Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯ ಪ್ರಕಾರ ಈ 5 ಜೋಡಿಗಳು ಪ್ರೀತಿಯಲ್ಲಿ ತುಂಬಾ ಚೆನ್ನಾಗಿರುತ್ತಾರಂತೆ!
ಇದು ವ್ಯಾಲೆಂಟೈನ್ಸ್ ವೀಕ್, ತಮ್ಮ ಪ್ರೇಮಿಯೊಂದಿಗೆ ಪ್ರತಿಯೊಂದು ದಿನವನ್ನು ಹೇಗೆ ಸ್ಪೆಷಲ್ ಆಗಿಸುವುದು ಎಂಬ ಪ್ಲ್ಯಾನ್‌ನಲ್ಲಿರುತ್ತೀರಿ... ಜೋಡಿಗಳ ಬಗ್ಗೆ ಹೇಳುವಾಗ ಕೆಲವೊಂದು ಜೋಡಿ ಇರುತ್ತದೆ ಯಾವಾಗಲೂ ಕಚ್ಚಾಡಿಕೊಂಡೇ ಇರುತ್ತಾರೆ, ಹಾಗಂತ ಅವರ ನಡುವೆ ಪ್ರೀತಿ ಇಲ್ಲ ಎಂದೇನೂ ಅಲ್ಲ.
ಇನ್ನು ಕೆಲವು ಜೋಡಿ ಇರುತ್ತಾರೆ, ಅವರನ್ನು ನೋಡುವಾಗ ಜೋಡಿ ಅಂದರೆ ಹೀಗಿರಬೇಕು ಎಂದನಿಸುತ್ತದೆ ಅಲ್ವಾ? ಜ್ಯೋತಿಷ್ಯವೂ ಕೆಲವೊಂದು ರಾಶಿಗಳು ಅತ್ಯುತ್ತಮ ಜೋಡಿಯಾಗುತ್ತದೆ ಎಂದು ಹೇಳಲಾಗುವುದು, ಯಾವ ರಾಶಿಯವರು ಜೋಡಿಯಾದರೆ ಉತ್ತಮ ಪ್ರೇಮಿಗಳಾಗುತ್ತಾರಂತೆ ನೋಡೋಣ ಬನ್ನಿ:

ಕರ್ಕ ಮತ್ತು ತುಲಾ ರಾಶಿ
ಇವರಿಬ್ಬರು ಅತ್ಯುತ್ತಮ ಜೋಡಿಗಳಾಗುತ್ತಾರೆ ಎಂದು ಹೇಳಲಾಗುವುದು. ಕರ್ಕ ರಾಶಿಯವರು ತುಂಬಾ ಸೆನ್ಸಿಟಿವ್ ಸ್ವಭಾವದವರು, ತುಲಾ ರಾಶಿಯವರು ಎಮೋಷನಲಿ ತುಂಬಾ ಸ್ಟೆಬಿಲಿಟಿ ಇರುವವರು. ಇವರಿಬ್ಬರು ಸಂಬಂಧದ ಮೇಲೆ ತುಂಬಾನೇ ಗಮನಹರಿಸುತ್ತಾರೆ, ಬಂಧವನ್ನು ಗಟ್ಟಿಯಾಗಿಸಲು ಯೋಚಿಸುತ್ತಾರೆ, ಸಂಬಂಧದಲ್ಲಿ ನಿಯತ್ತು ತೋರುತ್ತಾರೆ. ಅಲ್ಲದೆ ಇವರಿಬ್ಬರ ಗುಣಗಳು ಕೂಡ ಇಬ್ಬರ ನಡುವೆ ಹೊಂದಾಣಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಈ ರಾಶಿಯವರು ಒಳ್ಳೆಯ ಮ್ಯಾಚ್ ಆಗುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಮೇಷ ರಾಶಿ ಮತ್ತು ಮಿಥುನ ರಾಶಿ
ಈ ಎರಡೂ ರಾಶಿಯವರ ಗುಣಗಳು ಒಬ್ಬರಿಗೊಬ್ಬರು ವಿರುದ್ಧವಾದದ್ದು, ಆದರೂ ಇವರಿಬ್ಬರ ನಡುವೆ ತುಂಬಾನೇ ಹೊಂದಾಣಿಕೆ ಇರುತ್ತದೆ. ಮೇಷ ರಾಶಿಯವರು ಧೈರ್ಯಶಾಲಿ, ದೃಢನಿಶ್ಚಯ, ಆತ್ಮವಿಶ್ವಾಸ ಅಧಿಕವಿರುವವರು. ಮಿಥುನ ರಾಶಿಯವರು ತುಂಬಾ ಸೌಮ್ಯ ಸ್ವಭಾವದವರು, ಅಲ್ಲದೆ ಸ್ವಲ್ಪ ಹಿಂಜರಿಕೆ, ಭಯದ ಸ್ವಭಾವದವರು. ಆದರೂ ಇವರಿಬ್ಬರು ಒಳ್ಳೆಯ ಜೋಡಿಯಾಗುತ್ತಾರೆ. ಇವರಿಬ್ಬರ ಸ್ವಭಾವದವರಿಂದಾಗಿ ಒಳ್ಳೆಯ ಹೊಂದಾಣಿಕೆ ಇರಲಿದೆ.
ಸಿಂಹ ರಾಶಿ ಮತ್ತು ಧನು ರಾಶಿ
ಸಿಂಹ ರಾಶಿ ಹಾಗೂ ಧನು ರಾಶಿಯವರು ಸಾಮಾನ್ಯವಾಗಿ ಒಂದೇ ಸ್ವಭಾವದರೂ, ಆದರೂ ಅವರಿಬ್ಬರ ನಡುವೆ ಸ್ವಲ್ಪ ಹೊಂದಾಣಿಕೆ ಇರುತ್ತದೆ. ಸಿಂಹ ರಾಶಿಯವರು ಬೋಲ್ಡ್ ಸ್ವಭಾವದವರು, ಆತ್ಮವಿಶ್ವಾಸ ಹೊಂದಿರುವವರು, ಧೈರ್ಯಸಾಲಿ, ಆಕಾಂಕ್ಷಿಗಳು ಹಾಗೂ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸುವವರು. ಧನು ರಾಶಿಯವರು ಇದೇ ರೀತಿಯ ಸ್ವಭಾವದವರು, ಆದ್ದರಿಂದ ಇವರಿಬ್ಬರು ಒಂದಾದರೆ ಇವರು ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುತ್ತಾರೆ.
ವೃಷಭ ರಾಶಿ ಮತ್ತು ಕನ್ಯಾ ರಾಶಿ
ಇವರಿಬ್ಬರು ಸಂಬಂಧದಲ್ಲಿ ತುಂಬಾ ನಿಯತ್ತಿನಿಂದ ಇರುತ್ತಾರೆ, ಅಲ್ಲದೆ ತಮ್ಮ ಗುರಿ ಮುಟ್ಟಲು ಇಬ್ಬರು ಜೊತೆಯಾಗಿ ಶ್ರಮಿಸುತ್ತಾರೆ, ಇವರು ಕಂಫರ್ಟಬಲ್ ಲೈಫ್‌ಸ್ಟೈಲ್ ತುಂಬಾ ಇಷ್ಟಪಡುವವರು. ಎಂಥದ್ದೇ ಸವಾಲುಗಳು ಇದ್ದರೂ ಇಬ್ಬರೂ ಜೊತೆಯಾಗಿ ನಿಲ್ಲುತ್ತಾರೆ. ಆದ್ದರಿಂದ ಇಬ್ಬರ ನಡುವೆ ಹೊಂದಾಣಿಕೆ ತುಂಬಾ ಚೆನ್ನಾಗಿರಲಿದೆ, ಅಲ್ಲದೆ ಒಬ್ಬರಿಗೊಬ್ಬರು ಸದಾ ಬೆಬಲ ಸೂಚಿಸುತ್ತಾರೆ.
ಕುಂಭ ರಾಶಿ ಮತ್ತು ಮಕರ ರಾಶಿ
ಇಬ್ಬರೂ ತುಂಬಾ ರೊಮ್ಯಾಂಟಿಕ್ ಜೀವಗಳು, ಅವರು ಜೀವನದ ಪ್ರತಿಯೊಂದು ವಿಶೇಷತೆಗಳನ್ನು ವಿಶೇಷವಾಗಿ ಆಚರಿಸಲು ಇಷ್ಟಪಡುತ್ತಾರೆ, ಸರ್‌ಫ್ರೈಸ್ ತುಂಬಾ ಇಷ್ಟಪಡುವವರು... ಅಲ್ಲದೆ ಮೌಲ್ಯಗಳಲ್ಲಿ ನಂಬಿಕೆಯುಳ್ಳವವರು. ಅಲ್ಲದೆ ಬೇರೆಯವರ ಕಷ್ಟಕ್ಕೆ ಬೇಗನೆ ಸ್ಪಂದಿಸುತ್ತಾರೆ, ಇವರ ಇಂಥ ಸ್ವಭಾವಗಳೇ ಇವರಿಬ್ಬರನ್ನು ಮತ್ತಷ್ಟು ಸಮೀಪಕ್ಕೆ ತರುತ್ತದೆ. ಹಾಗಾಗಿ ಈ ರಾಶಿಯವರು ಜೋಡಿಗಳಾದರೆ ಒಳ್ಳೆಯದು ಎಂದು ಜ್ಯೋತಿಷ್ಯ ಹೇಳುತ್ತದೆ.
ಪ್ರೀತಿ ಶುರುವಾಗಿ ಅದು ಗಟ್ಟಿಯಾಗಲು ಇಬ್ಬರ ಸ್ವಭಾವದಲ್ಲಿ ಹೊಂದಾಣಿಕೆ ಬೇಕು, ಆ ಹೊಂದಾಣಿಕೆ ಈ ರಾಶಿಗಳಲ್ಲಿ ಇರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ, ಪ್ರೀತಿಗೆ ಯಾವ ರಾಸಿ ಹೊಂದಾಣಿಕೆ ಬೇಕಾಗಿಲ್ಲ ಮನಸ್ಸು ಹೊಂದಾಣಿಕೆ ಬೇಕೆಂದು ಕೆಲವರು ಹೇಳುತ್ತಾರೆ, ಅರೆ ಎರಡೂ ಒಂದೇ ಅಲ್ವಾ?



Click it and Unblock the Notifications