Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Chanakya Niti: ಪುರುಷರ ಆಕರ್ಷಿಸಲು ಮಹಿಳೆಯರಲ್ಲಿ ಈ ಗುಣವಿದ್ದರೆ ಸಾಕು..!!
ಜೀವನದ ಪ್ರತಿಯೊಂದು ಅಂಶವು ನಮ್ಮ ಗುಣಗಳಿಂದ ಪ್ರೇರಿತವಾಗಿರುತ್ತದೆ ಎಂಬುದನ್ನು ತಿಳಿಸಿರುವ ಆಚಾರ್ಯ ಚಾಣಕ್ಯರು ಮಾನವನ ಜೀವನ ಕುರಿತಂತೆ ಹಲವು ರೀತಿ ನಿಯಮಗಳ ಹೇಳಿದ್ದಾರೆ. ಚಾಣಕ್ಯ ನೀಡಿದ ಸೂತ್ರಗಳನ್ನು ಇಂದಿಗೂ ಜನರು ಪಾಲಿಸುವುದು ನಾವು ನೋಡಬಹುದು. ಬಾಲ್ಯ, ದಾಂಪತ್ಯ, ವೃದ್ಧಾಪ್ಯ ಸಂಬಂಧ ಚಾಣಕ್ಯ ಹೇಳಿರುವ ಒಂದೊಂದು ನೀತಿಗಳು ಕೂಡ ಅತ್ಯಂತ ಪ್ರಭಾವಶಾಲಿಯಾಗಿವೆ.
ಹಾಗೆ ಪ್ರೀತಿ, ಸಂಬಂಧ ಎಲ್ಲಾ ವಿಚಾರಗಳನ್ನು ಚಾಣಕ್ಯ ಶತಮಾನದ ಹಿಂದೆಯೇ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ಮಾನವನ ಗುಣಗಳು ಅವರ ಜೀವನ ರೂಪಿಸುತ್ತವೆಯಂತೆ. ಹಾಗಾದ್ರೆ ಚಾಣಕ್ಯ ಹೇಳಿರುವ ಈ ಸಂಬಂಧಗಳ ನೀತಿಯಲ್ಲಿ ನಾವಿಂದು ಯಾವೆಲ್ಲಾ ಅಂಶಗಳು ಮಹಿಳೆಯರಲ್ಲಿದ್ದರೆ ಪುರುಷರು ಅತ್ಯಂತ ಬೇಗ ಅವರ ಕಡೆ ಆಕರ್ಷಿತರಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಚಾಣಕ್ಯರು ಹೇಳಿರುವ ಈ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವೈಯಕ್ತಿನ ಜೀವನ ಯಶಸ್ಸಿನಿಂದ ಕೂಡಿರಲಿದೆಯಂತೆ. ಮಹಿಳೆಯರ ಯಾವ ಗುಣಗಳು ಪುರುಷರನ್ನು ಅತ್ಯಂತ ವೇಗವಾಗಿ ಆಕರ್ಷಿಸುತ್ತದೆ ಎಂಬುದನ್ನು ಕೂಡ ಹೇಳಿದ್ದಾರೆ. ಮಹಿಳೆಯರಲ್ಲಿನ ಈ ಗುಣಗಳೇ ಪುರುಷರಲ್ಲಿ ಶೀಘ್ರ ಆಕರ್ಷಣೆಗೆ ಕಾರಣವಾಗಲಿದೆಯಂತೆ. ಹಾಗಾದ್ರೆ ಆ ಗುಣಗಳು ಯಾವುದು ಎಂಬುದನ್ನು ನೋಡಿ.
ಪ್ರೀತಿ ಮತ್ತು ಕಾಳಜಿ
ಯಾವ ಮಹಿಳೆ ಪುರುಷನ ಕಡೆಗೆ ಹೆಚ್ಚು ಪ್ರೀರಿ ಹಾಗೂ ಕಾಳಜಿ ಹೊಂದಿರುತ್ತಾಳೋ ಅಂತಹ ಮಹಿಳೆಯನ್ನು ಎಂದಿಗೂ ಪುರುಷ ಬಿಟ್ಟುಕೊಡುವುದಿಲ್ಲ. ಆತ ಇಂತಹ ಗುಣಗಳ ಹೊಂದುವ ಮಹಿಳೆಯ ಜೊತೆಗೆ ಇರಲು ಬಯಸುತ್ತಾನೆ. ಮಹಿಳೆಯ ಈ ಗುಣಗಳು ಪುರುಷರನ್ನು ಬಹುಬೇಗ ಆಕರ್ಷಿಸುತ್ತದೆ. ಏಕೆಂದರೆ ಪುರುಷರು ಪ್ರೀತಿ ಹಾಗೂ ಕಾಳಜಿಗಾಗಿಯೇ ಹುಡುಕಾಡುತ್ತಿರುತ್ತಾರೆ. ಅವರಿಗೆ ಎಲ್ಲಿ ಈ ಎರಡೂ ಅಂಶಗಳು ಸಿಗುತ್ತವೆಯೋ ಆ ಮಹಿಳೆಯ ಆರಾಧಿಸುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ.
ತಾಳ್ಮೆ ಮತ್ತು ಶಾಂತ ಸ್ವಭಾವ
ಯಾವ ಮಹಿಳೆಯು ತಾಳ್ಮೆಯಿಂದ ಹಾಗೂ ಶಾಂತ ಸ್ವಭಾವ ಬೆಳೆಸಿಕೊಂಡಿರುತ್ತಾಳೋ ಅಂತವರಿಗೆ ಪುರುಷರು ಆಕರ್ಷಿತರಾಗುತ್ತಾರೆ. ಪುರುಷರು ಬಹಳಷ್ಟು ಸಮಯ ಮನೆಯಿಂದ ಹೊರಗೆ ಕಳೆಯುತ್ತಾರೆ. ಈ ಸಮಯದಲ್ಲಿ ಅವರು ಶಾಂತ ಪರಿಸ್ಥಿತಿಯನ್ನು ಹುಡುಕುತ್ತಾರೆ. ಇದು ಮಹಿಳೆಯಲ್ಲಿ ಇದೆ ಎಂದು ತಿಳಿದರೆ ಸಾಕು ಅವರಿಗೆ ಮನಸೋಲುತ್ತಾರೆ.
ಮಾತನಾಡುವ ಶೈಲಿ
ಮಹಿಳರಲ್ಲಿ ಪುರುಷರು ಹೆಚ್ಚಾಗಿ ಗಮನಿಸುವ ಅಂಶಗಳಲ್ಲಿ ಆವರು ಮಾತನಾಡುವ ಶೈಲಿ ಕೂಡ ಒಂದಾಗಿದೆ. ಮಹಿಳೆ ಮಾತನಾಡುವ ಶೈಲಿಯಲ್ಲೇ ಪುರುಷರು ಆಕರ್ಷಿತರಾಗುತ್ತಾರೆ. ಆಕೆ ಬೇರೆಯವರೊಂದಿಗೆ ಹೇಗೆ ಬೆರೆಯುತ್ತಾಳೆ, ಹೇಗೆ ಮಾತನಾಡುತ್ತಾಳೆ? ಆಕೆ ಹಾವ ಭಾವ ಯಾವ ರೀತಿ ಇದೆ ಎಂಬುದನ್ನು ಅರಿಯುತ್ತಾರೆ. ಆಕೆ ಮಾತನಾಡುವಾಗ ನಯವಾಗಿ, ಮಧುರವಾಗಿದ್ದರೆ, ನಾಜೂಕಿನಿಂದ ಕೂಡಿದ್ದರೆ ಸಾಕು ಆಕೆಗೆ ಮನಸೋಲುತ್ತಾರೆ.
ನೇರ ನುಡಿ ಮತ್ತು ಸತ್ಯ
ಯಾವ ಮಹಿಳೆ ನೇರವಾಗಿ ಮಾತನಾಡುತ್ತಾಳೋ ಹಾಗೆ ಯಾವಾಗಲು ಸತ್ಯ ಹೇಳುತ್ತೇವೆ ಎನ್ನುತ್ತಾಳೋ ಆಕೆ ಪುರುಷರನ್ನು ಬಹಳ ಬೇಗ ಆಕರ್ಷಿಸುತ್ತಾಳೆ. ಹಾಗೆ ಪುರುಷ ಕೂಡ ಆಕೆಯ ಈ ಗುಣಗಳಿಗೆ ಬೇಗ ಸೋಲುತ್ತಾನೆ. ಆಕೆ ತನ್ನೊಂದಿಗೆ ಹಾಗೆ ಬೆರೆಯವರ ಜೊತೆಗೆ ಎಷ್ಟು ನೇರವಾಗಿ ಮಾತನಾಡುತ್ತಾಳೆ ಎಂಬುದು ಕೂಡ ಪುರುಷರ ಆಕರ್ಷಿಸುವ ಅಂಶವಾಗಿದೆ.
ಪುರುಷರ ಇಷ್ಟ ತಿಳಿದಿರುವಾಕೆ
ಯಾವ ಮಹಿಳೆ ತನ್ನ ಪುರುಷನ ಇಷ್ಟಗಳನ್ನು ಅಥವಾ ಆತನ ಆಸೆಗಳ ತಿಳಿದಿರುತ್ತಾರೋ ಅವರು ಬಹುಬೇಗ ಪುರುಷನನ್ನು ಆಕರ್ಷಿಸುತ್ತಾಳೆ. ಪುರುಷರಿಗೆ ಈ ಕುರಿತು ಸುಳಿವು ಸಿಕ್ಕರೆ ಸಾಕಾಗುತ್ತದೆ. ಯಾವ ಮಹಿಳೆ ತನ್ನ ಇಷ್ಟಗಳು, ಆಸೆಗಳ ಕುರಿತು ಅರಿಯುತ್ತಾಳೋ ಆಕೆಯನ್ನ ಪುರುಷ ಹೆಚ್ಚು ನಂಬುತ್ತಾನೆ. ಇದು ಪುರುಷರ ಆಕರ್ಷಿಸುವ ಅಂಶವಾಗಿದೆ ಎಂದು ಚಾಣಕ್ಯರು ಹೇಳಿದ್ದಾರೆ.



Click it and Unblock the Notifications
