Latest Updates
-
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ!
ಹೆಣ್ಣಿನಿಂದಲೇ ನಾಶವಾಗುತ್ತಿದ್ದ ದಿನೇಶ್ ಕಾರ್ತಿಕ್‌ರನ್ನು ಮತ್ತೆ ಯಶಸ್ವಿ ಬದುಕಿಗೆ ತಂದಿರುವುದು ಕೂಡ ಒಬ್ಬ ಹೆಣ್ಣು
ಹೆಣ್ಣು ಪುರುಷನ ಬದುಕನ್ನು ಸರ್ವ ನಾಶ ಮಾಡಬಲ್ಲಳು, ಹೆಣ್ಣು ಬದಕಿನಲ್ಲಿ ಎಲ್ಲಾ ಕಳೆದುಕೊಂಡವನನ್ನು ಮತ್ತೆ ಯಶಸ್ವಿನ ಉತ್ತುಂಗಕ್ಕೆ ತರಬಲ್ಲಳು ಎಂಬುವುದಕ್ಕೆ ದಿನೇಶ್ ಕಾರ್ತಿಕ್ ಬದುಕು ಒಂದು ಬಹುದೊಡ್ಡ ಉದಾಹರಣೆ.
ಕ್ರಿಕೆಟ್ ಕರಿಯರ್ ಮುಗಿಯಿತು ಎಂದು ಎಲ್ಲರು ಅಂದುಕೊಂಡಾಗ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು ಬಂದವರು ಕಾರ್ತಿಲ್ ದಿನೇಶ್. ಈಗ ಆರ್‌ಸಿಬಿ ಅಭಿಮಾನಿಗಳ ಮೆಚ್ಚಿನ ಕ್ರಿಕೆಟಿಗ.

ಇವರ ಜೀವನ ಸ್ಟೋರಿ ಇದೆಯೆಲ್ಲಾ ಅದು ಯಾವ ಸಿನಿಮಾಗೂ ಕಡಿಮೆಯಿಲ್ಲ. ಜೀವನದಲ್ಲಿ ಎಲ್ಲಾ ಇದೆ ಎಂದು ಅಂದುಕೊಂಡಿರುವಾಗಲೇ ಏನೂ ಇಲ್ಲ ಎಂದು ತಿಳಿದು ಕುಸಿದು ಹೋದವರು. ಅದಕ್ಕೆ ಕಾರಣ ಅವರ ಬದುಕಿನಲ್ಲಿ ಬಂದ ಆ ಹೆಣ್ಣು.
ಕ್ರಿಕೆಟ್ ಲೋಕದಲ್ಲಿ ತುಂಬಾನೇ ಸದ್ದು ಮಾಡುತ್ತಿದ್ದರು ದಿನೇಶ್ ಕಾರ್ತಿಕ್. ಇದೇ ಸಮಯದಲ್ಲಿ ಬಾಲ್ಯದ ಗೆಳತಿ ನಿಕಿತಾ ವಂಜಾರ ಜೊತೆ ಪ್ರೀತಿಯಲ್ಲಿ ಬಿದ್ದರು. ಡಿಕೆ ತಂದೆ ಹಾಗೂ ನಿಕಿತಾ ತಂದೆ ಇಬ್ಬರೂ ಒಳ್ಳೆಯ ಸ್ನೇಹಿತರು, ಹೀಗಾಗಿ ಇವರ ಪ್ರೀತಿಗೂ ಯಾವುದೇ ಅಡ್ಡಿ ಬರಲಿಲ್ಲ. ತನ್ನ 21ನೇ ವಯಸ್ಸಿನಲ್ಲಿ 2007ನೇ ಇಸವಿಯಲ್ಲಿ ಮದುವೆಯಾಗುತ್ತಾರೆ.
2 ವರ್ಷದಲ್ಲಿ ಆಕೆಗೆ ಕಾರ್ತಿಕ್ ಬೇಡವಾದರು, ಡಿಕೆಗೆ ಮೋಸ ಮಾಡಲಾರಂಭಿಸಿದಳು
ದಿನೇಶ್ ಕಾರ್ತಿಕ್ ಮದುವೆಯಾಗಿ ಎರಡೇ ವರ್ಷದಲ್ಲಿ ನಿಕಿತಾಗೆ ಬೇರೆ ಕಡೆ ಆಕರ್ಷಣೆ ಉಂಟಾಯಿತು, ಆದಈ ವಿಷಯ ಕಾರ್ತಿಕ್‌ಗೆ ತುಂಬಾ ಸಮಯದವರೆಗೆ ತಿಳಿದೇ ಇರಲಿಲ್ಲ, ಇವರು 2012ರಲ್ಲಿ ವಿಚ್ಚೇದನ ಪಡೆದಿದ್ದು, ಅದುವರೆಗೆ ಆಕೆಯ ಮೋಸದಾಟ ನಡೆದಿತ್ತು.
ಪ್ರಾಣ ಸ್ನೇಹಿತನೇ ಮೋಸ ಮಾಡುತ್ತಾನೆ ಅಂದುಕೊಂಡಿರಲಿಲ್ಲ
ಮತ್ತೊಬ್ಬ ಕ್ರಿಕೆಟರ್ ಮುರುಳಿ ವಿಜಯ್, ದಿನೇಶ್ ಕಾರ್ತಿಕ್ ಜೊತೆ ಒಂದೇ ಟೀಂನಲ್ಲಿ ಆಡುತ್ತಿದ್ದ ಕ್ರಿಕೆಟಿಗ. ತನ್ನ ಸ್ನೇಹಿತನನ್ನು ಪತ್ನಿ ನಿಕಿತಾಗೆ ಪರಿಚಯ ಮಾಡಿಸುತ್ತಾರೆ. ಅವರಿಬ್ಬರಿಗೆ ಕಳ್ಳ ಸಂಬಂಧ ಶುರುವಾಗುತ್ತೆ, ಆತ ತನ್ನ ಗೆಳಯನಿಗೆ ಮೋಸ ಮಾಡಿದರೆ ಈಕೆ ತನ್ನ ಗಂಡನಿಗೆ ಮೋಸ ಮಾಡುತ್ತಾಳೆ, ಇವರಿಬ್ಬರ ಮೋಸ ಗೊತ್ತಾಗುವುದೇ ಇಲ್ಲ, ಇದು ಕೆಲವು ವರ್ಷ ನಡೆಯುತ್ತೆ ಕೂಡ.
2009ರಿಂದ ಪ್ರೀತಿಸುತ್ತಿದ್ದೇವೆ ಎಂದ ಮೋಸಗಾರ್ತಿ ನಿಕಿತಾ
2007ರಲ್ಲಿ ದಿನೇಶ್ ಕಾರ್ತಿಕ್ ಜೊತೆ ಮದುವೆಯಾಗುತ್ತಾರೆ, ಆದರೆ ತಮ್ಮದೇ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಾನು ಮುರುಳಿ 2009ರಿಂದಲೇ ಪ್ರೀತಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ, ನಿಕಿತಾ ಗರ್ಭಿಣಿಯಾಗುತ್ತಾರೆ, ನಿಕಿತಾ ಗರ್ಭಿಣಿಯಾದಾಗ ಕಾರ್ತಿಕ್‌ಗೆ ನಿಕಿತಾ ಇದು ನಿನ್ನ ಮಗುವಲ್ಲ, ಮುರುಳಿ ಮಗು ಎಂದಾಗ ಕಾರ್ತಿಕ್ ಕುಸಿದು ಹೋಗುತ್ತಾರೆ, ತನಗಾದ ನಂಬಿಕೆ ದ್ರೋಹ ತಡೆದುಕೊಳ್ಳಲು ಸಾಧ್ಯವಾಗದೇ ಕುಗ್ಗಿ ಹೋಗುತ್ತಾರೆ. ಆಕೆಗೆ ವಿಚ್ಚೇದನ ನೀಡುತ್ತಾರೆ, ಆಕೆ ವಿಚ್ಛೇದನ ಪಡೆದ ಮಾರನೇಯ ದಿನವೇ ಮುರುಳಿ ವಿಜಯ್ ಜೊತೆ ಮದುವೆಯಾಗಿ ಖುಷಿಯಾಗಿರುತ್ತಾಳೆ.
ಬದುಕಿನಲ್ಲಿ ಸೋತು ಹೋದ ಕಾರ್ತಿಕ್
ಆ ಘಟನೆಯ ಬಳಿಕ ಕಾರ್ತಿಕ್ ಸಂಪೂರ್ಣ ಕುಸಿದು ಹೋಗುತ್ತಾರೆ, ಆಟದ ಕಡೆಗೆ ಗಮನಹರಿಸದೆ ಟೀಂನಿಂದ ಹೊರಗುಳಿಯುತ್ತಾರೆ, ರಾತ್ರಿ-ಹಗಲು ಅನ್ನದೆ ಕುಡಿತ ಪ್ರಾರಂಭಿಸುತ್ತಾರೆ, ಜಿಮ್‌ಗೆ ಹೋಗುವುದು ಬಿಡುತ್ತಾರೆ, ಹೇಗೆ ಇದ್ದ ಕಾರ್ತಿಕ್ ಹೇಗೋ ಆಗುತ್ತಾರೆ.
ಜಿಮ್ ಟ್ರೈನರ್ ಹುಡುಕಿಕೊಂಡು ಬರುತ್ತಾರೆ
ಕಾರ್ತಿಕ್ ದಿನೇಶ್ ಸ್ಥಿತಿ ಜಿಮ್ ಟ್ರೈನರ್‌ಗೆ ತಿಳಿಯುತ್ತದೆ, ಅವರು ಹುಡುಕಿಕೊಂಡು ಬಂದು ಜಿಮ್‌ಗೆ ಬರಲು ಹೇಳುತ್ತಾರೆ, ಕಾರ್ತಿಕ್ ಒಪ್ಪುವುದಿಲ್ಲ, ಕೊನೆಗೆ ಒಪ್ಪಿಸಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿಯೇ ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಳ್ ಬರ್ತಾ ಇರುತ್ತಾರೆ. ದೀಪಿಕಾ ಹಾಗೂ ಜಿಮ್ ಟ್ರೈನರ್ ಸೇರಿ ಕಾರ್ತಿಕ್‌ಗೆ ಮನೋಬಲ ತುಂಬಿಸಿ ಮತ್ತೆ ಮೊದಲಿನ ಕಾರ್ತಿಕ್ ಆಗಿಸಲು ಪ್ರಯತ್ನ ಪಡುತ್ತಾರೆ. ನಿಧಾನಕ್ಕೆ ಕಾರ್ತಿಕ್ ಬದಲಾಗುತ್ತಾರೆ.
ಅರಳಿದ ಪ್ರೇಮ
2015ರಲ್ಲಿ ಮತ್ತೆ ಕಾರ್ತಿಕ್ ಬದುಕಿಗೆ ವಸಂತ ಕಾಲ ಮರಳುತ್ತದೆ. ದೀಪಿಕಾರನ್ನು ಪ್ರೀತಿಸುತ್ತಾರೆ. ಇಬ್ಬರು ಮದುವೆಯಾಗುತ್ತಾರೆ. ಕ್ರಿಕೆಟಿಗ ಮರಳಲು ಫಿಟ್ನೆನೆಸ್ ಟ್ರೈನಿಂಗ್ ತೆಗೆದುಕೊಳ್ಳುತ್ತಾರೆ. ಅಷ್ಟರಲ್ಲಿಯೂ ವಯಸ್ಸಿನ ಕಾರಣ ಹೇಳಿ ಅವರನ್ನು ದೂರ ಇಡುವ ಪ್ರಯತ್ನ ಆಗುತ್ತೆ, ಅದರೆ ಕಾರ್ತಿಕ್ ತಮ್ಮ ಆಟದ ಮೂಲಕ ಇದೀಗ ಎಲ್ಲಾ ಟೀಕೆಗಾರರ ಬಾಯಿ ಮುಚ್ಚಿದ್ದಾರೆ... ಈಗ ಮುದ್ದಾದ ಎರಡು ಅವಳಿ ಮಕ್ಕಳು, ತುಂಬಾ ಪ್ರೀತಿಸುವ ಪತ್ನಿ, ಕ್ರಿಕೆಟ್‌ನಲ್ಲಿ ಸಾಧನೆ ಇದರಿಂದಾಗಿ ತುಂಬಾನೇ ಖುಷಿಯಾಗಿದ್ದಾರೆ, ಇವರ ಬದುಕು ಹೀಗೆಯೇ ಇರಲಿ ಎಂದು ಹಾರೈಸುತ್ತಿದ್ದಾರೆ ಅಭಿಮಾನಿಗಳು...
ವೃತ್ತಿ ಬದುಕಿನಲ್ಲಿ ಸೋತು ಸುಣ್ಣವಾದ ವಿಜಯ್ ಮುರುಳಿ
ಗೆಳಯನಿಗೆ ಮೋಸ ಮಾಡಿ ತಾನು ಸಂತೋಷವಾಗಿರಲು ಹೋದ ವಿಜಯ್ ಮುರುಳಿ ವೃತ್ತಿ ಬದುಕಿನಲ್ಲಿ ಸೋತು ಸುಣ್ಣವಾಗಿದ್ದಾರೆ, ಕಾರ್ತಿಕ್ ಬದುಕು ನೋಡಿ ಖಂಡಿತ ಹೊಟ್ಟೆ ಕಿಚ್ಚಾಗಿರುತ್ತದೆ..... ಮೋಸ ಮಾಡುವವರ ನಡುವೆ ಕಾರ್ತಿಕ್‌ನಂತೆ ಜೀವನಕ್ಕೆ ಮರಳಬೇಕು... ಅದಕ್ಕೆ ದೀಪಿಕಾರಂಥ ಸಂಗಾತಿಯೂ ಬೇಕು...



Click it and Unblock the Notifications