Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಈ ನಡುವಳಿಕೆಗಳಿದ್ದರೆ ದಾಂಪತ್ಯ ದುಃಸ್ವಪ್ನವಾಗುವುದು
ಪ್ರೀತಿ, ದಾಂಪತ್ಯ ಜೀವನದ ಬಗ್ಗೆ ಕಲ್ಪನೆ ಮಾಡುವಾಗ ಪ್ರತಿಯೊಬ್ಬರೂ ಬಯಸುವುದು ನನ್ನ ಬದುಕಿನಲ್ಲಿ ಬರುವ ವ್ಯಕ್ತಿ ನನ್ನನ್ನು ತುಂಬಾ ಪ್ರೀತಿಸಬೇಕು. ಸಿನಿಮಾಗಳಲ್ಲಿ ಕಾಣುವಂತಹ ಪ್ರಣಯ ಜೋಡಿ ನಮ್ಮದಾಗಿರಬೇಕು. ಆದರೆ ಸಿನಿಮಾ ಬೇರೆ, ವಾಸ್ತವ ಬೇರೆ.
ವಾಸ್ತವದಲ್ಲಿ ಪ್ರಣಯ ಜೋಡಿಯಾಗಬೇಕಾದರೆ ಸಾಕಷ್ಟು ತ್ಯಾಗ, ಹೊಂದಾಣಿಕೆ ಅವಶ್ಯಕೆ ಇರುತ್ತದೆ. ನನ್ನ ಹುಡುಗ/ಹುಡುಗಿ ತುಂಬಾ ಪ್ರೀತಿಸಬೇಕು ಎಂದು ಬಯಸುತ್ತೇವೆ, ಆದರೆ ಆ ಪ್ರೀತಿಯೇ ಉಸಿರು ಕಟ್ಟುವಂತಿದ್ದರೆ? ಕಷ್ಟವಲ್ಲವೇ? ದಾಂಪತ್ಯ ಜೀವನ ಅಂದರೆ ಸರಸ ಮಾತ್ರವಲ್ಲ ವಿರಸ ಕೂಡ ಇಡುತ್ತದೆ, ಹಾಗೇ ಇರುವುದರಿಂದಲೇ ದಾಂಪತ್ಯ ಜೀವನ ಮತ್ತಷ್ಟು ಸುಮಧುರವಾಗುವುದು. ಆದರೆ ದಂಪತಿಗಳ ನಡುವೆ ಈ ರೀತಿ ಕಂಡು ಬಂದರೆ ದಾಂಪತ್ಯ ದುಃಸ್ವಪ್ನವಾಗುವುದು.

ಅತೀಯಾದ ಅವಲಂಬನೆ
ಇಬ್ಬರಿಗೂ ತಮ್ಮದೇ ಆದ ಸ್ವಾತಂತ್ರ್ಯ ಇರಬೇಕು. ಪ್ರೀತಿಯ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ತುಂಬಾ ಅವಲಂಬಿಸಿದರೆ ಮಾತ್ರ ಆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಅಡಚಣೆಯಾಗುವುದು. ಇದನ್ನು ತನ್ನ ಸಂಗಾತಿಯಲ್ಲಿ ಹೇಳಲು ಸಾಧ್ಯವಿಲ್ಲ, ಹೇಳದಿರಲೂ ಸಾಧ್ಯವಾಗದೇ ಕೊನೆಗೆ ತಮ್ಮ ಸಂಗಾತಿ ಬಗ್ಗೆ ನೆನೆಸಿದರೆ ಜಿಗುಪ್ಸೆ ಉಂಟಾಗಲಾರಂಭಿಸುತ್ತದೆ. ನನ್ನ ಆಯ್ಕೆ ತಪ್ಪಾಯಿತ್ತು ಎಂದು ಪಶ್ಚಾತಾಪ ಪಡುತ್ತಾರೆ. ಈ ಪರಿಸ್ಥಿತಿ ಎಂದಿಗೂ ಬರದಿರಲು ಪ್ರೀತಿಯ ಹೆಸರಿನಲ್ಲಿ ಅತೀಯಾದ ಅವಲಂಬನೆ ಸಲ್ಲದು.

ಪ್ರೀತಿಯಿಲ್ಲದೆಯೇ ಜೊತೆಯಾಗಿರುವುದು
ಇಂತಹ ಅನೇಕ ಜೋಡಿಗಳನ್ನು ಕಾಣಬಹುದು, ಅಲ್ಲಿ ಪ್ರೀತಿ ಇರುವುದಿಲ್ಲ ಆದರೂ ಅವರು ಜೊತೆಯಾಗಿರುತ್ತಾರೆ. ಸಮಾಜಕ್ಕಾಗಿಯೋ, ಹಣಕ್ಕಾಗಿಯೋ, ಸೆಕ್ಯೂರಿಟಿ ಹೀಗೆ ಯಾವುದೋ ಒಂದು ಕಾರಣಕ್ಕೆ ಬೇರೆಯಾಗದೆ ಜೊತೆಯಾಗಿರುತ್ತಾರೆ. ಇದ್ದರಿಂದ ಇಬ್ಬರಿಗೂ ನೆಮ್ಮದಿ ಇರುವುದಿಲ್ಲ, ಖುಷಿ ಇರುವುದಿಲ್ಲ. ಇದು ಆರೋಗ್ಯಕರ ಸಂಬಂಧವಲ್ಲ.

ಮೋಸ
ಸಂಗಾತಿಗೆ ಮೋಸ ಮಾಡಿ ಇನ್ನೊಬ್ಬರ ಜೊತೆ ಅನೈತಿಕ ಸಂಬಂಧ ಬೆಳೆಸಿದರೆ ನಾನು ಖುಷಿಯಾಗಿ ಇರಬಹುದೆಂದು ಭಾವಿಸುವವರು ಇರುತ್ತಾರೆ. ಆದರೆ ಅನೈತಿಕ ಸಂಬಂಧದಿಂದ ಜೀವನದಲ್ಲಿ ಇದ್ದ ಖುಷಿಯನ್ನೂ ಕಳೆದುಕೊಳ್ಳಬೇಕಾಗುವುದು.

ಪರಸ್ಪರ ಗೌರವ ಇಲ್ಲದಿರುವುದು
ಉತ್ತಮ ಸಂಬಂಧಕ್ಕೆ ಬೇಕಾಗುವುದು ಒಬ್ಬರನ್ನೊಬ್ಬರು ಗೌರವಿಸುವ ಗುಣ. ಆದರೆ ಆ ಗುಣವೇ ಇಲ್ಲದಿದ್ದರೆ ಗಂಡ-ಹೆಂಡತಿಯ ನಡುವೆ ಪ್ರೀತಿ ಮತ್ತು ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಾಗುವುದಿಲ್ಲ.

ಬಾಹ್ಯ ಸೌಂದರ್ಯಕ್ಕೆ ಬೆಲೆ ಕೊಡುವುದು
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಇರುವ ವ್ಯಕ್ತಿ ಮಾತ್ರ ನಮಗೆ ಉತ್ತಮ ಸಂಗಾತಿಯಾಗಲು ಸಾಧ್ಯ ಅನ್ನುವುದನ್ನು ಮರೆಯದಿರಿ. ಆದ್ದರಿಂದ ಯಾವುದೇ ವ್ಯಕ್ತಿಯಿರಲಿ ಅವರ ಗುಣಕ್ಕೆ ಬೆಲೆ ಕೊಡಬೇಕು, ನಮ್ಮ ಸಂಗಾತಿಯಲ್ಲೂ ಅವರ ಲುಕ್ ಗಿಂತ ಅವರ ಗುಣ ನಮ್ಮನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

ಕಂಟ್ರೋಲ್
ದಾಂಪತ್ಯ ಜೀವನದಲ್ಲಿ ಒಬ್ಬರ ಮೇಲೆ ಮತ್ತೊಬ್ಬರ ಪ್ರಭಾವ ಇದ್ದೇ ಇರುತ್ತದೆ. ಆದರೆ ವಿಪರೀತವಾಗಿ ಸಂಗಾತಿಯನ್ನು ಕಂಟ್ರೋಲ್ ಮಾಡಿದರೆ, ದಾಂಪತ್ಯ ಜೀವನ ಸುಂದರವಾಗಿರುವುದಿಲ್ಲ.

ಸಂಗಾತಿಯ ಮೇಲೆ ತುಂಬಾ ನಿಗಾ ಇಡುವುದು
ಅವನ/ಅವಳ ಚಟುವಟಿಕೆ ಮೇಲೆ ಅತೀಯಾದ ನಿಗಾ ಇಡುವುದು, ಪ್ರತಿಯೊಂದು ವಿಷಯದಲ್ಲೂ interfere ಆಗುವುದು ಮಾಡುತ್ತಿದ್ದರೆ ಆ ಸಂಬಂಧ ಬೇಗನೆ ಮುರಿದು ಬೀಳುವುದು ಅಥವಾ ಇಬ್ಬರಲ್ಲಿ ಸಂತೋಷ ಅನ್ನುವುದು ಮಾಯವಾಗುತ್ತದೆ.

ಯಾವುದೇ ನಿರ್ಧಾರದಲ್ಲಿ ಜೊತೆಯಾಗಿ ನಿಲ್ಲದಿರುವುದು
ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಇಬ್ಬರು ಒಮ್ಮತದಿಂದ ಚರ್ಚಿಸಿ, ತೀರ್ಮಾನ ತೆಗೆದುಕೊಂಡರೆ ದಂಪತಿಗಳ ನಡುವೆ ಹೊಂದಾಣಿಕೆ ಇರುತ್ತದೆ. ಅದು ಮಿಸ್ ಆದರೆ ಸಮಸ್ಯೆಗಳು ಪ್ರಾರಂಭವಾಗಿ ದಾಂಪತ್ಯ ಜೀವನ ಬೋರಾಗಲಾರಂಭಿಸುತ್ತದೆ.

ಬದಲಾಗಲು ಶ್ರಮಿಸುವುದು
ಕಂಡೀಷನಲ್ ಲವ್ ತುಂಬಾ ಕಾಲ ಬಾಳುವುದಿಲ್ಲ. ನಿಜವಾದ ಪ್ರೀತಿಯಲ್ಲಿ ಯಾವುದೇ ಕಂಡೀಷನ್ ಇರುವುದಿಲ್ಲ, ತನ್ನ ಸಂಗಾತಿಗಾಗಿ ತುಂಬಾ ಬದಲಾಗಲು ಪ್ರಯತ್ನಿಸಿದರೆ ನಾವು ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ.

ನಿಂದನೆ
ದಿನಾ ಜಗಳ, ನಿಂದನೆ, ಮಾನಸಿಕ ಮತ್ತು ದೈಹಿಕ ಹಿಂಸೆ ಇವೆಲ್ಲಾ ಉತ್ತಮ ಸಂಬಂಧದ ಲಕ್ಷಣಗಳಲ್ಲ. ದಾಂಪತ್ಯದಲ್ಲಿ ಈ ರೀತಿಯ ಲಕ್ಷಣ ಕಾಣಿಸಿದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವದು ಒಳ್ಳೆಯದು.



Click it and Unblock the Notifications