Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೀವನದಲ್ಲಿ ಯಾವಾಗ್ಲೂ ಖುಷಿಯಾಗಿರಬೇಕಂದ್ರೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!
ಜೀವನದಲ್ಲಿ ಖುಷಿಯಾಗಿರೋದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ಜೀವನದುದ್ದಕ್ಕೂ ಸಿಹಿಯೇ ತುಂಬಿರಲಿ ಎಂದು ಬಯಸುತ್ತಾರೆ. ಆದರೆ ಕೆಲವೊಂದು ಸಲ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳು ನಮ್ಮ ಜೀವನದ ಖುಷಿಯನ್ನೇ ಕಿತ್ತುಕೊಳ್ಳುತ್ತದೆ. ಆದ್ರೆ ನಮ್ಮಲ್ಲಿರುವ ಕೆಲವೊಂದು ಅಭ್ಯಾಸಗಳು ನಮ್ಮ ಜೀವನದ ಖುಷಿಗೆ ಕಾರಣವಾಗುತ್ತದೆ. ಹಾಗಾದ್ರೆ ಯಾವ ಉತ್ತಮ ಅಭ್ಯಾಸಗಳು ನಮ್ಮ ಜೀವನದಲ್ಲಿ ಖುಷಿಯನ್ನು ಹೊತ್ತು ತರುತ್ತದೆ ಅನ್ನೋದನ್ನು ತಿಳಿಯೋಣ.
1. ನಿಮಗೆ ನೀವೇ ಕೃತಜ್ಞತೆ ಸಲ್ಲಿಸುವುದು
ಕೃತಜ್ಞತಾ ಮನೋಭಾವ ಎಲ್ಲರಲ್ಲೂ ಇರಬೇಕು. ಆದರೆ ಕೆಲವರಿಗೆ ಅದು ಇರೋದಿಲ್ಲ. ಬೇರೆಯವರು ಉತ್ತಮ ಕೆಲಸ ಮಾಡಿದಾಗ ಅವರಿಗೆ ಕೃತಜ್ಞತೆ ಸಲ್ಲಿಸೋದಿರಲಿ ತಮಗೆ ತಾವೇ ಕೃತಜ್ಞತೆ ಸಲ್ಲಿಸಿಕೊಳ್ಳೋದಿಲ್ಲ. ನಿಮ್ಮ ಜೀವನದಲ್ಲಿ ನೀವು ಯಾವುದೋ ಸಾಧನೆ ಮಾಡಿರುತ್ತೀರಿ ಅಂದುಕೊಳ್ಳಿ. ಆಗ ನೀವು ಖಂಡಿತ ಖುಷಿಯಾಗಿರುತ್ತೀರಿ. ಆಗ ನಿಮಗೆ ನೀವೇ ಕೃತಜ್ಷತೆ ಸಲ್ಲಿಸಿಕೊಳ್ಳಿ. ಈ ಒಂದು ಸಂತೋಷದ ಕ್ಷಣಕ್ಕೆ ಖಂಡಿತ ನೀವು ಕೃತಜ್ಞರಾಗಲೇಬೇಕು. ನಿಮ್ಮಲ್ಲಿರುವ ಕೊರತೆ ಬಗ್ಗೆ ಚಿಂತಿಸಬೇಡಿ. ನಿಮ್ಮ ಏನಿದೆಯೋ ಅದ್ರಲ್ಲೇ ತೃಪ್ತಿ ಪಟ್ಟುಕೊಂಡು ಖುಷಿಪಡಿ.

2. ಉತ್ತಮ ಸಂಬಂಧವನ್ನು ಪೋಷಿಸುವುದು
ಕೆಲವರಿಗೆ ಜೀವನದಲ್ಲಿ ಯಾರೂ ಇರೋದಿಲ್ಲ. ಆದರೂ ಕೂಡ ಅವರು ಸಂತೋಷವಾಗಿರುತ್ತಾರೆ. ಆದರೆ ನಮಗೆ ಅಪ್ಪ, ಅಮ್ಮ ಸ್ನೇಹಿತರು, ಸಂಬಂಧಿಗಳು ಎಲ್ಲಾ ಇದ್ದಾರೆ ಆದರೂ ನಾವು ಖುಷಿಯಾಗಿಲ್ಲ. ಸಣ್ಣ-ಪುಟ್ಟ ವಿಚಾರಕ್ಕೆ ಅಪ್ಪ- ಅಮ್ಮನ ಮನಸ್ಸಿಗೆ ನೋವು ಮಾಡುತ್ತೇವೆ. ಸ್ನೇಹಿತ ಜೊತೆಗೆ ಜಗಳ ಆಡುತ್ತೇವೆ. ಇದರಿಂದ ನಮ್ಮ ಮನಸ್ಸು ಹಾಳಾಗುತ್ತದೆ.
ಜೀವನ ಇಷ್ಟೇ ಅಲ್ಲ, ಖುಷಿಯಾಗಿರಬೇಕೆಂದರೆ ಪ್ರೀತಿಯನ್ನು ಹಂಚಬೇಕು. ನಮ್ಮರಿಗೆ ನಾವು ಗೌರವ ಕೊಡಬೇಕು. ಅವರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ನಮಗಿರಬೇಕು. ಆತ್ಮೀಯರ ಜೊತೆಗೆ ಉತ್ತಮ ಸಮಯವನ್ನು ಕಳೆಯಬೇಕು. ಖಂಡಿತ ಆಗ ಜೀವನ ಸುಂದರವಾಗಿದೆ ಅಂತ ಅನ್ನಿಸೋದಕ್ಕೆ ಶುರುವಾಗುತ್ತದೆ.
3. ನೀವು ನೀವಾಗಿರಿ
ನೀವು ನಿಮಗಾಗಿ ಬದುಕಬೇಕೇ ವಿನಹ ಬೇರೆಯವರಿಗಾಗಿ ಅಲ್ಲ. ಬೇರೆಯವರ ಮುಂದೆ ನೀವು ತುಂಬಾ ಪ್ರಾಮಾಣಿಕವಾಗಿದ್ದೇನೆ, ತುಂಬಾ ಒಳ್ಳೆಯವನು ಎಂದು ತೋರಿಸೋದಕ್ಕೆ ಹೋಗಬೇಡಿ. ಇದರಿಂದ ನಿಮಗೆ ಯಾವುದೇ ರೀತಿ ಲಾಭವಿಲ್ಲ. ನೀವು ನಿಮ್ಮತನವನ್ನು ಕಳೆದುಕೊಂಡು ಬಿಡುತ್ತೀರಿ ಅಷ್ಟೇ. ಸಂತೋಷವಾಗಿರಬೇಕೆಂಬ ವ್ಯಕ್ತಿಗಳು ತಮ್ಮ ಜೀವನ ಮೌಲ್ಯಗಳು, ಭಾವೋದ್ರೇಕಗಳು ಮತ್ತು ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಹೀಗಾಗಿ ಜೀವನದಲ್ಲಿ ಖುಷಿಯಾಗಿರುತ್ತಾರೆ.
4. ನಿಮ್ಮ ಕಾಳಜಿಯನ್ನು ನೀವೇ ಮಾಡಿ
ಹೆಚ್ಚಿನ ಜನ ತಮ್ಮ ಕಾಳಜಿಯನ್ನು ಮಾಡೋದನ್ನು ಮರೆತು ಬಿಡುತ್ತಾರೆ. ಬೇರೆಯವರ ಕಾಳಜಿ ಮಾಡೋದ್ರಲ್ಲಿ ಅವರು ಬ್ಯೂಸಿಯಾಗಿರ್ತಾರೆ. ಇನ್ನೂ ಕೆಲವರು ಸಣ್ಣ-ಪುಟ್ಟ ವಿಚಾರಕ್ಕೂ ಬೇಸರ ಪಡುತ್ತಾ ನೋವು ತಿನ್ನುತ್ತಿರುತ್ತಾರೆ. ಹೀಗಾಗಿ ಆತಂಕ, ಒತ್ತಡ ಅವರಲ್ಲಿ ಹೆಚ್ಚಾಗಿರುತ್ತದೆ.
ಹೀಗಾಗಿ ನೀವು ಖುಷಿಯಾಗಿರಬೇಕೆಂದರೆ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ತಿನ್ನ ಪ್ರತಿನಿತ್ಯ ನಿಮ್ಮನ್ನು ನೀವು ಯೋಗ, ಧ್ಯಾನ, ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆಗ ಖಂಡಿತ ನಿಮ್ಮ ಮೈ, ಮನಸ್ಸು ಸಂತೋಷವಾಗಿರುತ್ತದೆ.
5. ಹೊಸತನ್ನು ಕಲಿತು, ಬೆಳವಣಿಗೆ ಕಡೆಗೆ ಮನಸ್ಸು ಕೇಂದ್ರೀಕರಿಸಿ
ಮನುಷ್ಯನ ಜೀವನ ನಿಂತ ನೀರಾಗದೇ ಹರಿಯುವ ನೀರಾಗಬೇಕು. ಹೀಗಾಗಿ ನಾವು ಜೀವನದಲ್ಲಿ ಹೊಸತು ಏನನ್ನಾದರೂ ಕಲಿತುಕೊಳ್ಳೋದಕ್ಕೆ ಮನಸ್ಸು ತುಡಿಯುತ್ತಿರಬೇಕು. ಹೊಸತನ್ನು ಕಲಿಯೋದ್ರೊಂದಿಗೆ ನಮ್ಮ ಜೀವನದಲ್ಲಿ ಏಳಿಗೆಯನ್ನು ಕಾಣೋದಕ್ಕೆ ಸಾಧ್ಯವಾಗುತ್ತದೆ. ಹೊಸ ವಿಚಾರಗಳನ್ನು ಕಲಿಯೋದ್ರಿಂದ ನಾವು ಬ್ಯೂಸಿಯಾಗಿರ್ತೀವಿ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ದುಃಖ ಹಾಗೂ ನೋವುಗಳಿಗೆ ಅವಕಾಶ ಇರೋದಿಲ್ಲ. ಕಲಿಕೆಯಿಂದ ನಮ್ಮ ಜೀವನದಲ್ಲಿ ಅಭಿವೃದ್ಧಿಯಾದ್ರೆ ಖಂಡಿತ ನಾವು ಖುಷಿಯಾಗಿ ಇರಬಹುದು.
6. ಈ ಕ್ಷಣವನ್ನು ಖುಷಿಯಿಂದ ಬದುಕಿ
ಈ ಕ್ಷಣ ನಮ್ಮ ಪಾಲಿಗೆ ಏನು ಒದಗಿ ಬಂದಿದ್ಯೋ ಅದ್ರಲ್ಲಿ ನಾವು ಖುಷಿಯಾಗಿರೋದನ್ನು ಕಲಿಯಬೇಕು. ಅದನ್ನು ಬಿಟ್ಟು ನಾವು ನಾಳೆಯ ಬಗ್ಗೆ ಚಿಂತಿಸೋದಕ್ಕೆ ಹೋಗಬಾರದು. ನಾಳೆ ನಾವು ಇರ್ತಿವೋ ಅನ್ನೋದೇ ಗ್ಯಾರಂಟಿ ಇಲ್ಲ. ಇದಷ್ಟು ದಿನ ಎಲ್ಲರ ಜೊತೆಗೆ ಖುಷಿಯಾಗಿ ಇರಬೇಕು. ಬದುಕಿನಲ್ಲಿ ಯಾವುದೇ ರೀತಿ ನೋವುಗಳೇ ಇರೋದಿಲ್ಲ.
ನಮ್ಮ ಜೀವನದ ಖುಷಿಯ ಕೀಲಿಕೈ ಇರೋದು ನಮ್ಮ ಕೈಯಲ್ಲಿ ಮಾತ್ರ. ನಮ್ಮ ಜೀವನದಲ್ಲೂ ಕೂಡ ಈ ಸೂತ್ರಗಳನ್ನು ಅಳವಡಿಸಿಕೊಂಡರೆ ಖಂಡಿತ ಖುಷಿಯಾಗಿ ಇರಬಹುದು.



Click it and Unblock the Notifications
