Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ತಾಳಿ ಕಟ್ಟುವ ವೇಳೆ ಹುಡುಗ ಬೇಡವೆಂದ ವಧು: ಹೆಣ್ಮಕ್ಕಳೇ ಮದುವೆ ವಿಷಯದಲ್ಲಿ ಈ ತಪ್ಪು ಮಾಡಲೇಬೇಡಿ
ಸಿನಿಮಾದಲ್ಲಿ ಹೀರೋ ಹೀರೋಯಿನ್ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿರುತ್ತಾರೆ. ಹುಡುಗಿಯ ಮದುವೆ ಬೇರೆಯವರ ಜೊತೆ ಮಾಡಲು ಮನೆಯವರು ತಯಾರಿಸ ಮಾಡುತ್ತಿರುತ್ತಾರೆ, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹೀರೋ ಬಂದು ತಾಳಿ ಕಟ್ಟುತ್ತಾನೆ, ವೂಕ್ಷಕರಾದ ನಮಗೆ ಖುಷಿಯೋ ಖುಷಿ ಸದ್ಯ ಅವರಿಬ್ಬರು ಒಂದಾದರು ಎಂಬ ಖುಷಿಯಲ್ಲಿ ಚಪ್ಪಾಳೆ ತಟ್ಟುತ್ತೇವೆ, ಆದರೆ ಇಂಥ ದೃಶ್ಯಗಳು ಸಿನಿಮಾಕಷ್ಟೇ ಸೀಮಿತವಾಗಿದ್ದರೆ ಚೆನ್ನಾ.... ಆದರೆ ನಿಜ ಜೀವನದಲ್ಲಿ ಆದರೆ ಅದರಿಂದಾಗುವ ನಷ್ಟ, ಅವಮಾನ ಅಷ್ಟಿಷ್ಟಲ್ಲ, ಆದ್ದರಿಂದ ಸಿನಿಮಾ ಬದುಕು ಆಗಲ್ಲ ಎಂಬವುದನ್ನು ಮುಖ್ಯವಾಗಿ ಹೆಣ್ಮಕ್ಕಳು ಅರ್ಥ ಮಾಡಿಕೊಳ್ಖಬೇಕಾಗಿದೆ.

ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದುರ್ಗದಲ್ಲಿ ಆದ ಮದುವೆ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಆ ಸೀನ್ ನೋಡುವಾಗ ಯಾರಿಗಾದರೂ ಆ ಹುಡುಗಿ ಬಗ್ಗೆ ಕೋಪ ಬರುವುದು ಸಹಜ. ಹುಡುಗನ ಕೈಯಲ್ಲಿ ತಾಳಿಯಿದೆ. ವಾದ್ಯಗಳು ಮೊಳಗುತ್ತಿವೆ, ಮಂತ್ರಗಳನ್ನು ಪಠಿಸುತ್ತಿದ್ದಾರೆ, ಹುಡುಗನ ಕೈಯಲ್ಲಿ ತಾಳಿ ಕೊಟ್ಟು ಕಟ್ಟುವಂತೆ ಹಿರಿಯರು ಸೂಚಿಸಿದಾಗ ಹುಡುಗ ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಹುಡುಗಿ ತಾಳಿ ಕಟ್ಟಬೇಡ ಎಂದು ಹುಡುಗನ ಕೈಯನ್ನು ತಳ್ಳುತ್ತಾಳೆ. ಮನೆಯವರು ಒಪ್ಪಿಸಲು ಪ್ರಯತ್ನಿಸುತ್ತಾರೆ, ಅವಳು ಒಪ್ಪುತ್ತಿಲ್ಲ, ಹುಡುಗ ಕೈಯಲ್ಲಿ ತಾಳಿ ಹಿಡಿದು ಕಕ್ಕಾಬಿಕ್ಕಿಯಾಗಿ ನಿಂತಿದ್ದಾನೆ. ಅವನನ್ನು ನೋಡಿದಾ ಅಯ್ಯೋ ಪಾಪ ಅಂತ ಎಂದನಿಸದೆ ಇರಲ್ಲ.
ಹೆಣ್ಮಕ್ಕಳೇ ಈ ದೊಡ್ಡ ತಪ್ಪು ಮಾಡಲೇಬೇಡಿ
ಕೆಲವು ತಿಂಗಳ ಹಿಂದೆ ಕೂಡ ಒಂದು ಹುಡುಗಿ ಮದುವೆ ದಿನ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿ ರಂಪಾಟ ಮಾಡಿ ನಂತರ ಪೊಲೀಸರು ಬಂದು ಅವಳನ್ನು ಅವಳು ಪ್ರೀತಿಸುತ್ತಿರುವ ಹುಡುಗನ ಜೊತೆಗೆ ಮದುವೆ ಮಾಡಿಸಿದ್ದರು. ಈ ಚಿತ್ರದುರ್ಗದ ಹುಡುಗಿ ಯಾವ ಕಾರಣಕ್ಕೆ ಮದುವೆ ಬೇಡ ಎಂದಳು ಎಂಬುವುದಕ್ಕೆ ಇನ್ನೂ ಕಾರಣ ಗೊತ್ತಿಲ್ಲ. ಹುಡುಗ ಮದುವೆ ಮಂಟಪಕ್ಕೆ ಕುಡಿದು ಬಂದಿದ್ದಕ್ಕೆ ಮದುವೆ ಬೇಡ ಎಂದು ಹುಡುಗಿ ಹೊರನಡೆದಾಗ ಅವಳ ನಡೆಯನ್ನು ಎಲ್ಲರೂ ಹೊಗಳಿದ್ದರು. ಮದುವೆ ದಿನವೇ ಕುಡಿದು ಬರುವವನ ಕಟ್ಟಿಕೊಂಡರೆ ಮುಂದೆ ಅವಳ ಬದುಕು ನರಕ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಯಾವುದೇ ತಪ್ಪು ಮಾಡದೆ ಇರುವ ಹುಡುಗನಿಗೆ ಈ ರೀತಿಯ ಶಿಕ್ಷೆಯಾದರೆ ಅದನ್ನು ನೋಡುವಾಗ ಹೆಣ್ಮಕ್ಕಳು ಏಕೆ ಹೀಗೆ ವರ್ತಿಸುತ್ತಾರೆ ಎಂದನಿಸುವುದು.
ಮದುವೆ ಮಂಟಪಕ್ಕೆ ಬಂದು ಹುಡುಗನ್ನು ತಿರಸ್ಕರಿಸುವ ಮುನ್ನ ಮೊದಲೇ ಬೇಡ ಅನ್ನಿ
ಮದುವೆ ಮಂಟಪಕ್ಕೆ ಬಂದು ಅಥವಾ ಮದುವೆಯಾಗಿ ನನಗೆ ನೀನು ಬೇಡ, ನನಗೆ ನಿನ್ನ ಇಷ್ಟವಿಲ್ಲ ಎಂದು ಹೇಳುವ ಬದಲಿಗೆ ಮೊದಲೇ ಹೇಳಿ. ಒಂದು ವೇಳೆ ನಾನು ಈ ಮದುವೆ ಇಷ್ಟವಿಲ್ಲ ಎಂದರೆ ಅಪ್ಪ-ಅಮ್ಮ ಹೊಡೆದರೆ ಅಥವಾ ಅವರೇ ಏನಾದರೂ ಮಾಡಿಕೊಂಡರೆ ಎಂಬ ನಭಯ ನಿಮ್ಮಲ್ಲಿ ಇದ್ದರೆ ಮದುವೆ ಮಂಟಪದಲ್ಲಿ ಬೇಡ ಎಂದಾಗ ಅದರ ಪರಿಣಾಮ ನೀವು ಊಹಿಸಿದ್ದಕ್ಕಿಂತಲೂ 100 ಪಟ್ಟು ಅಧಿಕವಿರುತ್ತದೆ.
ನೆರೆದವರ ಮುಂದೆ ತಂದೆ-ತಾಯಿ ಅವಮಾನದಿಂದ ತಲೆತಗ್ಗಿಸಬೇಕಾಗುವುದು
ನೀವು ಇಷ್ಟಪಟ್ಟವರ ಜೊತೆ ಹೋದವರಿಗೆ ಮನೆಯವರಿಗೆ ಬೇಸರವಾಗುತ್ತೆ, ಅವಮಾನವಾಗುತ್ತೆ ಎಲ್ಲವೂ ನಿಜ, ಆದರೆ ನೂರಾರು ಜನರ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಾಗಿಲ್ಲ, ನೆರೆದವರ ಕಟು ಮಾತುಗಳನ್ನು ಕೇಳಬೇಕಾಗಿಲ್ಲ, ಗಂಡಿನ ಕಡೆಯವರ ಮುಂದೆ ನಮ್ಮ ಮಗಳ ಕೃತ್ಯಕ್ಕೆ ಕ್ಷಮಿಸಿ ಎಂದು ಯಾಚಿಸಬೇಕಾಗಿಲ್ಲ. ಅದೇ ,ದುವೆ ಮಂಟಪದಲ್ಲಿ ಹೇಳಿದರೆ ಇದರಿಂದ ಒಬ್ಬ ಯುವಕನ ಮನಸ್ಸು ಒಡೆಯುವುದು ಮಾತ್ರವಲ್ಲ, ಅವರ ಮನೆಯವರ ನಿಮ್ಮ ಮನೆಯವರ ಎಲ್ಲರ ಮನಸ್ಸು ಒಡೆದು ಹೋಗುತ್ತದೆ, ಅವರ ಮುಂದೆ ಯಾವ ಅಪರಾಧಿಗಿಂತಲೂ ಕಡಿಮೆ ಇರಲ್ಲ.
ಮದುವೆಗೆ ಇಷ್ಟವಿಲ್ಲದಿದ್ದರೆ ಮನೆಯವರಿಗೆ ತಿಳಿಸಿ
ನೀವು ಆ ಹುಡುಗನನ್ನು ಮದುವೆಯಾಗಲು ಇಷ್ಟಪಡುತ್ತಿದ್ದರೆ ಅದನ್ನು ಮನೆಯವರಿಗೆ ಹೇಳಿ, ಒಂದು ವೇಳೆ ನೀವು ಒತ್ತಾಯದಿಂದ ಮದುವೆ ಮಾಡಿದರೆ ಮದುವೆ ಮಂಟಪದಲ್ಲಿಯೇ ಬೇಡ ಅಂತೀನಿ ಅನ್ನಿ ಅದು ತಪ್ಪಲ್ಲ, ಆದರೆ ಮದುವೆ ಮಂಟಪಕ್ಕೆ ಬಂದ ಮೇಲೆ ತಪ್ಪಿಯೂ ಹೇಳಬೇಡಿ. ನೀವು ಮದುವೆಯನ್ನು ಖಡಾಖಂಡಿತವಾಗಿ ತಿರಸ್ಕರಿಸಿದರೆ ಪೋಷಕರು ನಿಮ್ಮನ್ನು ಎಳೆದು ಕರೆದುಕೊಂಡು ಹೋಗಿ ಮದುವೆ ಮಾಡಲ್ಲ, ಒತ್ತಾಯ ಮಾಡಿದರೆ ನಮ್ಮ ಮಾನ ಮರ್ಯಾದೆ ಹೋಗಬಹುದು ಎಂದು ಅವರು ನಿಮ್ಮನ್ನು ಒತ್ತಾಯ ಮಾಡಲ್ಲ.
ಹುಡುಗಿಯ ಒಪ್ಪಿಗೆ ಕೇಳಿ
ಕೆಲ ಹುಡುಗಿಯರು ಇಲ್ಲಿಯೂ ಮೋಸ ಮಾಡುತ್ತಾರೆ, ಮದುವೆಗೆ ಒಪ್ಪಿಗೆ ಇದೆಯೇ ಎಂದು ಕೇಳಿದರೆ ಹೌದು ಅಂತಾರೆ, ನಂತರ ಈ ರೀತಿ ಮಾಡುತ್ತಾರೆ. ನೀವು ಅವಳಿಗೆ ಒಪ್ಪೊಗೆ ಇದ್ದರೆ ಅವಳ ವರ್ತನೆಯಲ್ಲಿ ಆ ಖುಷಿ ಕಾಣಬಹುದು, ಈ ನಡುವೆ ಒಂದು ಚಿಕ್ಕ ರೆಡ್‌ಫ್ಲ್ಯಾಗ್ ಕಂಡರೂ ಅವಳಿಂದ ಸ್ಪಷ್ಟನೆ ಪಡೆಯದೆ ಮದುವೆ ತಯಾರಿ ಮಾಡಲು ಹೋಗಬೇಡಿ.
ಪೋಷಕರೇ ಮಗಳಿಗೆ ಒಪ್ಪಿಗೆ ಇದೆಯೇ ಕೇಳಿ?
ನಿನ್ನ ಮದುವೆ ನಿನ್ನ ಆಯ್ಕೆ, ಈ ಮದುವೆಗೆ ನಮ್ಮ ಒತ್ತಾಯವಿಲ್ಲ, ನಿನಗೆ ಒಪ್ಪಿಗೆ ಇದ್ದರಷ್ಟೇ ಆಗು, ಮದುವೆ ದಿನ ಅಥವಾ ಮದುವೆಯಾದ ಮೇಲೆ ಅವನನ್ನು ಇಷ್ಟವಿಲ್ಲ ಎಂದು ಹೇಳಿ ನಮ್ಮ ಮಾನ ಮರ್ಯಾದೆ ಕಳೆಯಬೇಡ ಎಂದು ಹೇಳಿ, ಆವಾಗ ಅವಳು ತನ್ನ ನಿಲುವು ಖಂಡಿತ ತಿಳಿಸುತ್ತಾಳೆ, ಅವಳಿಗೆ ಒಪ್ಪಿಗೆ ಇಲ್ಲದಿದ್ದರೆ ಮನವೊಲಿಸಿ ಮದುವೆ ಪ್ರಯತ್ನ ಮಾಡಲೇಬೇಡಿ.



Click it and Unblock the Notifications











