Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಅವಳಿಗೆ ನಿಮ್ಮ ಮೇಲೆ ಆಸಕ್ತಿ ಇಲ್ಲವಾಗಿದೆಯೇ: ಈ 6 ಕಾರಣಗಳಿರಬಹುದು
ಪರಿಚಯವಾದ ಹೊಸತರಲ್ಲಿ ಒಂದು ಕ್ಷಣ ಬಿಟ್ಟಿರಲಾರದಷ್ಟು ಆಕರ್ಷಣೆ ಆದರೆ ಆ ಆಕರ್ಷಣೆ ಅವಳಲ್ಲಿ ಕಡಿಮೆಯಾಗಿದೆ, ಅವಳು ನಿಮ್ಮತ್ತ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂದು ಅನಿಸುತ್ತಿದೆಯೇ? ಇದಕ್ಕೆ ನಾನಾ ಕಾರಣಗಳಿರಬಹುದು. ಸಾಮಾನ್ಯವಾಗಿ ಹೆಣ್ಣು ತನ್ನ ಪುರುಷನ ಮೇಲೆ ಈ ಕಾರಣದಿಂದಾಗಿ ಆಸಕ್ತಿ ಕಳೆದುಕೊಳ್ಳುತ್ತಾಳೆ:

ಹನಿಮೂನ್ ಹಂತ ಮುಗಿದಿರುತ್ತದೆ
ಫ್ಯಾಂಟಸಿ ವರ್ಲ್ಡ್ ಮುಗಿದಿರುತ್ತದೆ, ರಿಯಾಲಿಟಿ ಜೀವನಕ್ಕೆ ಬಂದಾಗ ಒಬ್ಬರಿಗೊಬ್ಬರಿಗೆ ಆಸಕ್ತಿ ಕಡಿಮೆಯಾಗಿರುತ್ತದೆ. ಈ ಕಾರಣದಿಂದಲೂ ಅವಳಲ್ಲಿ ಬದಲಾವಣೆ ಕಂಡು ಬರುವುದು. ಆದರೆ ಎಲ್ಲಾ ದಾಂಪತ್ಯ ಜೀವನ ಹೀಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಕೆಲವೊಬ್ಬರ ದಾಂಪತ್ಯದಲ್ಲಿ ಈ ರೀತಿಯಾಗುವುದು ಸಹಜ.
ಅವಳಿ ಈ ಸಂಗಾತಿ ಜೊತೆಗೆ ಆಸಕ್ತಿ ಕಡಿಮೆಯಾದಾಗ ಬೇರೆ ಕಡೆಗೆ ಆಸಕ್ತಿ ಮೂಡುವ ಸಾಧ್ಯತೆ ಕೂಡ ಇದೆ, ಈ ರೀತಿಯಾದಾಗ ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು, ನಿಮ್ಮ ಕೆಲಸದ ಒತ್ತಡ ಎಲ್ಲವನ್ನೂ ಅವಳಿಗೆ ಅರ್ಥ ಮಾಡಿಸಬೇಕು, ಅವಳಿಗೆ ನೀವು ತುಂಬಾನೇ ಪ್ರೀತಿಸುತ್ತಿದ್ದಾರೆ ಎಂಬ ಭಾವನೆ ಮೂಡಿದರೆ ಎಲ್ಲವೂ ಸರಿಯಾಗುವುದು.
ಅವನ ವರ್ತನೆ ಬದಲಾದಾಗ
ಅವಳಿಗೆ ನನ್ನ ಪುರುಷ ಬದಲಾಗಿದ್ದಾನೆ, ಅವನಿಗೆ ಮೊದಲಿನಂತೆ ನನ್ನ ಮೇಲೆ ಆಕರ್ಷಣೆ ಇಲ್ಲ ಎಂದು ಅನಿಸಲಾರಂಭಿಸಿದಾಗ ತುಂಬಾನೇ ಬೇಸರವಾಗುತ್ತೆ, ಕೋಪ ಬರುತ್ತೆ.. ಅವಳ ಈ ಭಾವನೆಗಳು ಅವಳನ್ನು ನಿಮ್ಮಿಂದ ದೂರ ಮಾಡುತ್ತದೆ. ನಿಮ್ಮನ್ನು ನೆನೆಸಿದರೆ ಅವಳಿಗೆ ಕೋಪ ಬರುತ್ತದೆ, ಇದರ ಪರಿಣಾಮ ಅವಳಿಗೆ ನಿಧಾನಕ್ಕೆ ಅವನ ಮೇಲಿನ ಭಾವನೆಗಳು ಕಡಿಮೆಯಾಗುವುದು.
ಅವಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ
ಮಹಿಳೆ ನನ್ನ ಪುರುಷ ನನ್ನನ್ನು ಗಮನಿಸಬೇಕು, ಮುದ್ದಿಸಬೇಕು ಎಂದು ಬಯಸುತ್ತಾಳೆ, ಆದರೆ ಈ ರೀತಿ ಆಗದೆ ಇದ್ದಾಗ ಅವಳಿಗೆ ಅವನು ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಅನಿಸಲಾರಂಭಿಸುವುದು. ಆವಾಗ ಅವಳು ತುಂಬಾ ಬೇಸರ ಪಡುತ್ತಾಳೆ, ಅವನಿಂದ ದೂರಾಗುವ ಯೋಚನೆ ಮಾಡುತ್ತಾಳೆ.
ಬೇರೆ ಕಡೆ ಆಕರ್ಷಣೆ ಉಂಟಾದಾಗ
ಅವಳಿಗೆ ಬೇರೆ ಕಡೆ ಆಕರ್ಷಣೆ ಉಂಟಾದಾಗ ನಿಮ್ಮ ಮೇಲೆ ನಿರ್ಲಕ್ಷ್ಯತೆ ಉಂಟಾಗುವುದು. ಬೇರೆ ಕಾರಣದಿಂದ ಅವರಿಗೆ ನಿಮ್ಮ ಮೇಲೆ ಕೋಪ ಬಂದು ಅವರು ನಿರ್ಲಪ್ತತೆ ಇದ್ದರೆ ನೀವು ಪ್ರೀತಿ ತೋರಿಸಿದಾಗ ಅವರು ಸರಿ ಹೋಗುತ್ತಾರೆ, ಆದರೆ ಬೇರೆ ಕಡೆ ಆಕರ್ಷಣೆಯಿದ್ದರೆ ಅವರಿಗೆ ಬೇರೆ ಕಡೆ ಆಕರ್ಷಣೆಯಿದ್ದರೆ ನಿಮ್ಮ ಪ್ರೀತಿಗೆ ಮನ್ನಣೆ ನೀಡುವುದಿಲ್ಲ. ಅವಳು ಬೇರೆ ಯಾವುದೋ ಯೋಚನೆಯಲ್ಲಿ ಇರುತ್ತಾಳೆ, ತನ್ನ ಮೈ ಅಲಂಕಾರದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾಳೆ ಎಂದಾದರೆ ಅವಳಿಗೆ ಬೇರೆ ಕಡೆ ಸಂಬಂಧವಿದೆ ಎಂದು ಸುಚಿಸುವ ಸೂಚನೆಗಳಾಗಿದೆ.
ಆತ ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿದ್ದರೆ
ತಾನು ಅಷ್ಟೊಂದು ನಂಬಿದವನು ನನಗೆ ಮೋಸ ಮಾಡಿದ್ದಾನೆ ಎಂದು ಅವಳಿಗೆ ಅವನ ಮೇಲೆ ಹೇಸಿಗೆ ಉಂಟಾಗುವುದು, ಹೀಗಾಗಿ ಅವನ ಮೇಲಿದ್ದ ಭಾವನೆಗಳು ಸತ್ತು, ಅವನ ಮನಸ್ಸಿನಲ್ಲಿ ಯಾವುದೇ ಆಸಕ್ತಿ ಇಲ್ಲವಾಗುವುದು. ಅವನು ಮುಂದೆ ನಾನು ನಿನ್ನ ಜೊತೆ ಬಾಳುತ್ತೇನೆ ಎಂದು ಬಂದರೂ ಮೊದಲಿನ ಪಪ್ರೀತಿ, ನಂಬಿಕೆ ಸಿಗಲು ಸಾಧ್ಯವಿಲ್ಲ.
ಸಂಗಾತಿ ಮೆಟರಿಯಲಿಸ್ಟಿಕ್
ಆ ಹೆಣ್ಣು ತುಂಬ ಲಕ್ಷುರಿ ಬಯಸುವವಳು ಆದರೆ ಆದರೆ ಪುರುಷ ಅವಳ ಅತಿ ನಿರೀಕ್ಷೆಯನ್ನು ಭರಿಸಲು ಅಸಮರ್ಥನಾದಾಗ ಅವಳು ಅವನನ್ನು ನಿರ್ಲಕ್ಷ್ಯ ಮಾಡುತ್ತಾಳೆ. ಇಂಥ ಹೆಣ್ಣು ಮಕ್ಕಳು ಸಿಕ್ಕರೆ ಪುರುಷನ ಬದುಕು ನರಕವಾಗುವುದು. ಇಂತ ಹೆಣ್ಣನ್ನು ಪುರುಷನೇ ನಿರ್ಲಕ್ಷ್ಯ ಮಾಡುವುದು ಸೂಕ್ತ.



Click it and Unblock the Notifications