Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಎಕ್ಸ್ ವಿಚಾರದಲ್ಲಿ ಈ 4 ತಪ್ಪು ಮಾಡಲೇಬೇಡಿ, ನಿಮ್ಮ ಬದುಕೇ ಹಾಳಾಗುವುದು
ಪ್ರೀತಿಯಲಿದ್ದಾಗ ಏಕೋ ಇಬ್ಬರಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದಾಗ ಬ್ರೇಕಪ್ ಆಗಿರುತ್ತದೆ, ಕೆಲವರು ಬ್ರೇಕಪ್ ಬಳಿಕ ಮತ್ತೆ ಎಂದಿಗೂ ಸಂಪರ್ಕದಲ್ಲಿರಲ್ಲ, ಆದರೆ ಇನ್ನು ಕೆಲವರು ಬ್ರೇಕಪ್ ಬಳಿಕ ಇನ್ಮುಂದೆ ನಾವು ಸ್ನೇಹಿತರಾಗಿರೋಣ ಎಂದು ಹೇಳುತ್ತಾರೆ, ಹೇಳುವುದು ಮಾತ್ರವಲ್ಲ ಕೆಲವರು ಬ್ರೇಕಪ್ ಬಳಿಕ ಕೂಡ ಮಾತನಾಡುತ್ತಾರೆ, ಅವರ ನಡುವೆ ಸ್ನೇಹವಿರುತ್ತದೆ.
ಎಕ್ಸ್ ಜೊತೆ ಈಗಲೂ ಟಚ್‌ನಲ್ಲಿದ್ದರೆ ಕೆಲವೊಂದು ರೂಲ್ಸ್ ಪಾಲಿಸಿದರೆ ಯಾವುದೇ ಸಮಸ್ಯೆಯಾಗಲ್ಲ, ಇಲ್ಲದಿದ್ದರೆ ನಿಮ್ಮ ಬದುಕಿನಲ್ಲಿ ಅನೇಕ ಸಮಸ್ಯೆಗಳನ್ನು ತರಬಹುದು, ಎಕ್ಸ್ ಜೊತೆ ಯಾವುದೇ ಸಂಪರ್ಕದಲ್ಲಿರದಿದ್ದರೆ ಒಕೆ, ಇಲ್ಲಾಂದ್ರೆ ಈ ಬಗ್ಗೆ ಸ್ವಲ್ಪ ಗಮನಹರಿಸುವುದು ಒಳ್ಳೆಯದು:

ಎಕ್ಸ್ ಜೊತೆ ಮಾತನಾಡುವಾಗ ನಿಮ್ಮ ಮಾತುಗಳಿಗೆ ಬೌಂಡರಿ ಇರಲಿ
ಸ್ನೇಹಿತರ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡುತ್ತೇವೆ, ಪ್ರೇಮಿ ಜೊತೆ ಎಲ್ಲಾ ವಿಷಯ ಹೇಳಿಕೊಳ್ಳುತ್ತೇವೆ, ಆದರೆ ಎಕ್ಸ್ ಜೊತೆ ಹಾಗೆ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳಲು ಹೋಗಬೇಡಿ, ನಿಮ್ಮ ಮಾತಿನಲ್ಲಿ ಬೌಂಡರಿ ಇರಲಿ. ಈಗ ನಿಮ್ಮ ನಡುವೆ ಯಾವ ಪ್ರೀತಿಯೂ ಇಲ್ಲದಿರಬಹುದು, ಆದರೆ ನಿಮ್ಮಿಬ್ಬರ ನಡುವಿನ ಕ್ಲೋಸ್‌ನೆಸ್ ಒಬ್ಬರ ಜೀವನದಲ್ಲಿ ಅಥವಾ ಇಬ್ಬರ ಜೀವನದಲ್ಲಿ ಬಿರುಗಾಳಿ ಎಬ್ಬಿಸಬಹುದು.
ಎಕ್ಸ್ ಜೊತೆಗೆ ಮಾತನಾಡುತ್ತಿದ್ದರೆ ಈಗ ನಿಮಗೆ ಸಂಗಾತಿ ಇದ್ದರೆ ಅಥವಾ ಅವರಿಗೆ ಸಂಗಾತಿ ಇದ್ದರೆ ಅದು ಅವರಿಗೆ ಇಷ್ಟವಾಗದೇ ಇರಬಹುದು. ಇದೇ ಕಾರಣಕ್ಕೆ ನಿಮ್ಮ ಈಗೀನ ಸಂಬಂಧದಲ್ಲಿ ಭಿನ್ನಾಭಿಪ್ರಾಯ, ಜಗಳ ಎಲ್ಲಾ ಬರಬಹುದು, ನೀವು ಯಾವ ಕಾರಣಕ್ಕೆ ಬೇರೆಯಾಗಿದ್ದೀರಿ ಎಂಬುವುದು ಮುಖ್ಯವಲ್ಲ, ಈಗ ಬೇಗ ಬೇರೆ ಆಗಿದ್ದೀರಿ ಎಂಬುವುದು ವಾಸ್ತವ, ಒಂದು ವೇಳೆ ಮನೆಯವರಿಗಾಗಿ ನೀವು ಬೇರೆಯಾಗಿರಬಹುದು, ಆದರೆ ಒಮ್ಮೆ ಪ್ರೀತಿ ಮುರಿದ ಮೇಲೆ ಪದೇ ಪದೇ ಕಾಲ್ ಮಾಡುವುದು, ಮಾತನಾಡುವುದು ಅಷ್ಟು ಒಳ್ಳೆಯದಲ್ಲ.
ನಿಮ್ಮ ಅವಶ್ಯಕತೆಗೆ ಎಕ್ಸ್ ಸಹಾಯ ಕೇಳಬೇಡಿ
ನೀವು ಇಷ್ಟು ದಿನ ಪ್ರತಿಯೊಂದು ವಿಷಯಕ್ಕೆ ಅವರನ್ನು ಡಿಪೆಂಡ್ ಆಗಿರಬಹುದು, ಆದರೆ ಬ್ರೇಕಪ್ ಬಳಿಕ ಡಿಪೆಂಡ್ ಆಗಬೇಡಿ, ಅವರಿಂದ ಯಾವುದೇ ಸಹಾಯ ಕೇಳಬೇಡಿ. ಇದು ಪುರುಷರಿಗೆ-ಮಹಿಳೆಯರಿಗೆ ಅನ್ವಯಿಸುತ್ತದೆ, ಒಮ್ಮೆ ಒಂದು ಸಂಬಂಧ ಮುರಿದ ಮೇಲೆ ಅವರಿಂದ ಸಹಾಯ ನಿರೀಕ್ಷೆ ಮಾಡುವುದು ತಪ್ಪು, ಇದರಿಂದ ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಹಾಳಾಗುವುದು, ಅಲ್ಲದೆ ನಿಮಗೆ ಈಗ ಹೊಸ ಸಂಬಂಧವಿದ್ದರೆ ಆ ಸಂಬಂಧ ಮೇಲೂ ಕೆಟ್ಟ ಪ್ರಭಾವ ಬೀರಬಹುದು. ಹಾಗಾಗಿ ಎಕ್ಸ್ ಜೊತೆ ಎಷ್ಟು ಅಂತರ ಕಾಯ್ದುಕೊಳ್ಳುತ್ತೀರೋಅಷ್ಟು ಒಳ್ಳೆಯದು.
ಸಿಕ್ಕಾಗ ವಿಚಿತ್ರವಾಗಿ ವರ್ತಿಸಬೇಡಿ
ನಿಮ್ಮ ಎಕ್ಸ್ ಮತ್ತು ನೀವು ಬಹು ಸಮಯದ ನಂತರ ಎದುರು ಬದುರು ಸಿಕ್ಕರೆ ಅವರ ಜೊತೆ ಮಾತನಾಡಲು ಅನಿಸಿದರೆ ಮಾತನಾಡಿ, ಆದರೆ ಅವರಜೊತೆ ಮತ್ತೆ ಹಳೆಯ ವಿಷಯಗಳ ಬಗ್ಗೆ ಮಾತನಾಡುವುದು ಅಥವಾ ಹಳೆಯ ವಿಷಯ ಹೇಳಿ ಅವರಿಗೆ ಮುಜುಗರ ಉಂಟು ಮಾಡುವುದು, ಬ್ಲ್ಯಾಕ್‌ಮೇಲ್ ಉಂಟು ಮಾಡುವುದು ಮಾಡಬೇಡಿ. ಮಾತನಾಡದಿದ್ದರೂ ಒಕೆ, ನೀವು ಅವರಿಗೆ ಒಳಿತನ್ನೇ ಬಯಸುತ್ತಿದ್ದರೆ ಅದು ನಿಮ್ಮ ಒಳ್ಳೆಯತನ, ಆದರೆ ಮತ್ತೆ ಕ್ಲೋಸ್ ಆಗಿ ಮಾತನಾಡಬೇಡಿ.
ಕೋಪಗೊಳ್ಳುವುದು, ಅಳುವುದು ಅಂತ ವಿಚಿತ್ರವಾಗಿ ವರ್ತಿಸಬೇಡಿ: ಅವರನ್ನು ಕಂಡಾಗ ಹಳೆಯ ನೆನಪುಗಳು ಮರುಕಳಿಸಬಹುದು, ಅದು ನಿಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಬಹುದು, ಆದರೆ ಅವರ ಎದುರುಗಡೆ ವಿಚಿತ್ರವಾಗಿ ವರ್ತಿಸಬೇಡಿ, ಅಕಸ್ಮಾತ್ ಸಿಕ್ಕಾಗ ಒಂದೋ ಅತ್ತ ನೋಡಲೇಬೇಡಿ, ಇಲ್ಲ ನಕ್ಕು ಸುಮ್ಮನಾಗಿ, ಅವರಿಂದ ನೀವೇ ದೂರ ಆಗಿರಬಹುದು ಅಥವಾ ಅವರೇ ನಿಮ್ಮಿಂದ ದೂರಾಗಿರಬಹುದು, ಆದರೆ ಅವರು ನಿಮ್ಮ ಎಕ್ಸ್ ಈಗ ಅಷ್ಟೇ... ಅಷ್ಟೇ ಸ್ಥಾನ ನೀಡಿದರೆ ಸಾಕು.
ಅವರ ಬಗ್ಗೆ ಕೆಟ್ಟದಾಗಿ ಹೇಳಬೇಡಿ
ಅವರಿಂದ ನಿಮಗೆ ಮೋಸವಾಗಿರಬಹುದು, ನೋವಾಗಿರಬಹುದು, ಆದರೆ ಒಮ್ಮೆ ಬೇರ್ಪಟ್ಟ ಮೇಲೆ ಸಿಕ್ಕಿದ ಕಡೆಯೆಲ್ಲಾ ಅವರ ಬಗ್ಗೆ ಕೆಟ್ಟ ಮಾತಿಗಳನ್ನಾಡುತ್ತಾ ಬರಬೇಡಿ, ಇದು ನಿಮ್ಮ ವ್ಯಕ್ತಿತ್ವ ಕಡಿಮೆ ಮಾಡುತ್ತದೆ, ಅವರ ಬಗ್ಗೆ ಹೇಳಿ, ಆ ನೋವುಗಳನ್ನು ಮೆಲುಕು ಹಾಕುವ ಬದಲಿಗೆ ಅವರನ್ನು ನಿಮ್ಮ ಬದುಕು, ಆಲೋಚನೆಯಿಂದ ಡಿಲೀಟ್ ಮಾಡಿ ನಿಮ್ಮ ಬದುಕಿನ ಬಗ್ಗೆ ಮಾತ್ರ ಆಲೋಚಿಸಿ ಬದುಕುವುದು ಜಾಣತನ...



Click it and Unblock the Notifications











