Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಾಣಕ್ಯ ಪ್ರಕಾರ ಈ 6 ಬಗೆಯ ಹೆಣ್ಣನ್ನು ಮದುವೆಯಾಗಲೇಬಾರದು, ಆದರೆ ಅವನ ಬದುಕಾಗುವುದು ನರಕ
ಚಾಣಕ್ಯ ಅಂದು ಹೇಳಿರುವ ಮಾತುಗಳು ಇಂದಿಗೂ ಪ್ರಸ್ತುತ, ಎಂದೆಂದಿಗೂ ಸತ್ಯಕ್ಕೆ ಹತ್ತಿರ, ಹಾಗಾಗಿಯೇ ಚಾಣಕ್ಯನ ಮಾತುಗಳಿಗೆ ಇಂದಿಗೂ ಅಷ್ಟೊಂದು ಮಹತ್ವ ನೀಡಲಾಗಿದೆ. ಕೆಲವೊಂದು ವಿಚಾರಗಳಲ್ಲಿ ನಾವು ಅದು ಆ ಕಾಲದ ಮಾತು ಈ ಕಾಲಕ್ಕೆ ಸೂಟ್ ಆಗಲ್ಲ ಅಂತೀವಿ, ಆದರೆ ಚಾಣಕ್ಯನ ಮಾತುಗಳನ್ನು ಆ ರೀತಿ ತಳ್ಳಿ ಹಾಕುವಂತೆ ಇಲ್ಲ. ಚಾಣಕ್ಯ ಬರಿ ಹಣದ ಬಗ್ಗೆ ಹೇಳಿಲ್ಲ, ಕುಟುಂಬ ಬದುಕಿನ ಬಗ್ಗೆ ಕೂಡ ಹೇಳಿದ್ದಾರೆ.
ಇಲ್ಲಿ ಚಾಣಕ್ಯ ಹುಡುಗನಿಗೆ ಎಂಥ ಹುಡುಗಿಯನ್ನು ಮದುವೆ ಮಾಡಿ ತರಬಾರದು ಎಂದು ಹೇಳಿದ್ದಾರೆ:

ಸುಂದರಿ ಆದರೆ ಬುದ್ದಿವಂತೆಯಲ್ಲ
ಹೆಣ್ಣಿಗೆ ಬರಿ ಸೌಂದರ್ಯವಿದ್ದರೆ ಸಾಕು ಎಂಬುವುದು ತಪ್ಪು ಕಲ್ಪನೆ, ಅವರನ್ನು ನೋಡಿದ ತಕ್ಷಣ ಅಕರ್ಷಕ ಅನಿಸಬಹುದು, ಆದರೆ ಅಂಥವರನ್ನು ಮದುವೆಯಾದರೆ ಆತ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಸಾಮಾನ್ಯ ಜ್ಞಾನ ಇಲ್ಲದವರನ್ನು ಮದುವೆಯಾದರೆ ಅವರ ಜೊತೆ ಸಂಸಾರ ನಡೆಸುವುದು ಕಷ್ಟ, ಹೆಣ್ಣಿಗೆ ಸೌಂದರ್ಯ ಮಾತ್ರ ಸಾಲದು ಬುದ್ಧಿವಂತಿಕೆಯೂ ಇರಬೇಕಾಗುತ್ತದೆ.
ಸುಳ್ಳು ಹೇಳುವವಳು
ಅವಳು ತುಂಬಾನೇ ಅಪಾಯ,ತನ್ನ ಸ್ವಾರ್ಥ ಸಾಧನೆಗಾಗಿ ಸದಾ ಸುಳ್ಳು ಹೇಳುತ್ತಾಳೆ. ಅವಳ ಹೇಳುವ ಸುಳ್ಳು ನಿಮಗೆ ಸಂಕಷ್ಟ ತರಬಹುದು. ಅಲ್ಲದೆ ಅವಳು ತುಂಬಾನೇ ಸುಳ್ಳು ಹೇಳುತ್ತಿದ್ದಾಳೆ ಎಂದು ಗೊತ್ತಾದರೆ ಅವಳ ಮೇಲೆ ನಂಬಿಕೆ ಬರಲ್ಲ, ಹಾಗಾಗಿ ತುಂಬಾ ಸುಳ್ಳು ಹೇಳುವ ಹೆಣ್ಣನ್ನು ಕೂಡ ಮದುವೆಯಾಗಲೇಬಾರದು.
ಮನೆತನ ನೋಡಬೇಕು
ಮನೆತನ ಎಂದರೆ ಅವರು ಎಷ್ಟು ಶ್ರೀಮಂತರು ಎಂದು ನೋಡುವುದಲ್ಲ, ಅವರ ಮನೆಯವರ ಸ್ವಭಾವ ತಿಳಿಯಬೇಕು, ಆ ಊರಿನವರಿಗೆ ಅವರ ಬಗ್ಗೆ ಗೊತ್ತಿರುತ್ತದೆ,ಅದನ್ನು ವಿಚಾರಿಸಿ ಹೆಣ್ಣು ತರಬೇಕು. ಒಳ್ಳೆಯ ಮನೆತನದ ಹುಡುಗಿ ಬಂದರೆ ಬಂದ ಮನೆಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವುದು ಗೊತ್ತಿರುತ್ತದೆ. ಅದೇ ಅವಳ ಕುಟುಂಬದ ಬಗ್ಗೆ ಒಳ್ಳೆಯ ಹೆಸರಿಲ್ಲ ಎಂದಾದರೆ ಮದುವೆಯಾಗಿ ಬಂದ ಮನೆಗೆ ಆ ಹೆಣ್ಣು ಮಗಳು ದೊಡ್ಡ ತಲೆನೋವಾಗಬಹುದು.ಅಲ್ಲದೆ ಅವಳ ವಿಷಯಕ್ಕೆ ಅವಳ ಮನೆಯವರು ಬಂದು ಕೂಡ ಅವಮಾನ ಮಾಡುತ್ತಾರೆ.
ದುಷ್ಟೆ
ಕ್ರೂರಿ ಹೆಣ್ಣು ಏನು ಬೇಕಾದರೂ ಮಾಡುತ್ತಾಳೆ, ಅವಳಿಗೆ ಕನಿಕರ, ಮಮತೆ ಎಂಬುವುದು ಇರಲ್ಲ, ಅಂಥವರನ್ನು ಕೂಡ ಮದುವೆಯಾಗಲೇ ಬಾರದು, ಒಂದು ವೇಳೆ ಆದರೆ ಅಲ್ಲಿಗೆ ನಿಮ್ಮ ಬದುಕು ತುಂಬಾ ಕಷ್ಟವಾಗುತ್ತೆ ಎಂದು ಹೇಳಿದ್ದಾರೆ ಚಾಣಕ್ಯ. ಮಮತೆಯೇ ಹೆಣ್ಣಿನ ಗುಣ, ಅದೇ ರಾಕ್ಷಸಿಯಾದರೆ?
ಕೆಟ್ಟ ನಡತೆಯವಳು
ಕೆಟ್ಟ ನಡತೆಯವಳನ್ನು ಮದುವೆಯಾದರೆ ನಿಯತ್ತಿನಿಂದ ಇರಲ್ಲ, ಅವಳಿಂದ ನಿಮಗೂ, ನಿಮ್ಮ ಮನೆತನಕ್ಕೆ ಕೆಟ್ಟ ಹೆಸರು. ಅಲ್ಲದೆ ಅವಳು ತನ್ನ ಕೆಟ್ಟ ನಡತೆಯಿಂದ ದೊಡ್ಡ ತಲೆ ನೋವಾಗುತ್ತಾಳೆ, ಹಾಗಾಗಿ ಅಂಥವರನ್ನೂ ಮದುವೆಯಾಗಬಾರದು. ಇವಳು ಬಟ್ಟೆ ಬದಲಾಯಿಸಿದಂತೆ ವ್ಯಕ್ತಿಯನ್ನು ಬದಲಾಯಿಸುತ್ತಾಳೆ, ನೀವೇ ಎಷ್ಟೆ ಬುದ್ಧಿ ಹೇಳಿದರೂ ಇವಳ ಕಿವಿಗೆ ಬೀಳಲ್ಲ, ಇವಳಿಂದಾಗಿ ನೀವು ತಲೆತಗ್ಗಿಸಬೇಕಾಗುತ್ತದೆ.
ಮನೆಯ ಕೆಲಸ ಮಾಡದವಳು
ಹೆಣ್ಣೆಂದರೆ ಮನೆ ಕೆಲಸ ಮಾಡುವುದಕ್ಕಾ ಎಂಬ ವಾದ ತುಂಬಾ ಜನ ಮಾಡುತ್ತಾರೆ. ಆದರೆ ತುಂಬಾ ದೊಡ್ಡ ಹುದ್ದೆಯಲ್ಲಿರುವ ಹೆಣ್ಮಕ್ಕಳನ್ನು ನೋಡಿ ಮನೆಯ ಜವಾಬ್ದಾರಿಯನ್ನೂ ನಿಭಾಯಿಸುತ್ತಿರುತ್ತಾರೆ, ಸಮಯ ಸಿಕ್ಕಾಗ ಮನೆ ಕೆಲಸ ಮಾಡುತ್ತಾರೆ. ಮನೆ ಕೆಲಸ ಮಾಡುವುದು ಎಂದರೆ ಎಲ್ಲಾ ನೀವೇ ಮಾಡುವುದು ಎಂಬುವುದು ಈ ಕಾಲಕ್ಕೆ ಎಲ್ಲರಿಗೆ ಸೂಕ್ತವಲ್ಲ, ಆದರೆ ಒಂದು ಮನೆಯಾದರೆ ಹೇಗಿರಬೇಕು, ಹೇಗಿಡಬೇಕು ಎಂಬ ಕಲ್ಪನೆ ಅವಳಲ್ಲಿ ಇರಬೇಕಾಗುತ್ತದೆ, ಅಂದರೆ ಮಾತ್ರ ಾದು ಮನೆಯಾಗಿರುವುದು.



Click it and Unblock the Notifications











