Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ವಿಚ್ಛೇದನ ಬಳಿಕ ಸುದ್ದಿಗೋಷ್ಠಿಯಲ್ಲಿ ಅಚ್ಚರಿ ಮೂಡಿಸಿದ ಚಂದನ್ ಹೇಳಿದ ಆ ಒಂದು ಮಾತು
ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಎಂದು ಕರೆಸಿಕೊಂಡಿದ್ದ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ತೆಗೆದುಕೊಂಡಿದ್ದಾರೆ ಎಂಬ ಸುದ್ದಿಯೇ ಹಲವರಿಗೆ ಅಚ್ಚರಿ ಉಂಟು ಮಾಡಿತ್ತು, ನೆನ್ನೆ-ಮೊನ್ನೆ ಕೈ-ಕೈ ಹಿಡಿದು ಓಡಾಡುತ್ತಿದ್ದ ವ್ಯಕ್ತಿಗಳಿಬ್ಬರು ಬೇರೆಯಾದರು ಎಂದರೆ ನಂಬಲು ಕಷ್ಟನೇ ಎಂದು ಜನರು ಮಾತನಾಡಿಕೊಂಡಿದ್ದರು.
ಏಕೆಂದರೆ ಸಾಮಾನ್ಯವಾಗಿ ಈ ರೀತಿ ವಿಚ್ಛೇದನವಾದಾಗ ಗಂಡ-ಹೆಂಡತಿ ಪರಸ್ಪರ ಮುಖ ಕೂಡ ನೋಡಲು ಇಷ್ಟಪಡಲ್ಲ, ಆದರೆ ಇವರಿಬ್ಬರು ಕೈ ಕೈ ಹಿಡಿದು ಹೊರಬಂದರು, ಈ ರೀತಿ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ನಾವು ಕಾಣುತ್ತೇವೆ, ಉದಾಹರಣೆ ಹೃತಿಕ್ ರೋಷನ್, ಅಮೀರ್ ಖಾನ್...

ಪತ್ರಿಕಾಗೋಷ್ಠಿಯಲ್ಲಿ ಚಂದನ್ ಆ ವಿಷಯಗಳನ್ನು ಪ್ರಸ್ತಾಪಿಸಬೇಕಾದ ಅನಿವಾರ್ಯತೆ ಬಂದಿರುವುದಕ್ಕೆ ಅಯ್ಯೋ ಅನಿಸುತ್ತೆ
ಮೊದಲೇ ವಿಚ್ಛೇದನದ ನೋವು ಆದರೆ ಈ ಜೋಡಿಯನ್ನು ಮತ್ತಷ್ಟು ಹೆಚ್ಚಾಗಿ ಕಾಡಿದ್ದು ಜನರ ಟೀಕೆ. ಅದರಲ್ಲೂ ಜನರು ಚಂದನ್ ಪರ ಸ್ವಲ್ಪ ಸಾಫ್ಟ್ ಕಾರ್ನರ್ ತೋರಿದರು, ಆದರೆ ನಿವೇದಿತಾರನನ್ನು ಕೆಟ್ಟದಾಗಿ ಬಿಂಬಿಸಲಾರಂಭಿಸಿದರು. ಕೆಲವೊಂದು ಮಾಧ್ಯಮಾಗಳು ಹಾಗೂ ಯೂಟ್ಯೂಬ್ ಚಾನಲ್‌ಗಳು ರೆಕ್ಕೆ ಪುಕ್ಕಾ ಕಟ್ಟಿ ಸ್ಟೋರಿಯನ್ನು ಮಾಡಲಾರಂಭಿಸಿದರು, ಈ ಕಾರಣದಿಂದಾಗಿ ಈ ಮಾಜಿ ಜೋಡಿ ಮತ್ತೆ ಒಂದಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಗಿದೆ.
ಟೀಕೆಗಳನ್ನು ಎದುರಿಸಲು ನಿವೇದಿತಾ ಪರವಾಗಿ ನಿಂತಿರುವ ಚಂದನ್
ನಿವೇದಿತಾಗೆ ಬೇರೆ ವ್ಯಕ್ತಿ ಜೊತೆ ಸಂಬಂಧ ಕಲ್ಪಿಸಿ ಸುದ್ದಿಗಳನ್ನು ಬಿಡಲಾಗಿತ್ತು, ಆದರೆ ಚಂದನ್ ಈ ಎಲ್ಲಾ ವಿಷಯವನ್ನು ಸಂಪೂರ್ಣ ತಳ್ಳಿ ಹಾಕಿದ್ದಾರೆ. ನಮ್ಮಿಬ್ಬರಲ್ಲಿ ಹೊಂದಾಣಿಕೆಯ ಕೊರತೆಯಿಂದ ಬೇರೆಯಾದೆವು ಹೊರತು ಮತ್ಯಾವುದು ಅಲ್ಲ ಎಂಬುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಿವೇದಿತಾ ಗೌಡ ಜೀವನಂಶವಾಗಿ ನನ್ನಿಂದ ಒಂದು ರುಪಾಯಿ ಪಡೆದಿಲ್ಲ, ನಾನು ಕೊಟ್ಟಿಲ್ಲ ಎಂಬುವುದನ್ನೂ ಸ್ಪಷ್ಟಪಡಿಸಿದ್ದಾರೆ. ಅವರ ವೈಯಕ್ತಿಕ ವಿಚಾರ, ಆದರೆ ಎಲ್ಲವನ್ನು ಪಬ್ಲಿಕ್ ಮುಮದೆ ಹೇಳಿಕೊಳ್ಳುತ್ತಿದ್ದ ಆ ಜೋಡಿ ಕೊನೆಗೆ ವಿಚ್ಛೇದನದ ಕಾರಣವನ್ನೂ ಈ ರೀತಿ ವಿವರಿಸಬೇಕಾದ ಪರಿಸ್ಥಿತಿ ಬಂದಿರುವುದು ನೋಡುವಾಗ ಅಯ್ಯೋ ಅನಿಸುತ್ತೆ..
ವಿಚ್ಛೇದನಕ್ಕೆ ಚಂದನ್ ಹೇಳಿದ ಆ ಒಂದು ವಿಷಯ ಮಾತ್ರ ನಿಜವಾಗಲೂ ಅಚ್ಚರಿ ಮೂಡಿಸುತ್ತೆ
ಚಂದನ್ ನಾವು ಏಕೆ ವಿಚ್ಛೇದನ ತೆಗೆದುಕೊಂಡ್ವಿ ಎಂಬುವುದರ ಕಾರಣ ಕೊಡುತ್ತಾ ಹೋದರು, ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲೇ ಇಲ್ಲ ಹಾಗಾಗಿ ಇಬ್ಬರು ಬೇರೆಯಾದೆವು ಎಂದು ಹೆಳಿದರು, ನಿವೇದಿತಾ ಕೂಡ ಇದೇ ಮಾತನ್ನು ಹೇಳಿದರು, ಆದರೆ ಚಂದನ್ ಒಂದು ವಿಷಯವನ್ನು ಹೇಳುತ್ತಾರೆ ಅದೇ ನಮ್ಮಿಬ್ಬರಲ್ಲಿ ವರ್ಷಗಳಿಂದ ಹೊಂದಾಣಿಕೆ ಇರಲಿಲ್ಲ.
ಎಲ್ಲರೂ ಇತ್ತೀಚೆಗೆ ಇವರ ನಡುವೆ ಭಿನ್ನಾಭಿಪ್ರಾಯ ಆಯ್ತು ಎಂದರೆ ಚಂದನ್ ಇಲ್ಲ ಮೊದಲಿನಿಂದಲೂ ಹೊಂದಾಣಿಕೆ ಸಮಸ್ಯೆ ಇತ್ತು ಎಂದು ಹೇಳಿದ್ದಾರೆ. ಇದು ಮಾತ್ರ ಅಚ್ಚರಿಯ ಸಂಗತಿಯೇ, ತುಂಬಾ ವರ್ಷಗಳಿಂದ ಎಂದರೆ ಅವರು ಮದುವೆಯಾಗಿ ತುಂಬಾ ವರ್ಷಗಳೇನು ಆಗಿಲ್ಲ, ಜಸ್ಟ್ 4 ವರ್ಷ ಅಷ್ಟೆ... ಆ ವರ್ಷವೂ ಹೊಂದಾಣಿಕೆ ಮಾಡಿಕೊಳ್ಳಲು ಇಬ್ಬರಿಗೂ ಕಷ್ಟವಾಗಿತ್ತು ಎಂಬುವುದನ್ನು ಒಪ್ಪಿಕೊಂಡಿದ್ದಾರೆ.
ಚಂದನ್ ಹೇಳಿದ ಆ ಸತ್ಯ
ಬಣ್ಣದ ಲೋಕದಲ್ಲಿ ನಾವು ಕಂಡಿದ್ದೆಲ್ಲಾ ನಿಜವಲ್ಲ ಎಂಬುವುದಕ್ಕೆ ಮತ್ತೊಂದು ಉದಾಹರಣೆ ಈ ಜೊಡಿ
ಇವರನ್ನು ನೋಡಿದಾಗ ಜೋಡಿ ಅಂದರೆ ಹೀಗಿರಬೇಕು ಎನ್ನುವಷ್ಟರಮಟ್ಟಿಗೆ ತಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಂಬಿಸಿಕೊಂಡಿದ್ದರು. ರೊಮ್ಯಾಂಟಿಕ್ ಪೋಸ್ಟ್‌ಗಳನ್ನು ಹಾಕುತ್ತಾ ನಮ್ಮ ಸಂಸಾರ ಹಾಲು-ಜೇನು ಎಂಬುವುದನ್ನು ತೋರಿಸಿಕೊಳ್ಳುತ್ತಿದ್ದರು, ತಮ್ಮ ಪ್ರೀತಿಯನ್ನು ತುಂಬಾನೇ ಲಕ್ಷುರಿಯಾಗಿ ಬಿಂಬಿಸಿಕೊಳ್ಳುತ್ತಿದ್ದರು, ಆದರೆ ಅದೆಲ್ಲವೂ ಬರೀ ತೋರ್ಪಡಿಕೆಯಷ್ಟೇ ಆಗಿತ್ತು ಎಂಬುವುದು ಇಂದು ಚಂದನ್ ಮಾತಿನಿಂದ ಸ್ಪಷ್ಟವಾಗಿದೆ.
ಯಾರನ್ನೂ ಆದರ್ಶವಾಗಿ ತೆಗೆದುಕೊಳ್ಳಬೇಡಿ, ನಿಮ್ಮ ಬದುಕಿಗೆ ನೀವೇ ಆದರ್ಶವಾಗಿ
ಈ ಜೋಡಿಯನ್ನು ನೋಡಿ ಎಷ್ಟೋ ಜನ ತಮ್ಮ ಬದುಕನ್ನು ಹೋಲಿಸಿಕೊಂಡಿದ್ದೂ ಇದೆ,ಅವರೆಷ್ಟು ಹೊಂದಾಣಿಕೆಯಿಂದ ಇದ್ದಾರೆ, ಚಂದನ್ ನಿವೇದಿತಾಗೆ ಎಷ್ಟೊಂದು ಫ್ರೀಡಂ ಕೊಡ್ತಾರೆ, ನಿವೇದಿತಾ ಚಂದನ್ ಎಷ್ಟೊಂದು ಪ್ರೀತಿಯಿಂದ ಇದ್ದಾರೆ ಆದರೆ ನಮ್ಮ ಪ್ರೀತಿ ಈ ರೀತಿ ಇಲ್ಲ ಎಂದು ಊಹಿಸಿಕೊಂಡವರೂ ಇನ್ನಾದರೂ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು ನಿಮ್ಮ ಬದುಕನ್ನು ಖಂಡಿತ ಬೇರೆಯವರ ಜೊತೆಗೆ ಹೋಲಿಕೆ ಮಾಡಲೇಬೇಡಿ ನಿಮ್ಮ ಬದುಕು ನಿಮ್ಮದು ಅವರ ಬದುಕು ಅವರದ್ದು.... ನಿಮ್ಮ ಬದುಕು ಸುಂದರವಾಗಿಸಲು ನೀವು ಪ್ರಯತ್ನ ಹಾಕಿ ಅಷ್ಟೇ.....



Click it and Unblock the Notifications











