Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವಿನ್ನೂ ಸಿಂಗಲ್ ಆಗಿದ್ದೀರಾ.? ಅದಕ್ಕೆ ಈ 5 ಅಂಶ ಕಾರಣವಾಗಿರಬಹುದು
ನೀವು ಇನ್ನೂ ಒಬ್ಬಂಟಿಯಾಗಿದ್ದೀರಾ? ಅಂದ್ರೆ ನೀವಿನ್ನೂ ಯಾರನ್ನೂ ಪ್ರೀತಿಸುತ್ತಿಲ್ಲ ಅಥವಾ ಯಾರ ಜೊತೆಯೂ ಡೇಟಿಂಗ್ ಮಾಡುತ್ತಿಲ್ಲವಾ? ಹೌದು ಇತ್ತೀಚಿಗೆ ಏಕಾಂಗಿ ಹುಡುಗರು, ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ ಅನ್ನೋದು ಕೆಲವು ಅಂಕಿ ಅಂಶಗಳ ವಿವರಣೆಯಾಗಿದೆ. ಅದರಲ್ಲೂ ಹುಡುಗರು ಈಗ ಒಬ್ಬಂಟಿಯಾಗಿ ಬದುಕುತ್ತಿದ್ದಾರಂತೆ.
ಹೌದು ಈ ಆಧುನಿಕ ಯುಗದಲ್ಲೂ, ವೇಗದ ದುನಿಯಾದಲ್ಲೂ ನೀವಿನ್ನೂ ಸಿಂಗಲ್ ಆಗಿದ್ದೀರಿ ಅಂದರೆ ಅಲ್ಲಿ ಯಾವುದೋ ಸಮಸ್ಯೆ ಕಾಡುತ್ತಿದೆ ಎಂಬರ್ಥವಂತೆ. ಇಲ್ಲಿ ಯಾವೆಲ್ಲಾ ಕಾರಣಕ್ಕೆ ನೀವಿನ್ನು ಸಿಂಗಲ್ ಆಗಿಯೇ ಇದ್ದೀರಿ? ಕಾರಣ ಏನಿರಬಹುದು? ಹಾಗಾದ್ರೆ ಇವತ್ತಿನ ವೆರೆಗೂ ನೀವು ಸಿಂಗಲ್ ಆಗಿರಲು ಪ್ರಮುಖ 5 ಕಾರಣಗಳೇನು ಎಂಬುದನ್ನು ನಾವಿಂದು ತಿಳಿಯೋಣ.

ವೃತ್ತಿ ಜೀವನ ಅಥವಾ ಗುರಿ ಮೇಲೆ ನೀವು ಹೆಚ್ಚು ಗಮನ ಇಟ್ಟಿರುವುದು
ನೀವು ಇಂದಿಗು ಸಿಂಗಲ್ ಆಗಿದ್ದೀರಿ ಎಂದರೆ ನೀವು ನಿರ್ಧಿಷ್ಟ ಗುರಿಯ ಹಿಂದೆ ಬಿದ್ದಿದ್ದೀರಿ ಎಂದರ್ಥ. ನೀವು ಮೊದಲು ಸೆಟೆಲ್ ಆಗಬೇಕು, ಒಳ್ಳೆಯ ಕೆಲಸ ಪಡೆಯಬೇಕು, ಬಳಿಕವಷ್ಟೇ ನಿಮ್ಮ ಪ್ರೇಮ ಜೀವನ ಅಥವಾ ಮದುವೆಯ ಕುರಿತು ಚಿಂತಿಸಲು ಇಚ್ಚೀಸಿದ್ದೀರಿ ಎಂದರ್ಥ. ಬಹುಶಃ ನೀವು ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ಅಥವಾ ವೈಯಕ್ತಿಕ ಗುರಿಗಳನ್ನು ಮೊದಲು ಮುಟ್ಟಬೇಕು. ಈ ಗುರಿಗಳ ಕುರಿತಂತೆ ನೀವು ಹೆಚ್ಚು ತಲೆ ಕೆಡಿಸಿಕೊಂಡಿದ್ದೀರಿ. ಇದು ನಿಮಗೆ ಉತ್ತಮ ಆಗಿದ್ದರೂ ಬಹುಕಾಲ ಸಿಂಗಲ್ ಆಗಿ ಬದುಕುವುದು ಸಹ ಸಮಸ್ಯೆಗೆ ಕಾರಣವಾಗಬಹುದು.
ಹಳೆಯ ಕಹಿ ಘಟನೆಗಳಿಂದ ಪಾಠ
ನೀವು ಇಂದಿಗೂ ಸಿಂಗಲ್ ಆಗಿದ್ದೀರಿ ಅಂದ್ರೆ ನಿಮ್ಮ ಜೀವನದಲ್ಲಿ ಹಿಂದೆ ಯಾವುದಾದರು ಕಹಿ ಘಟನೆ ನಡೆದಿರಬಹುದು. ಅಂದರೆ ನಿಮ್ಮ ಪ್ರೀತಿಯ ತಿರಸ್ಕರಿಸಿರುವುದು, ಪ್ರೇಮ ವೈಫಲ್ಯ ನಡೆದಿರುವ ಘಟನೆಗಳು ಮತ್ತೆ ಆ ಸಂಬಂಧ ಹೊಂದುವುದರಿಂದ ನಿಮ್ಮನ್ನು ತಡೆದಿರಬಹುದು. ಹೀಗಾಗಿ ಈ ಭಾವನೆಗಳು ಅಡ್ಡಿಯಾಗುವ ಕಾರಣಕ್ಕೆ ಇಂದಿಗೂ ಸಿಂಗಲ್ ಆಗಿರಬಹುದು. ಈ ಘಟನೆಯಿಂದ ಹೊರಬರಲು ಸಮಯ ತೆಗೆದುಕೊಳ್ಳಬಹುದು. ಹಿಂದೊಮ್ಮೆ ನಿಮ್ಮನ್ನು ನಿರಾಕರಿಸಿರುವುದು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಿರಬಹುದು.
ಅವಾಸ್ತವಿಕ ನಿರೀಕ್ಷೆ ಇಟ್ಟುಕೊಂಡಿರಬಹುದು
ಅಂದರೆ ನೀವು ಬಯಸುತ್ತಿರುವ ಹುಡುಗಿ ಅಥವಾ ಹುಡುಗ ನಿಮಗೆ ಸಿಗದಿರಬಹುದು. ಇಲ್ಲಿ ನಿಮ್ಮ ಬಯಕೆ ತುಂಬಾನೆ ವಿಚಿತ್ರ ಅಥವಾ ನೀವು ಅಂದುಕೊಂಡಿರುವಂತೆ ಗುಣವಿರುವವರು ನಿಮಗೆ ಇನ್ನೂ ಸಿಗದಿರಬಹುದು. ಇದು ಸಹ ನೀವು ಇನ್ನು ಸಿಂಗಲ್ ಆಗಿರಲು ಕಾರಣವಾಗಿರಬಹುದು. ಅಲ್ಲದೆ ನೀವು ಇಟ್ಟುಕೊಂಡಿರುವ ಕಲ್ಪನೆಯ ಹುಡುಗ ಅಥವಾ ಹುಡುಗಿ ನಿಮ್ಮ ಕಣ್ಣಿಗೆ ಇನ್ನೂ ಬೀಳದಿರಬಹುದು. ಇಲ್ಲವೆ ನಿಮ್ಮ ಬಯಕೆಯೇ ಅವಾಸ್ತವಿಕವಾಗಿ ಕೂಡಿರಬಹುದು.
ನಿರಾಕರಣೆ ಭಯ
ಇನ್ನೊಂದು ಕಡೆ ನೀವು ಡೇಟಿಂಗ್‌ನಿಂದ ರಿಲೇಷನ್‌ಶಿಪ್‌ಗೆ ಬರಲು ನಿಮಗೆ ನಿರಾಕರಣೆಯ ಭಯ ಕಾಡುತ್ತಿರಬಹುದು. ಯಾರಾದರು ನಿಮ್ಮ ರಿಜೆಕ್ಟ್ ಮಾಡಿದರೆ ಇಲ್ಲವೆ ಅವಮಾನವಾಗುವಂತೆ ಮಾತನಾಡಿದರೆ ಎಂಬ ಭಯ ನಿಮ್ಮಲ್ಲಿ ಕಾಡುತ್ತಿರಬಹುದು. ಇದು ನಿಮ್ಮನ್ನು ಸಿಂಗಲ್ ಆಗಿರುವಂತೆ ಮಾಡಿರಬಹುದು.
ನಿಮ್ಮ ಭಾವನೆ ನೀರು ಹೊರಹಾಕುತ್ತಿಲ್ಲ
ಬಹಳಷ್ಟು ಮಂದಿ ಈಗಲೂ ಸಿಂಗಲ್ ಆಗಿರಲು ಪ್ರಮುಖ ಕಾರಣ ಹುಡುಕುತ್ತಾ ಹೋದಾಗ ಈ ಅಂಶ ಬೆಳಕಿಗೆ ಬರುತ್ತೆ. ಏನೆಂದರೆ ನೀವು ಇಂದಿಗೂ ನಿಮ್ಮ ಭಾವನೆ ಹೊರಹಾಕಲು ಹಿಂದೇಟು ಹಾಕುತ್ತಿರುವುದು ಸಿಂಗಲ್ ಆಗಿರಲು ಕಾರಣ ಎನ್ನಬಹುದು. ನೀವು ಮನದಲ್ಲಿ ಹೊಂದಿರುವ ಭಾವನೆಯನ್ನು ಹೊರಹಾಕಲು ಸರಿಯಾದ ಸಮಯಕ್ಕೆ ಕಾಯುತ್ತಿರಬಹುದು, ಆದರೆ ಈ ಭಾವನೆ ಹೊರ ಹಾಕುವ ವರೆಗೂ ನೀವು ಸಿಂಗಲ್ ಆಗಿಯೇ ಇರುತ್ತೀರಿ ಎಂಬುದನ್ನು ಮರೆಯಬೇಡಿ.



Click it and Unblock the Notifications