Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಜಿ ಪ್ರೇಮಿ ನಿಮ್ಮನ್ನು ಪ್ರೀತಿಸುತ್ತಿರಬಹುದೇ?
ಬಾಯ್ ಫ್ರೆಂಡ್ ನಿಂದ ದೂರವಾಗಿದ್ದರೂ ಆತ ಮತ್ತೆ ನಿಮ್ಮನ್ನು ಪ್ರೀತಿಸುತ್ತಿದ್ದಾನೆಂದು ನಿಮಗನಿಸುತ್ತಿದ್ದರೆ ಇದನ್ನು ಅರಿಯಲು ಹಲವಾರು ಲಕ್ಷಣಗಳನ್ನು ನಾವು ಗುರುತಿಸಬಹುದು. ಆದರೆ ಇದರ ಬಗ್ಗೆ ಮಾತನಾಡುವ ಮೊದಲು ನಾವು ಪ್ರೇಮಿಗಳಿಬ್ಬರು ಬ್ರೇಕ್ ಅಪ್ ಗೆ ಮೂಲ ಕಾರಣವೆನೆಂದು ಚರ್ಚಿಸೋಣ. ಇಬ್ಬರಿಗೂ ದೂರವಾಗುವ ಕಾರಣ ತಿಳಿದಿದ್ದರೆ ನಿಮ್ಮ ಬ್ರೇಕ್ ಅಪ್ ನ್ಯಾಯ ಸಮ್ಮತವಾಗಿರುತ್ತದೆ. ಕಾರಣ ಸ್ಪಷ್ಟವಾಗಿರದಿದ್ದರೆ, ಇದರ ಬಗ್ಗೆ ಚಿಂತಿಸಿ ಮತ್ತು ನಿಮ್ಮ ಮಾಜಿ ಪ್ರೇಮಿ ಜತೆ ಇದರ ಬಗ್ಗೆ ಮಾತನಾಡಿ.
ಕೆಲವು ಸಲ ಬ್ರೇಕ್ ಅಪ್ ಜಟಿಲವಾಗಿದ್ದರೆ ಆಗ ನಿಮ್ಮ ಹಿಂದಿನ ಪ್ರೇಮಿ ಈಗಲೂ ನಿಮ್ಮನ್ನು ಪ್ರೀತಿಸುತ್ತಿರಬಹುದು. ಅವರು ಜೀವನದಲ್ಲಿ ಮುಂದೆ ಸಾಗಿರಲಿಕ್ಕಿಲ್ಲ. ನಿಮ್ಮ ಮಾಜಿ ಪ್ರೇಮಿ ಈಗಲೂ ನಿಮ್ಮನ್ನು ಪ್ರೀತಿಸುತ್ತಿರುವುದನ್ನು ತಿಳಿಯಲು ಕೆಲವು ಲಕ್ಷಣಗಳು ಇಲ್ಲಿವೆ.

1. ಸತತ ಸಂಪರ್ಕ
ಬ್ರೇಕ್ ಅಪ್ ನ ಮೊದಲ ನಿಯಮವೆಂದರೆ ಎಲ್ಲಾ ರೀತಿಯಿಂದಲೂ ಸಂಪರ್ಕವನ್ನು ಕಡಿದುಕೊಳ್ಳುವುದು. ಆದರೆ ನಿಮ್ಮ ಮಾಜಿ ಪ್ರೇಮಿ ಈ ನಿಯಮವನ್ನು ಪಾಲಿಸದೆ ಇದ್ದರೆ ಮತ್ತು ಪೋನ್ ಮತ್ತು ಎಸ್ ಎಂಎಸ್ ಮಾಡುವುದನ್ನು ನಿಲ್ಲಿಸದೆ ಇದ್ದರೆ ನೀವು ಚಿಂತಿಸಬೇಕಾಗುತ್ತದೆ. ಆತ ನಿಮ್ಮ ಬಗ್ಗೆ ಚಿಂತಿಸುತ್ತಿದ್ದಾನೆ ಮತ್ತು ಆಸಕ್ತಿ ತೋರಿಸುತ್ತಿದ್ದಾನೆ ಎಂದರ್ಥ. ಆದರೆ ಕೇವಲ ಮೆಸೇಜ್ ಮಾಡುವುದರಿಂದ ಆತ ನಿಮ್ಮನ್ನು ಮರಳಿ ಬಯಸಿದ್ದಾನೆಂದರ್ಥವಲ್ಲ. ಅದಾಗ್ಯೂ ಇದು ಅದರ ಒಂದು ಲಕ್ಷಣವಾಗಿರಬಹುದು. ನಿಮಗೆ ಮತ್ತೆ ಆತನ ಜತೆ ಸಂಬಂಧ ಮುಂದುವರಿಸಲು ಇಷ್ಟವಿಲ್ಲವೆಂದಾದರೆ ನೀವು ಕಡೆಗಣಿಸಲು ಪ್ರಯತ್ನಿಸಿ.
2. ನಿಮ್ಮ ಜೀವನದ ಬಗ್ಗೆ ಆಸಕ್ತಿಯನ್ನಿಟ್ಟುಕೊಳ್ಳುತ್ತಾನೆ
ಬ್ರೇಕ್ ಅಪ್ ಬಳಿಕ ಕೂಡ ನಿಮ್ಮ ಮಾಜಿ ಪ್ರೇಮಿ ನಿಮ್ಮ ಜೀವನದ ಬಗ್ಗೆ ಪ್ರತಿಯೊಂದು ಅಂಶವನ್ನು ತಿಳಿದುಕೊಳ್ಳಲು ಬಯಸುತ್ತಿದ್ದಾನೆಂದರೆ ಆತ ಖಂಡಿತವಾಗಿಯೂ ನಿಮ್ಮನ್ನು ಪ್ರೀತಿಸುತ್ತಿದ್ದಾನೆಂದರ್ಥ. ಆತ ಸಾಧ್ಯವಿರುವ ಎಲ್ಲಾ ಕಡೆ ನಿಮ್ಮನ್ನು ಭೇಟಿಯಾಗಬಹುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ ನಿಮ್ಮ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ಸಲ ಇದು ಕಾಕತಾಳೀಯವಾಗಬಹುದು. ಆದರೆ ಹೆಚ್ಚಿನ ಸಲ ನಿಮ್ಮ ಭಾವನೆಯೊಂದಿಗೆ ಸ್ಪಷ್ಟವಾಗಿ ಇರಲು ಇದು ಸೂಚಿಸುತ್ತದೆ.
3. ಕಾಳಜಿ ವಹಿಸುವುದು
ಭಗ್ನ ಹೃದಯದ ಬಳಿಕವೂ ನಿಮ್ಮ ಮಾಜಿ ಪ್ರೇಮಿ ಮೊದಲಿನಂತೆ ನಿಮ್ಮ ಕಾಳಜಿ ವಹಿಸಿ, ನೀವು ಸಂತೋಷವಾಗಿರುವಂತೆ ಮಾಡಲು ಪ್ರತಿಯೊಂದನ್ನು ಮಾಡುತ್ತಿದ್ದರೆ ನಿಮ್ಮ ಮಾಜಿ ಪ್ರೇಮಿ ಈಗಲೂ ಪ್ರೀತಿಸುತ್ತಿದ್ದಾನೆಂದರ್ಥ. ಇದು ನಿಮಗೆ ಸಿಗುವ ದೊಡ್ಡ ಸೂಚ್ಯಕ. ಹೆಚ್ಚುವರಿ ಕಾಳಜಿಯಿಂದ ನಿಮ್ಮನ್ನು ಮರಳಿ ಪಡೆಯುವ ಪ್ರಯತ್ನವಾಗಿರಬಹುದು. ಇದರಿಂದ ದೂರವಿರುವ ಮೊದಲ ಆಯ್ಕೆಯೆಂದರೆ ಎಲ್ಲಾ ಸಂಪರ್ಕಗಳನ್ನು ಕಡಿದು ಹಾಕುವುದು. ಇದರಿಂದ ನಿಮ್ಮ ಮಾಜಿ ಪ್ರೇಮಿ ನಿಮ್ಮ ಬಗ್ಗೆ ಚಿಂತಿಸುವುದನ್ನು ಮತ್ತು ಕಾಳಜಿ ವಹಿಸುವುದು ತಪ್ಪುತ್ತದೆ.
4. ಕೌಟುಂಬಿಕ ಸಂಬಂಧ
ಬ್ರೇಕ್ ಅಪ್ ಬಳಿಕವೂ ನಿಮ್ಮ ಕುಟುಂಬದೊಂದಿಗೆ ಮಾಜಿ ಪ್ರೇಮಿ ಮಾತನಾಡುವುದು ಸ್ವಲ್ಪ ವಿಲಕ್ಷಣ ಮತ್ತು ವಿಚಿತ್ರವೆಂದು ಅನಿಸುವುದಿಲ್ಲವೇ? ಇದರಲ್ಲಿ ಕುಟುಂಬಗಳು ಒಳಗೊಂಡಿದ್ದರೆ ಪರಿಸ್ಥಿತಿ ಜಟಿಲ ಮತ್ತು ಸಂಕೀರ್ಣವಾಗುತ್ತದೆ. ಮಾಜಿ ಪ್ರೇಮಿ ನಿಮ್ಮ ಕುಟುಂಬದವರೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದರೆ ಮತ್ತು ಅವರನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದರೆ ಮತ್ತು ಮೊದಲಿನಂತಯೇ ಅವರೊಂದಿಗೆ ತುಂಬಾ ಸ್ನೇಹಪರವಾಗಿದ್ದರೆ ಆತ ನಿಮ್ಮನ್ನು ಈಗಲೂ ಪ್ರೀತಿಸುತ್ತಿರುವ ಲಕ್ಷಣವಿದು.
5. ಸ್ಪರ್ಶ
ಬ್ರೇಕ್ ಅಪ್ ಬಳಿಕವೂ ನಿಮ್ಮ ಮಾಜಿ ಪ್ರೇಮಿ ದೈಹಿಕವಾಗಿ ಹಿತಕರ ಮತ್ತು ಸ್ನೇಹಶೀಲವಾಗಿರಲು ಬಯಸುತ್ತಿದ್ದರೆ, ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆ ಎನ್ನುವ ಲಕ್ಷಣವಿದು. ಒಂದು ಸ್ಪರ್ಶದಿಂದ ನಿಮ್ಮ ಮಾಜಿ ಪ್ರೇಮಿ ಸಮಾಧಿ ಮಾಡಿರುವ ಭಾವನೆಗಳನ್ನು ಪ್ರೇರೇಪಿಸಬಲ್ಲದು. ಈ ಸ್ಪರ್ಶವು ನಿಮ್ಮಿಬ್ಬರ ಮಧ್ಯೆ ಎಲ್ಲವನ್ನು ಸರಿಮಾಡಬಲ್ಲದು. ಮೊದಲಿನಂತೆ ಮಾಜಿ ಪ್ರೇಮಿ ನಿಮ್ಮನ್ನು ಅಪ್ಪಿದರೆ ಅಥವಾ ಯಾವಾಗಿನಂತೆಯೇ ಕೈಯನ್ನು ಹಿಡಿದರೆ ಆತ ಈಗಲೂ ಪ್ರೀತಿಸುತ್ತಿದ್ದಾನೆ ಎಂದು ಭಾವಿಸಬೇಕು.
ನಿಮ್ಮ ಮಾಜಿ ಪ್ರೇಮಿ ಬ್ರೇಕ್ ಅಪ್ ಬಳಿಕವೂ ನಿಮ್ಮನ್ನು ಪ್ರೀತಿಸುತ್ತಿದ್ದಾನೆ/ ಇಲ್ಲ ಎನ್ನುವುದನ್ನು ತಿಳಿಯಲು ಇದು ಕೆಲವು ಲಕ್ಷಣಗಳು. ಇದು ನಿಮಗಿಬ್ಬರಿಗೆ ತುಂಬಾ ಕಷ್ಟವಾಗಿರಬಹುದು. ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ಸರಿಯಾದ ನಿರ್ಧಾರ ತೆಗೆದುಕೊಂಡು ಮುಂದುವರಿಯಿರಿ.



Click it and Unblock the Notifications