Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ತನ್ನ ನಾಯಿ ಜೊತೆಯೇ ಯೂಬರ್ ಆಟೋ ಓಡಿಸುವ ಬೆಂಗಳೂರಿನ ಚಾಲಕ: ಪರಿಶುದ್ಧ ಪ್ರೀತಿಯ ವೀಡಿಯೋ ವೈರಲ್
ನಿಜವಾದ, ಶುದ್ಧವಾದ ಪ್ರೀತಿ ಮನುಷ್ಯರಿಂದ ದೊರೆಯುವುದೋ ಹೇಳಲು ಸಾಧ್ಯವಿಲ್ಲ, ಆದರೆ ಪ್ರಾಣಿಗಳು ನೀಡುತ್ತದೆ, ಅದರಲ್ಲೂ ನಾಯಿ ತನ್ನ ಮಾಲೀಕನಿಗೆ ತೋರುವ ಪ್ರೀತಿ ಇದೆಯಲ್ಲಾ ಒಂದಿಷ್ಟೂ ಸ್ವಾರ್ಥವಿಲ್ಲದೆ ಅನ್ನ ಹಾಕಿದವನನ್ನು ಪ್ರೀತಿಸುತ್ತದೆ, ತನ್ನ ಮಾಲೀಕನ ಬಳಿ ಹಣವಿರಲಿ, ಇಲ್ಲದಿರಲಿ ಬಿಟ್ಟು ಹೋಗುವುದಿಲ್ಲ ,ಅದಲ್ಲವೇ ನಿಜವಾದ ಪ್ರೀತಿ.
ಇಲ್ಲೊಬ್ಬ ಆಟೋ ಡ್ರೈವರ್ ತಾನು ಸಾಕಿದ ನಾಯಿಯನ್ನು ಆಟೋದಲ್ಲಿ ಅದು ಡ್ರೈವರ್ ಸೀಟ್‌ನಲ್ಲಿ ತನ್ನ ಜೊತೆಯೇ ಕೂರಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವೀಡಿಯೋ ವೈರಲ್ ಆಗಿದ್ದು,ಈ ಪರಿಶುದ್ಧ ಪ್ರೀತಿ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದರ ವೀಡಿಯೋವನ್ನು pawful.world ಶೇರ್ ಮಾಡಿದ್ದು ಇವರು ಬೆಂಗಳೂರಿನ ಯೂಬರ್ ಆಟೋಡ್ರೈವರ್ ಆಗಿದ್ದಾರೆ.
ಆ ನಾಯಿ ಅವರ ಜೊತೆ ಕೂತು ಹೋಗುವ ದೃಶ್ಯ ನೋಡುವುದೇ ಚೆಂದ. ಅಬ್ಬಾ ಅವರಿಬ್ಬರ ನಡುವೆ ಎಷ್ಟೊಂದು ಪ್ರೀತಿ, ಈ ನಾಯಿ ಮಾತ್ರವಲ್ಲ ಎಲ್ಲಾ ನಾಯಿಗಳೂ ಅಷ್ಟೇ ನಾವು ಪ್ರೀತಿಸಿದರೆ ಅವು ಅದರ ಎರಡರಷ್ಟು ಪ್ರೀತಿ ತೋರಿಸುತ್ತದೆ, ತಾನು ಸಾಕಿದವರ ರಕ್ಷಣೆ ಸದಾ ನಿಲ್ಲುತ್ತದೆ, ನಮ್ಮ ಖುಷಿ- ದುಃಖ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ. ಆದ್ದರಿಂದಲೇ ಕೆಲವರ ಬದುಕಿನಲ್ಲಿ ನಾಯಿ ಎಲ್ಲರಿಗಿಂತ ತುಂಬಾನೇ ಮುಖ್ಯವಾಗಿರುತ್ತದೆ. ಏಕೆಂದರೆ ಯಾರೇ ಮೋಸ ಮಾಡಲಿ ತಾನು ಸಾಕಿದ ನಾಯಿ ಮೋಸ ಮಾಡಲ್ಲ ಎಂಬ ನಂಬಿಕೆ, ಆ ನಂಬಿಕೆಗೆ ಎಂದಿಗೂ ಮೋಸವಾಗುವುದಿಲ್ಲ.
ಹಣ ನೋಡಿ ಪ್ರೀತಿ ಬದಲಾಯಿಸಿದ ಹುಡುಗಿಯ ವೀಡಿಯೋ ವೈರಲ್
ಒಂದು ಕಡೆ ಇಂಥ ಶುದ್ಧ ಪ್ರೀತಿಯ ವೀಡಿಯೋ ವೈರಲ್ ಆಗುತ್ತಿದ್ದರೆ ಮತ್ತೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಹಣಕ್ಕಾಗಿ ಪ್ರೀತಿ ಬದಲಾಯಿಸಿದ ಹೆಣ್ಣಿನ ವೀಡಿಯೋ ವೈರಲ್ ಆಗುತ್ತಿದೆ. ಆಕೆಯೇ ಆ ಹುಡುಗನಿಗೆ ಕಾಲ್ ಮಾಡುತ್ತಾಳೆ, ಈತನ ನನ್ನ ಮನಸ್ಸು ಸರಿಯಿಲ್ಲ ಹಾಗಾಗಿ ಹೋಗಿಲ್ಲ ಎಂದು ಹೇಳುತ್ತಾನೆ, ಆದರೆ ಇವಳು ಕೆಲಸಕ್ಕೆ ಹೊರಡು ಎಂದು ಒತ್ತಾಯ ಮಾಡುತ್ತಾಳೆ, ನನಗೆ ಮನೆಯಲ್ಲಿ ಹುಡುಗ ನೋಡುತ್ತಿದ್ದಾರೆ, ಮನೆಯಲ್ಲಿ ನಮ್ಮ ಸಂಬಂಧ ಒಪ್ಪಲ್ಲ ಅಂತಾಳೆ, ಅದಕ್ಕೆ ಅವನು ನೀನು ಒಪ್ಪಿಸಲು ಪ್ರಯತ್ನಿಸಲಿಲ್ಲ ಏಕೆ ಎಂದು ಕೇಳಿದಾಗ ಮಾತು ತೇಲಿಸಿ ಬಿಡುತ್ತಾಳೆ.
ಮೊದಲಿಗೆ ಅವಳ ಮಾತು ಕೇಳುತ್ತಿದ್ದರೆ ಅಬ್ಬಾ ಅವಳಿಗೆ ಅವನ ಮೇಲೆ ಎಷ್ಟೊಂದು ಪ್ರೀತಿ ಅನಿಸುತ್ತದೆ, ಆದರೆ ಈ ಯಾರೋ ಅರುಣ್ ಎಂಬ ಹೆಸರು ಹೇಳಿದಾಗ ನಿಂಗೆ ಯಾರು ಹೇಳಿದ್ದು ಪ್ರಶ್ನಿಸುತ್ತಾಳೆ, ಅದಕ್ಕೆ ಅವನು ಅವನು ಯಾರು ಎಂದು ಕೇಳದೆ ನಿಂಗೆ ಯಾರು ಎಂದು ಕೇಳ್ತಾ ಇದ್ದೀಯಲ್ಲ ಎಂದು ಪ್ರಶ್ನಿಸುತ್ತಾನೆ ಹೀಗೆ ಇಬ್ಬರ ನಡುವೆ ವಾದ ಮುಂದುವರೆಯುತ್ತೆ, ಆಗ ಅವಳು ಅವನು ನನ್ನ ಲವರ್, ಅವನ ಬಳಿ ಹಣವಿದೆ, ನಿನ್ನ ಹತ್ರ ಏನಿದೆ? ನೀನು ಯಾವಾಗ ಸೆಟ್ಲ್ ಆಗುತ್ತೀಯಾ ಅಂತನೂ ಗೊತ್ತಿಲ್ಲ ಎಂದೆಲ್ಲಾ ಹೇಳುತ್ತಾಳೆ.
ಆಕೆ ಅಷ್ಟು ದಿನ ಪ್ರೀತಿಯ ನಾಟಕವಾಡಿದ್ದಳು, ಅದೆಲ್ಲವೂ ಕಳಚಿ ಬೀಳುತ್ತದೆ, ಹುಡುಗ ನಿನಗಾಗಿ ನಾನು ಸಾಲಗಾರನಾದೆ ಎಂದಾಗ ನಾನೇನು ನಿನ್ನ ಬಳಿ ಖರ್ಚು ಮಾಡಿಸಿದೆ ಎಂದು ಪ್ರಶ್ನೆ ಹಾಕುತ್ತಳೆ. ನೀನು ಕೇಳಿದೆ ಅಂತ ಉಂಗುರ ಹಾಕಿದೆ ತಾನೆ, ಅದು ಸಾಲ ಮಾಡಿ ಹಾಕಿದ್ದು ಅಂತಾನೆ, ಅದಕ್ಕವಳು ಆ ಉಂಗುರ ಮರಳಿಸುತ್ತೇನೆ ಅಂತಾಳೆ, ಹೀಗೆ ಅವಳು ಇಷ್ಟು ಸಮಯ ಪ್ರೀತಿಸಿದ ಹುಡುಗನಿಗಿಂತ ಆಸ್ತಿವಂತ ಬಂದಾಗ ಇವನ ಪ್ರೀತಿ ಬಿಡಲು ಸಿದ್ಧಳಾಗುತ್ತಾಳೆ.
ಪ್ರೀತಿಯಲ್ಲಿ ಹುಡುಗಿ ಮಾತ್ರವಲ್ಲ ಆ ಹುಡುಗನ ಬದುಕಿನಲ್ಲಿ ಹುಡುಗಿ ಮೋಸ ಮಾಡಿದ್ದಾಳೆ, ಅದೇ ಇನ್ನು ಕೆಲವು ಹೆಣ್ಮಕ್ಕಳು ಪ್ರೀತಿಸಿದವನಿಂದ ಮೋಸಕ್ಕೊಳಗಾಗುತ್ತಾರೆ, ಹೀಗೆ ಪ್ರೀತಿಯಲ್ಲಿ ಶುದ್ಧ ಪ್ರೀತಿ ಎಂಬುವುದು ಕೆಲವರ ಬದುಕಿನಲ್ಲಿ ಮಾತ್ರ ಇರುತ್ತದೆ, ಮೋಸವೇ ಹೆಚ್ಚು ಕಂಡು ಬರುವುದು, ಆದರೆ ಇ ನಾಯಿಗಳು ತೋರುವ ಪ್ರೀತಿ ಮಾತ್ರ ಅಷ್ಟೇ ಪರಿಶುದ್ಧವಾದದ್ದು ಅಲ್ವಾ?



Click it and Unblock the Notifications
