Latest Updates
-
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ
ಡಿಯರ್ ಲೇಡಿಸ್, ಈ 2 ಪ್ರಶ್ನೆ ಕೇಳುವ ಪುರುಷನನ್ನು ಮಾತ್ರ ಜೀವನದಲ್ಲಿ ಮಿಸ್ ಮಾಡಲೇಬಾರದು
ಡಿಯರ್ ಲೇಡಿಸ್ ನಿಮ್ಮ ಬದುಕನ್ನು ಮತ್ತಷ್ಟು ಸುಂದರವಾಗಿಸಲು ನಿಮ್ಮವನ ಕೆಲವೊಂದು ಪ್ರಶ್ನೆಗಳನ್ನು ನಿರ್ಲಕ್ಷ್ಯ ಮಾಡಲೇಬಾರದು, ಅದನ್ನು ಮಾಡಿದ್ದೇ ಆದರೆ ನಷ್ಟ ನಿಮಗೇ, ಏಕೆಂದರೆ ಆ ಪ್ರಶ್ನೆಗಳನ್ನು ನಿರ್ಲಕ್ಷ್ಯ ಮಾಡುವ ಮೂಲಕ ನೀವು ನಿಮ್ಮ ಬದುಕಿನಲ್ಲಿ ತುಂಬಾ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಳ್ಳುತ್ತೀರಿ, ನಿಮ್ಮ ಕೈಯಾರೆ ನಿಮ್ಮ ಬದುಕಿನಲ್ಲಿ ಸವಾಲುಗಳನ್ನು ಆಹ್ವಾನಿಸುತ್ತೀರಿ.

ತುಂಬಾ ಹೆಣ್ಮಕ್ಕಳು ಪ್ರೀತಿಯೆಂದರೆ ಫ್ಯಾಂಟಸಿ ಲವ್‌ಸ್ಟೋರಿ ಎಂದು ಅಂದುಕೊಂಡಿರುತ್ತಾರೆ. ತುಂಬಾ ಫ್ಯಾಂಟಸಿ ಆಗಿ ಲವ್ ಪ್ರಪೋಸ್ ಮಾಡುವುದು, ನಿಮ್ಮ ಜೊತೆ ಅವರು ಬಯಸಿದ ಸ್ಥಳಗಳಲ್ಲಿ ಸುತ್ತಾಡುವುದು, ನಿಮಗೆ ಗಿಫ್ಟ್ಸ್ ಕೊಡುವುದು ಇದುವೇ ಪ್ರೀತಿ ಎಂದು ಭಾವಿಸುತ್ತಾರೆ. ಇದು ಆತ ಪ್ರೀತಿ ವ್ಯಕ್ತಪಡಿಸಿರುವ ಪ್ರೀತಿಯಾಗಿರಬಹುದು. ಆದರೆ ಇದನ್ನೆಲ್ಲಾ ನಿಜವಾಗಿ ಪ್ರೀತಿಯಲ್ಲಿ ಇರುವವರೂ ಮಾಡಬಹುದು ಅಥವಾ ಪ್ರೀತಿಸುತ್ತಿರುವಂತೆ ನಟಿಸುವವರು ಮಾಡಬಹುದು.
ಆದರೆ ನಿಜವಾಗಿ ನಮ್ಮನ್ನು ಪ್ರೀತಿಸುವವರು ಮಾತ್ರ ಕೆಲವೇ ಕೆಲವು ಕಾರ್ಯವನ್ನು ಮಾಡಬಲ್ಲರು, ನಮ್ಮಲ್ಲಿ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಹಾಗಾಗಿ ಅಂತ ವ್ಯಕ್ತಿಯನ್ನು ಬದುಕಿನಲ್ಲಿ ನಿರ್ಲಕ್ಷ್ಯ ಮಾಡಿದರೆ ಅದು ಮಾತ್ರ ಬಹುದೊಡ್ಡ ನಷ್ಟವಾಗಿರುತ್ತದೆ.
ಎಂಥ ಪುರುಷನನ್ನು ಮಿಸ್ ಮಾಡಲೇಬಾರದು
ಅವನು ನಿಮ್ಮ ಬಳಿ ನಿನ್ನ ಕನಸುಗಳೇನು ಎಂದು ಕೇಳುವವನ ಮಿಸ್ ಮಾಡಬೇಡಿ
ಅವನು ನಿನ್ನ ಕನಸೇನು ಎಂದು ನಿಮ್ಮಲ್ಲಿ ಕೇಳಿದರೆ ಅವನು ನಿಮ್ಮನ್ನು ತುಂಬಾನೇ ಕೇರ್ ಮಾಡ್ತಾ ಇದ್ದಾನೆ ಎಂದರ್ಥ, ಅವನಿಗೆ ನಿಮ್ಮ ಕನಸುಗಳ ಬಗ್ಗೆ ತಿಳಿಯುವ ಕುತೂಹಲವಿದೆ, ನಿಮ್ಮ ಕನಸುಗಳ ಬಗ್ಗೆ ತಿಳಿದುಕೊಂಡು ಅದನ್ನು ಸಾಕಾರಗೊಳಿಸಲು ಅವನು ನಿಮ್ಮ ಜೊತೆ ನಿಲ್ಲುತ್ತಾನೆ, ಈ ಕಾರಣದಿಂದಲೇ ಅವನು ನಿಮ್ಮಲ್ಲಿ ಈ ಪ್ರಶ್ನೆ ಕೇಳುತ್ತಾನೆ. ಅವನು ನಿಮ್ಮ ಮೇಲೆ ತುಂಬಾ ಗೌರವ, ಪ್ರೀತಿ ಇಟ್ಟುಕೊಂಡಿದ್ದಾನೆ, ನೀವು ಯಾವುದೇ ಕಾರಣಕ್ಕೆ ನಿಮ್ಮ ಕನಸುಗಳನ್ನು ಅರ್ಧಕ್ಕೆ ಬಿಡಬಾರದು ಎಂಬ ಕಾಳಜಿ ಅವನ್ನಲ್ಲಿರುತ್ತದೆ.
ಅವನು ನಮ್ಮ ಕನಸುಗಳ ಬಗ್ಗೆ ಕೇಳಿದಾಗ ಅವನ್ನಲ್ಲಿ ನಮ್ಮ ಕನಸುಗಳ ಬಗ್ಗೆ, ನಮ್ಮ ಬದುಕಿನ ಬಗ್ಗೆ ತುಂಬಾ ಕಾಳಜಿ ಇರುತ್ತದೆ, ಅವನು ನಮ್ಮಲ್ಲಿ ನಮ್ಮಲ್ಲಿ ಈ ಪ್ರಶ್ನೆ ಕೇಳಿದಾಗ ಅದನ್ನು ನಿರ್ಲಕ್ಷ್ಯ ಮಾಡಿ ಫ್ಯಾಂಟಸಿ ಲವ್ ಬಗ್ಗೆ ಕನಸು ಕೊಂಡು ಅದರ ಹಿಂದೆ ಹೋದರೆ ನೀವು ನಿಮ್ಮ ಬದುಕಿನಲ್ಲಿ ಸಿಕ್ಕ ತುಂಬಾ ಒಳ್ಳೆಯ ವ್ಯಕ್ತಿಯನ್ನು ಮಿಸ್ ಮಾಡಿಕೊಳ್ಳುತ್ತೀರಿ.
ನಾನು ಹೇಗೆ ನಿಮಗೆ ಸಹಾಯ ಮಾಡಬಹುದು? ಎಂದು ಕೇಳುವುದಾದರೆ
ಆತ ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾನೆ, ನಿಮ್ಮ ಬಳಿ ಈ ಕುರಿತು ಕೇಳುತ್ತಾನೆ ಎಂದಾಗ ಅಂಥ ವ್ಯಕ್ತಿಯನ್ನು ನಿರ್ಲಕ್ಷ್ಯ ಮಾಡಬಾರದು. ಸಹಾಯ ಮಾಡುವಂತೆ ನಟಿಸುವವರು ಬೇರೆ, ಆದರೆ ಅವರೇ ಮುಂದೆ ಬಂದು ನಾನು ನಿಮಗೆ ಹೇಗೆ ಸಹಾಯ ಮಾಡಬಹುದು? ಎಂದು ಕೇಳುವುದು ಬೇರೆ, ಹೀಗೆ ಕೇಳುವ ವ್ಯಕ್ತಿಯಲ್ಲಿ ಯಾವುದೇ ಸ್ವಾರ್ಥ ಇರಲ್ಲ. ಅವರು ಅವರಿಂದ ಸಾಧ್ಯವಾಗುವ ಎಲ್ಲಾ ಸಹಾಯ ಮಾಡಲು ಸಿದ್ಧರಿರುತ್ತಾರೆ, ಅದಕ್ಕೆ ಕಾರಣ ಅವರಿಗೆ ನಿಮ್ಮ ಮೇಲಿಟ್ಟಿರುವ ಪ್ರೀತಿ, ಹಾಗಾಗಿ ಇಂಥ ವ್ಯಕ್ತಿಯನ್ನು ಬದುಕಿನಲ್ಲಿ ನಿರ್ಲಕ್ಷ್ಯ ಮಾಡಿದರೆ ನಮ್ಮ ಖುಷಿಯನ್ನು, ಸುಂದರವಾದ ಬದುಕನ್ನು ನೀವೇ ಹಾಳು ಮಾಡಿಕೊಂಡಂತೆ, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications