ವೃದ್ಧಾಶ್ರಮದಲ್ಲಿ 80ರ ವೃದ್ಧನ ಮದುವೆಯಾದ 23ರ ಯುವತಿ

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅನ್ನೋ ಮಾತಿದೆ. ಮದುವೆ ಅನ್ನೋದು ಪ್ರೀತಿ, ವಿಶ್ವಾಸ, ಸುಂದರವಾದ ಬಾಂದವ್ಯವಿದ್ದಾಗ ಮಾತ್ರ ಮೂರು ಗಂಟಿನ ಜೊತೆಗೆ ಗಟ್ಟಿಯಾಗೋದಕ್ಕೆ ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾಗುವಷ್ಟೇ ವೇಗವಾಗಿ ಮದುವೆ ಮುರಿದು ಬೀಳುತ್ತದೆ.

ಆದ್ರೆ ಇಲ್ಲೊಬ್ಬ ವ್ತಕ್ತಿಗೆ ಇದು ತದ್ವಿರುದ್ದ ಎನ್ನಬಹುದು. ಆತ ತನ್ನ 80ನೇ ಯವಸ್ಸಿನಲ್ಲಿ 23 ವರ್ಷದ ಯುವತಿಯನ್ನು ಮದುವೆಯಾಗಿದ್ದಾನೆ. ಮದುವೆ ಅನ್ನೋದು ಒಂದು ಸುಂದರ ದಾಂಪತ್ಯ ಬಂಧ. ಆದ್ರೆ ಪ್ರೀತಿಗೆ ಇದ್ಯಾವುದೂ ಇಲ್ಲ. ಇಲ್ಲೊಬ್ಬ 80 ವರ್ಷದ ಚೀನಾದ ವ್ಯಕ್ತಿಯೊಬ್ಬರು ವೃದ್ಧಾಶ್ರಮದಲ್ಲಿ ಯುವತಿಯನ್ನ ಪ್ರೀತಿಸಿ ಮದುವೆಯಾಗಿರುವ ಘಟನೆ ನಡೆದಿದೆ.

A 23-year-old woman married to an 80-year-old man in a nursing home

ವರದಿಯ ಪ್ರಕಾರ, ಚೀನಾದ ಹೆಬೈ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ, ಅಲ್ಲಿ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಂಗ್ ಎಂಬ ಯುವತಿ ಶ್ರೀ ಲಿ ಎಂಬ ಹಿರಿಯನ ನೋಡಿ ಮಾತನಾಡಿಸಿದ್ದಳು. ಇಬ್ಬರೂ ಆಪ್ತ ಸ್ನೇಹಿತರಾದರು ಮತ್ತು ಅಂತಿಮವಾಗಿ ಇಬ್ಬರ ನಡುವೆ ಪ್ರೀತಿ ಅರಳಿತು ಮತ್ತು ಅವರು ಮದುವೆಯಾಗಲು ನಿರ್ಧರಿಸಿದರು.

ಆಕೆಯ ಕುಟುಂಬವು ತನ್ನ ಸಂಬಂಧವನ್ನು ಒಪ್ಪದಿದ್ದರೂ, ಲಿಯನ್ನು ಮದುವೆಯಾಗಲು ಆಕೆ ತನ್ನ ಕುಟುಂಬವನ್ನೇ ತೊರೆದಳು. ಆತನ ವ್ಯಕ್ತಿತ್ವ ಗುಣಕ್ಕೆ ಆಕೆ ಮಾರುಹೋಗಿದ್ದಳಂತೆ. ಇತ್ತೀಚೆಗೆ ಸರಳ ಸಮಾರಂಭದಲ್ಲಿ ದಂಪತಿ ಮದುವೆಯಾಗಿದ್ದಾರೆ. ಈ ಮದುವೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕ್ಸಿಯಾನ್‌ಫಾಂಗ್ ಮತ್ತು ಲಿ ಅವರ ಪ್ರಣಯ ಕಥೆಯು ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ, ಹಲವಾರು ಹುಡುಗಿ ಹಣಕ್ಕಾಗಿ ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ಆರೋಪಿಸಿದರು, ಆದರೆ ಅನೇಕರು ಅವಳ ಧೈರ್ಯ ಮತ್ತು ಲಿ ಮೇಲಿನ ಪ್ರೀತಿಗಾಗಿ ಅವಳನ್ನು ಶ್ಲಾಘಿಸಿದರು.

ಕ್ಸಿಯಾನ್‌ಫಾಂಗ್ ಕುಟುಂಬದ ಜೀವನಾಧಾರ ಮತ್ತು ವೃದ್ಧಾಪ್ಯ ಮತ್ತು ಆರೋಗ್ಯದ ಕಾರಣದಿಂದ ಲಿ ತನ್ನ ಪಿಂಚಣಿ ಹಣವನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಹುಡುಗಿ ಆತನಲ್ಲಿ ಹಣವನ್ನು ನೋಡಿ ಮದುವೆಯಾಗಿಲ್ಲ ಎಂದು ತಿಳಿದುಬಂದಿದೆ.

ಆದ್ರೆ ಇವರಿಬ್ಬರ ಪ್ರೇಮ ಪುರಾಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ಜೋಡಿ ನೋಡಿ ಹಲವರು ಶಾಕ್‌ ಆಗಿದ್ದಾರೆ. ಏಕೆಂದರೆ ವೃದ್ಧಾಪ್ಯದಲ್ಲಿ ಆತ ಇಂತಹ ಸುಂದರ ಹುಡುಗಿಯ ಕೈ ಹಿಡಿದಿದ್ದಾನೆ ಎಂದು ಕೆಲವರು ಅಚ್ಚರಿಗೆ ಒಳಗಾಗಿದ್ದಾರೆ. ಮತ್ತೆ ಕೆಲವರು ಆಕೆಯ ಜೀವನ ಸುಖಾಂತ್ಯವಾಗದು ಎಂದಿದ್ದಾರೆ.

ಹಿರಿಯ ವ್ಯಕ್ತಿಯನ್ನು ಆಕೆ ಮದುವೆಯಾದರೆ ಆತನ ಆಯಸ್ಸು ಕಡಿಮೆ ಇದೆ. ಆಕೆ ಮತ್ತೊಂದು ಮದುವೆಯಾಗಬೇಕಾಗುತ್ತದೆ. ಅಷ್ಟೊಂದು ಕಾಳಜಿ ಇದ್ದರೆ ಆತನ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬಹುದಿತ್ತು ಎಂದಿದ್ದಾರೆ. ಮತ್ತೆ ಕೆಲವರು ಇಂತಹ ವಿಚಿತ್ರ ಮದುವೆಗಳು ಪ್ರೀತಿಯ ಕಾರಣಕ್ಕೆ ನಡೆಯುವುದಲ್ಲ. ಬದಲಿಗೆ ಇದಕ್ಕೆ ಹಲವು ಕಾರಣಗಳಿರುತ್ತವೆ ಎಂದಿದ್ದಾರೆ.

ಇಂತಹ ಪ್ರಕರಣಗಳ ನೋಡಿಯೇ ಹಿರಿಯರು ಪ್ರೀತಿ ಕುರುಡು ಎಂದಿರಬಹುದು. ಏಕೆಂದರೆ ಯಾವ ಯುವತಿಯೇ ಆದರು ತಾವು ಮದುವೆಯಾಗುವ ಅಥವಾ ಪ್ರೀತಿಸುವ ಯುವಕ ಹೇಗಿರಬೇಕು ಎಂಬ ಕನಸನ್ನು ಕಂಡಿರುತ್ತಾರೆ. ಯುವಕನಾಗಿ, ಒಳ್ಳೆಯ ಕೆಲಸ, ಆಸ್ತಿ, ಹಣ ಎಲ್ಲವೂ ಇರಬೇಕು ಎಂದು ಬಯಸುವ ಕಾಲದಲ್ಲಿ ಆಕೆ ವೃದ್ಧಾಶ್ರಮದಲ್ಲಿ ಇದ್ಯಾವುದೂ ಇಲ್ಲದ ವೃದ್ಧನನ್ನು ಏಕೆ ಮದುವೆಯಾದಳು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.

English summary

A 23-Year-Old Woman Married An 80-Year-Old

But it can be said that it is the opposite for another person. He is married to a 23-year-old woman in his 80s. Marriage is a beautiful bond. But love has none of this. An 80-year-old Chinese man fell in love with a young woman in an old age home and got married
X
Desktop Bottom Promotion