Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಇನ್ನೂ ಮುಗಿದಿಲ್ಲ ಅಂಬಾನಿ ಅಬ್ಬರ..! ಮತ್ತೊಮ್ಮೆ ಪ್ರಿ ವೆಡ್ಡಿಂಗ್‌ಗೆ ವೇದಿಕೆ ಸಿದ್ಧ..!
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ಮಹೋತ್ಸವ ಇನ್ನು ಸುದ್ದಿಯಾಗುತ್ತಲೇ ಇದೆ. ಈ ಮೊದಲು ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಸಮಾರಂಭ ಈಗ ಮತ್ತೆ ಸುದ್ದಿಯಾಗುತ್ತಿದೆ.
ಹೌದು ಅನಂತ್ ಅಂಬಾನಿ ಮದುವೆಯ 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದ್ದು, ಮತ್ತೊಮ್ಮೆ ವಿಬೃಂಭಣೆಯ ಕಾರ್ಯಕ್ರಮಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ. ಕಳೆದ ಮಾರ್ಚ್ 1ರಿಂದ 3ರ ವರೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶ್ವದ ದಿಗ್ಗಜ ಉದ್ಯಮಿಗಳು, ಇಡೀ ಬಾಲಿವುಡ್ ಚಿತ್ರರಂಗವೇ ಸೇರಿತ್ತು.

ಇದೀಗ ಮತ್ತೊಂದು ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬ ಸಿದ್ಧತೆ ನಡೆಸಿದ್ದು, ಭಾರೀ ಕುತೂಹಲ ಮೂಡಿಸಿದೆ. ಈ ಹಿಂದೆ ನಡೆದಿದ್ದ ಕಾರ್ಯಕ್ರಮದ ನೆನಪು ಜನರಿಂದ ದೂರಾಗುವ ಮುನ್ನವೇ ಮತ್ತೊಂದು ಕಾರ್ಯಕ್ರಮ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಇದೇ ಮೇ 28 ಹಾಗೂ 30 ರ ನಡುವೆ ಈ 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.
ಅಲ್ಲದೆ ಜುಲೈ 12ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ. ಅದಕ್ಕೂ ಮೊದಲು ಮತ್ತೊಂದು ವಿವಾಹ ಪೂರ್ವ ಸಮಾರಂಭ ಜರುಗಲಿದೆ. ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ 2ನೇ ಪ್ರಿ ವೆಡ್ಡಿಂಗ್ ಆಚರಣೆಯನ್ನು ಆಯೋಜಿಸಲು ಸಿದ್ಧರಾಗಿದ್ದಾರೆ. ಇದಕ್ಕಾಗಿ ಸುಮಾರು ಐಷಾರಾಮಿ ಹಡಗು ಈಗಾಗಲೆ ಬುಕ್ ಮಾಡಲಾಗಿದೆಯಂತೆ. ಈ ಕಾರ್ಯಕ್ರಮಕ್ಕೆ 800ಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಮೊದಲು ಗುಜರಾತ್‌ನ ಜಮ್ನಾಗರ್‌ನಲ್ಲಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ವಿಶ್ವದ ಖ್ಯಾತನಾಮರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಆದ್ರೆ ಈ 2ನೇ ಕಾರ್ಯಕ್ರಮ ಇಟಲಿಯಲ್ಲಿ ನಡೆಯಲಿದೆಯಂತೆ. ಈ ಐಷಾರಾಮಿ ಹಡಗು ಇಟಲಿಯಿಂದ ಪ್ರಯಾಣ ಆರಂಭಿಸಿ ದಕ್ಷಿಣ ಫ್ರಾನ್ಸ್ ವರೆಗೂ ಚಲಿಸಲಿದೆ ಎಂದು ವರದಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಸಾಂಭಾವ್ಯ ಅತಿಥಿಗಳ ನಾವು ನೋಡಬಹುದು. ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿರ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಸೇರಿದಂತೆ ನೂರಾರು ಮಂದಿ ಭಾಗಿಯಾಗಲಿದ್ದಾರಂತೆ. ಮೇ 28ರಂದು ಇಟಲಿಯಿಂದ ಹೊರಡಲಿರುವ ಈ ಐಷಾರಾಮಿ ಹಡಗು ಬರೋಬ್ಬರಿ 4,300 ಕಿ.ಮೀಟರ್ ದೂರ ಕ್ರಮಿಸಲಿದೆಯಂತೆ.
ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ ಮೆಟಾದ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಭಾಗಿಯಾಗಿದ್ದರು. ಇವರ ಜೊಗೆ ಪಾಪ್ ಸಿಂಗರ್ ರಿಹನ್ನಾ ಸಹ ಭಾಗಿಯಾಗಿ ಸಂಗೀತ ಸಂಜೆ ನಡೆಸಿಕೊಟ್ಟಿದ್ದರು. ಇವರಲ್ಲದೆ ಕ್ರಿಕೆಟರ್‌ಗಳು, ಬಾಲಿವುಡ್ ನಟ-ನಟಿಯರು, ಭಾಗಿಯಾಗಿದ್ದರು. ಆದರೆ ಭಾರೀ ಸುದ್ದಿಯಾಗಿದ್ದು ಸಿಂಗರ್ ರಿಹನ್ನಾ. ಏಕೆಂದರೆ ಅವರು ಬರೋಬ್ಬರಿ 70 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿತ್ತು.
ಇದೆಲ್ಲದರ ನಡುವೆ ಅಂಬಾನಿ ಕುಟುಂಬ ಧರಿಸಿದ್ದ ಬಟ್ಟೆ, ಆಭರಣ ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ವಧು-ವರರ ಬಟ್ಟೆ, ಆಭರಣ ಸೇರಿ ಮುಖೇಶ್ ಅಂಬಾನಿ ಸೂಟ್ ಹಾಗೂ ನೀತಾ ಅಂಬಾನಿಯ ಆಭರಣ ಜನರ ಕಣ್ಣು ಕುಕ್ಕಿತ್ತು ಈ ಎಲ್ಲಾ ವಸ್ತುಗಳು ಸಾವಿರಾರು ಕೋಟಿ ಮೌಲ್ಯದ್ದಾಗಿತ್ತು.



Click it and Unblock the Notifications
