Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಟಿ ಸೋನಾಕ್ಷಿ ಸಿನ್ಹಾ ಕೈ ಹಿಡಿಯಲಿದ್ದಾರೆ ಗೆಳೆಯ ಜಹೀರ್ ಇಕ್ಬಾಲ್..! ಯಾರು ಈ ವರ ಗೊತ್ತಾ?
ಬಾಲಿವುಡ್ ಬ್ಯೂಟಿ, ನಟಿ ಸೋನಾಕ್ಷಿ ಸಿನ್ಹಾ ತನ್ನ ಬಹುಕಾಲದ ಗೆಳೆಯ ನಟ ಜಹೀರ್ ಇಕ್ಬಾಲ್ ಜೊತೆ ಮದುವೆಯಾಗಲು ನಿರ್ಧರಿಸಿದ್ದಾರೆ. ಇಬ್ಬರು ಇದೇ ಜೂನ್ 23 ರಂದು ವಿವಾಹವಾಗುವುದು ಖಚಿತವಾಗಿದೆ. 2020ರಿಂದಲೂ ಇಬ್ಬರೂ ಒಟ್ಟಿಗೆ ಓಡಾಡುವುದು ಸುತ್ತಾಡುವುದು ನಡೆದೇ ಇತ್ತು. ಆದರೆ ಇತ್ತೀಚಿಗೆ ಇಬ್ಬರು ಒಂದೇ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಈಗ ಅಂತಿಮವಾಗಿ ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
2022 ರಲ್ಲಿ ತೆರೆ ಕಂಡಿದ್ದ ಡಬಲ್ ಎಕ್ಸ್‌ಎಲ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅವರು ಕಳೆದ ವರ್ಷ ಜೋಡಿ ಬ್ಲಾಕ್‌ಬಸ್ಟರ್ ಎಂಬ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡರು. ಜಹೀರ್ ಮತ್ತು ಸೋನಾಕ್ಷಿ ಮುಂಬೈನಲ್ಲಿ ವಿವಿಧ ಕಾರ್ಯಕ್ರಮಗಳು ಮತ್ತು ಔತಣಕೂಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದರು.

ಕಪಿಲ್ ಶರ್ಮಾ ಅವರ ಕಾಮಿಡಿ ಶೋ, ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಕಾಣಿಸಿಕೊಂಡಾಗ, ಸೋನಾಕ್ಷಿ ಸಿನ್ಹಾ ಅವರು ಮದುವೆಯಾಗಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದರ ಕುರಿತು ಮಾತನಾಡಿದ್ದರು. ಆಲಿಯಾ ಭಟ್ ಮತ್ತು ಕಿಯಾರಾ ಅಡ್ವಾಣಿಯಂತಹ ಸೋನಾಕ್ಷಿಯ ಅನೇಕ ಸಹೋದ್ಯೋಗಿಗಳು ಈಗಾಗಲೇ ಮದುವೆಯಾಗಿದ್ದಾರೆ ಎಂದು ಕಪಿಲ್ ತಮಾಷೆ ಮಾಡಿದಾಗ ಇದು ಪ್ರಾರಂಭವಾಯಿತು. ಸೋನಾಕ್ಷಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು.
ಯಾರು ಈ ಜಹೀರ್ ಇಕ್ಬಾಲ್?
ಸೋನಾಕ್ಷಿ-ಜಹೀರ್ ಅವರ ಮದುವೆಯ ಸುತ್ತಲಿನ ಊಹಾಪೋಹಗಳು ಹೊರಹೊಮ್ಮಿದಾಗಿನಿಂದ, ಜಹೀರ್ ಇಕ್ಬಾಲ್ ಅವರ ಹಿನ್ನೆಲೆಯ ಬಗ್ಗೆ ಅನೇಕರು ಕುತೂಹಲ ಹೊಂದಿದ್ದಾರೆ. ಜಹೀರ್ ಒಬ್ಬ ಬಾಲಿವುಡ್ ನಟ, ಇವರನ್ನು ಬಾಲಿವುಡ್ ಸಲ್ಮಾನ್ ಖಾನ್ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು.
ಅವರು 2019 ರಲ್ಲಿ ಪ್ರನೂತನ್ ಜೊತೆಗೆ ನೋಟ್‌ಬುಕ್ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದರು. ನಂತರ, 35 ವರ್ಷದ ನಟ ಸೋನಾಕ್ಷಿ ಸಿನ್ಹಾ ಅವರೊಂದಿಗೆ ಸತ್ರಾಮ್ ರಮಣಿ ಅವರ 2022 ನಿರ್ದೇಶನದ ಡಬಲ್ ಎಕ್ಸ್‌ಎಲ್ ಮತ್ತು 2022 ರಲ್ಲಿ ಬ್ಲಾಕ್‌ಬಸ್ಟರ್ ಎಂಬ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು.
ಜಹೀರ್ ಹಾಗೂ ನಟ ಸಲ್ಮಾನ್ ಸಂಬಂಧಿಕರು ಜಹೀರ್ ತಂದೆ ಆಭರಣ ವ್ಯಾಪಾರಿ ಹಾಗೂ ಉದ್ಯಮಿಯಾಗಿದ್ದಾರೆ. ಇವರು ಮುಂಬೈನನಸ್ಕಾಟಿಷ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು ಅಲ್ಲದೆ ನಟ ರಣಬೀರ್ ಕಪೂರ್ ಸೀನಿಯರ್ ಆಗಿದ್ದರು. ಜಹೀರ್ ಇಕ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಜೊತೆಗೆ ಸಾರ್ವಜನಿಕವಾಗಿಯೂ ಇಬ್ಬರು ಕಾಣಿಸಿಕೊಳ್ಳುತ್ತಿದ್ದರು. ಸೋನಾಕ್ಷಿ ಹಲವು ಬಾರಿ ಜಹೀರ್ ಬಗ್ಗೆ ಸ್ನೇಹಿತ ಎಂದು ಕರೆಯುತ್ತಿದ್ದಳು.
ಸೋನಾಕ್ಷಿಯ ಹಿರಿಯ ನಟ ತಂದೆ ಶತ್ರುಘ್ನ ಸಿನ್ಹಾ ಇಬ್ಬರ ವಿವಾಹಕ್ಕೆ ಸಮ್ಮತಿ ನೀಡಿದ್ದಾರಂತೆ. ಸಲ್ಮಾನ್ ಖಾನ್ ಅವರ ಚಿತ್ರಗಳ ಮೂಲಕ ಇಬ್ಬರೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸೋನಾಕ್ಷಿ 2010 ರಲ್ಲಿ ದಬಾಂಗ್‌ನೊಂದಿಗೆ ಪಾದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019 ರಲ್ಲಿ ನೋಟ್‌ಬುಕ್ ಆಗಿತ್ತು.
ಕಳೆದ ವಾರ ಅವರ ಜನ್ಮದಿನದಂದು, ಜಹೀರ್ ತಮ್ಮ ಮುದ್ದಾದ ಫೋಟೋಗಳ ಹಂಚಿಕೊಂಡಿದ್ದರು. ಫೋಟೋದಲ್ಲಿ ಇಬ್ಬರು ತಬ್ಬಿಕೊಂಡಿರುವುದು ಕಾಣಿಸುತ್ತಿದೆ. ಸೋನಾಕ್ಷಿಯ ಹುಟ್ಟಿದ ದಿನದಂದು ಜಹೀರ್ ಶೂಟಿಂಗ್ ಸೆಟ್‌ಗೆ ತೆರಳಿ ಸರ್ಪ್ರೈಸ್ ನೀಡಿದ್ದರು.



Click it and Unblock the Notifications
