸಮಸ್ಯೆ ಇದ್ದಾಗ ನಮ್ಮಿಬ್ಬರ ನಡುವೆ ತುಂಬಾನೇ ಪ್ರೀತಿ ಇತ್ತು, ಅವಳನ್ನು ಉಳಿಸುವುದೇ ನನ್ನ ಮುಖ್ಯ ಗುರಿಯಾಗಿತ್ತು, ಹಾಗಾಗಿ ನನ್ನ ಕ್ಲೈಂಟ್ ಬಳಿಯಿಂದ ಕಿಡ್ನಿ ಪಡದೆ ಎಂದು ಹೇಳುತ್ತಿದ್ದಾರೆ. ಅವರೇ ಸ್ವತಃ ವೈದ್ಯರಾಗಿ ಈ ರೀತಿ ಹೇಳುವುದು ಎಷ್ಟು ಸರಿ, ಇದೇನಾ ಮೆಡಿಕಲ್ ಎಥಿಕ್ಸ್ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಅವರಿಗೆ ಕೊಟ್ಟ ಮೇಲೆ ಅದು ಅವರ ಕಿಡ್ನಿ ಎಂದು ಹೇಳುತ್ತಿದ್ದಾರೆ.
ಇದು ಒಂಥರಾ ನಾವು ಯಾರಿಗಾದರೂ ಏನಾದರೂ ವಸ್ತುವನ್ನು ಪ್ರೀತಿಯಿಂದ ನೀಡಿ ನಂತರ ಸಂಬಂಧ ಸರಿಯಿಲ್ಲ ಎಂದಾಗ ಮರಳಿ ಕೇಳುವಂತಿದೆ ಅಲ್ವಾ, ವಸ್ತು ಆದರೆ ತೆಗೆದುಕೊಡಬಹುದು, ಹೀಗೆ ಕಿಡ್ನಿಯೆಲ್ಲಾ ಕೇಳಿದರೆ ಹೇಗೆ ಅಲ್ವಾ?
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ...



Click it and Unblock the Notifications
