Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಮದುವೆ ಆಗೋದ್ರಿಂದ ನಿಮ್ಮ ಆರೋಗ್ಯ ಹಾಳಾಗುತ್ತಾ? ವೃದ್ಧಿಯಾಗಿತ್ತಾ?
ಮದುವೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ತುಂಬಾನೇ ವಿಶೇಷ. ಮದುವೆಗೂ ಮೊದಲು ಒಂದು ಬದುಕಾದ್ರೆ, ಮದುವೆಯ ನಂತರ ಮತ್ತೊಂದು ಹೊಸ ಬದುಕಿಗೆ ಕಾಲಿಡೋ ಕ್ಷಣ. ಯಾರಾದರೂ ಸರಿ ಮದುವೆಯ ನಂತರ ಸುಖವಾಗಿ ಇರಬೇಕೆಂದರೆ ಅವರ ಸಂಗಾತಿ ಹೇಗಿರುತ್ತಾರೋ ಅದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ.
ಸಂಗಾತಿಯ ಜೊತೆಗೆ ಭಾಂದವ್ಯ ಚೆನ್ನಾಗಿದ್ದರೆ ಮಾತ್ರ ಉತ್ತಮವಾಗಿ ಜೀವನ ನಡೆಸೋದಕ್ಕೆ ಸಾಧ್ಯ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವೂ ಬೀರಬಹುದು. ಮತ್ತೊಂದು ಕಡೆಯಿಂದ ಋಣಾತ್ಮಕ ಪರಿಣಾಮವೂ ಬೀರಬಹುದು. ಅಷ್ಟಕ್ಕು ಮದುವೆಯಿಂದ ಒರ್ವ ವ್ಯಕ್ತಿಯ ಆರೋಗ್ಯದ ಮೇಲೆ ಆಗುವ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳು ಯಾವುದು ಅನ್ನೋದನ್ನು ತಿಳಿಯೋಣ.

ಮದುವೆ ಆದ್ರೆ ಆರೋಗ್ಯದ ದೃಷ್ಟಿಯಿಂದ ಆಗುವ ಅನುಕೂಲಗಳೇನು?
1. ಆರೋಗ್ಯದ ಕಾಳಜಿ ಹೆಚ್ಚು ಮಾಡುತ್ತಾರೆ
ಮದುವೆಗೂ ಮೊದಲು ಕೆಲಸದ ನಿಮಿತ್ತ ದೂರ ಬಂದಿರಬಹುದು. ಆಗ ಪಿಜಿಯಲ್ಲೋ, ರೂಂ ನಲ್ಲಿ ಇದ್ದಾಗ ನಮ್ಮ ಕಾಳಜಿ ಮಾಡುವವರು ಯಾರು ಇರೋದಿಲ್ಲ. ಹುಷಾರಿಲ್ಲದಿದ್ದರೂ ಕೂಡ ಯಾರು ನಮ್ಮನ್ನು ಕೇಳೋದಿಲ್ಲ. ಆದರೆ ಮದುವೆಯಾದ ಮೇಲೆ ನಮಗಾಗಿ ನಮ್ಮ ಬೇಕು, ಬೇಡಗಳನ್ನು ವಿಚಾರಿಸುವವರು ನಮ್ಮ ಜೊತೆಗೆ ಇರುತ್ತಾರೆ. ನಮಗೆ ಕೊಂಚ ಹುಷಾರಿಲ್ಲ ಅಂತ ಗೊತ್ತಾದರೆ, ನಮ್ಮ ಹತ್ತಿರ ಕುಳಿತು ಕಾಳಜಿ ಮಾಡುತ್ತಾರೆ.
2. ಅನಾರೋಗ್ಯ ಅಭ್ಯಾಗಳಿಂದ ದೂರ ಇರುತ್ತಾರೆ
ಮದುವೆಗೂ ಮೊದಲು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದವರು ಮದುವೆಯ ನಂತರ ಸಂಗಾತಿಯಿಂದಾಗಿ ತುಂಬಾನೇ ಬದಲಾಗುತ್ತಾರೆ. ಕುಡಿತ, ಸಿಗರೇಟ್ ಹೀಗೆ ಕೆಟ್ಟ ಚಟಗಳಿಗೆ ದಾಸರಾಗಿದ್ದವರೂ ಕೂಡ ಮದುವೆಯಾದ ಮೇಲೆ ಹೆಂಡತಿ, ಮಕ್ಕಳಿಗಾಗಿ ಅದನ್ನೆಲ್ಲಾ ಬಿಟ್ಟು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸಿದವರು ತುಂಬಾ ಜನ ಇದ್ದಾರೆ. ಇದರಿಂದ ಅವರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ.
3. ಇಳಿ ವಯಸ್ಸಿನಲ್ಲಿ ಸಂತೋಷವಾಗಿ ಇರಬಹುದು
ಕೆಲವೊಂದು ಸಲ ನಮಗೆ ಯೌವನದಲ್ಲಿರಬೇಕಾದರೆ ಮದುವೆ ಬೇಡ ಅಂತ ಅನ್ನಿಸುತ್ತೆ. ಒಂಟಿಯಾಗಿ ಬದುಕೋದಕ್ಕೂ ಮನಸ್ಸು ಮಾಡುತ್ತೇವೆ. ಒಂಟಿಯಾಗಿಯೇ ಬದುಕುತ್ತೇವೆ. ಆದರೆ ವರ್ಷಗಳು ಕಳೆದಂತೆ ಅಪ್ಪ-ಅಮ್ಮಾ ಕೂಡ ದೂರ ಆಗುತ್ತಾರೆ.
ಕಾಲ ಕಳೆದಂತೆ ನಮಗೂ ವಯಸ್ಸಾಗುತ್ತದೆ. ಆಗ ಯಾರಾದರೂ ಒಬ್ಬರ ಆಸರೆ ಬೇಕಾಗುತ್ತದೆ. ಒಂದು ವೇಳೆ ಮದುವೆಯಾಗಿ ಇದ್ದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಆಸರೆಯಾಗಿ ಇರುತ್ತಾನೆ. ಇಳಿ ವಯಸ್ಸಿನಲ್ಲೂ ಕಾಳಜಿ ಮಾಡುತ್ತಾರೆ. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ.
ಮದುವೆ ಆದ್ರೆ ಆರೋಗ್ಯದ ದೃಷ್ಟಿಯಿಂದ ಆಗುವ ಅನಾನುಕೂಲಗಳೇನು?
1. ಖಿನ್ನತೆಗೆ ಒಳಗಾಗುತ್ತಾರೆ
ಎಲ್ಲಾ ಮದುವೆಗಳು ಸುಖಾಂತ್ಯವನ್ನು ಕಾಣಬೇಕಾಗಿಲ್ಲ. ಕೆಲವು ಸಂಸಾರಗಳು ಸುಖವಾಗಿ ಬದುಕಿದ್ದಕ್ಕಿಂತ ಅಲ್ಲಿ ಜಗಳ, ಮನಸ್ಥಾಪಗಳೇ ಹೆಚ್ಚಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಮನಸ್ಸಿಗೆ ನೆಮ್ಮದಿ ಇರೋದಿಲ್ಲ. ಗಂಡ-ಹೆಂಡತಿ ಇಬ್ಬರಿಗೂ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಅವರು ಖಿನ್ನತೆಯಿಂದ ಬಳಲುವ ಅಪಾಯವೂ ಹೆಚ್ಚಾಗಲಿದೆ.
2. ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ
ಮದುವೆಯಾದ ಮೇಲೆ ದಾಂಪತ್ಯದಲ್ಲಿ ಕಲಹಗಳೇ ಹೆಚ್ಚಾದರೆ ಒತ್ತಡ ಹಾಗೂ ಅತೃಪ್ತಿಕರ ಮದುವೆಯಿಂದ ಜನರು ವಿಶೇಷವಾಗಿ ಹೃದ್ರೋಗಕ್ಕೆ ಗುರಿಯಾಗುತ್ತಾರೆ. ಇನ್ನೂ ಮದುವೆಯ ನಂತರ ಮದುವೆಯ ನಂತರ ನಿಮ್ಮ ದೇಹವು ಬದಲಾಗುತ್ತದೆ. ರಕ್ತದೊತ್ತಡದ ಹೆಚ್ಚಳ, ಹೆಚ್ಚಿನ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
3. ಒಂಟಿತನ ಕಾಡುತ್ತದೆ
ಮದುವೆಯಾದರೂ ಆ ದಾಂಪತ್ಯದಲ್ಲಿ ಅವರು ಸುಖ ಕಾಣಲಿಲ್ಲ ಎಂದರೆ ಅವರು ಒಂಟಿಯಾಗಿ ಬಿಡುತ್ತಾರೆ. ಸಂಗಾತಿ ಇದ್ದೂ ಕೂಡ ಇಲ್ಲದಂತೆ ಬದುಕಬೇಕಾಗುತ್ತದೆ. ಒಂದೇ ಮನೆಯಲ್ಲಿ ಎರಡು ಗೋಡೆ ಸೃಷ್ಟಿಯಾಗುತ್ತದೆ. ಒಬ್ಬರ ಮುಖ ಮತ್ತೊಬ್ಬರು ನೋಡೋದಿಲ್ಲ. ಒಬ್ಬರಲ್ಲಿ ಮತ್ತೊಬ್ಬರು ಮಾತನಾಡೋದಿಲ್ಲ. ಇದರಿಂದ ಇಬ್ಬರೂ ಕೂಡ ಒಂಟಿತನವನ್ನು ಅನುಭವಿಸುತ್ತಾರೆ.
4. ಕೆಟ್ಟ ಚಟಗಳ ದಾಸರಾಗುತ್ತಾರೆ
ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ಕೂಡ ಪರಿಸ್ಥಿತಿ ಆತನನ್ನು ಕೆಟ್ಟವನಾಗಿಸಬಹುದು. ಸಂಸಾರದಲ್ಲಿ ತಾಪತ್ರಯ ಹೆಚ್ಚಾಗಿ, ಮನೆಯಲ್ಲಿ ನೆಮ್ಮದಿ ಇಲ್ಲ ಅಂತಾದಾಗ ಆತನ ಮನಶಾಂತಿಗಾಗಿ ಹುಡುಕಾಡುತ್ತಾನೆ. ಆಗ ಆತ ಕುಡಿತ, ಜೂಜು, ಸಿಗರೇಟ್ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾನೆ. ದಿನ ಕಳೆದಂತೆ ಇದು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಯ ಆರೋಗ್ಯವೂ ಹಾಳಾಗುತ್ತದೆ.
ಮದುವೆ ಎಂಬ ಸಂಬಂಧದಿಂದ ನಮ್ಮ ಆರೋಗ್ಯ ಉತ್ತಮವಾಗಬಹುದು ಅಥವಾ ಹಾಳಾಗಲೂಬಹುದು. ಅದಕ್ಕೆ ಕಾರಣಕರ್ತರು ನಾವೇ ಆಗಿರುತ್ತೇವೆ. ಹೀಗಾಗಿ ಸುಖ-ಸಂಸಾರ ಸಾಗಿಸುವ ಸೂತ್ರ ನಮಗೆ ಗೊತ್ತರಬೇಕು ಅಷ್ಟೇ.



Click it and Unblock the Notifications
