Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕೆಂದರೆ ಈ 4 ವಿಷಯಗಳಲ್ಲಿ ಬೌಂಡರಿ ಇರಬೇಕು
ಸಂಬಂಧದಲ್ಲಿ ಬೌಂಡರಿ ಎಂಬುವುದು ಇರಬೇಕೆ? ಎಂದು ಕೇಳುವುದಾದರೆ ಹೌದು ಸಂಬಂಧದಲ್ಲಿ ಕೆಲವೊಂದು ಬೌಂಡರಿ ಎಂಬುವುದು ಇದ್ದರೆ ಆ ಸಂಬಂಧ ಆರೋಗ್ಯಕರವಾಗಿರುತ್ತದೆ. ಸಂಬಂಧದಲ್ಇ ಯಾವೆಲ್ಲಾ ರೀತಿಯ ಬೌಂಡರಿಗಳು ಇರಬೇಕು ಎಂದು ನೋಡುವುದಾದರೆ

ಖಾಸಗಿ ಬೌಂಡರಿ: ಖಾಸಗಿ ಬೌಂಡರಿ ಎಂಬುವುದು ಸಂಬಂಧದಲ್ಲಿ ಇದ್ದರೆ ಒಳ್ಳೆಯದು. ಈ ರೀತಿಯ ಬೌಂಡರಿ ಇದ್ದಾಗಲೇ ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಗಂಡ-ಹೆಂಡತಿಯಾದರೂ ಅವರಿಗೇ ಆದ ಪ್ರೈವೆಸಿ ಎಂಬುವುದು ಇರಬೇಕು. ಅವನು ಹೇಗಿರಬೇಕು ಎಂಬುವುದನ್ನು ಅವನು ನಿರ್ಧರಿಸುವಂತೆ ಇರಬೇಕು, ಅವಳು ಹೇಗಿರಬೇಕು ಎಂದು ಅವಳು ನಿರ್ಧರಿಸುವಂತಿರಬೇಕು. ಇಬ್ಬರಲ್ಲಿ ಭಿನ್ನತೆಗಳಿದ್ದರೂ ಹೊಂದಾಣಿಕೆ ಇರಬೇಕೆ ಹೊರತು ಹೇರಿಕೆ ಇರಬಾರದು.
ಲೈಂಗಿಕ ಬೌಂಡರಿ: ಹೌದು ಆರೋಗ್ಯಕರ ಸಂಬಂಧಕ್ಕೆ ಇದು ತುಂಬಾನೇ ಅವಶ್ಯಕ. ದೈಹಿಕ ಆಸೆಯನ್ನು ತನ್ನ ಸಂಗಾತಿ ಜೊತೆ ಮಾತ್ರ ಈಡೇರಿಸಿಕೊಳ್ಳಬೇಕು. ಲೈಂಗಿಕ ಆಸೆಗಾಗಿ ಬೇರೆ ವ್ಯಕ್ತಿ ಜೊತೆ ಸಂಪರ್ಕ ಬೆಳೆಸುವಂತಿರಬಾರದು. ಅಲ್ಲದೆ ಈ ವಿಷಯದಲ್ಲಿ ಗಂಡ-ಹೆಂಡತಿ ಕೂಡ ಒಬ್ಬರ ಭಾವನೆ ಮತ್ತೊಬ್ಬರು ಅರ್ಥ ಮಾಡಿಕೊಳ್ಳಬೇಕು. ನಿಮ್ಮಿಬ್ಬರ ಆಸಕ್ತಿ ಕುರಿತು ಮಾತನಾಡಿ. ಈ ವಿಷಯದಲ್ಲಿ ನೀವಿಬ್ಬರು ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.
ಎಮೋಷನಲ್ ಬೌಂಡರಿ: ಆರೋಗ್ಯಕರ ಸಂಬಂಧಕ್ಕೆ ಎಮೋಷನಲ್ ಬೌಂಡರಿ ಕೂಡ ತುಂಬಾನೇ ಮುಖ್ಯ. ನಮ್ಮ ಭಾವನೆಗಳನ್ನು ನಿಯಂತ್ರಿಸುವುದನ್ನು ಕಲಿಯಬೇಕು, ನಮ್ಮ ಭಾವನೆಗಳು ಇತರರ ಮನಸ್ಸಿಗೆ ನೋವುಂಟು ಮಾಡುವಂತಿದ್ದರೆ ಅದಕ್ಕೆ ಬೌಂಡರಿ ಹಾಕಿಕೊಳ್ಳುವುದು ಒಳ್ಳೆಯದು. ಇನ್ನು ನಿಮ್ಮ ಭಾವನೆಗಳು ನಿಮ್ಮ ಪ್ರಗತಿ ಅಡ್ಡಿಯಾಗುವಂತಿದ್ದರೆ ಅಂಥ ಭಾವನೆಗಳನ್ನು ಕಟ್ಟಿ ಹಾಕುವುದು ಒಳ್ಳೆಯದು.
ಮೆಟೀರಿಯಲ್ ಬೌಂಡರಿ: ಇದು ತುಂಬಾನೇ ಅವಶ್ಯಕ. ಆಸೆ ಎಂಬುವುದು ಪ್ರತಿಯೊಬ್ಬರಲ್ಲೂ ಇರುತ್ತದೆ, ಆದರೆ ನಮ್ಮ ಇತಿಮಿತಿಗಳನ್ನು ತಿಳಿದು ಆಸೆ ಪಡಬೇಕು. ಅದು ಬೇಕು-ಇದು ಬೇಕು ಎಂದು ತುಂಬಾನೇ ಸಾಲ ಮಾಡಿದರೆ ಕೊನೆಗೆ ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇಂಥ ವಿಷಯಕ್ಕೆ ನಮ್ಮ ಮನಸ್ಸಿನಲ್ಲಿ ಅಥವಾ ನಮ್ಮ ಸಂಸಾರದಲ್ಲಿ ಬೌಂಡರಿ ಎಂಬುವುದು ಇದ್ದರೆ ನೆಮ್ಮದಿಯ ಬದುಕು ನಡೆಸಬಹುದು.
ಸಂಬಂಧದಲ್ಲಿ ಈ 4 ಬೌಂಡರಿಗಳು ಸಂಸಾರದಲ್ಲಿ ತುಂಬಾನೇ ಅವಶ್ಯಕ. ಇಲ್ಲದಿದ್ದರೆ ಸಂಸಾರ ಹಳಿ ತಪ್ಪುವುದು, ಸಂಸಾರದಲ್ಲಿ ನೆಮ್ಮದಿ ಎಂಬುವುದು ಹಾಳಾಗುವುದು ಇದನ್ನು ನೀವು ಒಪ್ಪುತ್ತೀರಾ ತಾನೆ?



Click it and Unblock the Notifications
