Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
3 ದಿನದಲ್ಲಿ 60 ಹುಡುಗರ ಮದುವೆಯಾದ ಮಹಿಳೆ..! ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ!
ಮದುವೆ ಅನ್ನೋದು ಯುವಕ ಅಥವಾ ಯುವತಿ ಜೀವನದಲ್ಲಿ ಬಹುಮುಖ್ಯ ಘಟ್ಟವಾಗಿರುತ್ತೆ. ಏಕೆಂದರೆ ಮದುವೆಯ ಬಳಿಕ ಅವರು ಹೊಸ ಜೀವನ ಆರಂಭಿಸುತ್ತಾರೆ. ಹೀಗಾಗಿ ತಮ್ಮ ಬಾಳ ಸಂಗಾತಿ ಆಯ್ಕೆಯಲ್ಲಿ ಹಲವು ಬಾರಿ ಯೋಚಿಸುತ್ತಾರೆ. ಮತ್ತೆ ಕೆಲವರಿಗೆ ಮದುವೆಯಾಗುವುದು ಸವಾಲಾಗುತ್ತದೆ. ಎಷ್ಟು ಹುಡುಕಿದರು ಸರಿಯಾದ ಜೋಡಿ ಸಿಗದೆ ಅವರು ಪರದಾಡುತ್ತಾರೆ. ಮತ್ತೆ ಕೆಲವರು ವಿವಾಹದ ಬಳಿಕ ವಿಚ್ಚೇದನವನ್ನೂ ಪಡೆದಿರುತ್ತಾರೆ.
ಆದ್ರೆ ಇಲ್ಲೊಬ್ಬ ಯುವತಿ ಮಾತ್ರ ಎಲ್ಲರು ಅಚ್ಚರಿ ಪಡುವಂತಹ ಮದುವೆಯಾಗಿದ್ದಾಳೆ. ಆಕೆ ಕೇವಲ ಮೂರು ದಿನದಲ್ಲಿ 60 ಮಂದಿಯನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಆಸ್ಟ್ರೇಲಿಯಾದ ಹುಡುಗಿ ಈ ರೀತಿ ಮದುವೆಯಾಗಿದ್ದು, ಈಗ ಭಾರೀ ಚರ್ಚೆಯಾಗುತ್ತಿದೆ. ಆಕೆ ವೃತ್ತಿಯಲ್ಲಿ ವೆಡ್ಡಿಂಗ್ ಫೋಟೋಗ್ರಾಫರ್ ಆಗಿದ್ದು, ಏಕಕಾಲದಲ್ಲಿ ಬಹಳ ಸಡಗರದಿಂದ ಹಲವರನ್ನು ವರಿಸಿದ್ದಾಳೆ. ಹುಡುಗಿ ಕೂಡ ಸುಮಾರು 3 ದಿನಗಳ ಕಾಲ ಮದುವೆಯನ್ನು ಆಚರಿಸಿದಳು. ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಈಗ ವೈರಲ್ ಆಗಿವೆ.

ಅಚ್ಚರಿ ಎಂದರೆ ಆಕೆ ಮೊದಲು ತನಗೆ ಮದುವೆ ಇಷ್ಟವಿಲ್ಲ ಎಂದಿದ್ದಳಂತೆ ಆದರೆ ಈಗ ಒಂದೇ ಬಾರಿಗೆ 60 ಹುಡುಗರನ್ನು ಮದುವೆಯಾಗಿದ್ದಾಳೆ. ವೆಡ್ಡಿಂಗ್ ಫೋಟೊಗ್ರಾಫರ್ ಆಗಿರುವ ಆಕೆ ಹಲವರ ಮದುವೆಯ ಫೋಟೋ ತೆಗೆದಿದ್ದಾಳೆ. ಆದರೆ ಸ್ವಂತ ಮದುವೆ ವಿಚಾರ ಬಂದಾಗ ಶಾಕಿಂಗ್ ನಿರ್ಧಾರ ಕೈಗೊಂಡು 60 ಹುಡುಗರನ್ನು ಒಂದೇ ಬಾರಿಗೆ ಮದುವೆಯಾದಳು.
ಈ ಹುಡುಗರೆಲ್ಲರೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾರೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ. 40 ವರ್ಷದ ಆಕೆ 60 ಹುಡುಗರನ್ನು ಒಂದೇ ಬಾರಿಗೆ ಮದುವೆಯಾದದ್ದು ಏಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
60 ಹುಡುಗರನ್ನು ಏಕಕಾಲಕ್ಕೆ ಮದುವೆಯಾದ ಹುಡುಗಿಯ ಹೆಸರು ಕಾರ್ಲಿ ಸಾರೆ, ಅವರು ದಕ್ಷಿಣ ಆಸ್ಟ್ರೇಲಿಯಾದ ನಿವಾಸಿಯಾಗಿದ್ದಾಳೆ. ಕಾರ್ಲಿ ಕಳೆದ ತಿಂಗಳು ಬ್ರಿಸ್ಬೇನ್ ಬಳಿ ಮೂರು ದಿನಗಳ ಸಮಾರಂಭದಲ್ಲಿ 60 ಪುರುಷರನ್ನು ವಿವಾಹವಾದಳು. ಈ ಹುಡುಗರೆಲ್ಲ ಕಾರ್ಲಿಯ ಒಳ್ಳೆಯ ಸ್ನೇಹಿತರಂತೆ. 60 ಹುಡುಗರನ್ನು ಏಕಕಾಲಕ್ಕೆ ಮದುವೆಯಾಗಲು ಕಾರಣವೇನು ಎಂದು ಕೇಳಿದಾಗ, ನಾನು ವೆಡ್ಡಿಂಗ್ ಫೋಟೋಗ್ರಾಫರ್, ನಾನು ನನ್ನ ಅರ್ಧದಷ್ಟು ಜೀವನವನ್ನು ವೆಡ್ಡಿಂಗ್ ಫೋಟೋಗ್ರಫಿಯಲ್ಲಿ ಕಳೆದಿದ್ದೇನೆ.
ಮದುವೆಗಳಲ್ಲಿ ಒಬ್ಬ ಹುಡುಗ ಅಥವಾ ಹುಡುಗಿಯೊಂದಿಗಿನ ಮದುವೆಯಲ್ಲಿ ಸಂಸ್ಕಾರಗಳ ಕೊರತೆಯಿದೆ ಎಂದು ನಾನು ನೋಡಿದ್ದೇನೆ, ಆದರೆ ಹೆಚ್ಚು ಹುಡುಗರನ್ನು ಒಟ್ಟಿಗೆ ಮದುವೆಯಾದಾಗ, ಅದು ಸಂಸ್ಕಾರಗಳಿಂದ ತುಂಬಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂಬ ಅಚ್ಚರಿಯ ಉತ್ತರ ಆಕೆ ನೀಡಿದ್ದಾಳೆ.
ಮದುವೆಗೆ ಮುನ್ನ ನಾವು ಹೇಗೆ ಮದುವೆಯಾಗಬೇಕು, ಹುಡುಗ ಹೇಗೆಲ್ಲಾ ಇರಬೇಕು ಎಂದು ನಾವು ಕನಸು ಕಾಣುತ್ತೇವೆ. ಆದರೆ ಅದೆಲ್ಲ ನೆರವೇರುವುದಿಲ್ಲ. ಹೀಗಾಗಿ ಮದುವೆ ಎಂದರೆ ನನಗೆ ಮೊದಲು ಬಹಳ ಭಯವಿತ್ತು. ಎಲ್ಲಾ ಮದುವೆ ನೋಡುವಾಗ ನನ್ನಲ್ಲಿ ಭಯ ಹೆಚ್ಚಾಗುತ್ತಿತ್ತು. ಆದರೆ ಬರು ಬರುತ್ತಾ ಈ ಭಯ ಕಡಿಮೆಯಾಗಿತ್ತು, ಆದರೆ ಮದುವೆ ಬಗ್ಗೆ ನನ್ನಲ್ಲಿದ್ದ ಭಾವನೆ ಬದಲಾಗಿತ್ತು. ನನ್ನ ಜೀವನದಲ್ಲಿ ನಾನು ತುಂಬಾ ಪ್ರೀತಿಸುವ ಅನೇಕ ಜನರಿದ್ದಾರೆ ಎಂದಿದ್ದಾಳೆ.
ನನ್ನ ಬದ್ಧತೆ ಮತ್ತು ಗೌರವವನ್ನು ನನಗೆ ಹತ್ತಿರವಿರುವವರೊಂದಿಗೆ ವ್ಯಕ್ತಪಡಿಸಲು ನಾನು ನಿರ್ಧರಿಸಿದ್ದೇನೆ. ನಂತರ ನಾನು ಮಿಂಜೆರಿಬಾದ ಉತ್ತರ ಸ್ಟ್ರಾಡ್‌ಬ್ರೋಕ್ ದ್ವೀಪದಲ್ಲಿ 60 ಸ್ನೇಹಿತರೊಂದಿಗೆ ವಿವಾಹವನ್ನು ಯೋಜಿಸಿದೆ. ಸುಮಾರು ಮೂರು ದಿನಗಳ ಕಾಲ ಸಂಭ್ರಮದ ವಾತಾವರಣ ಇತ್ತು ಎಂದಿದ್ದಾಳೆ.
ಈ ಮದುವೆಯಲ್ಲಿ ಎಲ್ಲಾ ವಿಧದ ವಿಧಿವಿಧಾನಗಳನ್ನು ಸಹ ನೆರವೇರಿಸಲಾಯಿತು. ನಾವೆಲ್ಲರೂ ಪರಸ್ಪರ ಕೈ ಹಿಡಿದಿದ್ದೇವೆ ಮತ್ತು ಪರಸ್ಪರ ಭರವಸೆಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದಳು. ಈ ಕುರಿತಂತೆ ಆಕೆ ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾಳೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಶಾಕ್‌ಗೆ ಒಳಗಾಗಿದ್ದಾರೆ.



Click it and Unblock the Notifications
