Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಒಂದು ಅದ್ಭುತ ಸಂಬಂಧಕ್ಕೆ 5 ಸರಳ ಸೂತ್ರಗಳಿವು
ಸಂಬಂಧಗಳು ನಿಂತಿರುವುದು ನಂಬಿಕಗಳ ಮೇಲೆ ಎನ್ನುವ ಮಾತಿದೆ. ಈ ನಂಬಿಕೆಗಳ ಕಳೆದುಕೊಂಡರೆ ಅದೆಂತಹ ಸಂಬಂಧವೇ ಆದರೂ ಮುರಿದು ಬೀಳುತ್ತೆ. ಈ ಸಂಬಂಧದಲ್ಲಿ ನಂಬಿಕೆ ಗಳಿಸೋದು ಎಷ್ಟು ಕಷ್ಟವೋ ಆ ನಂಬಿಕೆ ಉಸಿಕೊಳ್ಳೋದು ಸಹ ಅಷ್ಟೇ ಸವಾಲು. ಹೀಗೆ ನಿಮ್ಮ ಜೀವನದುದ್ದಕ್ಕೂ ಸಂಬಂಧಗಳ ಪಾತ್ರ ಬದಲಾಗಬಹುದು, ಹಾಗೆ ಬದಲಾದ ಸಂಬಂಧ ಉಳಿಸಿಕೊಳ್ಳುವುದು ಸಹ ಮುಖ್ಯ. ಈ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು ಅಂದರೆ ಕೆಲ ಅಂಶಗಳ ನೀವು ಗಮನದಲ್ಲಿಡಿ.
ಸಂಬಂಧಗಳು ಗಟ್ಟಿಯಾಗಲು ಈ 5 ಅಂಶಗಳ ಅಳವಡಿಸಿಕೊಳ್ಳಿ

1. ಆರೋಗ್ಯದ ಬಗ್ಗೆ ಕಾಳಜಿ
ಆರೋಗ್ಯಕರ ಸಂಬಂಧದಲ್ಲಿ, ನಿಮ್ಮ ಸಂಬಂಧದ ಗುಣಮಟ್ಟ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಅಂದರೆ ನಿಮ್ಮ ಪ್ರೀತಿ ಪಾತ್ರರ ಆರೋಗ್ಯದ ಕಡೆಯೂ ನಿಮ್ಮ ಗಮನವಿದ್ದರೆ ಆ ಸಂಬಂಧದಲ್ಲಿ ಇನ್ನಷ್ಟು ಪ್ರೀತಿ, ವಿಶ್ವಾಸ ಮೂಡಲಿದೆ. ದಾಂಪತ್ಯ ಸಂಬಂಧ ಉತ್ತಮವಾಗಿರಬೇಕೆಂದರೆ ಗಂಡ-ಹೆಂಡತಿ ಪರಸ್ಪರ ಆರೋಗ್ಯದ ಕುರಿತು ಕಾಳಜಿ ವಹಿಸಿ.
2. ಪರಸ್ಪರ ಗೌರವ
ನಿಮ್ಮ ಪ್ರೀತಿ ಪಾತ್ರರನ್ನು ಗೌರವದಿಂದ ಕಾಣುವುದು ಆ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಕಾರಣವಾಗುತ್ತದೆ. ಆಕೆ ಅಥವಾ ಆತನ ವಿಚಾರದಾರೆಗಳನ್ನು ಗೌರವಿಸುವುದು ನೀವು ಅವರ ಪರ ನಿಂತಿದ್ದೀರಾ ಎಂಬ ಭಾವನೆ ಮೂಡಿಸುತ್ತದೆ. ಇದು ಅವರಲ್ಲಿ ಹೊಸ ಚೈತನ್ಯ ತರಲಿದ್ದು, ನಿಮ್ಮ ಕುರಿತು ಅವರಲ್ಲಿ ನಂಬಿಕೆ ಹೆಚ್ಚಾಗಲಿದೆ. ಅಂದರೆ ಅವರ ಮುಂದಷ್ಟೇ ಗೌರವದಿಂದ ನಡೆದುಕೊಳ್ಳುವುದಲ್ಲ. ಬದಲಿಗೆ ಅವರನ್ನು ಪ್ರಾಮಾಣಿಕವಾಗಿ ಗೌರವಿಸಿ, ಇತರರ ಬಳಿಯೂ ಅವರ ಕುರಿತು ಉತ್ತಮ ಅಭಿಪ್ರಾಯ ಹಂಚಿಕೊಳ್ಳಿ
3. ಮಾತುಕತೆ
ಸಂಬಂಧದಲ್ಲಿ ಬಿರುಕು ಮೂಡುವುದರಲ್ಲಿ ಮಾತುಕತೆ ಕೊರತೆಯೂ ಕಾರಣವಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರ ಜೊತೆ ಒಳ್ಳೆಯ ಸಂಬಂಧ ಬೆಳೆಯಬೇಕಾದರೆ ಸಂವಹನ ಯಾವಾಗಲೂ ಉತ್ತಮವಾಗಿರಬೇಕು. ದಿನದಲ್ಲಿ ಒಂದಿಷ್ಟು ಹೊತ್ತು ಅವರ ಜೊತೆ ಮಾತುಕತೆಯಲ್ಲಿ ತೊಡಗಿದರೆ ಇಬ್ಬರ ನಡುವಿನ ಅದೆಷ್ಟೋ ವಿಚಾರಗಳು ಹೊರಬಂದು ಮರುಕ್ಷಣ ಹಗುರಾಗಬಹುದು. ಆದರೆ ಅಹಂನಿಂದಾಗಿ ಮಾತುಕತೆಗೆ ಬ್ರೇಕ್ ಬಿದ್ದರೆ ಸಂಬಂಧಗಳ ನಡುವಿನ ಕಂದಕ ಮತ್ತಷ್ಟು ದೊಡ್ಡದಾಗುವುದರಲ್ಲಿ ಅನುಮಾನವೇ ಇಲ್ಲ.
4, ವೈಯಕ್ತಿಕ ವಿಚಾರ ಹಂಚಿಕೊಳ್ಳಿ
ನಿಮ್ಮ ಆಪ್ತರಲ್ಲಿ ವೈಯಕ್ತಿಕ ವಿಚಾರಗಳ ಹಂಚಿಕೊಳ್ಳುವುದು ಸಹ ಆರೋಗ್ಯಕರ ಸಂಬಂಧದ ಲಕ್ಷಣಗಳಲ್ಲಿ ಒಂದಾಗಿದೆ. ಅವರ ವೈಯಕ್ತಿಕ ವಿಚಾರಗಳ ಗೌರವಿಸುವುದರ ಜೊತೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಮುಕ್ತವಾಗಿ ಅವರ ಬಳಿ ಹಂಚಿಕೊಂಡಾಗಲೇ ನಂಬಿಕೆ ಎಂಬ ಸಂಬಂಧಗಳ ಮೂಲಮಂತ್ರ ಮತ್ತಷ್ಟು ಹೆಚ್ಚಾಗುತ್ತದೆ.
5. ಪ್ರಾಮಾಣಿಕತೆ
ಯಾವುದೇ ಬಂಧ ಗಟ್ಟಿಯಾಗಿರಬೇಕಾದ್ರೆ ಅಲ್ಲಿ ಪ್ರಾಮಾಣಿಕತೆ ಮುಖ್ಯವಾಗಿರುತ್ತೆ. ನೀವು ಸಂಬಂಧವನ್ನು ಎಷ್ಟು ಪ್ರಾಮಾಣಿಕವಾಗಿ ನಿಭಾಯಿಸುತ್ತಿರೋ ಅಷ್ಟು ಗಾಢವಾಗುತ್ತದೆ. ಸಂಬಂಧಗಳನ್ನು ಗೌರವಿಸಿ ನೀವೆಷ್ಟು ಪ್ರಾಮಾಣಿಕರಾಗಿ ಅದನ್ನು ಮುಂದುವರೆಸುತ್ತೀರೋ ಅದರ ಮೇಲೆ ಸಂಬಂಧಗಳ ಆಯಸ್ಸು ನಿರ್ಧರವಾಗುತ್ತದೆ. ಪ್ರಾಮಾಣಿಕತೆ ಎಂಬುದು ಮರೆಯಾದಾಗ ಸಂಬಂಧ ಕಡಿದು ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ.
ಸಂಬಂಧ ಹಾಳಾಗೋದು ಹೇಗೆ?
ನಿಮ್ಮ ನಡುವಿನ ಬೌಂಡರಿ ಉಲ್ಲಂಘಿಸುವುದು
ದೈಹಿಕ, ಭಾವನಾತ್ಮಕ, ಲೈಂಗಿಕ, ಮತ್ತು ಆರ್ಥಿಕ ವಿಚಾರಗಳಿಗೆ ಆಗಾಗ ಕಿರಿಕಿರಿ
ನಿಮ್ಮ ವಿಚಾರಗಳನ್ನು ಪ್ರೀತಿ ಪಾತ್ರರಲ್ಲಿ ಹೇಳಿಕೊಳ್ಳಲು ಹಿಂಜರಿಯುವುದು
ನಿಮ್ಮ ಆಪ್ತರು ಅಥವಾ ಪ್ರೀತಿ ಪಾತ್ರರ ಮೇಲೆ ಅನುಮಾನ ಮೂಡುವುದು
ಸಣ್ಣ ವಿಚಾರಗಳಿಗೆ ಮುನಿಸಿಕೊಳ್ಳುವುದು ಈ ಮುನಿಸನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಹಿಂಜರಿಯುವುದು
ಒಬ್ಬರ ಮಾತು ಮತ್ತೊಬ್ಬರು ಕೇಳಿಸಿಕೊಳ್ಳಲು ತಯಾರಿಲ್ಲದಿರುವ ಸ್ಥಿತಿ ಮತ್ತು ತನ್ನದೆ ಸರಿ ಎಂಬ ಭಾವನೆ ಹೊಂದುವುದು
ಮೋಹನ್ ವೈ ಕೆ



Click it and Unblock the Notifications
