Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ನಿಮ್ಮವನಲ್ಲಿ ಈ 5 ಬದಲಾವಣೆಯಾದರೆ ನಿಮಗೆ ಮೋಸ ಮಾಡುತ್ತಿರಬಹುದು!
ಒಂದು ಸಂಬಂಧದಲ್ಲಿ ಇರುವಾಗಲೇ ಮತ್ತೊಬ್ಬ ವ್ಯಕ್ತಿಯ ಕಡೆಗೆ ಆಕರ್ಷಿತರಾದರೆ ಅದು ಮೋಸ. ಈ ರೀತಿ ಮೋಸ ಮಾಡುವವರಿಗೇನೂ ಕಡಿಮೆಯಿಲ್ಲ. ಮೋಸ ಎಂಬುವುದು ಒಬ್ಬ ವ್ಯಕ್ತಿಯ ನಂಬಿಕೆಯನ್ನೇ ಹಾಳು ಮಾಡುತ್ತದೆ. ಆದರೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿಯುವವರೆಗೆ ಸಂಗಾತಿಯಲ್ಲಿ ಏನೋ ಬದಲಾವಣೆ ಇದೆ ಎಂದು ಅನಿಸಲಾರಂಭಿಸುತ್ತದೆ, ಆದರೆ ಏಕೆ.... ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರುವುದಿಲ್ಲ. ಮನಸ್ಸಿನಲ್ಲಿ ಏನೋ ಒಂದು ರೀತಿಯ ಆತಂಕ ಎದುರಾಗುವುದು, ಏಕೆ ಹೀಗಾಗುತ್ತಿದೆ, ಬೇರೆ ಸಂಬಂಧದಲ್ಲಿ ಇರಬಹುದಾ ಎಂಬ ಡೌಟು ಮೂಡುವುದು, ಆದರೆ ಹೇಗೆ ತಿಳಿದುಕೊಳ್ಳುವುದು.

ನಿಮ್ಮ ಸಂಗಾತಿಯಲ್ಲಿ ಈ ರೀತಿಯ ಬದಲಾವಣೆ ಕಂಡು ಬಂದರೆ ಅವರು ಬೇರೆ ಟ್ರ್ಯಾಕ್‌ನಲ್ಲಿ ಹೋಗುತ್ತಿದ್ದಾರೆ ಎಂದು ಹೇಳಬಹುದು:
1. ಇದ್ದಕ್ಕಿದ್ದಂತೆ ಪೋನ್, ಲ್ಯಾಪ್‌ಟಾಪ್‌ನಲ್ಲಿ ಸೀಕ್ರೆಟ್ ಇದೆ ಎಂದು ಅನಿಸಲಾರಂಭಿಸಿದರೆ
ಈ ಮೊದಲು ನೀವು ಅವರ ಫೋನ್ ತೆಗೆದುಕೊಂಡರೆ ಅದೇನು ದೊಡ್ಡ ಸಮಸ್ಯೆಯಾಗಿರಲಿಲ್ಲ, ಆದರೆ
ಇತ್ತೀಚೆಗೆ ಮೊಬೈಲ್‌ಗೆ ಬೇರೆ ಪಾಸ್‌ವರ್ಡ್ ಹಾಕಲಾಗಿದೆ, ಆ ಪಾಸ್‌ವರ್ಡ್ ನೀವು ಕೇಳಿದರೂ ಹೇಳ್ತಾ ಇಲ್ಲ, ಅವರು ಫೋನ್‌ನಲ್ಲಿ ಮಾತನಾಡುವಾಗ ನೀವು ಅವರ ಬಳಿ ಹೋದಾಗ ಆ ಫೋನ್ ಕಟ್ ಮಾಡುವುದು ಅಥವಾ ವಿಷಯ ಬದಲಾಯಿಸುವುದು ಅಥವಾ ನಿಮಗೆ ಕೇಳಿಸದಂತೆ ಮಾತನಾಡುವುದು.
2. ದೈಹಿಕ ಅಟ್ರಾಕ್ಷನ್ ಕಡಿಮೆಯಾಗುವುದು
ಇತ್ತೀಚೆಗೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಯಾವುದೇ ದೈಹಿಕ ಆಕರ್ಷಣೆ ತೋರಿಸುತ್ತಿಲ್ಲ ಎಂದಾದರೆ ಅದು ರೆಡ್ ಫ್ಲ್ಯಾಗ್ ಇದೆ. ನೀವಾಗಿ ಕಿಸ್ ಕೊಡುವುದು, ಸಮೀಪ ಹೋದಾಗ ಅವರು ನಿಮ್ಮ ಭಾವನೆಗೆ ಸ್ಪಂದಿಸುತ್ತಿಲ್ಲ ಎಂದಾದರೆ ಅವರಿಗೆ ಬೇರೆ ಕಡೆ ಆಕರ್ಷಣೆ ಎಂದು ಊಹಿಸಬಹುದು.
3. ತುಂಬಾನೇ ಹೀಯಾಳಿಸುವುದು
ಚಿಕ್ಕ ಪುಟ್ಟ ವಿಷಯಕ್ಕೆ ನಿಮ್ಮನ್ನು ಹೀಯಾಳಿಸುವುದು, ನಿಮ್ಮಲ್ಲಿ ತಪ್ಪುಗಳನ್ನು ಕಂಡಿಹಿಡಿಯುವುದೇ ಅವರ ಕೆಲಸವಾಗಿದ್ದರೆ ಅವರಿಗೆ ನಿಮ್ಮ ಮೇಲೆ ಆಕರ್ಷಣೆ , ಪ್ರೀತಿ ಕಡಿಮೆಯಾಗಿದೆ. ಅಲ್ಲದೆ ಅವರಿಗೆ ಅವರು ತಪ್ಪು ಮಾಡುತ್ತಿದ್ದಾರೆ ಎಂಬುವುದು ಗೊತ್ತಿರುತ್ತದೆ, ಆದರೆ ಅದು ಅವರ ತಪ್ಪಲ್ಲ ಎಂದು ತೋರಿಸಲು ನಿಮ್ಮಲ್ಲಿ ತಪ್ಪಿದೆ ಎಂದು ಹುಡುಕುವ ಪ್ರಯತ್ನ ಮಾಡುತ್ತಾನೆ.
4. ಅವನ ವರ್ತನೆಯಲ್ಲಿ ತುಂಬಾನೇ ಬದಲಾವಣೆ
ನಾವು ಪ್ರೀತಿಸುತ್ತಿರುವ ವ್ಯಕ್ತಿಯಲ್ಲಿ ಒಂದು ಚಿಕ್ಕ ಬದಲಾವಣೆ ಬಂದರೆ ಅದು ಗೊತ್ತಾಗುತ್ತದೆ, ಅದರಲ್ಲೂ ಹೆಣ್ಮಕ್ಕಳಿಗೆ ಬೇಗನೆ ಗೊತ್ತಾಗುತ್ತದೆ, ಇತ್ತೀಚೆಗೆ ಅವನ ನಡವಳಿಕೆಯಲ್ಲಿ ತುಂಬಾನೇ ಬದಲಾವಣೆ, ನಿಮಗೆ ಸಮಯ ಕೊಡುತ್ತಿಲ್ಲ, ಮೊದಲಿನಂತೆ ಏನೂ ಹಂಚಿಕೊಳ್ಳುತ್ತಿಲ್ಲ, ಇಬ್ಬರು ಸೇರಿ ಭವಿಷ್ಯದ ಬಗ್ಗೆ ಚರ್ಚಿಸುತ್ತಿಲ್ಲ ಎಂದರೆ ಅದು ಸಂಬಂಧದಲ್ಲಿ ಒಳ್ಳೆಯ ಲಕ್ಷಣ ಅಲ್ವೇ ಅಲ್ಲ.
5. ನಿಮ್ಮ ಸ್ನೇಹಿತರು ಅಥವಾ ಮನೆಯವರು ಈ ಬಗ್ಗೆ ಎಚ್ಚರಿಸಿದಾಗ
ಕೆಲವೊಮ್ಮೆ ನಮಗೆ ಗೊತ್ತಿರದ ವಿಷಯ ಅವನ ಅಥವಾ ನಿಮ್ಮ ಸ್ನೇಹಿತರಿಗೆ ತಿಳಿದಿರುತ್ತದೆ, ಅವರು ಈ ಕುರಿತು ಎಚ್ಚರಿಕೆ ನೀಡಿದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮಿಬ್ಬರ ಸಂಬಂಧ ನೋಡಿ ಮನೆಯವರು ನಿಮ್ಮ ಮೇಲೆ ಕಾಳಜಿ, ಅನುಕಂಪ ತೋರಿಸಬಹುದು.
ಅವನು ನಿಮಗೆ ಮೋಸ ಮಾಡುತ್ತಿದ್ದಾನೆ ಎಂದು ಖಚಿತವಾದಾಗ ಏನು ಮಾಡಬೇಕು?
ನೀವು ತುಂಬಾ ನಂಬಿದ್ದ, ಪ್ರೀತಿಸಿದ್ದ ವ್ಯಕ್ತಿ ಮೋಸ ಮಾಡಿದಾಗ ಮನಸ್ಸಿಗೆ ತುಂಬಾನೇ ನೋವಾಗುವುದು, ಆದರೆ ಮುಂದಿನ ಬದುಕಿನಲ್ಲಿ ಅವರು ಇರಬೇಕೋ, ಬೇಡ್ವೋ ಎಂಬುವುದನ್ನು ನೀವೇ ತೀರ್ಮಾನಿಸಿ. ಅವರು ಮೋಸ ಮಾಡಿದ್ದಾರೆ ಎಂದು ನೊಂದುಕೊಳ್ಳುವ ಬದಲಿಗೆ ನಿಮ್ಮ ಪ್ರೀತಿಗೆ ಅವನು ಅರ್ಹನಲ್ಲ ಎಂದು ಭಾವಿಸಿ ನಿಮ್ಮ ಬದುಕು ಮತ್ತಷ್ಟು ಸುಂದರವಾಗಿಸಲು ಗಮನಹರಿಸಿ.



Click it and Unblock the Notifications