Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ತನ್ನ ಗರ್ಲ್‌ಫ್ರೆಂಡ್‌ನ ಚೆನ್ನಾಗಿಡಲು ಕಾರಿನಲ್ಲಿ ವಾಸಿಸುತ್ತಿರುವ ಸೇಲ್ಸ್ ಮ್ಯಾನ್: ಅದ್ಭುತ ಪ್ರೀತಿಗೆ ಒಂದೊಳ್ಳೆ ಉದಾಹರಣೆ
ತನ್ನನ್ನು ರಾಣಿಯಂತೆ ನೋಡಿಕೊಳ್ಳುವ ಹುಡುಗ ಸಿಕ್ಕರೆ ಆ ಹೆಣ್ಣಿಗೆ ಮತ್ತೇನು ಬೇಕು ಅಲ್ವಾ? ಇಲ್ಲೊಬ್ಬ ಹುಡುಗ ಕೂಡ ತನ್ನ ಹುಡುಗಿಗಾಗಿ ತನ್ನ ಕಷ್ಟಗಳನ್ನು ಲೆಕ್ಕಿಸದೆ ತನ್ನವಳನ್ನು ಖುಷಿಯಾಗಿಡಲು ಮಾಡುವ ಪ್ರಯತ್ನ ನೋಡುವಾಗ ಇಂಥ ಹುಡುಗನನ್ನು ಪಡೆದ ಅವಳು ತುಂಬಾ ಅದೃಷ್ಟವಂತಳು ತಾನೇ? ಇಲ್ಲಿದೆ ನೋಡಿ ಇವರ ಬ್ಯೂಟಿಫುಲ್ ಲವ್ ಸ್ಟೋರಿ......

ಇವರೊಬ್ಬರು ಸೇಲ್ಸ್‌ಮ್ಯಾನ್, ತನ್ನ ಸಂಬಂಧ ಸುಂದರವಾಗಿಡಲು ಶೇ. 100ರಷ್ಟು ಎಫರ್ಟ್ ಹಾಕುತ್ತಿದ್ದಾರೆ. ಇವರು ಪ್ರವಾಹದಿಂದಾಗಿ ಎಲ್ಲಾ ಆಸ್ತ ಕಳೆದುಕೊಳ್ಳುತ್ತಾರೆ, ನಂತರ ದಕ್ಷಿಣ ಚೀನಾಕ್ಕೆ ಹೊಟ್ಟೆಪಾಡಿಗಾಗಿ ಬರುತ್ತಾರೆ. ಹೀಗೆ ಬರುವಾಗ ಅವರ ಪ್ರೀತಿಯ ಹುಡುಗಿ ಅವರ ಊರಿನಲ್ಲಿಯೇ ಇದ್ದರು.
ಇವರು ಲಾಂಗ್ ಡಿಸ್ಟೇನ್ಸ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇವರ ಗರ್ಲ್‌ಫ್ರೆಂಡ್ ಇವರು ಕೆಲಸ ಮಾಡುತ್ತಿರುವ ಸ್ಥಳದಿಂದ 500 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದಾರೆ. ಇವರು ಕೆಲಸಕ್ಕಾಗಿ ದಕ್ಷಿಣ ಚೀನಾದಲ್ಲಿ ವಾಸಿಸುತ್ತಿದ್ದಾರೆ, ಅವರ ಗರ್ಲ್‌ಫ್ರೆಂಡ್ 500 ಕಿ.ಮೀ ದೂರದಲ್ಲಿ ಉತ್ತರ ಚೀನಾದಲ್ಲಿ ವಾಸಿಸುತ್ತಿದ್ದಾರೆ. ಆದರೆ ಇವರು ಅವರನ್ನು ಪ್ರತಿವಾರ ಹೋಗಿ ಭೇಟಿಯಾಗಿ ಬರುತ್ತಾರೆ.
ಪ್ರತಿವಾರ ತನ್ನ ಗರ್ಲ್‌ಫ್ರೆಂಡ್‌ನನ್ನು ಮೀಟ್ ಮಾಡಲು 500ಕಿ.ಮೀ ಪ್ರಯಾಣ ಮಾಡುತ್ತಾರೆ. ಇಷ್ಟು ದೂರ ಪ್ರಯಾಣ ಮಾಡುವುದೇನೋ ಸರಿ ಅದಕ್ಕೆ ದುಡ್ಡು ಕೂಡ ಬೇಕಲ್ಲಾ? ಒಬ್ಬ ಸೇಲ್ಸ್ ಮ್ಯಾನ್‌ಗೆ ಅದು ಕಷ್ಟವಾಗುವುದಿಲ್ಲವೇ ಎಂದು ಜನರಿಗೆ ಅಚ್ಚರಿ ಉಂಟಾಗುತ್ತಿದೆ.
ಗರ್ಲ್‌ಫ್ರೆಂಡ್‌ಗಾಗಿ ತಾನು ಕಷ್ಟಪಡಲು ಸಿದ್ದ
ಹೌದು ಇವರೊಬ್ಬರು ಸೇಲ್ಸ್ ಮ್ಯಾನ್ ಆದರೆ ಇವರು ಯಾವುದೇ ಮನೆ ಬಾಡಿಗೆ ಪಡೆದು ಜೀವಿಸುತ್ತಿಲ್ಲ. ಒಂದು ಕಾರನ್ನೇ ಮನೆಯಾಗು ಮಾಡಿದ್ದಾರೆ, ಅದರಲ್ಲಿ ಫೋಲ್ಡ್ಬಲ್ ಬೆಡ್ ಹಾಕಿ ಅದರಲ್ಲಿಯೇ ಮಲಗುತ್ತಾರೆ, ಈ ರೀತಿ ಮನೆಯನ್ನು ಉಳಿತಾಯ ಮಾಡಿ, ಪ್ರತಿಯೊಂದು ವಾರ 500 ಕಿ.ಮೀ ದೂರ ಹೋಗಿ ಪ್ರಯಾಣ ಮಾಡಿ ತನ್ನ ಗರ್ಲ್‌ಫ್ರೆಂಡ್‌ನ ಭೇಟಿಯಾಗಿ ಬಿಡುತ್ತಾರೆ.
ಇವರು ತನ್ನ ಹುಡುಗಿಯನ್ನು ಭೇಟಿಯಾಗಲು ಟ್ರೈನ್‌ನಲ್ಲಿ ಹೋಗುತ್ತಾರೆ. ಅವರಿಗೊಂದು ನಾಯಿ ಇದೆ... ಒಂದು ದಿನ ಮನೆಯಲ್ಲಿ ಇದ್ದು ಸೋಮವಾರ ಬೆಳಗ್ಗೆ 3 ಗಂಟೆಗೆ ಅಲ್ಲಿಂದ ಹೊರಟು ಮತ್ತೆ ಕೆಲಸಕ್ಕೆ ಮರಳುತ್ತಾರೆ. ಇವರು 12 ವರ್ಷದಿಂದ ದಕ್ಷಿಣ ಚೀನಾದಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ. ತಮ್ಮ ಗರ್ಲ್‌ಫ್ರೆಂಡ್‌ಗಾಗಿ ಇಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ. ಹೀಗಾಗಿ ಇವರು 500 ಕಿ.ಮೀ ದೂರವಿದ್ದರೂ ಇಬ್ಬರ ನಡುವೆ ಸುಂದರ ಬಾಂಧವ್ಯ ಚೆನ್ನಾಗಿರಲಿದೆ.
ಸಂಬಂಧದಲ್ಲಿ ಹಣಕ್ಕಿಂತ ಬೇಕಾಗಿರುವುದು ಪ್ರೀತಿ
ಹಣವಿದ್ದರೆ ಸಂಬಂಧ ಚೆನ್ನಾಗಿರುತ್ತೆ ಎಂದಾದರೆ ಹಣವಿರುವವರಿಗೆ ವಿಚ್ಛೇದನವೇ ಆಗುತ್ತಿರಲಿಲ್ಲ ಅಲ್ಲವೇ? ಸಂಬಂಧ ಚೆನ್ನಾಗಿರಬೇಕೆಂದರೆ ಅಲ್ಲಿ ಬೇಕಾಗಿರುವುದು ಪ್ರೀತಿ. ಪ್ರೀತಿಗಾಗಿ ಎಷ್ಟೇ ಕಷ್ಟಪಡಲು ಸಿದ್ಧವಾಗಿರುತ್ತೇವೆ. ನಾವು ಪಡುತ್ತಿರುವ ಕಷ್ಟ ಕಷ್ಟ ಅನಿಸುವುದಿಲ್ಲ, ಇವರಿಗೂ ಅಷ್ಟೇ ತಾನು ಚಿಕ್ಕ ಕಾರಿನಲ್ಲಿ ವಾಸ ಮಾಡುತ್ತಿರುವುದು ಕಷ್ಟ ಅನಿಸುತ್ತಿಲ್ಲ, ತಾನು ಇಷ್ಟುಕಷ್ಟ ಪಡುವುದರಿನದಲೇ ಪ್ರತಿವಾರ ನನ್ನವಳನ್ನು ಕಾಣಲು ಸಾಧ್ಯವಾಗುವುದು ಎಂಬ ಪ್ರೀತಿ ಇವರಿಗೆ.
ಸಂಬಂಧ ಚೆನ್ನಾಗಿರಲು ಎಫರ್ಟ್ ಕೂಡ ಮುಖ್ಯ
ಹೌದು ನಾವು ನಮ್ಮ ಸಂಗಾತಿಗಾಗಿ ಸಮಯ ಮೀಸಲಿಡಬೇಕು, ಅವರ ಜೊತೆ ಸಮಯ ಕಳೆಯಬೇಕು, ಆವಾಗ ಮಾತ್ರ ಆ ಜೀವನ ತುಂಬಾ ಚೆನ್ನಾಗಿರಲಿದೆ.
ಇಂಥ ಪ್ರೀತಿ ಕೇಳುವಾಗ ಖುಷಿಯಾಗುತ್ತದೆ, ಪ್ರೀತಿಗೆ ಸುಂದರ ಉದಾಹರಣೆ ಇವರ ಜೀವನ. ಹೌದು ಪ್ರೀತಿಯಲ್ಲಿ ಇದ್ದರೆ ಜೀವನದಲ್ಲಿ ನಾವು ತುಂಬಾ ಖುಷಿಯಾಗಿರುತ್ತೇವೆ, ನೂರು ಸಮಸ್ಯೆ ಇದ್ದರೂ ಇಂಥ ಪ್ರೀತಿ ಜೊತೆಗಿದ್ದರೆ ಸಾಕು ಎಂಥದ್ದೇ ಕಷ್ಟವನ್ನು ಸುಲಭವಾಗಿ ಜಯಿಸಲು, ಅಲ್ಲವೇ?



Click it and Unblock the Notifications
