Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ನಿಮ್ಮ ಪ್ರೀತಿ ನಿಜನಾ ಅಂತ ಗೊತ್ತಾಗೋದು ಹೇಗೆ? ಈ ರೀತಿ ಇದೆಯೇ?
ಕೆಲವೊಂದು ಸಾರಿ ನಾವು ಸಂಬಂಧದಲ್ಲಿ ಇದ್ದರೂ ಕೂಡ ನಮಗೆ ಆ ಬಗ್ಗೆ ಕ್ಲಾರಿಟಿ ಇರೋದಿಲ್ಲ. ಯಾಕಂದ್ರೆ ಇತ್ತೀಚಿಗೆ ಯುವಕ ಹಾಗೂ ಯುವತಿಯರು ಟೈಂ ಪಾಸ್ ಗಾಗಿ ಒಂದು ಸಂಬಂಧದಲ್ಲಿ ಇರುತ್ತಾರೆ. ಹಾಗಂತ ಆ ಸಂಬಂಧದಲ್ಲಿ ಅವರು ಕೊನೆವರೆಗೂ ಇರುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ.
ಆದ್ರೆ ಮತ್ತೂ ಕೆಲವು ಸಾರಿ ಈ ಟೈಂ ಪಾಸ್ ಪ್ರೀತಿನೇ ನಿಜವಾದ ಪ್ರೀತಿಯಾಗಿ ಬದಲಾಗಿ ಹೋಗುತ್ತೆ. ಅಷ್ಟಕ್ಕು ನಾವು ಗಂಭಿರವಾಗಿ ಒಂದು ಸಂಬಂಧದಲ್ಲಿ ಇದ್ದೇವೆ ಅಂತ ಗೊತ್ತಾಗೋದು ಹೇಗೆ? ಈ ಲಕ್ಷಣಗಳಿದ್ದರೆ ಸಂಬಂಧದಲ್ಲಿ ನೀವು ಪ್ರೀತಿಯಲ್ಲಿ ಗಂಬೀರವಾಗಿ ಇದ್ದೀರಿ ಎಂದರ್ಥ.

1. ವೈಯಕ್ತಿಕ ಬದ್ಧತೆ(commitment)
ಒಂದು ಸಂಬಂಧದಲ್ಲಿ ಬದ್ಧತೆ ಅಥವಾ ಕಮಿಟ್ಮೆಂಟ್ ತುಂಬಾನೇ ಮುಖ್ಯವಾಗುತ್ತದೆ. ಬದ್ಧತೆ ಇದ್ದಾಗ ಮಾತ್ರ ಆ ಸಂಬಂಧ ಗಟ್ಟಿಯಾಗಿ ಇರೋದಕ್ಕೆ ಸಾಧ್ಯ. ಗಂಡಾಗಲಿ ಅಥವಾ ಹೆಣ್ಣಾಗಲಿ ಒಂದು ಸಂಬಂಧದಲ್ಲಿ ಬದ್ಧತೆಯನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಯಾವ ಸಂಬಂಧದಲ್ಲಿ ಬದ್ಧತೆ ಇರುತ್ತದೆಯೋ ಆ ಸಂಬಂಧ ಕೊನೆವರೆಗೂ ಗಟ್ಟಿಯಾಗಿ ಉಳಿಯುತ್ತೆ ಎಂದರ್ಥ.
2. ಭಾವನಾತ್ಮಕ ಸಂಬಂಧ
ಒಂದು ಸಂಬಂಧದಲ್ಲಿ ಭಾವನಾತ್ಮಕ ಬಾಂಧವ್ಯ ತುಂಬಾನೇ ಮುಖ್ಯವಾಗುತ್ತದೆ. ನಾವು ಯಾರ ಜೊತೆಗೆ ಸಂಬಂಧದಲ್ಲಿ ಇರುತ್ತೇವೆಯೋ ಅವರು ಭಾವನಾತ್ಮಕವಾಗಿ ನಮ್ಮ ಜೊತೆಗೆ ಕನೆಕ್ಟ್ ಆಗಿರಬೇಕು. ಕೆಲವೊಂದು ಸಂಬಂಧಗಳಲ್ಲಿ ಭಾವನೆಗಳೇ ಇರೋದಿಲ್ಲ. ಅಂತಹ ಸಂಬಂಧ ನಿಜವಾದ ಸಂಬಂಧವಲ್ಲ. ಇಬ್ಬರ ಮನಸ್ಸುಗಳು ಭಾವನಾತ್ಮಕವಾಗಿ ಬೆಸೆದಾಗ ಮಾತ್ರ ಅದು ನಿಜವಾದ ಸಂಬಂಧ ಅನ್ನಿಸಿಕೊಳ್ಳುತ್ತದೆ.
3. ಸಂವಹನ ಚೆನ್ನಾಗಿರಬೇಕು
ಸಂಬಂಧದಲ್ಲಿ ಎಲ್ಲದ್ದಕ್ಕಿಂತಲೂ ಮುಖ್ಯ ಸಂವಹನ. ಪ್ರೇಮಿಗಳ ಮಧ್ಯೆ ಸಂವಹನ ಚೆನ್ನಾಗಿದ್ದಾಗ ಅವರು ಪ್ರತಿಯೊಂದು ವಿಚಾರವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಇದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋದಕ್ಕೂ ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಸಂವಾಹನ ಚೆನ್ನಾಗಿಲ್ಲ ಅಂದ್ರೆ ಖಂಡಿತ ಆ ಸಂಬಂಧ ಗಟ್ಟಿಯಾಗಿಲ್ಲ ಎಂದರ್ಥ. ಅಂತಹ ಸಂಬಂಧಗಳು ಯಾವಾಗ ಬೇಕಾದರೂ ಮುರಿದು ಬೀಳಬಹುದು.
4. ಇಬ್ಬರು ಒಟ್ಟಾಗಿ ಉತ್ತಮ ಸಮಯ ಕಳೆಯೋದು
ಕೆಲವೊಂದು ಸಲ ನಾವು ಜೊತೆಯಾಗಿ ಇದ್ದರೂ ಕೂಡ ನಮಗೆ ಅದು ಸ್ನೇಹನಾ? ಅಥವಾ ಪ್ರೀತಿನಾ ಅನ್ನೋ ಬಗ್ಗೆ ಕ್ಲಾರಿಟಿ ಇರೋದಿಲ್ಲ. ಹೀಗಾಗಿ ಅವರ ಜೊತೆಗೆ ಸ್ವಲ್ಪ ಹೊತ್ತು ಸಮಯ ಕಳೆಯಿರಿ. ಅವರ ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ಕಾಲ ಕಳೆಯುತ್ತೀರಿ. ಆಗ ನಿಮಗೆ ನಿಮ್ಮಿಬ್ಬರ ಮಧ್ಯೆ ಇರೋದು ಸ್ನೇಹನಾ? ಅಥವಾ ಪ್ರೀತಿನಾ ಅಂತ ಕ್ಲಾರಿಟಿ ಸಿಗುತ್ತೆ.
5. ದೈಹಿಕ ಅನ್ಯೋನ್ಯತೆ
ನಾವು ಒಂದು ಸಂಬಂಧದಲ್ಲಿ ಇದ್ದೇವೆ ಅಂದ್ರೆ ಅಲ್ಲಿ ದೈಹಿಕ ಅನ್ಯೋನ್ಯತೆಯೂ ತುಂಬಾನೇ ಮುಖ್ಯವಾಗುತ್ತದೆ. ಸಂಗಾತಿ ನಮ್ಮ ಹತ್ತಿರ ಇದ್ದಾಗ ಒಂದು ರೀತಿಯ ದೈಹಿಕ ಆಕರ್ಷಣೆ ಇರೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಒಂದು ವೇಳೆ ನಿಮ್ಮಿಬ್ಬರ ಮಧ್ಯೆ ದೈಹಿಕ ಆಕರ್ಷಣೆ ಇದ್ದರೆ ಆ ಪ್ರೀತಿ ಗಟ್ಟಿಯಾಗಿದೆ ಎಂದರ್ಥ. ಒಂದು ವೇಳೆ ದೈಹಿಕ ಆಕರ್ಷಣೆ ಇರದೇ ಹೋದರೆ ನಿಮ್ಮಿಬ್ಬರ ಮಧ್ಯೆ ಪ್ರೀತಿಯ ಬಾಂಧವ್ಯ ಇಲ್ಲ ಎಂದರ್ಥ.
6. ಭವಿಷ್ಯದ ಬಗ್ಗೆ ಮಾತನಾಡಬೇಕು
ಜೋಡಿಗಳಿಬ್ಬರು ನಿಜವಾಗಿಯೂ ಪ್ರೀತಿಯಲ್ಲಿ ಬಿದ್ದಾಗ ಅವರು ಖಂಡಿತವಾಗಿಯೂ ಭವಿಷ್ಯ ಬಗ್ಗೆ ಮಾತನಾಡುತ್ತಾರೆ. ಮದುವೆ, ಮಕ್ಕಳು, ಮದುವೆಯಾದ ನಂತರ ಏನೆಲ್ಲಾ ಮಾಡಬೇಕು ಎಂದು ಖಂಡಿತ ಪ್ಲಾನ್ ಮಾಡಿಕೊಂಡು ಇರುತ್ತಾರೆ. ಒಂದು ವೇಳೆ ಪ್ರೀತಿಯಲ್ಲಿ ಗಂಭೀರವಾಗಿ ಇಲ್ಲ ಅಂದ್ರೆ ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಇರುವಷ್ಟು ದಿನ ಒಟ್ಟಿಗೆ ಇದ್ದು ಆನಂತರ ಬಿಟ್ಟು ಬಿಡುತ್ತಾರೆ.
7. ಒಬ್ಬರಗೊಬ್ಬರು ಪ್ರೋತ್ಸಾಹ ನೀಡುತ್ತಾರೆ
ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ಗುರಿಯನ್ನು ಸಾಧಿಸುವ ಛಲ ಹಾಗೂ ಹಠ ಇದ್ದೇ ಇರುತ್ತದೆ. ನಾವು ಸಾಗುವ ಮಾರ್ಗದಲ್ಲಿ ನಮಗೆ ಪ್ರೋತ್ಸಾಹ ನೀಡುತ್ತಾ ನಮ್ಮ ಜೊತೆಯಾಗಿ ಯಾರಾದರೂ ಇರಬೇಕು ಅಂತ ನಾವು ಬಯಸುತ್ತೇವೆ. ನಾವು ಪ್ರೀತಿ ಮಾಡುವವರು ನಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಖಂಡಿತ ಅವರು ನಮಗೆ ಸಾಥ್ ನೀಡುತ್ತಾರೆ.
ನಮ್ಮ ಸಾಧನೆಯ ಮೆಟ್ಟಿಲ್ಲನ್ನು ಏರೋದಕ್ಕೆ ಅವರು ಪ್ರೋತ್ಸಾಹ ನೀಡುತ್ತಾರೆ. ನಮ್ಮ ಪ್ರೀತಿ ನಿಜವಾಗಿದ್ದರೆ ನಾವು ನಮ್ಮ ಸಂಗಾತಿಗೆ ಅದೇ ರೀತಿ ಪ್ರೋತ್ಸಾಹ ನೀಡುತ್ತೇವೆ. ಆದರೆ ಯಾವಾಗ ಪ್ರೀತಿ ನಿಜವಾಗಿ ಇರೋದಿಲ್ವೋ ಆಗ ನಾವು ಅವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ. ಅವರ ಜೀವನ ಹೇಗಾದರೂ ಸಾಗಿಸಲಿ ಎಂದು ಸುಮ್ಮನಿರುತ್ತೇವೆ.
ಈ ಮೇಲಿನ ಗುಣಗಳು ಪ್ರೇಮಿಗಳ ಮಧ್ಯೆ ಇದ್ದಾಗ ಅವರು ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಜೊತೆಗೆ ಆ ಪ್ರೀತಿ ನಿಜ ಅಂತ ನಂಬಬಹುದು.



Click it and Unblock the Notifications

