Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಗಳ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಸಂಭ್ರಮಿಸಿದ ಆಟೋ ಡ್ರೈವರ್ ಅಪ್ಪನ ವೀಡಿಯೋ ವೈರಲ್
ಅಪ್ಪ-ಮಗಳ ಸಂಬಂಧ ಎಂಬುವುದು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಮಗಳು ಹುಟ್ಟಿದ ತಕ್ಷಣ ಆ ತಂದೆಗೆ ತನ್ನ ಮಗಳೇ ತಾಯಿಯಾಗುತ್ತಾಳೆ, ಅವಳು ಕೂಡ ಅಷ್ಟೇ ಎಲ್ಲದಕ್ಕೂ ಅಪ್ಪ.. ಅಪ್ಪ ಅಂತ ಹೇಳುತ್ತಾ ಅಪ್ಪನ ಮುದ್ದಿನ ರಾಜಕುಮಾರಿ ಆಗಿರುತ್ತಾಳೆ.
ಅಪ್ಪ ಬಡವನಾಗಿರಲಿ, ಶ್ರೀಮಂತನಾಗಿರಲಿ ತನ್ನ ಮಗಳಿಗಾಗಿ ತನ್ನ ಶಕ್ತಿ ಮೀರಿ ಅವಳಿಗೆ ಎಲ್ಲಾ ಸೌಕರ್ಯ ಕೊಡಿಸಬೇಕೆಂದು ಬಯಸುತ್ತಾನೆ. ಅಂತ ಅಪ್ಪನ ಪ್ರೀತಿಯ ವೀಡಿಯೋ ವೈರಲ್ ಆಗಿದೆ.

ಅವರೊಬ್ಬರು ಆಟೋ ಡ್ರೈವರ್, ತನ್ನ ಮಗಳೆಂದರೆ ಅವರಿಗೆ ಪಂಚಪ್ರಾಣ, ಮಗಳ ಹುಟ್ಟುಹಬ್ಬದಂದು ಆಟೋವನ್ನು ಪಿಂಕ್ ಬಲೋನ್‌ನಿಂದ ಅಲಂಕರಿಸಿ ಆಟೋ ಓಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ಎಲ್ಲರು ಆ ಅಪ್ಪನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತನ್ನ ಕೆಲಸದಲ್ಲಿಯೂ ಮಗಳ ಹುಟ್ಟುಹಬ್ಬದ ಸಂಭ್ರಮ
ಆಟೋ ಒಡಿಸುವುದು ಅವರ ವೃತ್ತಿ, ಮಗಳ ಜನ್ಮದಿನವಾದ ಈ ದಿನ ಆಟೋ ಕೂಡ ಸ್ಪೆಷಲ್ ಆಗಿರಬೇಕೆಂದು ಬಯಸಿ ಪಿಂಕ್ ಬಲೂನ್ ಕಟ್ಟಿದ್ದಾರೆ, ಇವರ ಆಟೋ ಪ್ರಯಾಣಿಕರ ಗಮನ ಸೆಳೆದಿದ್ದು ಅವರು ಈ ಬಗ್ಗೆ ಕೇಳಿದಾಗ ತಮ್ಮ ಮಗಳ ಹುಟ್ಟುಹಬ್ಬ ಎಂದು ಹೇಳಿದ್ದಾರೆ, ಈ ದೃಶ್ಯ ಗಮನ ಸೆಳೆದಿದೆ.
ಒಬ್ಬ ಪ್ರಯಾಣಿಕರು ಇವರ ವಿಡಿಯೋ ತೆಗೆದು ಸಾಮಾಜಿಕ ತಾಣದಲ್ಲಿ ಹಾಕಿದ್ದೇ ತಡ ವೀಡಿಯೋ ವೈರಲ್ ಆಗಿದೆ.
it was his daughter’s birthday 🎈 pic.twitter.com/x5eE1xNW1I
— Sumedha Uppal (@SumedhaUppal) May 9, 2024
ನಾಳೆ ಅಮ್ಮಂದಿರ ದಿನ ಇಂದು ಈ ಅಪ್ಪನ ವೀಡಿಯೋ ವೈರಲ್ ಆಗಿದೆ
ನಾವು ತಾಯಿ ನಮಗಾಗಿ ಎಷ್ಟು ಕಷ್ಟಪಡುತ್ತಾರೆ ಎಂದು ನೋಡುತ್ತೇವೆ, ಅದರೆ ತಂದೆಯ ಕಷ್ಟ ಅರಿಯದೆ ಹೋಗುತ್ತೇವೆ, ದಿನವಿಡೀ ನಮಗಾಗಿ ದುಡಿಯುತ್ತಾರೆ, ಮನೆಯ ಅಷ್ಟೂ ಜವಾಬ್ದಾರಿ ನಿಭಾಯಿಸುತ್ತಾರೆ, ಆದರೆ ಯಾವತ್ತೂ ಅಪ್ಪನಿಗಿಂತ ಅಮ್ಮನ ಪ್ರೀತಿ ದೊಡ್ಡದು ಅಂದುಕೊಳ್ಳುತ್ತೇವೆ. ಆದರೆ ಇಬ್ಬರ ಪ್ರೀತಿಯೂ ದೊಡ್ಡದೇ, ಅಮ್ಮ 9 ತಿಂಗಳು ಹೊತ್ತು ಜನ್ಮ ನೀಡಿದರೆ ಅಲ್ಲ ಮಕ್ಕಳು ದೊಡ್ಡವರರಾಗುವವರೆಗಿ ಭಾರ ಹೊತ್ತುಕೊಳ್ಳುತ್ತಾರೆ. ಮೇ 12ಕ್ಕೆ ಅಮ್ಮಂದಿರ ದಿನ, ಆದರೆ ಈ ಅಪ್ಪನ ಪ್ರೀತಿಯ ವೀಡಿಯೋ ತುಂಬಾನೇ ಗಮನ ಸೆಳೆದಿದೆ.
ಅಪ್ಪನಿಗೆ ಮಗಳ ಮೇಲೆ ತುಸು ಪ್ರೀತಿ ಹೆಚ್ಚಿರುತ್ತದೆ
ಎಲ್ಲಾ ಮನೆಗಳಲ್ಲಿ ಅಷ್ಟೇ ಅಪ್ಪನಿಗೆ ಮಗಳ ಮೇಲೆ ಪ್ರೀತಿ ಸ್ವಲ್ಪ ಹೆಚ್ಚಿರುತ್ತದೆ, ಅಪ್ಪನಿಗೆ ಮಗಳೆಂದರೆ ಮುದ್ದು ರಾಜಕುಮಾರಿ. ಹೆಣ್ಣು ಮಕ್ಕಳು ಕೂಡ ಅಷ್ಟೇ ಅಪ್ಪನ ಮೇಲೆ ತುಂಬಾನೇ ಪ್ರೀತಿ ತೋರಿಸುತ್ತಾರೆ, ಅಮ್ಮನಿಗಿಂತ ಅಪ್ಪನನ್ನು ತುಂಬಾ ಪ್ರೀತಿಸುತ್ತಾರೆ. ಹೀಗಾಗಿ ಯಾವಾಗಲೂ ಅಪ್ಪ- ಮಗಳ ಸಂಬಂಧ ತುಂಬಾನೇ ವಿಶೇಷವಾಗಿರುತ್ತದೆ. ಅಲ್ಲದೆ ಅಪ್ಪನಿಗೆ ನನ್ನ ಮಗಳು ಬೆಳೆದು ದೊಡ್ಡವಳಾದ ಮೇಲೆ ಬೇರೆ ಮನೆಗೆ ಹೋಗುತ್ತಾಳೆ ಎಂಬ ಸತ್ಯದ ಅರಿವು ಇರುತ್ತದೆ, ಹೀಗಾಗಿ ನಮ್ಮ ಮಗಳು ನಮ್ಮ ಮನೆಯಲ್ಲಿ ಇರುವಷ್ಟು ದಿನ ರಾಜಕುಮಾರಿಯಂತೆ ಬಾಳಬೇಕು, ನಂತರ ಅವಳನ್ನು ಒಂದೊಳ್ಳೆ ವರನನ್ನು ನೋಡಿ ಮದುವೆ ಮಾಡಿಕೊಡಬೇಕು ಎಂದು ಬಯಸುತ್ತಾರೆ, ಈ ಕಾರಣದಿಂದಲೇ ಅಪ್ಪನಿಗೆ ಮಗಳ ಮೇಲೆ ಪ್ರೀತಿ ಹೆಚ್ಚು.
ಮಗಳು ಕೂಡ ಅಷ್ಟೇ ಅಪ್ಪನ ಶ್ರಮ ಗಮನಿಸುತ್ತಾಳೆ
ಮನೆಯಲ್ಲಿ ಗಂಡ್ಮಕ್ಕಳು ಅಪ್ಪ ನಮಗಾಗಿ ಎಷ್ಟು ಕಷ್ಟಪಡುತ್ತಾರೆ ಎಂದು ಯೋಚಿಸುವುದಿಲ್ಲ, ಎಲ್ಲಾ ಕುಟುಂಬದಲ್ಲಿ ಅಪ್ಪ ಕುಟುಂಬ ನೋಡುವಂತೆ ನಮ್ಮಪ್ಪ ಕೂಡ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಯೋಚಿಸುತ್ತಾರೆ, ಆದರೆ ಮಗಳು ಮಾತ್ರ ತನ್ನ ಅಪ್ಪನ ಪ್ರತಿಯೊಂದು ಕಷ್ಟಗಳನ್ನು ತುಂಬಾನೇ ಚೆನ್ನಾಗಿ ಅರಿತುಕೊಳ್ಳುತ್ತಾಳೆ.



Click it and Unblock the Notifications


