Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರಿಂದ ಮಹಿಳೆ ಬಯಸುವ 7 ಬೇಡಿಕೆಗಳಿವು..! ಏನದು ನೋಡಿ..!
ಮಹಿಳೆಯರು ಯಾವಾಗಲೂ ಪುರುಷರಿಗೆ ನಿಗೂಢವಾಗಿ ಕಾಣುತ್ತಾರೆ. ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಅನ್ನೋದು ಪ್ರತಿಯೊಬ್ಬ ಪುರುಷನ ವಾದವಾಗಿದೆ. ಹೆಣ್ಣಿಗೆ ಎಷ್ಟೇ ಹತ್ತಿರವಾದರು ಆಕೆಯ ಮನಸ್ಸಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಊಹಿಸಲು ಸಹ ಸಾಧ್ಯವಾಗುವುದಿಲ್ಲ. ಜೊತೆಗೆ ಮಹಿಳೆಯರು ಸಹ ತಮ್ಮ ಪ್ರೇಮಿ, ಸಂಗಾತಿಯೊಂದಿಗೆ ಸಂಪೂರ್ಣವಾಗಿ ಮುಕ್ತರಾಗಿ ಇರುವುದಿಲ್ಲ.
ಪುರುಷರು ತಮ್ಮನ್ನು ಅರ್ಥ ಮಾಡಿಕೊಂಡಿಲ್ಲ ಎಂಬುದೇ ಪ್ರತಿ ಹೆಣ್ಣಿನ ನೋವಾಗಿರುತ್ತೆ. ಇದು ಮಹಿಳೆಯರು ಪ್ರೀತಿಯಲ್ಲಿ ನಿರಾಶೆ ಮತ್ತು ಅಸಮಾಧಾನವನ್ನು ಅನುಭವಿಸುವಂತೆ ಮಾಡುತ್ತದೆ. ಹಾಗಾದರೆ ಪ್ರತಿ ಮಹಿಳೆಯು ಪುರುಷರಿಂದ ಬಯಸುವುದೇನು..? ಅವರ ಮನದಾಸೆ ಏನಾಗಿರುತ್ತದೆ ಎಂಬುದನ್ನು ನಾವಿಂದು ತಿಳಿಯುವ ಪ್ರಯತ್ನ ಮಾಡೋಣ.

ಮಹಿಳೆಯರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಪುರುಷರಿಗೆ ಹೆಚ್ಚಿನ ಸಮಯ ಮತ್ತು ತಾಳ್ಮೆ ಇರಬೇಕಾಗುತ್ತದೆ. ಆದರೆ ಮಹಿಳೆಯರ ಅಗತ್ಯಗಳು, ಬೇಡಿಕೆಗಳು ತುಂಬಾ ಸಾಮಾನ್ಯ ಮತ್ತು ಸರಳವಾಗಿರುತ್ತವೆ. ಮಹಿಳೆಯ ಅಗತ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರೂ, ಕೆಲವು ಮೂಲಭೂತ ಅಗತ್ಯಗಳು ಸಾಮಾನ್ಯವಾಗಿದೆ. ಹಾಗಾದರೆ ಅವರ ಬೇಡಿಕೆಳೇನಾಗಿರಬಹುದು ಎಂಬುದನ್ನು ನೋಡೋಣ.
ಮುಕ್ತವಾಗಿ ಮಾತನಾಡಲು ಅವರು ಬಯಸುತ್ತಾರೆ
ಮಹಿಳೆಯರು ಮಾತನಾಡಲು ಬಯಸುತ್ತಾರೆ. ಆದರೆ ಪುರುಷರು ಈ ಭಾವನೆ ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಮುಕ್ತವಾಗಿ ಏನನ್ನಾದರು ಮಾತನಾಡಲು ಮುಂದೆ ಬಂದರೆ ಕೆಲಸದ ವಿಚಾರವಾಗಿಯೋ ಇಲ್ಲವೆ ಬೇರೆ ಕಾರಣಕ್ಕಾಗಿ ಪುರುಷರು ಮಾತನಾಡಲು ಸಿಗುವುದಿಲ್ಲ. ಹೀಗಾಗಿ ಮಹಿಳೆಯರಲ್ಲಿ ಕೆಲವೊಮ್ಮೆ ಮುನಿಸು, ವೈಮನಸ್ಸು ಕಾಣಬಹುದು. ಮಹಿಳೆಯರು ತಮ್ಮ ಆಲೋಚನೆಗಳು, ಅಭುಪ್ರಾಯಗಳು, ನೋವು-ನಲಿವುಗಳ ಹಂಚಿಕೊಳ್ಳಲು ಇಚ್ಛಿಸುತ್ತಾರೆ.
ಗೌರವ
ಮಹಿಳೆ ದೊಡ್ಡ ಕಂಪನಿಯ ಕೆಲಸ ಮಾಡುತ್ತಿರಲಿ ಅಥವಾ ಗೃಹಿಣಿಯಾಗಿರಲಿ, ಪ್ರತಿಯೊಂದು ಸಂದರ್ಭದಲ್ಲೂ ಅವರ ಕೊಡುಗೆ ಅಮೂಲ್ಯವಾಗಿದೆ. ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳಬೇಕು ಮತ್ತು ಅವರ ಪಾಲುದಾರರು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಅದೇ ರೀತಿ ಮಾಡಬೇಕೆಂದು ನಿರೀಕ್ಷಿಸುತ್ತಾರೆ. ಮಹಿಳೆಯರನ್ನು ಗೌರವದಿಂದ ಕಾಣುವ ಪುರುಷನು ಮಹಿಳೆಯರನ್ನು ಸುಲಭವಾಗಿ ಗೆಲ್ಲುತ್ತಾನೆ.
ಮೆಚ್ಚುಗೆ
ಮಹಿಳೆಯರು ಬಹಿರಂಗವಾಗಿ ಹೇಳದಿದ್ದರೂ, ಅವರು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಪ್ರಶಂಸೆಯನ್ನು ನಿರೀಕ್ಷಿಸುತ್ತಾರೆ. ಸಂಬಂಧಗಳನ್ನು ನಿರ್ವಹಿಸುವಲ್ಲಿ ಅವರು ಮಾಡುವ ಎಲ್ಲಾ ಕಠಿಣ ಪರಿಶ್ರಮ ಮತ್ತು ಅವರು ಮಾಡುವ ಎಲ್ಲದಕ್ಕೂ ಅವರು ಮೆಚ್ಚುಗೆಯನ್ನು ಬಯಸುತ್ತಾರೆ.
ಬೆಂಬಲ
ಮಹಿಳೆಯರು ತಮ್ಮ ಶಕ್ತಿ ಮತ್ತು ಬೆಂಬಲದಿಂದ ರಕ್ಷಿಸುವ ಮತ್ತು ಸಾಂತ್ವನ ನೀಡುವ ಸಂಗಾತಿಯನ್ನು ಬಯಸುತ್ತಾರೆ. ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯಗಳ ಮೂಲಕ ತಮ್ಮೊಂದಿಗೆ ಇರುವವರನ್ನು ಮಹಿಳೆಯರು ಹುಡುಕುತ್ತಾರೆ.
ಸ್ವಾತಂತ್ರ್ಯ
ಮಹಿಳೆಯರು ತಮ್ಮ ಆತ್ಮವನ್ನು ಕಳೆದುಕೊಳ್ಳದೆ ತಾವಾಗಿಯೇ ಇರಲು ಅನುವು ಮಾಡಿಕೊಡುವ ಸಂಬಂಧಗಳನ್ನು ಬಯಸುತ್ತಾರೆ, ಮಹಿಳೆಯರು ತಮ್ಮ ಆತ್ಮವನ್ನು ಕಳೆದುಕೊಳ್ಳದೆ ಗೌರವದಿಂದ ಎತ್ತರಕ್ಕೆ ಹಾರಲು ಬಯಸುತ್ತಾರೆ.
ಚಿಕ್ಕ ವಿಚಾರದಲ್ಲೂ ಸಂತೋಷ
ಆಕೆ ಸಣ್ಣ-ಪುಟ್ಟ ವಿಚಾರದಲ್ಲೂ ಸಂತೋಷ, ಖುಷಿಯನ್ನು ಕಾಣಲು ಬಯಸುತ್ತಾಳೆ. ಆದರೆ ಪುರುಷರು ಇದಕ್ಕೆ ತದ್ವಿರುದ್ದವಾಗಿರುತ್ತಾರೆ. ಆಕೆಗೆ ಚಿಕ್ಕ ಚಿಕ್ಕ ಉಡುಗೊರೆ, ಸರ್ಪ್ರೈಸ್, ಪ್ರವಾಸ ಹೀಗೆ ಹತ್ತಾರು ಆಸಕ್ತಿಗಳಿರುತ್ತದೆ. ಆದರೆ ಪುರುಷರಿಗೆ ಕೆಲಸ ಮತ್ತು ದುಡಿಮೆಗಿಂತ ಹೆಚ್ಚು ಯೋಚನೆ ಯಾವುದರಲ್ಲೂ ಇರುವುದಿಲ್ಲ.
ಸದಾ ಜೊತೆಗಿರಲು ಬಯಸುವಳು
ಮಹಿಳೆ ನಿಮ್ಮ ಜೀವನದಲ್ಲಿ ಯಾವುದೇ ಪಾತ್ರ ಮಾಡುತ್ತಿರಲಿ, ಅದು ತಾಯಿ, ಪ್ರೇಯಸಿ ಅಥವಾ ಮಡದಿ ಹೀಗೆ ಪ್ರತಿಯೊಂದು ಪಾತ್ರವೂ ಇಲ್ಲಿ ನಿಮ್ಮ ಶ್ರೇಯಸ್ಸನ್ನೇ ಬಯಸುತ್ತಾಳೆ. ಅದರಲ್ಲೂ ಸದಾ ಕಾಲ ಜೊತೆಗಿರುವಂತೆ ಆಕೆಯ ಬೇಡಿಕೆಯಾಗಿರುತ್ತದೆ. ಇದಕ್ಕಾಗಿ ಆಕೆ ಎಲ್ಲಾ ಸಾಹಸಗಳನ್ನೂ ಮಾಡುತ್ತಾಳೆ. ಆದರೆ ಪುರುಷರು ಈ ಮನೋಭಾವ ಅರಿತುಕೊಳ್ಳುವಲ್ಲಿ ಸೋಲುತ್ತಾರೆ.



Click it and Unblock the Notifications
