Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂತೋಷದ ದಾಂಪತ್ಯದಲ್ಲಿದ್ದರೂ ಸಂಗಾತಿಗೆ ಮೋಸ ಮಾಡಲು 5 ಕಾರಣಗಳು
ನಮಗೆ ಗೊತ್ತಿರುವ ಕೆಲವರ ಸಂಬಂಧದಲ್ಲಿ ಅನೈತಿಕ ಸಂಬಂಧವಿದೆ ಎಂದು ಗೊತ್ತಾಗಾದ ಒಂದು ರೀತಿ ಆಶ್ಚರ್ಯ ಉಂಟಾಗುತ್ತದೆ, ಏಕೆಂದರೆ ನಾವು ನೋಡಿದ ಹಾಗೆ ಆ ಜೋಡಿ ಅಷ್ಟೊಂದು ಚೆನ್ನಾಗಿರುತ್ತದೆ, ಖುಷಿ-ಖುಷಿಯಾಗಿರುತ್ತಾರೆ, ಜೋಡಿ ಎಂದರೆ ಹೀಗಿರಬೇಕು ಎಂಬಂತೆ ತುಂಬಾನೇ ಅನ್ಯೂನ್ಯದಿಂದ ಇರುತ್ತಾರೆ.
ಆದರೆ ಇದ್ದಕ್ಕಿದ್ದಂತೆ ಅವರ ಸಂಸಾರದಲ್ಲಿ ಅಪಸ್ವರ ಎದ್ದು ಬಿಡುತ್ತದೆ, ಅವರಲ್ಲೊಬ್ಬರು ಸಂಗಾತಿಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಾಗ ನಿಜಕ್ಕೂ ಆಶ್ಚರ್ಯವಾಗುತ್ತೆ, ಅಷ್ಟು ಚೆನ್ನಾಗಿದ್ದ ಜೋಡಿ ನಡುವೆ ಏನಾಯ್ತು ಎಂದು ಪ್ರಶ್ನೆ ಮೂಡುವುದು.

ಹೌದು ಅವರು ಸಂತೋಷವಾಗಿಯೇ ಇರುತ್ತಾರೆ, ಆದರೆ ನಮಗೆ ತಿಳಿಯದೆ ಇರುವ ಯಾವುದೋ ಒಂದು ಅಸಮಧಾನ ಅವರ ನಡುವೆ ಇದ್ದಿರುತ್ತದೆ, ಅದು ಅವರಿಬ್ಬರಿಗೆ ಗೊತ್ತಿರುತ್ತದೆ ಅಥವಾ ಮತ್ತೊಬ್ಬ ಸಂಗಾತಿ ಇದರ ಬಗ್ಗೆ ಗಮನ ಕೊಡದೇ ಇರಬಹುದು, ಹ್ಯಾಪಿ ರಿಲೇಷನ್‌ಶಿಪ್‌ನಲ್ಲಿದ್ದರೂ ಸಂಗಾತಿಗೆ ಮೋಸ ಮಾಡುತ್ತಾರೆ:
ತಮ್ಮ ಇಷ್ಟಕ್ಕಾಗಿ
ನಾನು ಏನೋ ಸಾಧನೆ ಮಾಡಬೇಕು ಎಂದು ಇರುವವರನ್ನು ನೀನು ಮಾಡಬೇಡ ಎಂದು ಕಟ್ಟಿ ಹಾಕುವ ಪ್ರಯತ್ನ ಮಾಡಿದರೆ ಅವರು ಸಂಗಾತಿಯಿಂದ ದೂರ ಸರಿಯುವ ಪ್ರಯತ್ನ ಮಾಡಬಹುದು. ಹಾಗೇ ಬಿಟ್ಟು ಹೋಗಬಹುದು ಅಥವಾ ಆಸೆಗೆ ಒತ್ತಾಸೆಯಾಗುವ ವ್ಯಕ್ತಿ ಸಿಕ್ಕರೆ ಅವರ ಕಡೆಗೆ ಆಕರ್ಷಿತರಾಗಬಹುದು.
ದೂರದ ಬೆಟ್ಟ ನುಣ್ಣಗೆ
ಈ ಸ್ವಭಾವ ಸಂಸಾರದಲ್ಲಿ ತೋರಿಸಿದರೆ ಕಷ್ಟ. ಎಲವರಿಗೆ ತಮ್ಮ ಸಂಸಾರ ಚೆನ್ನಾಗಿಯೇ ಇದ್ದರೂ ಬೇರೆ ಸಂಸಾರ ತುಂಬಾನೇ ರೊಮ್ಯಾಂಟಿಕ್ ಆಗಿದೆ ಎಂದು ಅನಿಸುತ್ತದೆ, ದೂರದ ಬೆಟ್ಟಗೆ ನುಣ್ಣಗೆ ಕಾಣಲಾರಂಭಿಸಿದಾಗ ಅಲ್ಲಿಗೆ ಹಾರುವ ಪ್ರಯತ್ನ ಮಾಡುತ್ತಾರೆ, ನಂತರ ಅವರಿಗೆ ತಮ್ಮ ತಪ್ಪಿನ ಅರಿವು ಉಂಟಾಗಿರುತ್ತದೆ, ಆದರೆ ಅಷ್ಟರಲ್ಲಿ ಕಾಲ ಮಿಂಚಿರುತ್ತದೆ. ಹಾಗಾಗಿ ಸಂಗಾತಿಯ ಅಸಮಧಾನದ ಕಡೆಗೆ ಗಮನ ಹರಿಸಿ, ನಿರ್ಲಕ್ಷ್ಯ ದೊಡ್ಡ ಸಮಸ್ಯೆವಿರಬಹುದು.
ಅತಿಯಾಗಿಮೂಗು ತೋರಿಸುವುದು
ಗಂಡ-ಹೆಂಡತಿ ಸಂಬಂಧ ಅಂತ ಒಬ್ಬರು ಮತ್ತೊಬ್ಬರ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸುವುದು ಒಳ್ಳೆಯದಲ್ಲ, ಸಂಗಾತಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಬೇಕು, ಕೆಲವೊಂದು ನಿರ್ಧಾರಗಳನ್ನು ಅವರಿಗೆ ತೆಗೆದುಕೊಳ್ಳಲು ಬಿಡಬೇಕು. ನಾವು ನಾನು ಅವರ ಸಂಗಾತಿ ಎಂದು ಅತಿಯಾಗಿ ಮೂಗು ತೂರಿಸಿದಾಗ ಅವರಿಗೆ ನಮ್ಮ ಜೊತೆ ಬಾಳಲು ಇಷ್ಟವಾಗುವುದು, ಫ್ರೀಡಂ ಬೇಕೆಂದು ದೂರ ಸರಿಯುತ್ತಾರೆ ಅಥವಾ ನಮಗೆ ಮೋಸ ಮಾಡುತ್ತಾರೆ.
ಅಗ್ಯತವಿದ್ದಾಗ ಅವರಿಂದ ಮಾನಸಿಕ ಬೆಂಬಲ ಸಿಗದಿದ್ದಾಗ
ಒಂದು ಸಂಬಂಧ ಗಟ್ಟಿಯಾಗಲು ಈ ಎಮೋಷನಲ್ ಸಪೋರ್ಟ್ ತುಂಬಾನೇ ಮುಖ್ಯ, ಎಷ್ಟೋ ಸಂಬಂಧ ದುರ್ಬಲವಾಗುತ್ತಿರಲು ಈ ರೀತಿ ಇಲ್ಲದಿರುವುದೇ ಕಾರಣವಾಗಿದೆ. ಅವರನ್ನು ನಾವು ತುಂಬಾ ಲಕ್ಷುರಿಯಾಗಿ ಇಟ್ಟಿದ್ದೇವೆ ಎಂದ ಮಾತ್ರಕ್ಕೆ ಅವರು ಖುಷಿಯಾಗಿದ್ದಾರೆ ಎಂದು ಭಾವಿಸಿದರೆ ಅದು ಮೂರ್ಖತನ, ಅವರು ಖುಷಿಯಾಗಿರಬೇಕೆಂದರೆ ಅವರಿಗೆ ಯಾವತ್ತೂ ಒಂಟಿತನ ಕಾಡದಂತೆ ನೋಡಿಕೊಳ್ಳಬೇಕು, ಎಂಥದ್ದೇ ಸಂದರ್ಭ ಬರಲಿ ನೀವು ಅವರ ಜೊತೆ ಇರುತ್ತೀರ ಎಂಬ ಭಾವನೆ ಅವರಲ್ಲಿ ಭದ್ರವಾಗಬೇಕು, ಇಲ್ಲದಿದ್ದರೆ ಸಂಸಾರದಲ್ಲಿ ಅಭದ್ರತೆ ಕಾಡುವುದು.
ಲೈಂಗಿಕ ತೃಪ್ತಿ ಇಲ್ಲದೇ ಹೋದಾಗ
ಒಂದು ಸಂಸಾರದ ಅಡಿಪಾಯ ನಿಂತಿರುವುದೇ ಲೈಂಗಿಕ ತೃಪ್ತಿಯಲ್ಲಿ. ಅದು ಇಲ್ಲದೆ ಹೋದಾಗ ಬೇರೆ ಕಡೆ ಆಸಕ್ತಿ ತೋರಿಸುತ್ತಾರೆ. ಇಂಥ ವಿಷಯಗಳನ್ನು ಗಂಡ-ಹೆಂಡತಿ ಯಾವುದೇ ಯಾವುದೇ ಮುಜುಗರ ಇಲ್ಲದೆ ಮಾತನಾಡಿದರೆ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಯಾವ ಸಂಸಾರದಲ್ಲಿ ಲೈಂಗಿಕ ತೃಪ್ತಿ ಇರುವುದೆಲ್ಲವೂ ಆವಾಗ ಅವರು ಬೇರೆ ಕಡೆ ಆಕರ್ಷಿಸುತ್ತಾರೆ.



Click it and Unblock the Notifications


