ಮದುವೆಗೂ ಮೊದಲು ಪೋಷಕರು ಮಗಳಿಂದ ಈ ವಿಚಾರಗಳನ್ನು ರಹಸ್ಯವಾಗಿ ಇಡೋದ್ಯಾಕೆ?

ಪ್ರತಿಯೊಬ್ಬ ಪೋಷಕರಿಗೂ ಮಗಳ ಮದುವೆ ಮಾಡುವ ದೊಡ್ಡ ಕನಸಿರುತ್ತದೆ. ಮಗಳ ಮದುವೆಯನ್ನು ಆಕೆಯ ಕನಸಿನಂತೆ ನೆರವೇರಿಸಬೇಕು. ಒಳ್ಳೆಯ ಹುಡುಗನನ್ನೇ ಆಕೆ ವರಿಸಬೇಕು. ಗಂಡನ ಜೊತೆಗೆ ನೂರ್ಕಾಲ ಸುಖವಾಗಿ ಬಾಳಬೇಕು ಎಂದೆಲ್ಲಾ ಕನಸು ಕಂಡಿರುತ್ತಾರೆ. ಹಾಗೆನೇ ಮದುವೆಗೂ ಮೊದಲು ಪೋಷಕರು ಅದ್ರಲ್ಲೂ ತಾಯಿಯಾದವಳು ಮಗಳಿಗೆ ಅನೇಕ ಜೀವನ ಪಾಠಗಳನ್ನು ಹೇಳಿಕೊಡುತ್ತಾಳೆ. ಆದರೆ ಕೆಲವೇ ಕೆಲವು ವಿಚಾರಗಳನ್ನು ಮಗಳ ಬಳಿ ಹೇಳದೇ ಮುಚ್ಚಿಡುತ್ತಾಳೆ. ಅಷ್ಟಕ್ಕು ಆ ವಿಚಾರಗಳು ಯಾವುದು ಅನ್ನೋದನ್ನು ತಿಳಿಯೋಣ.

Discover the Hidden Realities of Marriage Your Parents Never Share in Kannada.

1. ಸಾಕಷ್ಟು ತ್ಯಾಗಗಳನ್ನು ಮಾಡಬೇಕು
ಮದುವೆಯಾದ ಮೇಲೆ ಒರ್ವ ಹೆಣ್ಣು ಮಕ್ಕಳ ಜೀವನ ಹಿಂದಿನಂತೆ ಇರೋದಿಲ್ಲ. ಯಾಕಂದ್ರೆ ತನ್ನ ಸಂಸಾರ ಚೆನ್ನಾಗಿ ಇರಬೇಕೆಂದರೆ ಆಕೆ ಸಾಕಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ. ತನಗೆ ಕಷ್ಟ ಆದರೂ ಕೂಡ ಎಲ್ಲರ ಜೊತೆಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ತಾನು ಸರಿ ಅಂತ ಗೊತ್ತಿದ್ದರೂ ಕೂಡ ತನ್ನ ಮೂಗಿನ ನೇರಕ್ಕೆ ಮಾತನಾಡೋದಕ್ಕೆ ಆಗೋದಿಲ್ಲ.

ಗಂಡ, ಅತ್ತೆ-ಮಾವನನ್ನು ಸರಿದೂಗಿಸಿಕೊಂಡು ಹೋಗಲೇಬೇಕು. ಗಂಡನ ಮನೆಯೂ ತನ್ನ ಮನೆಯಂತೆ ಇರೋದಿಲ್ಲ ಅನ್ನೋ ಸತ್ಯವನ್ನು ಪೋಷಕರು ಮಗಳಿಂದ ಮುಚ್ಚಿಡುತ್ತಾರೆ. ಕೆಲವು ಹೆಣ್ಣು ಮಕ್ಕಳು ಈ ಬಗ್ಗೆ ಮೊದಲೇ ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ಇನ್ನೂ ಕೆಲವರಿಗೆ ಈ ಬಗ್ಗೆ ಗೊತ್ತೇ ಇರೋದಿಲ್ಲ.

2. ಮದುವೆ ನಂತರ ಸಿಹಿ-ಕಹಿ ಎರಡೂ ಇರುತ್ತೆ ಅನ್ನೋ ಸತ್ಯ
ಚಿಕ್ಕದಿರುವಾಗ ಮಗಳಿಗೆ ಅಪ್ಪ ಯಾವಾಗಲೂ ರಾಜ ಕುಮಾರನ ಕಥೆಯನ್ನು ಹೇಳುತ್ತಾರೆ. ದೂರದೂರಿಂದ ರಾಜ ಕುಮಾರ ಬಂದು ನಿನ್ನನ್ನು ಮದುವೆಯಾಗಿ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ನಿನ್ನನ್ನು ರಾಣಿಯ ಹಾಗೆ ನೋಡಿಕೊಳ್ಳುತ್ತಾರೆ ಎಂದು ಅಪ್ಪ ಹೇಳಿರುತ್ತಾರೆ.

ಆದರೆ ಮದುವೆಯಾದ ಮೇಲೆ ಜೀವನದಲ್ಲಿ ಸಿಹಿಯೇ ತುಂಬಿಕೊಂಡಿರಬೇಕೆಂದೇನಿಲ್ಲ. ಈ ಒಂದು ದಾಂಪತ್ಯ ಪಯಣದಲ್ಲಿ ಕಷ್ಟಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಪೋಷಕರ ಸಹಾಯವಿಲ್ಲದೇ ಆಕೆ ಒಬ್ಬಳೇ ಅದನ್ನು ಎದುರಿಸಬೇಕು ಅನ್ನೋ ಸತ್ಯವನ್ನು ಪೋಷಕರು ಆಕೆಗೆ ಹೇಳಿರೋದಿಲ್ಲ.

3. ಜವಾಬ್ದಾರಿಗೆ ಕೊನೆ ಅನ್ನೋದೇ ಇರೋದಿಲ್ಲ
ಮದುವೆಗೂ ಮೊದಲು ಇದ್ದ ಸ್ವಾತಂತ್ರ ಮದುವೆಯಾದ ಮೇಲೆ ಖಂಡಿತ ಇರೋದಿಲ್ಲ. ಜವಾಬ್ದಾರಿಗಳು ನಮ್ಮ ಹೆಗಲೇರುತ್ತದೆ. ಸಾಮಾನ್ಯವಾಗಿ ಎಲ್ಲಾ ಮಹಿಳೆರಿಗೆ ಈ ಬಗ್ಗೆ ಗೊತ್ತಿರುತ್ತದೆ. ಆದರೆ ಜವಾಬ್ದಾರಿಗಳಿಗೆ ಕೊನೆಯೇ ಇಲ್ಲ ಅನ್ನೋ ಸತ್ಯ ನಿಮಗೆ ಖಂಡಿತ ಗೊತ್ತಿರೋದಿಲ್ಲ. ಮದುವೆಯಾದ ಮೇಲೂ ನೀವು ಕೆಲಸಕ್ಕೆ ಹೋಗೋದಾದ್ರೆ ನೀವು ಮನೆ ಹಾಗೂ ಕೆಲಸ ಎರಡನ್ನು ಒಟ್ಟಾಗಿ ಬ್ಯಾಲೆನ್ಸ್ ಮಾಡೋದು ತುಂಬಾನೇ ಮುಖ್ಯವಾಗುತ್ತದೆ.

ನಾನು ಕೆಲಸಕ್ಕೆ ಹೋಗುತ್ತೇನೆ ಎಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳೋದಕ್ಕೆ ಆಗೋದಿಲ್ಲ. ಇನ್ನೂ ಒಂದು ವೇಳೆ ನೀವು ಗೃಹಿಣಿಯಾಗಿದ್ದರೆ ಒಂದಿಡೀ ಕುಟುಂಬವನ್ನು ನಿಭಾಯಿಸಬೇಕಾಗುತ್ತದೆ. ಮಕ್ಕಳು ದೊಡ್ಡವರಾಗಿ ಅವರಿಗೆ ಮದುವೆಯಾದ ಮೇಲೂ ನಿಮ್ಮ ಜವಾಬ್ದಾರಿ ಮುಗಿಯೋದಿಲ್ಲ. ಜೀವನದ ಕೊನೆವರೆಗೂ ಒಂದಲ್ಲ ಒಂದು ಜವಾಬ್ದಾರಿ ಇದ್ದೇ ಇರುತ್ತದೆ.

4. ವೈಯಕ್ತಿಕ ಜೀವನ ಅನ್ನೋದು ಇರೋದಿಲ್ಲ
ಮದುವೆಗೂ ಮೊದಲು ನನಗೆ ಜೀವನದಲ್ಲಿ ಸ್ವತಂತ್ರಬೇಕು ಅಂತ ಮನೆಯಲ್ಲಿ ಜಗಳ ಮಾಡುತ್ತೇವೆ. ಆದರೆ ಮದುವೆಗೂ ಮೊದಲು ಸಿಗೋ ಕೊಂಚ ಸ್ವತಂತ್ರವೂ ಮದುವೆಯಾದ ಮೇಲೆ ಇರೋದಿಲ್ಲ. ನಮಗೆ ಬಾಳ ಸಂಗಾತಿ ಇದ್ದರೂ ಕೂಡ ನಮಗಾಗಿ ಒಂಚೂರು ಸಮಯ ಬೇಕೆಂದು ನಾವು ಬಯಸುತ್ತೇವೆ. ಆದರೆ ಮದುವೆಯಾದ ಮೇಲೆ ನಮಗಾಗಿ ವೈಯಕ್ತಿಕ ಸಮಯ ಸಿಗೋದು ಕಷ್ಟ. ಗಂಡ, ಮಕ್ಕಳು, ಅತ್ತೆ-ಮಾವ ಅಂತ ಅವರ ಆರೈಕೆಯಲ್ಲೇ ಕಾಲ ಕಳೆಯುತ್ತೇವೆ. ಈ ಮಧ್ಯೆ ನಮಗಾಗಿ ಸಮಯ ಸಿಗೋದೇ ಇಲ್ಲ. ಇದೇ ಕಾರಣಕ್ಕೆ ಅನೇಕರು ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ನಮಗಾಗಿ ಸಮಯ ಸಿಗೋದಿಲ್ಲ ಅನ್ನೋ ಸತ್ಯವನ್ನು ಪೋಷಕರು ಹೇಳೋದಿಲ್ಲ.

5. ತವರು ಮನೆಯ ಸಂಬಂಧ ಕಡಿದು ಹೋಗುತ್ತದೆ
ಗಂಡು ಮಕ್ಕಳಿಗಾದರೆ ಹುಟ್ಟಿನಿಂದ ಸಾಯುವವರೆಗೂ ಒಂದೇ ಮನೆ. ಆದರೆ ಹೆಣ್ಣು ಮಕ್ಕಳಿಗೆ ಹಾಗಲ್ಲ. ಮದುವೆಯಾಗೋವರೆಗೂ ಮಾತ್ರ ತವರು ಮನೆ. ಮದುವೆಯಾದ ಮೇಲೆ ಗಂಡನ ಮನೆಯೇ ಆಕೆಗೆ ಎಲ್ಲಾ ಆಗಿಬಿಡುತ್ತೆ. ಮಗಳ ಮೇಲೆ ನಮಗೆ ಎಷ್ಟೇ ಪ್ರೀತಿ ಇದ್ದರೂ ಕೂಡ ಮದುವೆಯಾದ ನಂತರ ತಾಯಿ ಮನೆಯಲ್ಲಿದ್ದ ಸ್ಥಾನ-ಮಾನವನ್ನು ಆಕೆ ಕಳೆದುಕೊಳ್ಳುತ್ತಾಳೆ. ತಾಯಿ ಮನೆಯ ನಂಟು ದೂರವಾಗಿ ಗಂಡನ ಮನೆಯವರೊಂದಿಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಈ ಸತ್ಯವನ್ನು ಪೋಷಕರು ಮಗಳಿಗೆ ತಿಳಿಸಿರೋದಿಲ್ಲ.

6. ಗಂಡನ ಜೊತೆಗೆ ಸಂಬಂಧ ಮುರಿದುಕೊಳ್ಳುವ ಸತ್ಯ
ಹೆಣ್ಣು ಮಗಳು ಮದುವೆಯಾಗಿ ಹೋದ ಮೇಲೆ ಆಕೆಗೆ ಗಂಡನ ಮನೆಯೇ ಮೊದಲ ಪ್ರಾಧಾನ್ಯತೆ ಆಗಿ ಬಿಡುತ್ತದೆ. ಏನೇ ಆದರೂ ಗಂಡನ ಮನೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಸಂಸಾರ ನಡೆಸಬೇಕು ಎಂದು ಪೋಷಕರು ಹೇಳಿತ್ತಾರೆ. ಆದರೆ ಹಾಗಂತ ಆಕೆ ತನಗಾದ ಪ್ರತಿಯೊಂದು ಕಿರುಕುಳವನ್ನು ತಡೆದುಕೊಂಡು ಕೂರಬೇಕಾಗಿಲ್ಲ. ತಪ್ಪಿದ್ದಾಗ ಧ್ವನಿ ಎತ್ತಿ ಮಾತನಾಡಬಹುದು ಅನ್ನೋ ಸತ್ಯವನ್ನು ಪೋಷಕರು ಮಗಳಿಗೆ ಹೇಳಿ ಕೊಡೋದೇ ಇಲ್ಲ. ಯಾಕಂದ್ರೆ ಎಲ್ಲಿ ಮಗಳು ತನ್ನ ಗಂಡನ ಮನೆಯಲ್ಲಿ ಜಗಳವಾಡಿ ವಾಪಾಸ್ಸ್ ಬರುತ್ತಾಳೆಯೋ ಅನ್ನೋ ಭಯ ಇದ್ದೇ ಇರುತ್ತದೆ.

ಮಗಳನ್ನು ಮದುವೆ ಮಾಡಿ ಕೊಟ್ಟ ಮೇಲೆಯೂ ಪೋಷಕರಿಗೆ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಹೀಗಾಗಿ ಕೆಲವೊಂದು ವಿಚಾರಗಳನ್ನು ಪೋಷಕರು ಮಗಳಿಂದ ಮುಚ್ಚಿಡುತ್ತಾರೆ. ಜೀವನ ಅನುಭವ ಆದ ನಂತರ ಆಕೆಯೇ ಎಲ್ಲವನ್ನೂ ಕಲಿತುಕೊಳ್ಳುತ್ತಾಳೆ ಅನ್ನೋ ವಿಶ್ವಾಸ ಅವರಿಗಿರುತ್ತದೆ.

English summary

Discover the Hidden Realities of Marriage Your Parents Never Share in Kannada.

Discover the Hidden Realities of Marriage Your Parents Never Share. Read More.
Story first published: Friday, June 30, 2023, 20:00 [IST]
X
Desktop Bottom Promotion