Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಜೋಡಿಗಳ ನಡುವೆ ವಯಸ್ಸಿನ ಅಂತ ಹೆಚ್ಚಾಗಿದ್ದರೆ ಎದುರಾಗುವ 5 ಸಮಸ್ಯೆಗಳಿವು
ವಯಸ್ಸಿನ ಅಂತ ಸಂಬಂಧದ ಮೇಲೆ ಪರಿಣಾಮ ಬೀರುವುದೇ? ಎಂದು ವಯಸ್ಸಿನ ಅಂತರದಿಂದ ಮದುವೆಯಾದವರನ್ನು ಕೇಳಿದರೆ ಕೆಲವರು ಅದರ ಪ್ಲಸ್ ಹೆಚ್ಚಿನವರು ಮೈನಸ್ ಬಗ್ಗೆ ಹೇಳುತ್ತಾರೆ. 5 ವರ್ಷಕ್ಕಿಂತ ಹೆಚ್ಚಿನ ಅಂತರವಿದ್ದರೆ ಕೆಲವೊಂದು ಅಭಿಪ್ರಾಯ ವ್ಯತ್ಯಾಸ ಉಂಟಾಗುವುದು ಎಂದು ಹಲವು ದಂಪತಿಗಳು ಹೇಳುತ್ತಾರೆ.
ವಯಸ್ಸಿನ ಅಂತರ ಅಧಿಕವಿದ್ದವರು ಮದುವೆಯಾದರೆ ಹೆಚ್ಚಿನ ದಂಪತಿಗಳಲ್ಲಿ ಈ ಬಗೆಯ ಸಮಸ್ಯೆ ಕಂಡು ಬರುವುದು ಸಹಜವಾಗಿದೆ:

ಮೆಚ್ಯೂರಿಟಿಯಲ್ಲಿ ವ್ಯತ್ಯಾಸ
ನಮ್ಮ ಸ್ನೇಹಿತರ ಗುಂಪನ್ನೇ ಗಮನಿಸಿ ನಮ್ಮ ವಯಸ್ಸಿನವರ ಜೊತೆ ನಾವು ಬೆರೆಯವರಂತೆ ನಮ್ಮ ವಯಸ್ಸಿಗಿಂತ ಸ್ವಲ್ಪ ದೊಡ್ಡವರ ಜೊತೆ ಸಲುಗೆ ಬೆಳೆಯುವುದಿಲ್ಲ, ಬೆಳೆದರೂ ನಮ್ಮ ನಡುವೆ ಒಂದು ಬೌಂಡರಿ ಇದ್ದೇ ಇರುತ್ತದೆ ಏಕೆಂದರೆ ಅವರು ವಯಸ್ಸಿನಲ್ಲಿ ನಮಗಿಂತ ತುಂಬಾ ದೊಡ್ಡವರು ಎಂಬ ಕಾರಣಕ್ಕೆ. ಸಂಬಂಧದಲ್ಲಿ ಕೂಡ ಅಷ್ಟೇ ಯೋಚನೆಗಳು , ಒಂದು ವಿಷಯವನ್ನು ತೆಗೆದುಕೊಳ್ಳುವ ರೀತಿ ತುಂಬಾನೇ ಭಿನ್ನವಾಗಿರುತ್ತದೆ. ಒಬ್ಬರಿಗೆ ತುಂಬಾನೇ ಎಕ್ಸೈಟ್ ಆದ ವಿಷಯ ಮತ್ತೊಬ್ಬರಿಗೆ ಆಗಬೇಕೆಂದು ಏನಿಲ್ಲ, ಹಾಗಾಗಿ ಈ ಮೆಚ್ಯೂರಿಟಿಯಲ್ಲಿನ ವ್ಯತ್ಯಾಸ ಸಂಬಂಧದಲ್ಲಿಯೂ ಸಮಸ್ಯೆ ಉಂಟು ಮಾಡುವುದು.
ಪ್ರಾಮುಖ್ಯತೆ ಭಿನ್ನವಾಗಿರುತ್ತದೆ
ಹೌದು ನಮ್ಮನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ ವಯಸ್ಸು ಬದಲಾದಂತೆ ನಮ್ಮ ಪ್ರಾಮುಖ್ಯತೆ ಬದಲಾಗುವುದು ಅಲ್ವಾ... ನಮಗೆ 18ರಲ್ಲಿದ್ದ ಆಲೋಚನೆ ವಯಸ್ಸು 25ರಲ್ಲಿ ಇರುವುದಿಲ್ಲ. ಅನುಭವಗಳು, ನಮ್ಮಲ್ಲಿನ ಪಕ್ವತೆ ನಮ್ಮ ಆಲೋಚನೆಯನ್ನು ಕೂಡ ಬದಲಾಯಿಸುತ್ತೆ, ಹಾಗಂತ 18ರಲ್ಲಿದ್ದ ನಮ್ಮ ಆಲೋಚನೆ ತಪ್ಪು ಎಂದಲ್ಲ, ಆವಾಗ ಅದು ಸರಿ, ಈವಾಗ ಇದು ಸರಿ, ಇದೇ ಅಭಿಪ್ರಾಯ ವ್ಯತ್ಯಾಸ ತುಂಬಾನೇ ವಯಸ್ಸಿನ ಅಂತರ ಇದ್ದವರ ನಡುವೆ ಇರುತ್ತದೆ, ಇಲ್ಲಿ ಇಬ್ಬರಿಗೂ ಅವರದ್ದೇ ಸರಿಗಳಿರುತ್ತದೆ.
ಸಾಮಾಜಿಕ, ಸಂಸ್ಕೃತಿಯ ವ್ಯತ್ಯಾಸ
ನಮ್ಮ ಸೋಷಿಯಲ್ ಸರ್ಕಲ್, ಅವರ ಸೋಷಿಯಲ್ ಸರ್ಕಲ್ ಭಿನ್ನವಾಗಿರುತ್ತದೆ, ಅಭಿರುಚಿಗಳು ಭಿನ್ನವಾಗಿರುತ್ತದೆ, ಇನ್ನು ಬೆಳೆದು ಬಂದ ವಾತಾವರಣ, ಅವರು ಕಲಿತು ಬಂದ ಸಂಸ್ಕೃತಿ ಕೂಡ ಪ್ರಭಾವ ಬೀರುವುದು. ಬೆಳೆದು ಬಂದ ವಾತಾವರಣ ನಮ್ಮ ವ್ಯಕ್ತಿತ್ವದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಪೋಷಕರಿಂದ ಸಿಕ್ಕ ಸ್ವಾತಂತ್ರ್ಯ ಸಂಗಾತಿಯಿಂದ ಸಿಗದಿದ್ದರೆ ಅಥವಾ ಸಂಗಾತಿ ಎನಾದರೂ ಒಂದು ಸಲಹೆ ನೀಡಿದರೆ ಇವರು ನನ್ನನ್ನು ಕಟ್ಟಿ ಹಾಕುತ್ತಿದ್ದಾರೆ, ನನ್ನಿಷ್ಟದಂತೆ ಏನೂ ಮಾಡಲು ಸಾಧ್ಯವಿಲ್ಲ ಎಂದೆಲ್ಲಾ ಅನಿಸಲಾರಂಭಿಸುವುದು, ಇದು ಇಬ್ಬರ ನಡುವೆ ಅಗಲಿಕೆ ಉಂಟು ಮಾಡುವುದು.
ಆರೋಗ್ಯ ಸಮಸ್ಯೆ
ಹೌದು ತಮ್ಮ ಸಂಗಾತಿಗೆ ನಮಗಿಂತ 10-15 ವರ್ಷ ಹೆಚ್ಚಿದ್ದಾಗ ಅವರಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ಕಂಡು ಬರುವುದು, ಈಗ ವಯಸ್ಸು 30 ದಾಟುತ್ತಿದ್ದಂತೆ ಮಧುಮೇಹ, ಕೊಲೆಸ್ಟ್ರಾಲ್ ಈ ಬಗೆಯ ಸಮಸ್ಯೆ ಕಂಡು ಬರುವುದು ಸಹಜ, ಇನ್ನು ವಯಸ್ಸು ಹೆಚ್ಚಾದರೆ ಸಂತಾನೋತ್ಪತ್ತಿಯಲ್ಲೂ ಸಮಸ್ಯೆಯಾಗುವುದು, ಇವೆಲ್ಲಾ ಸಂಸಾರದಲ್ಲಿ ಸಮಸ್ಯೆ ಹೆಚ್ಚಿಸುವುದು.
ಒಬ್ಬರು ಇನ್ನೊಬ್ಬರ ಮೇಲ ತುಂಬಾನೇ ಅಧಿಕಾರ ಚಲಾಯಿಸುವುದು
ವಯಸ್ಸು ಅದಿಕವಿರುವವರು ಚಿಕ್ಕ ವಯಸ್ಸಿನವರ ಮೇಲೆ ತುಂಬಾನೇ ಅಧಿಕಾರ ಚಲಾಯಿಸುತ್ತಾರೆ. ಇವಳು ಚಿಕ್ಕವಳು ಅವಳಿಗೆ ಅಷ್ಟು ಗೊತ್ತಾಗಲ್ಲ ಎಂದು ಎಲ್ಲಾ ತೀರ್ಮಾನಗಳನ್ನು ತಾನೇ ತೆಗೆದುಕೊಳ್ಳುವುದು, ನನಗೆ ಎಲ್ಲಾ ಗೊತ್ತಿದೆ ಎಂಬ ಧೋರಣೆ ಈ ಬಗೆಯ ಸಮಸ್ಯೆಗಳು ಕೂಡ ಸಂಸಾರವನ್ನು ದುರ್ಬಲಗೊಳಿಸುತ್ತದೆ.
ಇವೆಲ್ಲಾ ಸಮಸ್ಯೆಗಳಿರುತ್ತದೆ, ಆದರೆ ಇದನ್ನು ಮೀರಿದ ಪ್ರೀತಿಯಿಂದಾಗಿ ವಯಸ್ಸಿನ ಅಂತರವಿದ್ದರೂ ಚೆನ್ನಾಗಿ ಬಾಳುವವರೂ ಇದ್ದಾರೆ, ಸಂಸಾರದಲ್ಲಿ ಎಲ್ಲಕ್ಕಿಂತ ಮುಖ್ಯ ಹೊಂದಾಣಿಕೆ, ಅದು ಇಲ್ಲದಿದ್ದಾಗ ಈ ಬಗೆಯ ಕಾರಣಗಳು ದೊಡ್ಡದಾಗುವುದು.



Click it and Unblock the Notifications