Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಈ ಲೇಖನ ಗಂಡ-ಹೆಂಡತಿಗೆ ಮಾತ್ರ: ಸುಂದರ ದಾಂಪತ್ಯಕ್ಕೆ ಬೆಡ್‌ರೂಂನಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ
ಬೆಡ್‌ರೂಂನಲ್ಲಿ. ಗಂಡ-ಹೆಂಡತಿ ಸಂಬಂಧ ಹೇಗಿರುತ್ತದೋ ಅದರ ಮೇಲೆ ಅವರಿಬ್ಬರ ಬದುಕು ಇರುತ್ತದೆ. ಬೆಡ್‌ರೂಂನಲ್ಲಿ ಸಂಬಂಧ ಸರಿಯಿಲ್ಲದಿದ್ದರೆ ಇಬ್ಬರ ನಡುವೆ ಬಾಂಧವ್ಯ ಕಡಿಮೆಯಾಗಲಿದೆ, ಲೈಂಗಿಕ ಅತೃಪ್ತಿ ಎಂಬುವುದು, ಸಂಶಯ, ಅನೈತಿಕ ಸಂಬಂಧ ಸೇರಿ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಬೆಡ್‌ರೂಂನಲ್ಲಿ ಸಂಬಂಧ ಚೆನ್ನಾಗಿರಬೇಕು ಎಂದರೆ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು. ಅದರಲ್ಲೂ ಇಬ್ಬರು ಒಬ್ಬರಿಗೊಬ್ಬರು ಬೆಸೆದು ಕಳೆಯುವ ಕ್ಷಣದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ.

ನಿಮ್ಮ ಸಂಗಾಂತಿಯ ಅನುಮತಿ ಪಡೆಯದೆ ಫ್ಯಾಂಟಸಿ ರತಿಕ್ರೀಡೆಗೆ ಮುಂದಾಗುವುದು
ನೀಲಿ ಚಿತ್ರಗಳನ್ನು ನೋಡಿ ಸಂಗಾತಿಗೆ ಅದೇ ರೀತಿ ಮಾಡಲು ಒತ್ತಾಯಿಸುವುದು ಸರಿಯಲ್ಲ, ನಿಮ್ಮ ವರ್ತನೆಯಿಂದ ನಿಮ್ಮ ಸಂಗಾತಿಗೆ ಬೇಸರವಾದರೆ ಅವರು ನಿಮ್ಮಿಂದ ಬೇರಾಗಬಹುದು, ಆದ್ದರಿಂದ ನೀವು ಈ ಬಗ್ಗೆ ಎಚ್ಚರವಹಿಸಬೇಕು. ರತಿಕ್ರೀಡೆಯನ್ನು ನಿಮಗೆ ಇಷ್ಟವಾದ ರೀತಿಯಲ್ಲಿ ಮಾಡಲು ಸಂಗಾತಿಯ ಒಪ್ಪಿಗೆ ಕೂಡ ತುಂಬಾನೇ ಮುಖ್ಯ. ನಿಮ್ಮ ಐಡಿಯಾಗಳು ಅವರಿಗೂ ಒಪ್ಪಿಗೆಯಾಗಬೇಕೆಂದಿಲ್ಲ, ಆದ್ದರಿಂದ ಈ ಬಗ್ಗೆ ನೀವು ಜಾಗ್ರತೆವಹಿಸಿ. ನಿಮ್ಮ ಅನಿಸಿಕೆಗಳನ್ನು,ಇಷ್ಟಗಳನ್ನು ಅವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.
ಕೃತಕತೆ ಬೇಡ
ಲೈಂಗಿಕಕ್ರಿಯೆ ವೇಳೆ ಕೃತಕ ನಟನೆ ಮಾಡ ಬೇಡಿ, ಉದ್ರೇಕಗೊಂಡಿರುವಂತೆ ಸುಮ್ಮನೆ ವರ್ತಿಸಬೇಡಿ, ನಿಮ್ಮ ಸಂಗಾತಿಗೆ ಈ ರೀತಿ ನೀವು ಮಾಡುತ್ತಿರುವುದು ನಟನೆ ಎಂದು ತಿಳಿಯುತ್ತದೆ, ಇದರಿಂದ ಅವರಿಗೆ ನಿಮ್ಮೊಂದಿಗೆ ಏನೋ ಒಂದು ರೀತಿಯ ಹಿಂಜರಿಕೆ ಬರುತ್ತದೆ, ಈ ರೀತಿ ಮಾಡಲು ಹೋಗಲೇಬೇಡಿ, ನಿಮ್ಮ ಭಾವನೆ, ಇಷ್ಟಗಳನ್ನು ನೈಜವಾಗಿ ವ್ಯಕ್ತಪಡಿಸಿ. ಆದ್ದರಿಂದ ಬೆಡ್‌ನಲ್ಲಿ ಕೃತಕ ನಟನೆ ಮಾಡಲು ಹೋಗಬಾರದು.
ನಿಮ್ಮ ಸಂಗಾತಿಯ ಆಸೆಗೆ ನೋ ಎಂದು ಹೇಳಬೇಡಿ
ಹೌದು ಸಂಗಾತಿಯ ಒಪ್ಪಿಗೆ ಪಡೆಯದೆ ಅವರಿಗೆ ಇಷ್ಟವಿಲ್ಲದ ಪೊಸಿಸನ್ ಬಗ್ಗೆ ಹೇಳಲುಬಾರದು,ಅದರಂತೆ ಸಂಗಾತಿ ಹೊಸದೇನಾದರೂ ಟ್ರೈ ಮಾಡುವ ಎಂದು ಹೇಳಿದಾಗ ತಕ್ಷಣವೇ ನೋ ಎನ್ನಬೇಡಿ, ಏಕೆಂದರೆ ಇದರಿಂದ ಅವರ ಮನಸ್ಸಿಗೆ ನೋವಾಗುತ್ತೆ, ಹಾಗಾಗಿ ನೀವು ಈ ಬಗ್ಗೆ ತುಂಬಾ ಜಾಗ್ರತೆವಹಿಸಬೇಕು. ಇಲ್ಲದಿದ್ದರೆ ಇದೇ ಕಾರಣಕ್ಕೆ ಅವರಿಗೆ ನಿಮ್ಮ ಮೇಲೆ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ.
ಎಕ್ಸ್ ಬಗ್ಗೆ ಹೇಳುವುದು
ನಿಮಗೆ ಎಕ್ಸ್ ಇದ್ದ ಬಗ್ಗೆ ಅವರಿಗೆ ಗೊತ್ತಿದ್ದು ನಿಮ್ಮನ್ನು ಮದುವೆಯಾಗಿರಬಹುದು, ಆದರೆ ನಿಮ್ಮ ಎಕ್ಸ್ ಬಗ್ಗೆ ಬೆಡ್‌ರೂಂನಲ್ಲಿ ಎಕ್ಸ್ ಬಗ್ಗೆ ಹೇಳಲೇಬೇಡಿ. ಅಲ್ಲದೆ ನೀವು ನಿಮ್ಮ ಮನಸ್ಸಿನಲ್ಲಿಯೂ ಎಕ್ಸ್ ಜೊತೆ ಹೋಲಿಕೆ ಮಾಡಬಾರದು, ಇವೆಲ್ಲಾ ನಿಮ್ಮಿಬ್ಬರ ನಡುವೆ ಅಂತರ ಉಂಟು ಮಾಡುತ್ತದೆ.
ರೊಮ್ಯಾಂಟಿಕ್ ಮಾತುಗಳನ್ನು ಆಡದೆ ಇರಬೇಡಿ
ಇಬ್ಬರು ಯಾವುದೇ ರೊಮ್ಯಾಂಟಿಕ್ ಮಾತುಗಳಿಲ್ಲದೆ ಲೈಂಗಿಕ ಕ್ರಿಯೆ ನಡೆಸಿದರೆ ಅದರಲ್ಲಿ ಖುಷಿ ಇರಲ್ಲ, ಬದುಕು ಯಾಂತ್ರಿಕವಾಗುವುದು, ಇಬ್ಬರ ನಡುವೆ ದಾಂಪತ್ಯ ಸ್ವಾರಸ್ಯ ಕಡಿಮೆಯಾಗುವುದು. ಇಬ್ಬರು ಮನಸ್ಸು ಬಿಚ್ಚಿ ಮಾತನಾಡಬೇಕು, ಇಬ್ಬರು ಆ ದಿನ ತಮ್ಮ ಬದುಕಿನಲ್ಲಿ ನಡೆದ ಪ್ರಮುಖ ವಿಷಯಗಳನ್ನು ಹೇಳಿ, ಬಳಿಕ ರೊಮ್ಯಾಂಟಿಕ್ ಮಾತುಗಳನ್ನಾಡಿ.
ಬೆಡ್‌ರೂಂ ವಿಷಯವನ್ನು ಬೇರೆಯವರ ಜೊತೆ ಹೇಳಿಕೊಳ್ಳಲು ಸಾಧ್ಯವಾಗಲ್ಲ, ಅದು ಅವರಿಬ್ಬರಿಗಷ್ಟೇ ಗೊತ್ತಿರುವ ವಿಷಯವಾಗಿರುತ್ತದೆ, ಆದರೆ ಇಬ್ಬರು ಬೆಡ್‌ರೂಂನಲ್ಲಿ ತುಂಬಾನೇ ಮನಬಿಚ್ಚಿ ಮಾತನಾಡಬೇಕು, ನಿಮ್ಮ ಲೈಂಗಿಕ ಆಸಕ್ತಿಗಳನ್ನು ಹಂಚಿಕೊಳ್ಳಬೇಕು, ಅದು ಹೆಣ್ಣಾಗಲಿ, ಗಂಡಾಗಲಿ.
ಅಯ್ಯೋ ನನ್ನ ಸಂಗಾತಿ ನನ್ನ ಬಗ್ಗೆ ತಪ್ಪಾಗಿ ಭಾವಿಸುತ್ತಾರೆ ಎಂದು ಯೋಚಿಸಿದರೆ ಸಂಗಾತಿಗೆ ಲೈಂಗಿಕ ಅತೃಪ್ತಿ ಉಂಟಾಗಿ ಸಂಬಂಧದಲ್ಲಿ ಸಮಸ್ಯೆ ಉಂಟಾಗುವುದು, ಆದ್ದರಿಂದ ನಿಮ್ಮಿಬ್ಬರ ನಡುವೆ ಯಾವುದೇ ಮುಚ್ಚುಮರೆ ಬೇಡ್ವೆ ಬೇಡ....



Click it and Unblock the Notifications
