ಪುರುಷರು ತಾಳ್ಮೆ ಕಳಕೊಳ್ಳುವ ಎಂಟು ವಿಷಯಗಳು...

By Super

ಕೆಲವರು ಏನೇ ಆದರೂ ತಾಳ್ಮೆ ಕಳಕೊಳ್ಳುವುದಿಲ್ಲ. ಮತ್ತೆ ಕೆಲವರು ಸಣ್ಣಸಣ್ಣ ವಿಷಯಕ್ಕೂ ತಾಳ್ಮೆ ಕಳಕೊಳ್ಳುತ್ತಾರೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ತಾಳ್ಮೆಯೆನ್ನುವುದು ಗಗನಕುಸುಮವಾಗುತ್ತಿದೆ. ಗೇಮ್ ಆಡುತ್ತಿರುವ ವೇಳೆ ಕರೆಂಟ್ ಹೋದರೆ ಅವರ ತಾಳ್ಮೆಯ ಕಟ್ಟೆಯೊಡೆಯುತ್ತದೆ. ಮತ್ತೆ ಕೆಲವರಿಗೆ ತಮ್ಮ ಸಹೋದ್ಯೋಗಿಯ ಯಶಸ್ಸಿನಿಂದ ತಾಳ್ಮೆಗೆಟ್ಟರೆ, ಇನ್ನು ಕೆಲವರಿಗೆ ಭ್ರಷ್ಟಾಚಾರವನ್ನು ಸಹಿಸುವ ತಾಳ್ಮೆಯಿರುವುದಿಲ್ಲ. ಇದರಲ್ಲಿ ಪ್ರತಿಯೊಂದು ಭಿನ್ನ ಮತ್ತು ದ್ವೇಷವೆನ್ನುವುದು ಪುರುಷರ ಸಾಮಾನ್ಯ ಗುಣವೆಂದು ಹೇಳಲು ಸಾಧ್ಯವಿಲ್ಲ.

ಸುಳ್ಳು, ವಾದ, ಹೋಲಿಕೆ ಮತ್ತು ಐಕ್ಯೂ ಕಡಿಮೆ ಇರುವ ಮಹಿಳೆಯರನ್ನು ಪುರುಷರು ದ್ವೇಷಿಸುತ್ತಾರೆ. ದೈಹಿಕ ಒತ್ತಡವನ್ನು ಸಹಿಸಿಕೊಳ್ಳಲು ಪುರುಷರು ಸಮರ್ಥರಾಗಿದ್ದರೂ ಮನೋವೈಜ್ಞಾನಿಕ ವಿಷಯಕ್ಕೆ ಬಂದರೆ ಅವರ ತಾಳ್ಮೆಯ ಶಕ್ತಿ ತುಂಬಾ ಕಡಿಮೆ ಎನ್ನಬಹುದು. ಪುರುಷನ ಮುಂದೆ ಮಹಿಳೆ ತನ್ನ ಪ್ರೀತಿ, ಬದ್ಧತೆ ಮತ್ತು ಭರವಸೆಯನ್ನು ಪ್ರತೀಸಲ ಸಾಬೀತುಮಾಡಬೇಕಾಗುತ್ತದೆ. ಆದರೆ ಅದೇ ಮಹಿಳೆ ಇದನ್ನೇ ಪುರುಷರಿಂದ ನಿರೀಕ್ಷಿಸಿದರೆ ಆಗ ಅವರು ತಮ್ಮ ತಾಳ್ಮೆಯನ್ನು ಕಳಕೊಳ್ಳುತ್ತಾರೆ.

ಬದ್ಧತೆಯಿದ್ದ ಸಂಬಂಧ ಮುರಿದುಹೋಗುವುದು, ಪ್ರೀತಿ ಪಾತ್ರರಿಂದ ವಂಚನೆ, ಮೋಸದ ವರ್ತನೆ ಮುಂತಾದ ಕೆಲವು ವಿಷಯಗಳನ್ನು ಪುರುಷರು ಸಹಿಸಿಕೊಳ್ಳುವುದಿಲ್ಲ. ಪ್ರೀತಿ ಸಂಬಂಧ ವಂಚನೆ ಮತ್ತು ದಾಂಪತ್ಯ ಜೀವನದಲ್ಲಿ ದ್ರೋಹವನ್ನು ಪುರುಷರು ಸಹಿಸಲಾರರು. ಉದ್ಯೋಗದ ಜಾಗದಲ್ಲಿ ಅನ್ಯಾಯ ಪುರುಷರಿಗೆ ಸಹಿಸಲು ಅಸಾಧ್ಯ. ಉತ್ತಮ ನಿರ್ವಹಣಿ ಇಲ್ಲದಿದ್ದರೂ ಸಹೋದ್ಯೋಗಿಗೆ ಭಡ್ತಿ ನೀಡುವುದನ್ನು ಪುರುಷರು ಸಹಿಸಿಕೊಳ್ಳುವುದಿಲ್ಲ.

ಪುರುಷರು ದ್ವೇಷಿಸುವ ಮತ್ತು ಸಹಿಸಿಕೊಳ್ಳದ ಕೆಲವು ವಿಷಯಗಳು ಇಲ್ಲಿವೆ.

1. ತೃಪ್ತಿಯಿಲ್ಲದ ಕೆಲಸ ಅಥವಾ ವೃತ್ತಿ

1. ತೃಪ್ತಿಯಿಲ್ಲದ ಕೆಲಸ ಅಥವಾ ವೃತ್ತಿ

ಪುರುಷರು ತಮ್ಮ ಕನಸು ಮತ್ತು ಪ್ಯಾಶನ್ ನ್ನು ಹಿಂಬಾಲಿಸಲು ಬಯಸುತ್ತಾರೆ. ತೃಪ್ತಿ ಮತ್ತು ಸಂತೋಷ ಸಿಗುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವರು ಬಯಸುತ್ತಾರೆ. ವೃತ್ತಿಯಿಂದ ಅವರಿಗೆ ಸಂತೋಷ ಸಿಗದಿದ್ದರೆ ಅಥವಾ ಅವರು ಬಯಸಿದ್ದು ಸಿಗದೆ ಇದ್ದಾಗ ಪುರುಷರು ಅದನ್ನು ಸಹಿಸಿಕೊಳ್ಳುವುದಿಲ್ಲ ಮತ್ತು ವೃತ್ತಿ ಬದುಕಿನಲ್ಲಿ ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದು ಅವರಿಗೆ ಇಷ್ಟವಾಗದು.

2.ಅತಿಯಾದ ಮಾತು

2.ಅತಿಯಾದ ಮಾತು

ಪುರುಷರು ಅತಿಯಾದ ಮಾತನ್ನು ಸಹಿಸಿಕೊಳ್ಳುವುದಿಲ್ಲ. ಇದು ಉದ್ಯೋಗದ ಸ್ಥಳದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಅಥವಾ ತಮ್ಮ ಪತ್ನಿಯೊಂದಿಗೆ ಆಗಿರಬಹುದು. ಪುರುಷರು ತಮ್ಮ ಪ್ಯಾಶನ್ ಗೆ ಸಂಬಂಧಪಟ್ಟ ವಿಷಯದ ಬಗ್ಗೆ ಮಾತನಾಡಲು ಹೆಚ್ಚಾಗಿ ಇಷ್ಟಪಡುತ್ತಾರೆ. ಪುರುಷರು ಕೇಳಲು ಇಷ್ಟಪಡುವುದಕ್ಕಿಂತ ಹೆಚ್ಚು ಮಹಿಳೆಯರು ತಮ್ಮ ಜತೆಗಾರನೊಂದಿಗೆ ಮಾತನಾಡುತ್ತಾರೆ.

3. ಅಪ್ರಾಮಾಣಿಕತೆ

3. ಅಪ್ರಾಮಾಣಿಕತೆ

ಸಾಮಾನ್ಯವಾಗಿ ಇದು ಎಲ್ಲಾ ಪುರುಷರಿಗೆ ಅನ್ವಯಿಸುತ್ತದೆ. ಪುರುಷರು ಅಪ್ರಾಮಾಣಿಕತೆ, ಸುಳ್ಳು ಮತ್ತು ಮೋಸವನ್ನು ಸಹಿಸುವುದಿಲ್ಲ. ಅವರು ನಂಬಿಕೆಯನ್ನಿಟ್ಟಿರುವ ವ್ಯಕ್ತಿಗೆ ವಂಚಿಸುವೂದು ಇದೆ. ಸ್ನೇಹಿತರು ಮತ್ತು ಜತೆಗಾರ್ತಿಯ ಅಪ್ರಾಮಾಣಿಕತೆಯನ್ನು ಪುರುಷರು ಸಹಿಸುವುದಿಲ್ಲ. ಅವರು ವಿಷಯದ ಬಗ್ಗೆ ಸ್ಪಷ್ಟ ನಿಲುವನ್ನು ಬಯಸುತ್ತಾರೆ.

4. ದಾಂಪತ್ಯ ದ್ರೋಹ

4. ದಾಂಪತ್ಯ ದ್ರೋಹ

ಮದುವೆ ವೇಳೆ ಜೀವನ ಪರ್ಯಂತ ಜತೆಗಿರುವ ಮತ್ತು ಸಂಬಂಧದ ವೇಳೆ ಹೃದಯದೊಂದಿಗೆ ಹೃದಯವನ್ನು ಬೆಸೆದಿರುವ ಪುರುಷರು ತುಂಬಾ ಪ್ರಾಮಾಣಿಕತೆ ಮತ್ತು ನಂಬಿಕೆಯನ್ನಿಟ್ಟಿರುತ್ತಾರೆ. ತಮ್ಮ ಜತೆಗಾರ್ತಿಯಿಂದ ಆಗುವ ದ್ರೋಹವನ್ನು ಪುರುಷರು ಯಾವತ್ತೂ ಸಹಿಸಿಕೊಳ್ಳಲಾರರು. ಸಂಬಂಧದಲ್ಲಿ ಅವರು ತಮ್ಮ ಪ್ರಾಮಾಣಿಕತೆಯನ್ನು ತೋರಿಸುವಾಗ ಅದನ್ನು ಉಳಿಸಿಕೊಳ್ಳಲು ಮತ್ತು ಗೌರವಿಸಲು ಅವರು ಯಾವುದೇ ಹಂತಕ್ಕೂ ಹೋಗಬಲ್ಲರು.

5.ವಾದ

5.ವಾದ

ಪುರುಷರು ಸಾಮಾನ್ಯವಾಗಿ ಸತ್ಯ ಮತ್ತು ತರ್ಕಬದ್ಧವಾದ ವಿಷಯದ ಬಗ್ಗೆ ಮಾತನಾಡಲು ಬಯಸುತ್ತಾರೆ. ಪುರುಷರು ವಾದ ಮಾಡುವುದನ್ನು ಇಷ್ಟಪಡುವುದಿಲ್ಲ. ಸತ್ಯ ಮತ್ತು ತಾರ್ಕಿಕ ಗಡಿಯನ್ನು ದಾಟಿ ಹೋಗುವ ವಾದವನ್ನು ಪುರುಷರು ಸಹಿಸಿಕೊಳ್ಳುವುದಿಲ್ಲ. ವಾದವು ಸಂಘರ್ಷ ಮತ್ತು ಜಗಳಕ್ಕ ಕಾರಣವಾಗುವ ಮೊದಲು ಅದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಪುರುಷರು ಬಯಸುತ್ತಾರೆ.

6. ಪುನರಾವರ್ತನೆ

6. ಪುನರಾವರ್ತನೆ

ಕೆಲಸ ಮತ್ತು ಮಾತಿನ ವಿಷಯದಲ್ಲಿ ಪುರುಷರು ಪುನರಾವರ್ತನೆಯನ್ನು ದ್ವೇಷಿಸುತ್ತಾರೆ. ಮತ್ತೆ ಮತ್ತೆ ಅದನ್ನೇ ಮಾಡುವುದನ್ನು ಪುರುಷರು ಸಹಿಸುವುದಿಲ್ಲ. ಒಂದೇ ವಿಷಯವನ್ನು ಹಲವಾರು ಸಲ ಹೇಳುವುದನ್ನು ಅವರು ದ್ವೇಷಿಸುತ್ತಾರೆ. ಸಂಬಂಧದ ವಿಷಯಕ್ಕೆ ಬಂದರೆ ಇದು ನಿಜವಾಗುತ್ತದೆ. ತಮ್ಮ ಜತೆಗಾರ್ತಿಗೆ ಪ್ರೀತಿ ಮತ್ತು ಬದ್ಧತೆಯನ್ನು ಪದೇ ಪದೇ ಸಾಬೀತುಮಾಡಲು ಬಯಸುವುದಿಲ್ಲ.

7.ಅನಾರೋಗ್ಯಕರ ದೇಹ

7.ಅನಾರೋಗ್ಯಕರ ದೇಹ

ಹೆಚ್ಚಿನ ಪುರುಷರು ದೈಹಿಕವಾಗಿ ಫಿಟ್ ಮತ್ತು ಶಾರ್ಪ್ ಕಾಣಲು ಇಷ್ಟಪಡುತ್ತಾರೆ. ಇಂತಹ ಪುರುಷರು ಇತರರು ತಮ್ಮ ಆರೋಗ್ಯ ಮತ್ತು ದೈಹಿಕ ಫಿಟ್ ನೆಸ್ ಬಗ್ಗೆ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಿಕೊಳ್ಳುವುದಿಲ್ಲ. ತಮ್ಮ ಜತೆಗಾರ್ತಿ ಆರೋಗ್ಯಕರ ಮತ್ತು ದೈಹಿಕವಾಗಿ ಫಿಟ್ ಆಗಿರಬೇಕೆಂದು ಪುರುಷರು ಬಯಸುತ್ತಾರೆ. ಅತಿಯಾದ ತೂಕ ಹೊಂದಿರುವುದನ್ನು ಅವರು ದ್ವೇಷಿಸುತ್ತಾರೆ.

8. ಒತ್ತಡ

8. ಒತ್ತಡ

ಅತಿಯಾದ ಕೆಲಸದಿಂದಾಗಿ ತಮ್ಮ ಕನಸು ಮತ್ತು ಪ್ಯಾಶನ್ ನ್ನು ಹಿಂಬಾಲಿಸಲು ಸಮಯ ಸಿಗದಿದ್ದರೆ ಇಂತಹ ಕೆಲಸದ ಒತ್ತಡವನ್ನು ಪುರುಷರು ಸಹಿಸುವುದಿಲ್ಲ. ಅನಾರೋಗ್ಯಕರ ಕೆಲಸದ ನೀತಿ ಮತ್ತು ತಮ್ಮ ಮೇಲೆ ಅನ್ಯಾಯವಾಗಿ ಅತಿಯಾದ ಕೆಲಸ ಹೇರುವುದನ್ನು ಪುರುಷರು ದ್ವೇಷಿಸುತ್ತಾರೆ. ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವುದನ್ನು ಪುರುಷರು ಸಹಿಸಿಕೊಳ್ಳುವುದಿಲ್ಲ.

X
Desktop Bottom Promotion