Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮದುವೆಯಾದ ಪುರುಷ ಬೇರೆಯವಳ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಬಹುದೇ? ಶಿಕ್ಷಾರ್ಹ ಅಪರಾಧವೇ
ಈ ಲಿವ್ ಇನ್ ರಿಲೇಷನ್ ಶಿಪ್ ಎಂದರೇನು? ಹೆಣ್ಣು-ಗಂಡು ಮದುವೆಯಾಗದೆ ಜೊತೆಯಲ್ಲಿ ಬಾಳುವುದು,ಇಷ್ಟ ಇದ್ದಾಗ ಜೊತೆಗೆ ಇದ್ದು ಇಬ್ಬರಿಗೆ ಆಗಿ ಬರ್ತಾ ಇಲ್ಲ ಎಂದಾಗ ಬೇರೆಯಾಗಬಹುದು. ವಿಚ್ಚೇದನ ಪಡೆಯಬೇಕಾಗಿಲ್ಲ, ಯಾವುದೇ ಜೀವನಾಂಶ ನೀಡಬೇಕಾಗಿಲ್ಲ, ಗುಡ್‌ಬೈ ಹೇಳಿ ನಡೆಯುತ್ತಿರುತ್ತಾರೆ.
ಆದರೆ ಮದುವೆಯ ಮುನ್ನ ಲಿವ್ ಇನ್ ಸಂಬಂಧದಲ್ಲಿ ಇದ್ದರೆ ಯಾವುದೇ ಕಾನೂನು ಸಮಸ್ಯೆ ಇರಲ್ಲ, ಆದರೆ ಮದುವೆಯಾದ ಮೇಲೆ ಬೇರೆಯವರ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿಇದ್ದರೆ ಅದಕ್ಕೆ ಕಾನೂನಿನಲ್ಲಿ ಒಪ್ಪಿಗೆ ಇದೆಯೇ? ಇದಕ್ಕೆ ಕೋರ್ಟ್ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ನಟ ದರ್ಶನ್‌ಗೆ ಮದುವೆಯಾಗಿದೆ, ವಿಜಯಲಕ್ಷ್ಮಿ ಅವರ ಪತ್ನಿ, ಈ ದಂಪತಿಗೆ ಒಬ್ಬ ಮಗ ಇದ್ದಾನೆ, ಇದೀಗ ಅವರು ರೇಣುಕಾ ಸ್ವಾಮಿ ಕೊಲೆಕೇಸ್‌ಗೆ ಸಂಬಂಧಿಸಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಪವಿತ್ರ ಗೌಡರ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಕೇಳಿದ್ದಾರೆ. ಇಲ್ಲಿಯೂ ದರ್ಶನ್ ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ.
ಪತ್ನಿಯಾಗಿ ವಿಜಯಲಕ್ಷ್ಮಿ ಇದ್ದಾರೆ, ಅವರ ಜೊತೆಯೇ ಬಾಳ್ವೆ ಮಾಡುತ್ತಿದ್ದಾರೆ, ವಿಚ್ಛೇದನ ನೀಡಿಲ್ಲ, ಆದರೂ ಪವಿತ್ರ ಗೌಡ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಭಾರತದ ಕಾನೂನಿನಲ್ಲಿ ಇದು ಕಾನೂನುಬಾಹಿರ.
ಭಾರತದ ಕಾನೂನು ಏನು ಹೇಳುತ್ತದೆ?
ಭಾರತದ ನೀತಿ ಸಂಹಿತೆ ಕಾಯ್ದೆ 497 ಪ್ರಕಾರ ಮದುವೆಯಾಗದೆ ಇರುವ ಹೆಣ್ಣು- ಗಂಡು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರೆ ಅದು ಕಾನೂನು ಬಾಹಿರವಲ್ಲ, ಆದರೆ ಮದುವೆಯಾಗಿ ವಿಚ್ಛೇದನ ಪಡೆಯದೆ ಬೇರೆಯವರ ಜೊತೆ ಸಂಬಂಧ ಹೊಂದಿದ್ದರೆ ಅದು ಲಿವ್ ಇನ್ ರಿಲೇಷನ್‌ಶಿಪ್ ಅಲ್ಲ, ಅಕ್ರಮ ಸಂಬಂಧ, ಇದು ಶಿಕ್ಷಾರ್ಹ ಅಪರಾಧವಾಗಿದೆ.
ಲಿವ್ ಇನ್ ರಿಲೇಷನ್‌ಶಿಪ್ ಸಂಬಂಧದ ಬಗ್ಗೆ ಭಾರತದ ಕಾನೂನು ಏನು ಹೇಳುತ್ತದೆ?
ಲಿವ್ ಇನ್ ರಿಲೇಷನ್‌ಶಿಪ್ ಭಾರತದಲ್ಲಿ ಕಾನೂನು ಬಾಹಿರ ಅಲ್ಲ, ಇದಕ್ಕೆ ಕಾನೂನಿನ ರಕ್ಷಣೆಯೂ ಇಲ್ಲ.
ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಏಕೆ ಇರ್ತಾರೆ?
ಇದಕ್ಕೆ ಕಾರಣ ಜೋಡಿ-ಜೋಡಿಯಿಂದ ಭಿನ್ನವಾಗಿರುತ್ತದೆ. ಕೆಲವರಿಗೆ ಮದುವೆ ಸಂಬಂಧದಲ್ಲಿ ನಂಬಿಕೆ ಇರಲ್ಲ, ಇನ್ನು ಕೆಲವರಿಗೆ ಈ ಕಮಿಟ್‌ಮೆಂಟ್ ಎಂಬುವುದು ಇಷ್ಟವಿರಲ್ಲ, ಇನ್ನು ಕೆಲವರು ಮದುವೆಗೆ ಮೊದಲು ಜೊತೆಗಿದ್ದು ನಮಗೆ ಹೊಂದಾಣಿಯಾಗುವುದಾದರೆ ಮಾತ್ರ ಮದುವೆಎಯಾಗುವ ಎಂಬ ಕಾರಣಕ್ಕೆ ಇರುವವರೂ ಇದ್ದಾರೆ.
ಎಷ್ಟು ವರ್ಷದವರೆಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಬಹುದು
ಲಿವ್ ಇನ್ ರಿಲೇಷನ್‌ಶಿಪ್‌ಗೆ ಇಂತಿಷ್ಟು ವರ್ಷ ಅಂತ ಇಲ್ಲ, ಅವರಿಗೆ ಇಷ್ಟವಿರುವವರೆಗೆ ಜೊತೆಯಲ್ಲಿ ಇರಬಹುದು. ಆದರೆ 18 ವರ್ಷದ ಕೆಳಗಿನವರ ಜೊತೆಗಿನ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದು.
ಮದುವೆಯಾದ ಪುರುಷ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಬಹುದೇ?
ಮದುವೆಯಾದ ಪುರುಷ ಬೇರೆ ಹೆಣ್ಣಿನ ಜೊತೆ ಸಂಬಂಧದಲ್ಲಿದ್ದರೆ ಅದು ಅಕ್ರಮ ಸಂಬಂಧ. ಅಲ್ಲದೆ ಅದು ಸಮಾಜದ ಅಲಿಖಿತ ನಿಯಮಕ್ಕೂ ವಿರುದ್ಧವಾದದ್ದು. ಮದುವೆ ಬಂಧದಲ್ಲಿ ಕೊನೆಯವರೆಗೂ ನನಗೆ ನೀನು, ನಿನಗೆ ನಾನು ಅಂತ ಜೊತೆಯಲ್ಲಿರುತ್ತೇವೆ ಎಂಬ ನಂಬಿಕೆ ಇರುತ್ತದೆ, ಬೇರೆ ಸಂಬಂಧ ಹುಡುಕಿ ಹೋದಾಗ ಇವರ ನಂಬಿಕೆಗೆ ದ್ರೋಹ ಮಾಡಿದಂತೆ.
ಲಿವ್ ಇನ್ ಸಂಬಂಧದಲ್ಲಿ ಭದ್ರತೆ ಇದೆಯೇ?
ಮದುವೆಎಯಲ್ಲಿಯೂ ಗಂಡು- ಹೆಣ್ಣು ಜೊತೆಯಾಗಿ ಬಾಳುವುದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿಯೂ ಹೆಣ್ಣು-ಗಂಡು ಜೊತೆಯಶಾಗಿ ಬಾಳುವುದು, ಆದರೆ ಮದುವೆ ಸಂಬಂಧಕ್ಕೆ ಸಿಗುವ ಗೌರವವಾಗಲಿ, ಭದ್ರತೆಯಾಗಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರಲ್ಲ. ಮದುವೆ ಜೀವನದಲ್ಲಿ ಏನೋ ಅಪಘಾತವಾದಾಗ ಸಂಗಾತಿ ನೋಡಿಕೊಳ್ಳುತ್ತಾರೆ ಎಂದು ನಂಬಿಕೆ ಇಡಬಹುದು, ಅದರೆ ಲಿವ್ ಇನ್ ರಿಲೇಷನ್‌ಶಿಪ್ ಅವರ ಆ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಮದುವೆ ಜೀವನದಲ್ಲಿ ಬೇರೆ ಸಂಬಂಧದ ಕಡೆಗೆ ಆಕರ್ಷಿತರಾದಾಗ ಒಂದು ಭಯ ಇರುತ್ತದೆ, ಅದರೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಆ ಭಯವಾಗಲಿ, ನಿಯತ್ತು ಆಗಲಿ ಇರಬೇಕೆಂದಿಲ್ಲ.



Click it and Unblock the Notifications









