Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಂಬಂಧದಲ್ಲಿ ಪ್ರೀತಿ ದೂರಾಗುತ್ತಿರುವ ಲಕ್ಷಣವಿದು..! ಯಾವೆಲ್ಲಾ ಕಾರಣವಿದೆ ಗೊತ್ತಾ?
ಪ್ರತಿಯೊಬ್ಬರು ಕೂಡ ಈಗ ಸಂಬಂಧಗಳ ಉಳಿಸಿಕೊಳ್ಳಲು ಎಷ್ಟೆಲ್ಲಾ ಸಾಹಸ ಮಾಡಬೇಕಿದೆ ಎಂಬುದನ್ನು ನೀವು ಕೂಡ ನೋಡಿರುತ್ತೀರಿ. ಪತಿ-ಪತ್ನಿ ಸಂಬಂಧದಲ್ಲಿ ಎಷ್ಟು ಬಾರಿ ವೈಮನಸ್ಸು ಉಂಟಾದರು ಕೂಡ ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕು ಅನ್ನೋ ಮಾತಿದೆ. ಆದ್ರೆ ಕೆಲವೊಂದು ಇದು ದೊಡ್ಡ ಕಂದಕವಾಗಿ ಏರ್ಪಟ್ಟು ಇಬ್ಬರ ನಡುವಿನ ಸಂಬಂಧ ಮತ್ತಷ್ಟು ಹದಗೆಡುವುದು ಕೂಡ ನಾವು ನೋಡಬಹುದು.
ಒಂದು ಸಂಬಂಧದಲ್ಲಿ ಒಡಕು ಮೂಡಲು ಹಲವು ಕಾರಣಗಳ ನಾವು ಪಟ್ಟಿ ಮಾಡಬಹುದು, ಆದ್ರೆ ಆ ಕಾರಣಗಳನ್ನು ನಾವು ಸರಿಪಡಿಸಿಕೊಂಡು ಹೋಗಲು ಬೇಕಾದಷ್ಟು ಸಮಯವೂ ಇರುತ್ತೆ. ಆದ್ರೆ ಇದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಈ ವೈಮನಸ್ಸುಗಳು ದೊಡ್ಡದಾಗುತ್ತಾ ಸಾಗಲು ನಾವೇ ಕಾರಣರಾಗುತ್ತೇವೆ. ಇನ್ನು ನೀವು ನಿಮ್ಮ ಪ್ರೀತಿ ಪಾತ್ರರಿಂದ ದೂರಾಗುತ್ತಿದ್ದೀರಿ ಅನ್ನೋದಕ್ಕೆ ಇದೊಂದು ಕಾರಣವಾಗುತ್ತದೆ.

ಹಾಗಾದ್ರೆ ನಾವಿಂದು ನೀವು ನಿಮ್ಮ ಪ್ರೀತಿ ಪಾತ್ರರಿಂದ ದೂರಾಗುತ್ತಿದ್ದೀರಿ. ಅಥವಾ ಅವರ ಪ್ರೀತಿಯಿಂದ ವಂಚನೆಗೊಳಗಾಗುತ್ತಿದ್ದೀರಿ ಎಂದು ಪರಿಗಣಿಸಲ್ಪಟ್ಟ ಕೆಲವೊಂದು ವಿಚಾರವನ್ನು ಇಲ್ಲಿ ಹಂಚಿಕೊಂಡಿದ್ದೇವೆ. ಈ ಲಕ್ಷಣಗಳು ನಿಮ್ಮ ಸಂಬಂಧದಲ್ಲೂ ಇದ್ದರೆ ಪ್ರೀತಿಯ ಜೀವನದಿಂದ ನೀವು ದೂರಾಗಲು ಹೊರಟಿದ್ದೀರಿ ಎಂದರ್ಥವಾಗುತ್ತದೆ. ಹಾಗಾದ್ರೆ ಯಾವೆಲ್ಲಾ ಲಕ್ಷಣಗಳು ನಿಮ್ಮ ಸಂಬಂಧದಲ್ಲಿ ಬಿರುಕು ತೋರಿಸುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಒಟ್ಟಿಗೆ ಸಮಯ ಕಳೆಯುವುದು ಸುಂದರ ನೆನಪಾಗಿ ಉಳಿದಿಲ್ಲ
ನಿಮ್ಮ ಸಂಬಂಧಲ್ಲಿ ಆರಂಭಿಕ ಹಂತದಲ್ಲಿರುವಂತೆ ಯಾವ ಭಾವನೆಗಳು ಉಳಿದಿಲ್ಲ ಎಂಬ ಭಾವನೆ ನಿಮ್ಮಲ್ಲಿ ಮೂಡಿದರೆ ನೀವು ಪ್ರೀತಿಯ ಜೀವನದಿಂದ ದೂರಾಗುತ್ತಿದ್ದೀರಿ ಎಂದರ್ಥ. ನಿಮ್ಮ ಜೊತೆಗಾರರೊಂದಿಗೆ ಒಟ್ಟಿಗೆ ಸಮಯ ಕಳೆಯಲು ನಿಮ್ಮ ಪತಿ ಅಥವಾ ಪತ್ನಿ ಮೊದಲಿನಂತೆ ಉತ್ಸುಕರಾಗಿರದಿದ್ದರೆ ಹಾಗೆ ಅವರೊಂದಿಗೆ ಕಳೆದ ಈ ಸಮಯದಲ್ಲಿ ನೆನಪಿನಲ್ಲಿ ಉಳಿಯುವಂಯತ ಸಂದರ್ಭಗಳು ಅಥವಾ ಮಾತುಗಳು ನಿಮ್ಮ ನೆನಪಿನಲ್ಲಿ ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಪ್ರೀತಿ ದೂರಾಗಿರಬಹುದು ಎಂದು ಅಂದಾಜಿಸಬಹುದು.
ಅನ್ಯೋನ್ಯತೆಯಲ್ಲಿ ಆಸಕ್ತಿ ಹೊಂದಿರದಿದ್ದರೆ
ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯತೆಯ ಆಸಕ್ತಿ ಕಡಿಮೆಯಾಗಿದ್ದರೆ, ಪ್ರೀತಿಯಿಂದ ದೂರಾಗುತ್ತಿದ್ದೀರಿ ಎಂದರ್ಥ. ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯತೆಯಲ್ಲಿದೆ, ಮುನಿಸು, ಕಿರಿಕಿರಿಯ ಭಾವನೆ ಹಚ್ಚುತ್ತಾ ಹೋದರೆ ನೀವು ಪ್ರೀತಿಯ ಜೀವನದಿಂದ ದೂರಾಗುತ್ತಿದ್ದೀರಿ. ಈ ಸಂಬಂಧದಲ್ಲಿ ಹೆಚ್ಚು ವಿರಸಗಳು ತುಂಬಲಿದೆ ಎಂದರ್ಥ. ಇಬ್ಬರು ಯಾವ ಭಾವನೆಯನ್ನೂ ಹಂಚಿಕೊಳ್ಳದೆ ಇದ್ದರೆ ಹಾಗೆ ಆರೋಗ್ಯಕರ ಅನ್ಯೋನ್ಯತೆ ಇಲ್ಲ ಎನಿಸಿದರೆ ನಿಮ್ಮಿಂದ ಅಥವಾ ನೀವು ಪ್ರೀತಿಯ ಜೀವನದಿಂದ ದೂರಾಗಬಹುದು.
ಸಂಗಾತಿಯ ಮಾತಿನಿಂದ ತಪ್ಪಿಸಿಕೊಳ್ಳುವ ಅವಕಾಶ ಹುಡುಕುತ್ತಿದ್ದರೆ
ಒಂದು ವೇಳೆ ನೀವು ಸಂಬಂಧದಲ್ಲಿ ನಿರಾಸಕ್ತಿ ಹೊಂದಿರಬಹುದು. ಹಾಗೆ ನಿಮ್ಮ ಜೊತೆಗಾರರ ಮಾತುಗಳನ್ನು ಕೇಳದೆ ಇರಲು ಅಥವಾ ನಿರ್ಧಿಷ್ಟ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಂದ ದೂರ ಇರಲು ಯತ್ನಿಸುತ್ತಿರಬಹುದು. ಹಾಗೆ ಯಾವಾಗಲು ಅವರೊಂದಿಗಿನ ಮಾತುಕತೆಯಿಂದ ತಪ್ಪಿಸಿಕೊಳ್ಳಲು ಯಾವುದಾದರು ಮಾರ್ಗ ಹುಡುಕುತ್ತಿದ್ದರೆ ನಿಮ್ಮ ಸಂಬಂಧದಲ್ಲಿ ಪ್ರೀತಿ ಎಂಬುದು ದೂರಾಗುತ್ತಿದೆ ಎಂದರ್ಥ.
ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯಗಳು
ನಿಮ್ಮ ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗಿದೆ ಅನ್ನೋದಕ್ಕೆ ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿನ ಭಿನ್ನಾಭಿಪ್ರಾಯ ಕೂಡ ಕಾರಣವಾಗಿರುತ್ತದೆ. ಹಾಗೆ ಒಂದೇ ವಿಚಾರದಲ್ಲಿ ಬೇರೆ ಬೇರೆಯ ನಿರ್ಧಾರ, ಬೇರೆ ಅಭಿಪ್ರಾಯಗಳು ಕೇಳಿಬರುತ್ತದೆ. ಇದು ನಿಮ್ಮ ಸಂಬಂಧವೂ ಪ್ರೀತಿಯಿಂದ ದೂರಾಗುತ್ತಿರುವ ಲಕ್ಷಣವಾಗಿರಲಿದೆ. ಇಂತಹ ಲಕ್ಷಣಗಳು ನಿಮ್ಮ ಸಂಬಂಧದಲ್ಲೂ ನೀವು ಅನುಭವಿಸಿದ್ದರೆ ಅದು ಪ್ರೀತಿಯಲ್ಲಿ ದೂರಾಗುವ ಮುನ್ಸೂಚನೆ ಇರಬಹುದು.



Click it and Unblock the Notifications
