Latest Updates
-
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ
ಈ ಗುಣದ ಹುಡುಗ ಯಾವ ಹೆಣ್ಣಿಗೆ ತಾನೆ ಒಲ್ಲೆ?
ಹುಡುಗಿಯರಿಗೆ ಏನಿಷ್ಟ ಏನಿಷ್ಟವಿಲ್ಲ ಎನ್ನುವುದು ಹೆಚ್ಚಿನ ಹುಡುಗರ ಪ್ರಶ್ನೆ. ಇದನ್ನು ತಿಳಿಯುವುದು ಹೇಗೆ ಎನ್ನುವುದಂತೂ ಮಹಾ ರಹಸ್ಯ. ನಾನೇನಾದರು ಮಾಡಿದ್ದು ನನ್ನ ಹುಡುಗಿಗೆ ಇಷ್ಟವಾಗದೇ ಹೋದರೆ ಎನ್ನುವ ಅಳುಕೇ ನಿಮ್ಮನ್ನು ಏನಾದರೊಂದು ತಪ್ಪು ಮಾಡುವಂತೆ ಮಾಡುತ್ತದೆ. ಏನಾದರೂ ಮಾಡಬೇಕು ಎಂದು ಏನೋ ಮಾಡಲು ಹೋಗಿ ಇನ್ನೇನೋ ಆಗಿ ನಗೆಪಾಟಲಿಗೆ ಈಡಾಗುವಂತೆ ಆದರೆ ಕಷ್ಟ.
ಏನು ಮಾಡಿದರೆ ಹುಡುಗಿಗೆ ಇಷ್ಟ ಏನು ಮಾಡಿದರೆ ಏನರ್ಥ ಎಂಬುದೆಲ್ಲಾ ನಿಮಗೆ ಗೊತ್ತಿದ್ದರೆ ಹುಡುಗಿಯ ಕನಸಿನ ರಾಜಕುಮಾರನಾಗುವುದು ಬಹಳ ಸುಲಭ. ಆದರೆ ತಿಳಿಯುವುದೇ ಕಷ್ಟ. ಖಂಡಿತ ಹುಡುಗಿಯಿಂದ ಹುಡುಗಿಗೆ ಇಷ್ಟಗಳು ಬೇರೆ ಬೇರೆಯಾಗಿರಬಹುದು ಆದರೂ ಕೆಲವು ಸಾಮಾನ್ಯ ಲಕ್ಷಣಗಳು ಸಾರ್ವತ್ರಿಕವಾಗಿ ಇಷ್ಟವಾಗುತ್ತವೆ. ಅವನ್ನು ತಿಳಿದರೆ ಸಾಕು.
ಆಕರ್ಷಕವಾಗಿ ಕಾಣುವುದು ಹೇಗೆ?
ಹುಡುಗಿಯರ ಕಣ್ಣಿಗೆ ಆಕರ್ಷಿತರಾಗಿ ಕಾಣುವುದು ಹೇಗೆ ಎನ್ನುವುದು ತಿಳಿಯಬೇಕೆನ್ನುವುದು ಎಲ್ಲಾ ಪುರುಷರ ಆಸೆ. ಆದರೆ ಹೆಚ್ಚಿನವರು ಈ ಕನಸನ್ನು ಕನಸಾಗಿಯೇ ಬಾಕಿ ಇಡಬೇಕಾಗುತ್ತದೆ. ಖಂಡಿತ ನಿಮ್ಮಲ್ಲಿ ಆಕರ್ಷಕವಾದ ಬಟ್ಟೆಗಳು ಅಥವಾ ಆಕರ್ಷಕ ಮೈಕಟ್ಟು ಇಲ್ಲ. ಆದರೆ ನಿಮ್ಮಲ್ಲಿಯೂ ವಿರುದ್ಧ ಲಿಂಗದ ವ್ಯಕ್ತಿಗಳನ್ನು ಆಕರ್ಷಿಸುವ ಕೆಲವು ಲಕ್ಷಣಗಳಿರುತ್ತವೆ. ಇಲ್ಲಿ ನಾವು ಸಾಮಾನ್ಯವಾಗಿ ಹುಡುಗಿಯರು ಇಷ್ಟಪಡುವ ಕೆಲವೊಂದು ಅಂಶಗಳಿವೆ. ಅವುಗಳನ್ನು ತಿಳಿದುಕೊಂಡರೆ ಖಂಡಿತ ಕೀಳೆರಿಮೆಯನ್ನು ಹೋಗಲಾಡಿಸಬಹುದು.

1. ನಿಮ್ಮಲ್ಲೂ ಪ್ರತಿಭೆಯಿದೆ
ಇದು ನಿಮ್ಮ ಗಿಟಾರ್ ನುಡಿಸುವ ಪ್ರತಿಬೆ ಇರಬಹುದು ಅಥವಾ ಅಡುಗೆ ಮಾಡುವ ಕಲೆ ಇರಬಹುದು ಅಥವಾ ನಿಮ್ಮ ಉಡುಪು ಧರಿಸುವ ಆಕರ್ಷಕತೆ ಇರಬಹುದು ಅಥವಾ ನೀವೊಬ್ಬ ಒಳ್ಳೆಯ ಛಾಯಾ ಚಿತ್ರಗ್ರಾಹಕ ಆಗಿರಬಹುದು. ನಿಮ್ಮಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಪ್ಯಾಷನ್ ಇದ್ದರೆ ಅದು ಹುಡುಗಿಗೆ ಇಷ್ಟ. ನಿಮ್ಮಲ್ಲಿರುವ ಈ ಪ್ರತಿಭೆಯನ್ನು ಸರಿಯಾದ ದಾರಿಯಲ್ಲಿ ಬಳಸಿ ನಿಮ್ಮ ಹುಡುಗಿಗಾಗಿ ಗಿಟಾರ್ ನುಡಿಸಿ, ಅವಳ ಇಷ್ಟದ ಅಡುಗೆಯನ್ನು ಅವಳಿಗಾಗಿ ತಯಾರಿಸಿ ಅಥವಾ ನೀವು ಪ್ರತಿಭಾನ್ವಿತರಾದ ವಿಷಯವನ್ನು ಅವಳಿಗಾಗಿ ಮಾಡಿ. ಹೀಗೆ ಏನಾದರೊಂದು ವಿಶೇಷ ಪ್ರತಿಭೆ ಇರುವ ಹುಡುಗರ ಬಗ್ಗೆ ಹುಡುಗಿಯರು ಖಂಡಿತ ದೃಷ್ಟಿ ಹರಿಸದೆ ಇರುವುದಿಲ್ಲ.

2. ಆಲೋಚನಾಶೀಲತೆ
ಹುಡುಗಿಯರು ನಿಮ್ಮ ಬಳಿ ಉಡುಗೊರೆಗಳನ್ನು ಹಾಗೂ ನಿಮ್ಮ ಗಮನವನ್ನು ಯಾಕೆ ಬಯಸುತ್ತಾರೆ ಗೊತ್ತೇ? ನೀವು ಹೀಗೆ ಮಾಡಿದರೆ ಅದರ ಅರ್ಥ ಅವರಿಲ್ಲದ ಸಮಯದಲ್ಲೂ ನೀವು ಅವರ ಬಗ್ಗೆ ಹಾಗೂ ಅವರ ಇಷ್ಟಗಳ ಬಗ್ಗೆ ಯೋಚಿಸುತ್ತಿರಿ ಎಂದು ಅವರ ಭಾವನೆ. ನೀವು ಪ್ರತಿ ಸಲ ಏನಾದರೂ ಉಡುಗೊರೆಯನ್ನು ಕೊಡಲೇ ಬೇಕಾಗಿಲ್ಲ. ಅದರ ಬದಲು ‘ನಾನು ಇವತ್ತು ನಿನ್ನ ಬಗ್ಗೆಯೇ ಯೋಚಿಸುತ್ತಿದ್ದೆ,' ‘ಆ ಹೇರ್ ಪಿನ್ ನಿನಗೆ ಬಹಳ ಸುಂದರವಾಗಿ ಕಾಣುತ್ತದೆ' ಎಂದಷ್ಟೇ ಹೇಳಿದರೂ ಸಾಕು. ಇದನ್ನು ಆಕೆ ನಿಮ್ಮ ಯೋಚನೆಗಳಲ್ಲಿ ಆಕೆ ಎಷ್ಟು ಜಾಗವನ್ನು ಪಡೆದಿದ್ದಾಳೆ ಸಣ್ಣ ಸಣ್ಣ ವಿಷಯಗಳಲ್ಲೂ ನೀವು ಎಷ್ಟು ಅವಳ ಬಗ್ಗೆ ಗಮನ ಹರಿಸುತ್ತೀರಿ ಎಂದು ನಿರ್ಧರಿಸುವಂತೆ ಮಾಡುತ್ತದೆ. ಇದು ಆಕೆಯ ಹೃದಯದಲ್ಲಿ ನಿಮಗೊಂದು ಸಣ್ಣ ಜಾಗವನ್ನು ನೀಡುತ್ತದೆ.

3. ಹಾಸ್ಯ ಪ್ರವೃತ್ತಿ
ಹಾಸ್ಯ ಪ್ರವೃತ್ತಿ ಎಲ್ಲರಲ್ಲೂ ಇರುವಂಥದಲ್ಲ ಇದು ನಿಮ್ಮ ಜಾಣ್ಮೆಯನ್ನು ಹಾಗೂ ನಿಮ್ಮ ಬುದ್ಧಿಶಕ್ತಿಯನ್ನು ಸುಚಿಸುತ್ತದೆ. ಹಾಸ್ಯ ಪ್ರವೃತ್ತಿ ಇರುವ, ತನ್ನ ಬಗ್ಗೆಯೇ ಹಾಸ್ಯ ಮಾಡಬಲ್ಲ, ಹಾಗೂ ಕಷ್ಟದ ಸಮಯದಲ್ಲೂ ಆರಾಮವಾಗಿ ಅಂತಹ ಸನ್ನಿವೇಶಗಳನ್ನು ನಿಭಾಯಿಸಬಲ್ಲ ಹುಡುಗ ನಿಜವಾದ ಗೆಳೆಯ. ಹಾಸ್ಯ ಪ್ರವೃತ್ತಿ ಎಷ್ಟು ಹೆಚ್ಚಾಗಿರುತ್ತದೆಯೋ ಅಷ್ಟು ಹೆಚ್ಚಾಗಿ ಹುಡುಗಿಯರು ನಿಮ್ಮನ್ನು ಇಷ್ಟ ಪಡುತ್ತಾರೆ. ಇದು ಒಂದು ಬಹಳ ಉತ್ತಮವಾದ ಗುಣ ಮತ್ತು ಅದೆಷ್ಟೋ ಹುಡುಗಿಯರನ್ನು ನೀವು ಹಿಂದೆ ಬಿಟ್ಟು ಮುಂದೆ ಸಾಗಬಹುದು.

4. ಸುಂದರ ನಗು
ಮೈಕಟ್ಟಿನ ಬಗ್ಗೆ ದೇಹ ಪ್ರಕೃತಿಯ ಬಗ್ಗೆ ಒಂದೊಂದು ಹುಡುಗಿಗೆ ಒಂದೊಂದು ವಿಷಯದಲ್ಲಿ ಇಷ್ಟ ಇರಬಹುದು ಆದರೆ ಸಾರ್ವತ್ರಿಕವಾಗಿ ಇಷ್ಟ ಪಡುವ ಒಂದು ವಿಷಯವೆಂದರೆ ನಗು. ಇದನ್ನು ಎಲ್ಲಾ ಹುಡುಗಿಯರೂ ಖಂಡಿತ ಗಮನಿಸುತ್ತಾರೆ ಹಾಗೂ ಸುಂದರ ನಗುವಿಗೆ ಮರುಳಾಗದ ಹುಡುಗಿ ಲಕ್ಷಕ್ಕೆ ಒಬ್ಬಳು ಸಿಗಲಾರಳು. ನಗುವಿನ ಅರ್ಥ ನೀವು ಖುಷಿಯಾಗಿದ್ದೀರಿ ಮತ್ತು ಅವರ ಸಂಗವನ್ನು ನೀವು ಇಷ್ಟಪಡುತ್ತೀರಿ ಎಂಬುದಾಗಿದೆ. ನಗು ಗೆಳೆತನದ ದಾರಿಯನ್ನು ತೆರೆಯುತ್ತದೆ. ಆಕರ್ಷಕ ಹಲ್ಲುಗಳಿದ್ದರೆ ಅದು ಇನ್ನಷ್ಟು ಲಾಭದಾಯಕ. ಇದು ನೀವು ನಿಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ತಿಳಿಯಪಡಿಸುತ್ತದೆ.

5. ಪ್ರಣಯಪೂರ್ವಕವಾಗಿರಿ
ಪ್ರಣಯವೆಂದರೆ ಕೇವಲ ದೈಹಿಕ ಸಂಬಂಧವಲ್ಲ. ಇದು ಅವಳಿಗಾಗಿ ಹುವನ್ನು ಕೊಡುವುದು ಕ್ಯಾಂಡಲ್ ಲೈಟ್ ಡಿನ್ನರ್ ಗಾಗಿ ಕರೆದೊಯ್ಯುವುದೂ ಆಗಿದೆ. ಇದು ಅವಳನ್ನು ನೀವು ಎಷ್ಟು ಇಷ್ಟ ಪಡುತ್ತೀರಿ ಮತ್ತು ಯಾವ ರೀತಿ ಇಷ್ಟ ಪಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅವಳು ನಿರೀಕ್ಷೆ ಮಾಡದ ಸಮಯದಲ್ಲಿ ಅವಳಿಗಾಗಿ ಒಂದು ಉಡುಗೊರೆಯನ್ನು ಕೊಡಿ ಮತ್ತು ಅವಳನ್ನು ಒಂದು ಸಣ್ಣ ಮಗುವನ್ನು ನೋಡಿಕೊಂಡಂತೆ ನೋಡಿಕೊಳ್ಳಿ. ಇಷ್ಟೆಲ್ಲಾ ಮಾಡಿದ ಮೇಲೆ ಹುಡುಗಿ ನಿಮ್ಮ ಕಡೆಗೆ ಆಕರ್ಷಿತಳಾಗದೇ ಇರಲು ಸಾಧ್ಯವೇ ಇಲ್ಲ.

6. ಧೈರ್ಯವಂತರಾಗಿರಿ
ಒಬ್ಬ ಹುಡುಗನನ್ನು ಮಾದಕನಾನ್ನಾಗಿ ಮಾಡುವ ಅಂಶ ಯಾವುದು ಎಂದು ಯಾವುದೇ ಹುಡುಗಿಯಲ್ಲಿ ಕೇಳಿ ಸಾಮಾನ್ಯ ಉತ್ತರ ಧೈರ್ಯಶಾಲಿ ಎನ್ನುವುದಾಗಿರುತ್ತದೆ. ತಮಗೆ ಬೇಕಾಗಿರುವುದನ್ನು ಪಡೆಯಲು ಹೆದರದೇ ಹೋಗುವ ಹುಡುಗರನ್ನು ಕಂಡರೆ ಹುಡುಗಿಯರಿಗೆ ಇಷ್ಟ. ಅಂತಹ ಹುಡುಗ ಹುಡುಗಿಯ ಕಣ್ಣು ತಪ್ಪಿಸಿ ಇರಲು ಸಾಧ್ಯವೇ ಇಲ್ಲ ಹಾಗೂ ಹುಡುಗಿಗೆ ಸುರಕ್ಷಿತ ಭಾವವನ್ನೂ ಕೊಡುವುದು ಇದೇ ಗುಣ. ಆದರೆ ಧೈರ್ಯವನ್ನು ಉದ್ಧಟತನ ಎಂದು ತಪ್ಪು ತಿಳಿಯಬೇಡಿ. ಮೊದಲನೆಯದು ಆಕರ್ಷಣೆ ಆದರೆ ಎರಡನೆಯನು ವಿಕರ್ಷಣೆ ಎಂಬುದನ್ನು ನೆನಪಿಡಿ.

7. ಪ್ರಾಬಲ್ಯ ಸಾಬೀತು ಪಡಿಸಿ
ನೀವು ಪ್ರಬಲರಾದಷ್ಟು ಇನ್ನೊಬ್ಬರ ಮೇಲೆ ಹೆಚ್ಚು ಪ್ರಭಾವ ಬೀರಿದಷ್ಟು ನೀವು ಇಷ್ಟವಾಗುತ್ತಾ ಹೋಗುತ್ತೀರಿ. ಇದರ ಅರ್ಥವನ್ನೂ ಸೂಕ್ಷ್ಮವಾಗಿ ಗಮನಿಸಿ ಇಲ್ಲಿಯೂ ನೀವು ಉದ್ಧಟತನ, ಆವೇಶದಿಂದ ವರ್ತಿಸಬೇಕು ಎಂಬುದಲ್ಲ. ಇದರ ಅರ್ಥ ನಿಮಗೆ ಬೇಕಾದುದನ್ನು ಪಡೆಯಲು ನೀವು ಗಟ್ಟಿಯಾಗಿ ನಿಲ್ಲಬೇಕು ಎಂಬುದಾಗಿದೆ. ಇದು ಬಹಳ ಸೂಕ್ಷ್ಮ ನೀವು ನಿಮ್ಮ ಪ್ರಾಬಲ್ಯವನ್ನೂ ಸೂಚಿಸುವಾಗಲೂ ಸಭ್ಯರಾಗಿಯೇ ಇರಬೇಕು. ಇದನ್ನು ನೀವು ಕರಗತ ಮಾಡಿಕೊಂಡರೆ ನೀವು ಗೆದ್ದಂತೆ.



Click it and Unblock the Notifications











