Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಒಂಟಿತನ ಓಡಿಸಲೆಂದೇ ಬಂದಿದೆ ಅಪ್ಪುಗೆಯ ಸಲೂನ್, ಈಕೆಯ ವಿಭಿನ್ನ ಪ್ರಯತ್ನ ಸಕತ್ ಕ್ಲಿಕ್ ಆಗಿದೆ
ಅಪ್ಪುಗೆಗಾಗಿಯೇ ಸಲೂನ್ ಪ್ರಾರಂಭಿಸಿದಾಗ ಇಷ್ಟೊಂದು ಕಸ್ಟಮರ್ ಬರ್ತಾರೆ ಎಂದು ಆಕೆಯೂ ಊಹಿಸಿರಲಿಲ್ಲ, ಈಗ ಈ ಅಪ್ಪುಗೆಯ ಸಲೂನ್‌ಗೆ ಬರಲು 3 ತಿಂಗಳಿಗಿಂತ ಮುಂಚೆಯೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು, ಒಂಟಿತನದಿಂದ ಬೆಂದು ಬೇಯುತ್ತಿರುವವರು ಒಂದು ಅಪ್ಪುಗಾಗಿ ಎಷ್ಟೊಂದು ಕಾಯುತ್ತಿದ್ದಾರೆ ಎಂಬುವುದು ಇದರಿಂದಲೇ ತಿಳಿಯುತ್ತದೆ ಅಂತಾರೆ ಅಲೆಕ್ಸಾಂಡ್ರಾ ಕಾಸ್ಪೆರಿಕ್. ಈ ಸಲೂನ್‌ಗೆ ಬರುವವರು ಒಂದು ಅಪ್ಪುಗೆ ಪಡೆದು ನಮ್ಮ ಮನಸ್ಸಿನ ಭಾರ ಇಳಿಸಿ ಹೋಗಲು ಬರ್ತಾ ಇದ್ದಾರೆ.

2 ವರ್ಷದ ಹಿಂದೆ ಕಡಲ್ ಸಲೂನ್ ಅಂತ ಓಪನ್ ಮಾಡಿದರು
ಇವರು ತೀವ್ರ ಒಂಟಿತನ ಅನುಭವಿಸುವವರ ಮಾತುಗಳನ್ನು ಕೇಳಿ ಅವರಿಗೆ ಅಪ್ಪುಗೆ ನೀಡಲು ಇಂಥದ್ದೊಂದು ಸಲೂನ್ ಓಪನ್ ಮಾಡಿದರು. ಆದರೆ ಅಚ್ಚರಿವೆಂಬಂತೆ ಈ ಸಲೂನ್‌ಗೆ ಬರುವವರ ಸಂಖ್ಯೆ ಹೆಚ್ಚಾಯ್ತು. 40-60 ವರ್ಷದೊಳಗಿನವರು ಇಲ್ಲಿಗೆ ಬರ್ತಾ ಇದ್ದರು, ಕೆಲವರು ವಾರದಲ್ಲಿ ವಾರಕ್ಕೊಮ್ಮೆ ಬರಲಾರಂಭಿಸಿದರು, ಇದು ಅವರಲ್ಲಿನ ಒಂಟಿತನ ದೂರ ಮಾಡಲು ಸಹಾಯ ಮಾಡ್ತಾ ಇದೆ, ಅವರಲ್ಲಿನ ಅನೇಕ ಸಮಸ್ಯೆ ಬಗೆಹರಿಸಲು ಸಹಾಯ ಮಾಡ್ತಾ ಇದೆ, ಹೀಗಾಗಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಈ ಕಾರಣಕ್ಕೆ ಒಂದು ಅಪ್ಪುಗೆ ಪಡೆಯಲು 3-4 ತಿಂಗಳ ಮೊದಲೇ ಅಪಾಯ್ಮೆಂಟ್ ಪಡೆಯುತ್ತಿದ್ದಾರೆ ಎಂದರೆ ಅವರನ್ನು ಈ ಒಂಟಿತನ ಎಂಬುವುದು ಎಷ್ಟೊಂದು ಭೀಕರವಾಗಿ ಕಾಡಿರಬಹುದು.
ಈ ಸಲೂನ್‌ನಲ್ಲಿ ಅಪ್ಪುಗೆ ಮಾತ್ರ ಸಿಗುತ್ತದೆ
ಈ ಸಲೂನ್ ಅಪ್ಪುಗೆಯ ಸರ್ವೀಸ್ ಮಾತ್ರ ನೀಡುತ್ತದೆ, ಇಲ್ಲಿ ಗ್ರಾಹಕರಿಗೆ ದೈಹಿಕ ಸುಖ ನೀಡಲ್ಲ, ಬದಲಿಗ ಅವರ ಮನಸ್ಸಿನ ಭಾರ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಈ ಸಲೂನ್ ಸೆಷನ್ ಮೊದಲು ಅಪ್ಪುಗೆಯಿಂದ ಶುರುವಾಗುತ್ತೆ, ನಂತರ ಅವರ ಜೊತೆ ಆತ್ಮೀಯವಾಗಿ ಮಾತನಾಡಿ ಟೆಡ್ಡಿಬೇರ್ ಅಪ್ಪುಗೆ ನೀಡಲಾಗುವುದು. ಅವರು ಈಕೆಯ ತೋಳಿನ ಅಪ್ಪುಗೆಯಲ್ಲಿ ರಿಲ್ಯಾಕ್ಸ್ ಆಗಬಹುದು.ಅವಳಲ್ಲಿಗೆ ಬರುವವರು ಆಕೆಗೆ ಸಹೋದರಿಯಾಗುತ್ತಾರೆ, ಸಹೋದರಾಗುತ್ತಾರೆ, ಅವರು ಅವರ ಆರೋಗ್ಯದ ಬಗ್ಗೆ ಹೇಳುತ್ತಾರೆ. ಅವರ ಬೇಸರಗಳ ಬಗ್ಗೆ ಹೇಳುತ್ತಾರೆ, ಅವರು ಅನುಭವಿಸುತ್ತಿರುವ ವೇದನೆಗಳ ಬಗ್ಗೆ ಹೇಳುತ್ತಾರೆ. ಅವರು ಈ ಹಗ್ ಸಲೂನ್‌ಗೆ ಬರುವಾಗ ಹಗ್ ರೂಲ್ಸ್ ಹೇಳಲಾಗುವುದು, ಅದಕ್ಕೆ ತಪ್ಪಿ ನಡೆದುಕೊಂಡರೆ ಅಂಥವರಿಗೆ ಹಗ್ ಸೆಷನ್ ಬಂದ್ ಮಾಡಲಾಗುವುದು.
ಈ ಹಗ್ ಸಲೂನ್‌ನಲ್ಲಿ ಗಂಟೆಗೆ $37 ಡಾಲರ್ ಹಣ ಪಾವತಿಸಬೇಕು, ನನ್ನಲ್ಲಿ ಬರುವ ಗ್ರಾಹಕರಿಗೆ ಅವರ ಮಾತುಗಳನ್ನು ಯಾರಾದರೂ ಕೇಳಬೇಕು, ಮೆಚ್ಚಿಕೊಳ್ಳಬೇಕು ಎಂಬುವುದು ಇರುತ್ತದೆ. ಈ ಸಲೂನ್‌ನಲ್ಲಿ ಲಕ್ಷುರಿ ಬಾತ್ ಟಬ್, ಸ್ವೀಟ್ ಟ್ರೀಟ್, ಟೀ, ಹಾಟ್ ಚಾಕಲೇಟ್, ಶಾಂಪೇನ್ ಕೂಡ ಸರ್ವ್ ಮಾಡಲಾಗುವುದು.
ಒಂಟಿತನ ಎಂಬುವುದು ಮನುಷ್ಯನನ್ನು ಕೊಲ್ಲುತ್ತದೆ
ಈ ಒಂಟಿತನ ಎಂಬುವುದು ಇದೆಯಲ್ಲಾ ಅದು ಮನುಷ್ಯನಿಗೆ ತುಂಬಾನೇ ನೋವು ಕೊಡುತ್ತದೆ, ಅದರಲ್ಲಿಯೂ ಈ 40ರ ಪ್ರಾಯದ ನಂತರ ಈ ಒಂಟಿತನ ಹೆಚ್ಚಿನವರಿಗೆ ಕಾಡಲಾರಂಭಿಸುತ್ತದೆ. ತಮ್ಮ ಮನಸ್ಸಿನ ಭಾವನೆಗಳನ್ನು ಯಾರ ಜೊತೆ ಹೇಳಲು ಸಾಧ್ಯವಿಲ್ಲ, ಎಲ್ಲಾ ಮನಸ್ಸಿನಲ್ಲಿಯೇ ಇಟ್ಟುಕುಗ್ಗಿ ಹೋಗಿರುತ್ತಾರೆ. ಅಂಥವರನ್ನು ಟಾರ್ಗೆಟ್ ಮಾಡಿ ಇಂಥದ್ದೊಂದು ಸಲೂನ್ ಓಪನ್ ಮಾಡಲಾಗಿದೆ, ಈ ಸಲೂನ್ ಬ್ಯುಸ್‌ನೆಸ್ ಊಹಿಸಿರುವುದಕ್ಕಿಂತಲೂ ತುಂಬಾನೇ ಚೆನ್ನಾಗಿಯೇ ಹೋಗುತ್ತಿದೆ ಎಂದು ಅಲೆಕ್ಸಾಂಡ್ರಾ ಹೇಖ್ತಾರೆ.
ವೇಶ್ಯೆಯರ ಬಳಿ ಹೋಗುವವರು ಬರಿ ದೈಹಿಕ ಸುಖ ಬಯಸಿ ಹೋಗಲ್ಲ ಎಂಬುವುದು ಕೂಡ ಕಟು ಸತ್ಯ
ವೇಶ್ಯೆಯರು ತಮ್ಮ ಬಳಿ ಬರುವ ಎಷ್ಟೋ ಪುರುಷರು ದೈಹಿಕ ಆಸೆಯಿಂದ ಬರಲ್ಲ, ಅವರು ನಮ್ಮ ಜೊತೆ ಕೂತು ಮನಸ್ಸು ಬಿಚ್ಚಿ ಮಾತನಾಡಲೆಂದೇ ಇಲ್ಲಿಗೆ ಬರ್ತಾರೆ ಎಂಬುದಾಗಿ ಹೇಳುತ್ತಾರೆ. ಒಂದು ಪ್ರೀತಿಯ ಅಪ್ಪುಗೆಗೆ ನೋವನ್ನು ಮರೆದುವ ಶಕ್ತಿ ಇದೆ.
ಆದ್ದರಿಂದ ಎಷ್ಟೇ ಬ್ಯುಸಿಯಿದ್ದರೂ ನೀವು ನಿಮ್ಮ ಸಂಗಾತಿಗೆ ಒಂದು ಪ್ರೀತಿಯ ಅಪ್ಪುಗೆ ನೀಡಿದರೆ ನಿಮ್ಮ ಬಾಂಧವ್ಯ ತುಂಬಾ ಗಟ್ಟಿಯಾಗಿಸುತ್ತದೆ ಎಂಬುವುದು ಶೇ. 100ರಷ್ಟು ಸತ್ಯ.



Click it and Unblock the Notifications
