Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ 2ನೇ ಪ್ರಿ ವೆಡ್ಡಿಂಗ್ ಆಹ್ವಾನ ಪತ್ರಿಕೆ ವೈರಲ್..!
ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ ಯಾವಾಗಲು ಸುದ್ದಿಯಲ್ಲಿರುತ್ತೆ. ಈತ್ತೀಚಿಗೆ ಪುತ್ರ ಅನಂತ್ ಅಂಬಾನಿಯ ಮದುವೆಯ ವಿಚಾರವಾಗಿ ಸುದ್ದಿಯಾಗುತ್ತಿದೆ. ಜುಲೈನಲ್ಲಿ ಅವರ ವಿವಾಹ ಸಮಾರಂಭ ನಡೆಯಲಿದ್ದು, ಈಗ ಎರಡನೇ ಪ್ರಿ ವೆಡ್ಡಿಂಗ್ ಸಮಾರಂಭ ಮತ್ತೆ ಸದ್ದು ಮಾಡುತ್ತಿದೆ.
ಅನಂತ್ ಮತ್ತು ಅವರ ಪ್ರೇಯಸಿ ರಾಧಿಕಾ ಮರ್ಚೆಂಟ್ ಅವರ ಎರಡನೇ ಪೂರ್ವ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅದರ ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿವೆ. ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮವು ಇದೇ ತಿಂಗಳು ಅಂದರೆ ಮೇ 28-31ರ ನಡುವೆ ನಡೆಯಲಿದೆ.

ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಮೊದಲ ಗ್ರ್ಯಾಂಡ್ ಪ್ರಿ-ವೆಡ್ಡಿಂಗ್ ಪಾರ್ಟಿಯ ನಂತರ, ಈಗ ಇಟಲಿಯಲ್ಲಿ ತಮ್ಮ 2ನೇ ಪ್ರಿ ವೆಡ್ಡಿಂಗ್ ನಡೆಸಲು ಮುಂದಾಗಿದ್ದಾರೆ. ನಿರೀಕ್ಷೆಯಂತೆ ಇದು ಅದ್ಧೂರಿಯಾಗಿ ಸ್ಟಾರ್ ಸ್ಟಡ್ಡ್ ಅಫೇರ್ ಆಗಲಿದೆ. ರಣಬೀರ್ ಕಪೂರ್-ಆಲಿಯಾ ಭಟ್‌ನಿಂದ ಸಲ್ಮಾನ್ ಖಾನ್ ಮತ್ತು ಎಂಎಸ್ ಧೋನಿಯವರೆಗೆ ಸೆಲೆಬ್ರಿಟಿಗಳು ಈಗಾಗಲೇ ನಾಲ್ಕು ದಿನಗಳ ಪಾರ್ಟಿಗೆ ಕ್ರೂಸ್ ಹಡಗಿನಲ್ಲಿ ತೆರಳಿದ್ದಾರೆ.
ಮಾರ್ಚ್ 29 ರಂದು ಇಟಲಿಯಲ್ಲಿ ಪಾರ್ಟಿ ಪ್ರಾರಂಭವಾಗಲಿದೆ ಮತ್ತು ಜೂನ್ 1 ರಂದು ದಕ್ಷಿಣ ಫ್ರಾನ್ಸ್‌ನಲ್ಲಿ ಕೊನೆಗೊಳ್ಳಲಿದೆ. ಈ ನಡುವೆ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿಯವರ 2ನೇ ವಿವಾಹ ಪೂರ್ವ ಸಮಾರಂಭದ ಆಹ್ವಾನ ಪತ್ರಿಕೆಗಳು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
"ಈ ದಿನಗಳಲ್ಲಿ ಸ್ನೇಹಿತರು ಒಟ್ಟಿಗೆ ಸೇರಿದಾಗ ಜೀವಮಾನದ ಸಾಹಸ ಮಯವಾಗಿರುತ್ತದೆ, ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಹುಡುಕಾಟ ಮತ್ತು ಅನ್ವೇಷಣೆಯ ಪ್ರಯಾಣ." ಎಂದು ಬರೆದಿರುವ ಆಹ್ವಾನ ಪತ್ರಿಕೆಗಳು ಹರಿದಾಡುತ್ತಿದ್ದು, ಸೆಲೆಬ್ರಿಟಿಗಳು ಹಾಗೂ ಜನರು ಈ ಆಹ್ವಾನ ಪತ್ರಿಕೆ ಕಂಡು ಬೆರಗಾಗಿದ್ದಾರೆ.
ಎರಡನೇ ಪ್ರಿ ವೆಡ್ಡಿಂಗ್ ಸಮಾರಂಭವು ಮಾರ್ಚ್ 29 ರಂದು ಪ್ರಾರಂಭವಾಗುತ್ತದೆ, ಇದರಲ್ಲಿ ಅತಿಥಿಗಳನ್ನು ಲಂಚ್ ಪಾರ್ಟಿಯೊಂದಿಗೆ ಸ್ವಾಗತಿಸಲಾಗುತ್ತದೆ. ಜೊತೆಗೆ ಎಲ್ಲಾ ಅತಿಥಿಗಳಿಗೆ ಡ್ರೆಸ್ ಕೋಡ್ ನಿಯಮ ಸಹ ಜಾರಿ ಮಾಡಿದ್ದಾರೆ. ಕ್ಲಾಸಿಕ್ ಕ್ರೂಸ್ ಹಾಗೂ ಪಾಶ್ಚಾತ್ಯ ಫಾರ್ಮಲ್ಸ್ ಧರಿಸಲು ಅವರಿಗೆ ಸೂಚಿಸಲಾಗಿದೆ.
ಮೇ 30 ರಂದು, ರೋಮನ್ ಹಾಲಿಡೇ ಎಂಬ ಕಾರ್ಯಕ್ರಮವಿದೆ, ಇದಕ್ಕಾಗಿ ಪಾಲ್ಗೊಳ್ಳುವವರು ಪ್ರವಾಸಿ ಚಿಕ್ ಉಡುಪುಗಳನ್ನು ಧರಿಸಬೇಕು. ರಾತ್ರಿ ಹಡಗಿನಲ್ಲಿ ಟೋಗಾ ಪಾರ್ಟಿ ಸಹ ಏರ್ಪಡಿಸಲಾಗಿದೆ, ಇದು ಗ್ರೀಕೋ-ರೋಮನ್-ವಿಷಯದ ವೇಷಭೂಷಣ ಪಾರ್ಟಿಯಾಗಿದೆ, ಅಲ್ಲಿ ಪಾಲ್ಗೊಳ್ಳುವವರು ಸ್ಯಾಂಡಲ್‌ಗಳೊಂದಿಗೆ ಪ್ರಾಚೀನ ರೋಮನ್ ಉಡುಪುಗಳಿಂದ ಪ್ರೇರಿತವಾದ ಉಡುಪನ್ನು ಧರಿಸಲಿದ್ದಾರೆ.
ಮೇ 31 ರಂದು, "ವಿ ಟರ್ನ್ಸ್ ಒನ್ ಅಂಡರ್ ದಿ ಸನ್" ಎಂಬ ಈವೆಂಟ್ ಇದೆ. ಇದು ಬಹುಶಃ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಪುತ್ರಿ ವೇದಾ ಅಕ್ಷಾ ಅಂಬಾನಿ ಅವರ ಮೊದಲ ಹುಟ್ಟುಹಬ್ಬದ ಆಚರಣೆಯಾಗಿದೆ. ಸಂಜೆ, ಲೆ ಮಾಸ್ಕ್ವೆರೇಡ್ ಮತ್ತು ಪಾರ್ಡನ್ ಮೈ ಫ್ರೆಂಚ್ ಎಂಬ ಪಾರ್ಟಿ ಆಯೋಜನೆಗೊಂಡಿದೆ. ಜೂನ್ 1 ರಂದು 'ಲಾ ಡೋಲ್ಸ್ ವೀಟಾ' ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಸುಮಾರು 800 ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ ಸೇರಿ ಬಾಲಿವುಡ್‌ನ ಹಲವಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 800 ಮಂದಿ ಅತಿಥಿಗಳ ಆತಿಥ್ಯಕ್ಕೆ 600 ಮಂದಿ ಸಿಬ್ಬಂದಿ ಇರಲಿದ್ದಾರೆ ಎಂದು ತಿಳಿದುಬಂದಿದೆ.



Click it and Unblock the Notifications
