Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅತ್ತೆ ನಮ್ಮ ಮೇಕಪ್ ಬಳಸುತ್ತಾರೆ ಎಂದು ವಿಚ್ಚೇದನಕ್ಕೆ ಅರ್ಜಿ ಹಾಕಿದ ಅಕ್ಕ-ತಂಗಿ!
ಇತ್ತೀಚಿನ ದಿನಗಳಲ್ಲಿ ವಿಚ್ಛೇದ ಹೆಚ್ಚಾಗುತ್ತಿದೆ, ಕೆಲವರು ಸಿಲ್ಲಿ ಅಂದರೆ ಕ್ಷುಲಕ ಕಾರಣಕ್ಕೆ ವಿಚ್ಛೇದನ ಆಗುತ್ತದೆ, ಇಷ್ಟೆಕ್ಕೆಲ್ಲಾ ವಿಚ್ಛೇದನ ಆದರೆ ಏನಪ್ಪಾ ಬದುಕು ಎಂದು ಅನಿಸದೆ ಇರಲ್ಲ.
ಮೊನ್ನೆಯಷ್ಟೇ ಒಬ್ಬರು ಪತಿ ಹನಿಮೂನ್‌ಗೆ ಗೋವಾಗೆ ಕರೆದುಕೊಂಡು ಹೋಗುತ್ತೇನೆ ಎಂದು ಅಯೋಧ್ಯೆಗೆ ಕರೆದುಕೊಂಡು ಹೋದರು ಎಂದು ವಿಚ್ಛೇದನ ಕೇಳಿದ್ದರು.

ಇದೀಗ ಆಗ್ರಾದ ಮಹಿಳೆಯೊಬ್ಬರು ಅತ್ತೆ ತನ್ನ ಮೇಕಪ್ ಸೆಟ್ ಬಳಸುತ್ತಾರೆ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ, ಇಲ್ಲಿ ಅತ್ತೆ-ಸೊಸೆಯರ ಜಗಳದಲ್ಲಿ ಬಡಪಾಯಿ ಗಂಡಂದಿರ ಬದುಕು ಅತಂತ್ರವಾಗಿದೆ.
ಅತ್ತೆ ಮಾತು ಕೇಳಿ ನಮ್ಮ ಗಂಡಂದಿರು ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ನಮ್ಮ ಮೇಕಪ್ ಹಾಗೂ ಆಭರಣಗಳನ್ನು ಅತ್ತೆ ಬಳಸುತ್ತಾರೆ, ಇದರ ಬಗ್ಗೆ ಪದೇ ಪದೇ ಜಗಳವಾಗುತ್ತಿತ್ತು, ಆದರೂ ಅತ್ತೆ ನಮ್ಮ ವಸ್ತುಗಳನ್ನು ಬಳಸುತ್ತಿದ್ದರು ಹೀಗೆ ನಮಗೂ ನಮ್ಮ ಅತ್ತೆಗೂ ಜೋರು ಜಗಳವಾದಾಗ ನಮ್ಮ ಗಂಡಂದಿರು ನಮ್ಮನ್ನು ಮನೆಯಿಂದ ಹೊರಹಾಕಿದ್ದರೆ ಎಂದು ಅಕ್ಕ-ತಂಗಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.
ಅಕ್ಕ-ತಂಗಿಯನ್ನು ಒಂದೇ ಮನೆಗೆ ನೀಡಲಾಗಿತ್ತು
ಅಕ್ಕ-ತಂಗಿಯನ್ನು ಒಂದೇ ಮನೆಗೆ ನೀಡಿದರೆ ಅವರು ಅನ್ಯೂನ್ಯವಾಗಿರುತ್ತಾರೆ ಎಂದು ಹೇಳಲಾಗುವುದು. ಆದರೆ ಇಲ್ಲಿ ಅಕ್ಕ-ತಂಗಿ ಚೆನ್ನಾಗಿದ್ದರು ಆದರೆ ಇಬ್ಬರಿಗೂ ಅತ್ತೆಯನ್ನು ಕಂಡರೆ ಆಗುತ್ತಿರಲಿಲ್ಲ. ಇವರ ಮೇಕಪ್‌ಗಳನ್ನು ಇವರ ಅನುಮತಿಯಿಲ್ಲದೆ ಅತ್ತೆ ಬಳಸುವುದು ಇಬ್ಬರಿಗೂ ಇಷ್ಟವಿರಲಿಲ್ಲ. ಅದರಲ್ಲೂ ಮನೆಯಲ್ಲಿಯೇ ಇರುವಾಗ ಅತ್ತೆ ಮೇಕಪ್ ಬಳಸುವುದು ಇವರ ಸಮಸ್ಯೆಯಾಗಿತ್ತು.
ಮನೆಯೊಳಗಡೆ ಇರುವಾಗ ಆ ದುಬಾರಿ ಮೇಕಪ್ ಏಕೆ?
ಮನೆಯೊಳಗಡೆ ಇರುವಾಗ ಆ ದುಬಾರಿ ಮೇಕಪ್ ಏಕೆ ಹಾಕುತ್ತಾರೆ, ಎಲ್ಲಿಗಾದರೂ ಹೋಗುವಾಗ ಆದರೆ ಸರಿ ಎಂಬುವುದು ಸೊಸೆಯರ ಅಭಿಪ್ರಾಯವಾಗಿತ್ತು. ಆದರೆ ಅತ್ತೆಗೆ ಮೇಕಪ್ ಅಂದರೆ ಇಷ್ಟ ಅದರಲ್ಲೂ ಸೊಸೆಯರ ಮೇಕಪ್ ಬಳಸುವ ಗೀಳು, ಹೀಗೆ ಜಗಳವಾಗಿ ಅಕ್ಕ-ತಂಗಿ ಇಬ್ಬರೂ ಎರಡು ತಿಂಗಳಿನಿಂದ ಅಮ್ಮನ ಮನೆಯಲ್ಲಿ ಬಂದು ನೆಲೆಸಿದ್ದಾರೆ.
ಕೌನ್ಸಿಲಿಂಗ್ ಮಾಡಿದರೂ ಏನೂ ಪ್ರಯೋಜನವಾಗಿಲ್ಲ
ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ಇವರಿಗೂ ಅವರ ಗಂಡ ಹಾಗೂ ಅತ್ತೆಗೆ ಕೌನ್ಸಿಲಿಂಗ್ ಮಾಡಲಾಯಿತು, ಆದರೂ ಪ್ರಯೋಜನವಾಗಿಲ್ಲ, ಇಬ್ಬರು ನಾವು ಆ ಮನೆಗೆ ಹೋಗಲ್ಲ, ನಮ್ಮ ಗಂಡಂದಿರು ಅವರ ತಾಯಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ವಿಚ್ಛೇದನದ ಪಟ್ಟು ಹಿಡಿದು ಕೂತಿದ್ದಾರೆ. ಒಟ್ಟಿನಲ್ಲಿ ಚಿಕ್ಕ ವಿಷಯ ದೊಡ್ಡದಾಗಿ ಕುಟುಂಬವೇ ಒಡೆಯುವ ಸೂಚನೆಯಿದೆ.
ಸ್ವಲ್ಪ ಯೋಚಿಸದರೆ ಎಲ್ಲವೂ ಸರಿ ಮಾಡಬಹುದಿತ್ತು
ಅತ್ತೆ ನಮ್ಮ ಮೇಕಪ್ ಬಳಸುತ್ತಾರೆ ಎಂದರೆ ಅತ್ತೆ ಇಷ್ಟವಾಗುವ ಮೇಕಪ್‌ಗಳನ್ನು ತಂದು ಕೊಟ್ಟರೆ ಸಮಸ್ಯೆ ಇಷ್ಟು ದೊಡ್ಡದಾಗುತ್ತಿರಲ್ಲವೇನೋ? ಅತ್ತೆಗೂ ಸೊಸೆಯಂದಿರು ಈ ಕಾರಣಕ್ಕೆ ಜಗಳ ಮಾಡುತ್ತಿದ್ದಾರೆ ಎಂದಾದ ಮೇಲೆ ಮಕ್ಕಳಿಗೆ ಹೇಳಿ ಹೊಸ ಮೇಕಪ್ ತರಿಸಬಹುದಿತ್ತು, ಆದರೆ ಸುಮ್ಮನೆ ಮೇಕಪ್ ಕಾರಣವಷ್ಟೇ ಅಹಂನಿಂದಾಗಿ ಇಡೀ ಕುಟುಂಬದ ನೆಮ್ಮದಿ ಹಾಳಾಗಿದೆ.
ನಮ್ಮ ಹಿರಿಯರು ಎಷ್ಟೇ ಕಷ್ಟವಾದರು ಜೊತೆಗಿರುತ್ತಿದ್ದರು, ಆ ತಾಳ್ಮೆ ಈಗ ಇಲ್ಲವಾಗಿದೆ
ಹಿಂದೆಯೆಲ್ಲಾ ಎಷ್ಟೇ ಕಷ್ಟ ಬಂದರೂ ಹೊಂದಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದರು, ಆದರೆ ಈವಾಗ ಚಿಕ್ಕ ಕಾರಣಕ್ಕೆ ದೂರ ಸರಿಯುತ್ತಿದ್ದರೆ, ಪ್ರತಿ ಫ್ಯಾಮಿಲಿ ಕೋರ್ಟ್‌ನಲ್ಲಿ ಬರುವ ಕೇಸ್‌ಗಳಲ್ಲಿ ಬಹುತೇಕ ಕೇಸ್‌ಗಳು ಚಿಕ್ಕ ಕಾರಣವನ್ನು ದೊಡ್ಡದು ಮಾಡಿ ವಿಚ್ಛೇದನಕ್ಕೆ ಅರ್ಜಿ ಹಾಕಲು ಬಂದವರು ಆಗಿರುತ್ತಾರೆ.



Click it and Unblock the Notifications
