Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೌಂದರ್ಯ ಬಿಟ್ಟು ಪುರುಷರು ಮಹಿಳೆಯರಲ್ಲಿ ಗಮನಿಸುವ 5 ಅಂಶಗಳಿವು
ಪುರುಷರು ಮಹಿಳೆಯರಲ್ಲಿ ಅವಳ ಸೌಂದರ್ಯ ಮಾತ್ರ ಗಮನಿಸುತ್ತಾರೆ ಎಂದರೆ ಅದು ತಪ್ಪು, ಮೊದಲ ನೋಟಕ್ಕೆ ಅವಳ ಸೌಂದರ್ಯ ಗಮನ ಸೆಳೆಬಹುದು, ಆದರೆ ಅವಳ ಸೌಂದರ್ಯಕ್ಕಿಂತ ಅವಳಲ್ಲಿನ ಈ ವಿಶೇಷತೆ ಅವನನ್ನು ಆಕರ್ಷಿಸುತ್ತದೆ, ಆ ವಿಶೇಷ ಗುಣಗಳೆಂದರೆ:

ಆಕೆಯ ಬುದ್ಧಿವಂತಿಕೆ:
ಹೌದು ಬುದ್ಧಿವಂತೆ ಮಹಿಳೆಯನ್ನು ಪುರುಷ ತುಂಬಾನೇ ಇಷ್ಟಪಡುತ್ತಾನೆ, ಆಕೆಯಲ್ಲಿರುವ ಸಾಮಾನ್ಯ ಜ್ಞಾನ, ಕೆಲವೊಂದು ಪರಿಸ್ಥಿತಿಯನ್ನು ಚಾಣಾಕ್ಷದಿಂದ ಎದುರಿಸುವ ರೀತಿ ಇವೆಲ್ಲವೂ ಅವನಿಗೆ ಅವಳ ಮೇಲೆ ಪ್ರೀತಿ ಜೊತೆಗೆ ಅಭಿಮಾನವನ್ನು ಹೆಚ್ಚಿಸುತ್ತದೆ. ಎಷ್ಟೇ ರೂಪವಂತೆ ಆಗಲಿ ಅವಳಲ್ಲಿ ಬುದ್ಧಿವಂತಿಕೆ ಇಲ್ಲ ಎಂದರೆ ಅವನಿಗೆ ಅವಳು ಆಕರ್ಷಕ ಅನಿಸುವುದಿಲ್ಲ.
ಆಕೆಯ ಡ್ರೆಸ್ಸಿಂಗ್ ಸೆನ್ಸ್:
ಹೌದು ಯಾವುದೇ ಪುರುಷನಾಗಲಿ ಹೆಣ್ಣಿನಲ್ಲಿ ಈ ಅಂಶ ಗಮನಿಸುತ್ತಾನೆ, ಆಕೆಯ ಡ್ರೆಸ್ಸಿಂಗ್ ಸೆನ್ಸ್ ಹೇಗಿದೆ, ಅವಳು ತನ್ನ ಸೌಂದರ್ಯದ ಕಡೆಗೆ ಯಾವ ರೀತಿ ಗಮನಹರಿಸುತ್ತಾಳೆ ಎಂಬುವುದರ ಬಗ್ಗೆ ಕೂಡ ಗಮನಹರಿಸುತ್ತಾರೆ. ವ್ಯಕ್ತಿ ಮತ್ತಷ್ಟು ಆಕರ್ಷಕವಾಗಿ ಕಾಣುವುದು ಡ್ರೆಸ್ಸಿಂಗ್ ಸೆನ್ಸ್‌ನಿಂದ, ಇದು ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಅನ್ವಯಿಸುತ್ತದೆ. ಯಾರು ಚೆನ್ನಾಗಿ ಡ್ರೆಸ್ಸಿಂಗ್ ಮಾಡಿಕೊಳ್ಳುತ್ತಾರೋ ಅವರು ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಗಮನ ಸೆಳೆಯುತ್ತಾರೆ.
ಬೇರೆಯವರನ್ನು ಹೇಗೆ ಗೌರವಿಸುತ್ತಾಳೆ
ಅವಳು ಇತರರ ಜೊತೆಗೆ ಹೇಗೆ ವರ್ತಿಸುತ್ತಾಳೆ, ಯಾರಿಗೆ ಹೇಗೆ ಗೌರವ ನೀಡುತ್ತಾಳೆ ಎಂಬುವುದರ ಬಗ್ಗೆ ಕೂಡ ಗಮನಹರಿಸುತ್ತಾಳೆ. ಅದರಲ್ಲೂ ಒಬ್ಬ ಪುರುಷ ಹೆಣ್ಣನ್ನು ತನ್ನ ಲೈಫ್ ಪಾರ್ಟನರ್ ಆಗುವ ವ್ಯಕ್ತಿಯಲ್ಲಿ ಗಮನಿಸಿದರೆ ಅವನ ಬದುಕು ಚೆನ್ನಾಗಿರುತ್ತದೆ, ಅವಳು ಅವನ ಮನೆಗೆ, ಮನೆಯವರಿಗೆ ಹೊಂದಿಕೊಂಡು ಹೋಗುತ್ತಾಳೆ.
ಆಕೆ ಆಕೆಯ ಮೈ ಬಣ್ಣದ ಮೇಲೆ ಎಷ್ಟೊಂದು ಆತ್ಮವಿಶ್ವಾಸದಿಂದ ಇರುತ್ತಾಳೆ
ತುಂಬಾ ಜನರಿಗೆ ನಾನು ಕಪ್ಪಗಿದ್ದೇನೆ, ನಾನು ಚೆನ್ನಾಗಿಲ್ಲ ಹೀಗೆ ಅನಗ್ಯತ ಚಿಂತೆಗಳು, ನೀವು ಆಕರ್ಷಕವಾಗಿ ಕಾಣಲು ನಿಮ್ಮ ಮೈ ಬಣ್ಣ ಒಂದು ವಿಷಯವೇ ಅಲ್ಲ, ಮೊದಲು ನಾವು ನಮ್ಮ ಮೈ ಬಣ್ಣವನ್ನು ಇಷ್ಟಪಡಬೇಕು. ನಮ್ಮ ಶರೀರದ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು. ನಮ್ಮ ದೇಹಕ್ಕೆ ತಕ್ಕಂತೆ ಡ್ರೆಸ್ಸಿಂಗ್ ಸೆನ್ಸ್, ನಮ್ಮಲ್ಲಿರುವ ಆತ್ಮವಿಶ್ವಾಸ, ನಮ್ಮಲ್ಲಿರುವ ಕೌಶಲ್ಯ ಈ ಅಂಶಗಳು ನಮ್ಮನ್ನು ಆಕರ್ಷಕವಾಗಿ ಕಾಣಿಸುತ್ತದೆ.
ಅವಳು ಹೇಗೆ ನಡೆಯುತ್ತಾಳೆ
ಮಹಿಳೆಯ ನಡಿಗೆ ಕೂಡ ಪುರುಷ ಗಮನಿಸುತ್ತಾನೆ, ಅವಳು ಹೇಗೆ ನಡೆಯುತ್ತಾಳೆ ಎಂದು ನೋಡಿ ಅವಳ ಮೇಲೆ ಒಂದು ಇಂಪ್ರೆಷನ್ ಮೂಡುತ್ತದೆ. ನಡಿಗೆಯಲ್ಲಿ ಆತ್ಮವಿಶ್ವಾಸ ಇದ್ದರೆ ಪುರುಷ ಅವಳ ತಂಟೆಗೆ ಹೋಗಲು ಹಿಂರಿಯುತ್ತಾನೆ, ನಮ್ಮ ಮನಸ್ಸಿನ ಆತಂಕ ನಡಿಗೆಯಲ್ಲಿಯೇ ಗೊತ್ತಾಗುವುದು, ಅವಾಗ ಕೆಲ ಪುರುಷರು ಮಹಿಳೆಯರಿಗೆ ಕುಚೇಷ್ಠೆ ಮಾಡಲು ಮುಂದಾಗುತ್ತಾರೆ. ಆದ್ದರಿಂದ ಮಹಿಳೆಯರು ನಡೆಯುವಾಗ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಬೇಕು, ಅವಳಲ್ಲಿ ಅಳುಕು ಇರಬಾರದು. ಇಂಥ ಹೆಣ್ಮಕ್ಕಳ ಬಗ್ಗೆ ಪುರುಷರಲ್ಲಿ ಗೌರವದ ಭಾವನೆ ಹೆಚ್ಚಾಗುವುದು.



Click it and Unblock the Notifications